
ಭಾರತೀಯರ ಪಾಲಿಗೆ ಬೆಳಗ್ಗೆ ಎದ್ದ ಕೂಡಲೇ 1 ಕಪ್ ಬಿಸಿ ಬಿಸಿ ಚಹಾ (Tea) ಕುಡಿದ್ರೆ ಅದುವೇ ಶುಭಮುಂಜಾನೆ. ಸಂಜೆಯ ಸ್ನ್ಯಾಕ್ಸ್ ಜತೆಯಂತೂ ಟೀ ಇರಲೇಬೇಕು. ಚಹಾ ಅನೇಕ ಆರೋಗ್ಯ (Health) ಪ್ರಯೋಜನಗಳಿಂದ ಕೂಡಿದೆ. ವಿವಿಧ ರೀತಿಯ ಚಹಾ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಮಧ್ಯಾಹ್ನ ಊಟದ ನಂತರ ಚಹಾ ಸೇವನೆ ಒಳ್ಳೆಯದಾ ?
ಬೆಳಗ್ಗೆ, ಸಂಜೆ ಚಹಾ ಕುಡಿಯುವದು ಸಾಮಾನ್ಯಬಾಗಿ ಹಲವರ ಅಭ್ಯಾಸ. ಇದಲ್ಲದೆಯೂ ಕೆಲವೊಬ್ಬರಿಗೆ ಮಧ್ಯಾಹ್ನ ಊಟ ಮಾಡಿದ ಕೂಡಲೇ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ತುಂಬಾ ಮಂದಿ ಊಟ ಆದ ಕೂಡಲೇ ಹೊಟ್ಟೆ ಭಾರವಾಗಿ ನಿದ್ದೆ ಬರಬಾರದಲ್ಲ ಎಂದು ರಿಫ್ರೆಶ್ ಆಗಲು ಟೀ ಕುಡಿಯುತ್ತಾರೆ. ಹಾಗಿದ್ರೆ ಮಧ್ಯಾಹ್ನ ಟೀ ಕುಡಿಯೋದು ಒಳ್ಳೇದಾ ? ಇದ್ರಿಂದ ಆರೋಗ್ಯಕ್ಕೆ ಏನಾದ್ರೂ ತೊಂದ್ರೆಯಿದ್ಯಾ ತಿಳ್ಕೊಳ್ಳೋಣ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ 6 ಅದ್ಭುತ ಚಹಾಗಳು
ಮಧ್ಯಾಹ್ನ ಟೀ ಕುಡಿಯುವುದು ದೇಹದಲ್ಲಿ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಊಟದ ನಂತರ ನಿಮಗೆ ಯಾವಾಗಲೂ ಆಕಳಿಕೆ, ತೂಕಡಿಕೆ, ನಿದ್ದೆ (Sleep) ಬರುವ ಸಮಸ್ಯೆ ಕಾಡ್ತಿದ್ಯಾ ? ಹಾಗಿದ್ರೆ ಊಟದ ನಂತರದ ಆಲಸ್ಯಕ್ಕೆ ನಾವು ಉತ್ತಮ ಪರಿಹಾರವನ್ನು ಪಡೆದುಕೊಂಡಿದ್ದೇವೆ. ಊಟದ ನಂತರ ಬಿಸಿ ಬಿಸಿಯಾದ ಟೀ ಕುಡಿಯುವುದು ಮೈಂಡ್‌ನ್ನು ರಿಫ್ರೆಶ್ ಆಗಿಸುತ್ತದೆ. ಒಂದು ಬೆಚ್ಚಗಿನ ಚಹಾವು ಕೆಟ್ಟ ಮನಸ್ಥಿತಿಯಿಂದ ಹಿಡಿದು ಹೊಟ್ಟೆ ಕೆಡುವುದು, ಸೂಕ್ಷ್ಮವಾದ ಅರೆನಿದ್ರಾವಸ್ಥೆಯವರೆಗೂ ಎಲ್ಲವನ್ನೂ ಸರಿಪಡಿಸಬಹುದು.
