ಮೊಮೋಸ್ ತಿನ್ನುವಾಗ ಹುಷಾರ್‌ ! ಫುಡ್ಡೀಗಳಿಗೆ ವಾರ್ನಿಂಗ್‌ ನೀಡಿದ ಏಮ್ಸ್‌

By Suvarna NewsFirst Published Jun 15, 2022, 1:01 PM IST
Highlights

ಸ್ಟ್ರೀಟ್ ಫುಡ್‌ (Street Food) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಫ್ರೆಂಚ್ ಫ್ರೈಸ್, ಬರ್ಗರ್‌, ಮೊಮೋಸ್ (Momos), ಶವರ್ಮಾ ಹೀಗೆ ಏನ್‌ ಸಿಕ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಇಂಥಾ ಫುಡ್ಡೀಗಳಿಗೆ ಏಮ್ಸ್  (AIIMS) ಎಚ್ಚರಿಕೆ ನೀಡಿದೆ. ಅದ್ಯಾಕೆ ? ಏನು ? ಇಲ್ಲಿದೆ ಮಾಹಿತಿ.

ಜನಪ್ರಿಯ ಸ್ಟ್ರೀಟ್ ಫುಡ್ ಮೊಮೋಸ್ (Momos). ಒಂದು ಸಾರಿ ಇದನ್ನು ತಿಂದವರು ಮತ್ತೆ ಇದನ್ನು ಫೇವರಿಟ್‌ ಲಿಸ್ಟ್‌ಗೆ ಸೇರಿಸೋದ್ರಲ್ಲಿ ಡೌಟೇ ಇಲ್ಲ. ಸಾಮಾನ್ಯವಾಗಿ ಮೈದಾ ಹಿಟ್ಟನ್ನು ಕಲಸಿ, ತರಕಾರಿ ಅಥವಾ ಮೊಟ್ಟೆಯ ಸ್ಟಫ್ಪಿಂಗ್ ಸೇರಿಸಿ ಮೊಮೋಸ್ ತಯಾರಿಸಲಾಗುತ್ತೆ. ಬಿಸಿ ಬಿಸಿ ಹಬೆಯಾಡೋ ಮೊಮೊಸ್ ತಂದು ಎದುರಿಗಿಟ್ರೆ ಖಾರದ ಚಟ್ನಿಯಲ್ಲಿ ಅದ್ದಿ ತಿನ್ತಾ ಇರೋಣ ಅನ್ಸುತ್ತೆ. ಆದ್ರೆ ಮೊಮೋ ತಿನ್ನುವಾಗ ದೆಹಲಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಆ ನಂತರ ಮೊಮೋ ಪ್ರಿಯರಿಗೆ ಏಮ್ಸ್ ವಾರ್ನ್ ಮಾಡಿದೆ.

ಮೊಮೋಸ್ ಎಂದರೇನು ?
ಮೊಮೊಸ್ ಸಸ್ಯಾಹಾರಿ ಮತ್ತು ಮಾಂಸಾಹಾರಿ (Non-vegetarian) ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ.  ಸ್ಟೀಮಿಂಗ್, ಫ್ರೈ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಮೊಮೊಗಳು ಸಿಕ್ಕಿಂ, ಅಸ್ಸಾಂ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಂತಹ ಭಾರತೀಯ ಪ್ರದೇಶಗಳಲ್ಲಿ ಜನಪ್ರಿಯ ಬೀದಿ ಆಹಾರ (Food) ಭಕ್ಷ್ಯವಾಗಿದೆ. ಸಾಮಾನ್ಯವಾಗಿ ಮೈದಾವನ್ನು ಬಳಸಿ ಇದನ್ನು ತಯಾರಿಸುತ್ತಾರೆ. ಇದಕ್ಕೆ ಎಗ್‌, ವೆಜಿಟೇಬಲ್ಸ್, ಪನ್ನೀರ್ ಮೊದಲಾದ ಸ್ಟಫಿಂಗ್ಸ್ ಸೇರಿಸುತ್ತಾರೆ.

ಚಿಕನ್ ಶವರ್ಮಾ ತಿಂದು ಕಾಸರಗೋಡಿನ ಯುವತಿ ಸಾವು; ಶಿಗೆಲ್ಲಾ ಬ್ಯಾಕ್ಟಿರೀಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

ಗಂಟಲಿನಲ್ಲಿ ಮೊಮೋಸ್ ಸಿಲುಕಿ ವ್ಯಕ್ತಿ ಸಾವು
ಮೊಮೊಸ್ ತಿನ್ನುತ್ತಿದ್ದ ವ್ಯಕ್ತಿ ಗಂಟಲಿನ ಮಧ್ಯೆ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 50 ವರ್ಷದ ವ್ಯಕ್ತಿಯೊಬ್ಬ ಅಂಗಡಿಯೊಂದರಲ್ಲಿ ಮೊಮೊಸ್ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಸಿಟಿ ಸ್ಕ್ಯಾನ್ ಮಾಡಿದಾಗ ಮೊಮೊಸ್ ಗಂಟಲಿನಲ್ಲಿ ಸಿಲುಕಿರುವುದು ಕಂಡುಬಂದಿದೆ. ಹೀಗಾಗಿ ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ತಜ್ಞರು ಎಚ್ಚರಿಸಿದ್ದಾರೆ. 

