ಸಂಧಿವಾತದ ಸಮಸ್ಯೆಯಿದ್ರೆ ಉದ್ದಿನಬೇಳೆ ತಿನ್ಲೇಬೇಡಿ

By Suvarna News  |  First Published Jun 14, 2022, 3:10 PM IST

ಭಾರತೀಯ ಅಡುಗೆ (Cooking)ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯ (Grain)ವನ್ನು ಬಳಸಲಾಗುತ್ತೆ. ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ಇವುಗಳನ್ನು ವಿವಿಧ ಅಡುಗೆಯಲ್ಲಿ ಸೇರಿಸಲಾಗುತ್ತೆ. ಹಾಗೆಯೇ ಉದ್ದಿನಬೇಳೆಯನ್ನು ಸಹ ಬಳಸುತ್ತಾರೆ. ಆದ್ರೆ ಉದ್ದಿನಬೇಳೆ (Urad dal)ಯ ಬಳಕೆಯಿಂದ ಆರೋಗ್ಯಕ್ಕೆ (Health) ಪ್ರಯೋಜನಗಳಿರೋ ಹಾಗೇ ತೊಂದ್ರೆಯೂ ಇದೆ. 


ಭಾರತೀಯ ಶೈಲಿಯ ಅಡುಗೆ (Cooking)ಯಲ್ಲಿ ಬೇಳೆ ಕಾಳುಗಳು, ಧಾನ್ಯಗಳಿಗೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಅಡುಗೆ ಮಾಡುವಾಗ ಉದ್ದಿನ ಬೇಳೆ (Urad dal)ಯನ್ನು ಬಳಸದವರು ಸಾಮಾನ್ಯವಾಗಿ ಯಾರೂ ಇಲ್ಲವೆಂದೇ ಹೇಳಬಹುದು. ದೋಸೆ, ಇಡ್ಲಿ, ವಡೆ ಹೀಗೆ ಹಲವಾರು ರೀತಿಯಲ್ಲಿ ಅಡುಗೆಯಲ್ಲಿ ಉದ್ದಿನಬೇಳೆಯನ್ನು ಬಳಸಲಾಗುತ್ತೆ. ಇದನ್ನು ಉರಾದ್ ದಾಲ್, ಕಪ್ಪು ಮಸೂರ ಎಂದೂ ಕರೆಯುತ್ತಾರೆ. ಉದ್ದಿನ ಬೇಳೆಯನ್ನು ಪ್ರೋಟೀನ್‌ನ (Protein) ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ಇರುತ್ತವೆ. ಉದ್ದಿನಬೇಳೆ ಸೇವನೆಯಿಂದ ಹೃದಯಸಂಬಂಧಿ, ಮಧುಮೇಹ ಮೊದಲಾದ ಕಾಯಿಲೆಗಳನ್ನು ದೂರವಿಡಬಹುದು. ಮಲಬದ್ಧತೆ, ಕಿಡ್ನಿ ಸ್ನೋನ್ ಸಮಸ್ಯೆ ಉದ್ದಿನ ಬೇಳೆ ಸೇವನೆಯಿಂದ ಕಡಿಮೆಯಾಗುತ್ತದೆ. ಉದ್ದಿನ ಬೇಳೆಯಲ್ಲಿ ಆಂಟಿ ಆಕ್ಸಿಡೆಂಟ್‌ ಗುಣಗಳು ಸಹ ಹೆಚ್ಚಾಗಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಉದ್ದಿನಬೇಳೆಯನ್ನು ಆರೋಗ್ಯಕ್ಕೆ (Health) ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಸಸ್ಯಾಹಾರಿಗಳು ಬೇಳೆಕಾಳುಗಳನ್ನು ಸೇವಿಸಬೇಕು.  ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾದ ಅನೇಕ ಪೋಷಕಾಂಶಗಳು ಉದ್ದಿನಬೇಳೆಯಲ್ಲಿ ಕಂಡುಬರುತ್ತವೆ. ಪ್ರೋಟೀನ್ (Protein) ಹೊರತಾಗಿ, ಉದ್ದಿನಬೇಳೆಯು ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಬಿ, ಕಬ್ಬಿಣ, ಫೋಲಿಕ್ ಆಮ್ಲ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯಕವೆಂದು ಪರಿಗಣಿಸಲಾಗಿದೆ. ಆದರೆ ಅನೇಕ ಅನುಕೂಲಗಳ ಹೊರತಾಗಿಯೂ, ಇದು ಕೆಲವು ಅನಾನುಕೂಲಗಳನ್ನು ಸಹ ಹೊಂದಿದೆ.

Tap to resize

Latest Videos

ಬೇಳೆಕಾಳುಗಳಲ್ಲಿ ಹುಳುಗಳಾಗದಂತೆ ದೀರ್ಘಕಾಲದ ವರೆಗೆ ಸಂರಕ್ಷಿಸಿಡುವುದು ಹೇಗೆ ?

ಉದ್ದಿನ ಬೇಳೆ ಹಲವು ಆರೋಗ್ಯ ಸಮಸ್ಯೆಗಳನ್ನು ಶಮನಗೊಳಿಸಿದರೂ ಸಹ ಕೆಲವೊಬ್ಬರ ಪಾಲಿಗೆ ಉದ್ದಿನಬೇಳೆಯ ಸೇವನೆ ಒಳ್ಳೆಯದಲ್ಲ. ಕೆಲವೊಂದು ಕಾಯಿಲೆ ಇರುವವರಿಗೆ ಉದ್ದಿನಬೇಳೆ ಸೇವನೆ ಮಾರಕವಾಗಿ ಪರಿಣಮಿಸಬಹುದು. ಹಾಗಿದ್ರೆ ಯಾರೆಲ್ಲಾ ಉದ್ದಿನ ಬೇಳೆಯನ್ನು ತಿನ್ನಬಾರದು ಎಂಬುದನ್ನು ಮೊದ್ಲು ತಿಳ್ಕೊಳ್ಕೋಣ.

ಯಾರು ಉದ್ದಿನಬೇಳೆಯನ್ನು ತಿನ್ನಲೇಬಾರದು ?

ಅಜೀರ್ಣದ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ: ಅಜೀರ್ಣದ ಸಮಸ್ಯೆಯನ್ನು ಹೊಂದಿರುವವರು  ಉದ್ದಿನ ಬೇಳೆಯಿಂದ ದೂರವಿರಬೇಕು.  ಯಾಕೆಂದರೆ ಉದ್ದಿನ ಬೇಳೆ ಕೂಡ ಬೇಗ ಜೀರ್ಣವಾಗುವುದಿಲ್ಲ. ಇದರಿಂದಾಗಿ ಅನೇಕ ಬಾರಿ ಮಲಬದ್ಧತೆ (Constipation), ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.

ಯೂರಿಕ್ ಆಮ್ಲದ ಸಮಸ್ಯೆಯಿರುವವರು: ಯೂರಿಕ್ ಆಮ್ಲದಿಂದ ಬಳಲುತ್ತಿರುವವರು ಕೂಡಾ ಉದ್ದಿನಬೇಳೆಯಿಂದ ದೂರವಿರಬೇಕು. ಯಾಕೆಂದರೆ ಉದ್ದಿನಬೇಳೆ ಮೂತ್ರಪಿಂಡದಲ್ಲಿ ಕ್ಯಾಲ್ಸಿಫಿಕೇಶನ್ ಸ್ಟೋನ್ ಅನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಈಗಾಗಲೇ ಯೂರಿಕ್ ಆಸಿಡ್ (Uric acid) ಹೆಚ್ಚಿದ್ದರೆ, ಉದ್ದಿನ ಬೇಳೆಯನ್ನು ಸೇವಿಸಬೇಡಿ.

Protein Rich Food: ಆಹಾರದಲ್ಲಿ ಧಾನ್ಯಗಳ ಬಳಕೆ ಹೇಗಿರಬೇಕು..? ಯಾವ ಬೇಳೆ ಆರೋಗ್ಯಕ್ಕೆ ಉತ್ತಮ

ಸಂಧಿವಾತದ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ: ಸಂಧಿವಾತದ ಸಮಸ್ಯೆ ಇರುವವರು ಉದ್ದಿನಬೇಳೆಯನ್ನು ಸೇವಿಸಬಾರದು. ಉದ್ದಿನಬೇಳೆಯಲ್ಲಿ  ಗೌಟ್ ಸಮಸ್ಯೆಯನ್ನು ಹೆಚ್ಚಿಸುವ ಅಂಶಗಳು ಅಡಗಿರುತ್ತವೆ. ಈ ಕಾರಣದಿಂದ ಸಂಧಿವಾತ ಸಮಸ್ಯೆಯಿಂದ ಬಳಲುವವರು ಉದ್ದಿನ ಬೇಳೆಯಿಂದ ಅಂತರ ಕಾಯುವುದು ಒಳ್ಳೆಯದು. 

ಮೂತ್ರಪಿಂಡದ ಕಲ್ಲುಗಳ ಸಮಸ್ಯೆ: ಕಿಡ್ನಿ ಸ್ಟೋನ್ (Kidney stone) ಸಮಸ್ಯೆಯಿಂದ ಬಳಲುತ್ತಿರುವವರು ಉದ್ದಿನಬೇಳೆ ತಿನ್ನುವುದನ್ನು ತಪ್ಪಿಸಬೇಕು. ಉದ್ದಿನಬೇಳೆ ಸೇವನೆಯು ಮೂತ್ರಪಿಂಡ ಅಥವಾ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು.

100 ಗ್ರಾಂನಷ್ಟು ಉದ್ದಿನ ಬೇಳೆ 26 ಗ್ರಾಂಗಳಷ್ಟು ಪ್ರೋಟೀನ್‌ನ್ನು ಹೊಂದಿದೆ. ಹೀಗಾಗಿ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ. ಹೀಗಿದ್ದೂ ಹೊಟ್ಟೆನೋವು, ಅಜೀರ್ಣ ಸಮಸ್ಯೆ ಇರುವವರು ಇದನ್ನು ಸೇವಿಸುವ ಮುನ್ನ ಇದರಲ್ಲಿರುವ ಆಮ್ಲೀಯ ಗುಣವನ್ನು ಕಡಿಮೆ ಮಾಡಲು ಈ ಬೇಳೆಯನ್ನು ರಾತ್ರಿಯಿಡೀ ನೆನೆಸಿ ನಂತರ ಸೇವಿಸುಂತೆ ಸಲಹೆ ನೀಡಲಾಗುತ್ತದೆ.

click me!