ಈ ರುಚಿಕರವಾದ ಸ್ಟ್ರೀಟ್ ಫುಡ್ ಬಗ್ಗೆ ಎಚ್ಚರಿಕೆ ನೀಡಿರುವ ಏಮ್ಸ್‌, ಮೊಮೊಸ್‌ ತುಂಬಾ ಮೃದುವಾಗಿರುತ್ತದೆ. ಹೀಗಾಗಿ ಸುಲಭವಾಗಿ ತಿನ್ನಬಹುದು ಎಂದುಕೊಳ್ಳಬಹುದು. ಆದರೆ ಇದು ತುಂಬಾ ಮೆತ್ತಗಿರುವ ಕಾರಣ ಗಂಟಲಲ್ಲಿ (Throat) ತುಂಬಾ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತದೆ. ಹೀಗಾಗಿ ಜಾಗರೂಕರಾಗಿ ತಿನ್ನುವುದು ಬಹಳ ಮುಖ್ಯ. ಅದರ ಗಾತ್ರ ಸಣ್ಣದಾಗಿರುವ ಇರುವ ಕಾರಣ ಗಂಟಲಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

Health Alert: ನೀವು ಮೊಮೊಸ್ ಪ್ರಿಯರೇ? ವಿಪರೀತ ಸೇವನೆಯಿಂದ ಅಪಾಯಗಳೊಂದೆರಡಲ್ಲ!

ಮೊಮೋಸ್ ಜಾಗರೂಕತೆಯಿಂದ ನುಂಗುವಂತೆ ಸೂಚಿಸಿದ ತಜ್ಞರು
ಎಐಐಎಂಎಸ್ ಇತ್ತೀಚೆಗೆ ಫೊರೆನ್ಸಿಕ್ ಇಮೇಜಿಂಗ್ ಜರ್ನಲ್‌ನಲ್ಲಿ ವರದಿಯನ್ನು ಪ್ರಕಟಿಸಿತು. ಅಲ್ಲಿ ಮೊಮೊದಲ್ಲಿ ಉಸಿರುಗಟ್ಟಿದ ನಂತರ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಅಪರೂಪದ ಪ್ರಕರಣವನ್ನು ವಿವರಿಸಲಾಗಿದೆ. ಆ ವ್ಯಕ್ತಿ 50ರ ಆಸುಪಾಸಿನಲ್ಲಿದ್ದರು. ವರದಿಯ ಪ್ರಕಾರ, ಮರಣೋತ್ತರ ಪರೀಕ್ಷೆಯ ಸಮಯದಲ್ಲಿ, ಶ್ವಾಸನಾಳದ ತೆರೆಯುವಿಕೆಯಲ್ಲಿ ಮೊಮೊ ಬಿದ್ದಿದೆ ಎಂದು ತಿಳಿದುಬಂದಿದೆ. ಹೀಗಾಗಿಯೇ ಅವರು ತಟ್ಟೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ತಜ್ಞರು ಜಾಗರೂಕತೆಯಿಂದ ನುಂಗಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮೊಮೊದ ಜಾರು ವಿನ್ಯಾಸ ಮತ್ತು ಸಣ್ಣ ಆಕಾರವು ಇಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ, ನಾವು ಮೊಮೊಸ್ ಅನ್ನು ನುಂಗುವ ಮೊದಲು ಸರಿಯಾಗಿ ಅಗಿಯಬೇಕು ಎಂದಿದ್ದಾರೆ. ಈ ಹಿಂದೆ ಕಾಸರಗೋಡಿನ ವಿದ್ಯಾರ್ಥಿನಿಯೊಬ್ಬಳು ಚಿಕನ್ ಶವರ್ಮಾ (Chicken Shawarma) ಸೇವಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಒಟ್ನಲ್ಲಿ ಸ್ಟ್ರೀಟ್‌ಫುಡ್ ತಿನ್ನೋದೇನೋ ಸರಿ. ಆದ್ರೆ ಹುಷಾರಾಗಿರ್ಬೇಕು ಅನ್ನೋದಕ್ಕೆ ಇದು ಎಚ್ಚರಿಕೆ ಕರೆಗಂಟೆಯಾಗಿದೆ. 

click me!