ಏಲಕ್ಕಿ ಚಹಾ
ಏಲಕ್ಕಿ (Cardamom) ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಹೀಗಾಗಿ ಮಧ್ಯಾಹ್ನ ಏಲಕ್ಕಿ ಚಹಾ ಕುಡಿಯುವುದು ಉತ್ತಮವಾಗಿದೆ. ಈ ಚಹಾವನ್ನು ತಯಾರಿಸಲು, ಕೇವಲ ಒಂದು ಕಪ್ ನೀರು ಸೇರಿಸಿ, ¼ ಟೀ ಚಮಚ ಚಹಾ ಮತ್ತು ಎರಡು ಏಲಕ್ಕಿ ಬೀಜಗಳನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿ ಗ್ಯಾಸ್ ಸ್ಟವ್‌ನ್ನು ಆಫ್ ಮಾಡಿ. ನಂತರ ಜೇನುತುಪ್ಪ ಸೇರಿಸಿ ಬಿಸಿಯಿದ್ದಾಗಲೇ ಕುಡಿಯಿರಿ.
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
ಏಲಕ್ಕಿ ಚಹಾ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಲ್ಲಿ ಅಡಕವಾಗಿರುವ ಕೆಫೀನ್ ಅರೆನಿದ್ರಾವಸ್ಥೆಯನ್ನು ತೆಗೆದುಹಾಕುತ್ತದೆ. ಏಲಕ್ಕಿ ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ಸುಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಮಸಾಲಾ ಟೀ
ಭಾರೀ ಭೋಜನದ ಹಾಲು ಸೇರಿಸಿದ ದಪ್ಪ ಚಹಾವನ್ನು ಯಾವತ್ತೂ ಸೇವಿಸಲು ಹೋಗಬೇಡಿ. ಬದಲಾಗಿ ಸರಳವಾಗಿ ತಯಾರಿಸಿದ ಟೀ ಕುಡಿಯಿರಿ. ನೀವು ಕೆಲವೇ ನಿಮಿಷಗಳಲ್ಲಿ ಇದನ್ನು ಮಾಡಬಹುದು. ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು, ಪುಡಿ ಮಾಡಿದ ಶುಂಠಿ, ತುಳಸಿ, ಮೆಣಸು ಮತ್ತು ಲವಂಗದ ಮಿಶ್ರಣವನ್ನು ಸೇರಿಸಿ. ಈ ಮಿಶ್ರಣವನ್ನು ಕುದಿಸಿ ಮತ್ತು ಜೇನುತುಪ್ಪದೊಂದಿಗೆ ಬಿಸಿಯಾಗಿ ಕುಡಿಯಿರಿ. ಇದು ಅಸ್ವಸ್ಥತೆ, ನಿದ್ರಾಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕವನ್ನು ನಿರ್ವಹಿಸಲು ಸಹ ನೆರವಾಗುತ್ತದೆ.
ಶುಂಠಿ ಲೆಮನ್ ಟೀ
ಈ ಸರಳವಾದ ಚಹಾ ತಯಾರಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಒಂದು ಪಾತ್ರೆ ತೆಗೆದುಕೊಂಡು 2 ಕಪ್ ನೀರು ಸೇರಿಸಿ, ನೀರು ಕುದಿಯಲು ಪ್ರಾರಂಭಿಸಿದ ನಂತರ. ನಿಂಬೆಹಣ್ಣಿನ ರಸವನ್ನು ಸೇರಿಸಿ. ನಂತರ 1 ಇಂಚಿನ ಶುಂಠಿ (Ginger)ಯನ್ನು ಸೇರಿಸಿ. ಬಳಿಕ, 1 ಟೀ ಬ್ಯಾಗ್ ಗ್ರೀನ್ ಟೀ ಸೇರಿಸಿ.
ನಿಂಬೆ (Lemon) ಮತ್ತು ಶುಂಠಿಯ ರಿಫ್ರೆಶ್ ಪರಿಮಳವು ಆಲಸ್ಯವನ್ನು ಹೊರಹಾಕುತ್ತದೆ. ಮಾತ್ರವಲ್ಲದೆ ಚಯಾಪಚಯ ಕ್ರಿಯೆಯನ್ನು ಸಹ ವೇಗಗೊಳಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಸಿರು ಚಹಾದ ಸೇರ್ಪಡೆಯು ಸೌಮ್ಯವಾದ ಕೆಫೀನ್ ಇರುವಿಕೆಯಿಂದಾಗಿ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
ಫೆನ್ನೆಲ್ ಮತ್ತು ಜೇನುತುಪ್ಪದ ಚಹಾ
ಭಾರೀ ಊಟದ ನಂತರ ಹೊಟ್ಟೆ ಉಬ್ಬುವುದು ಸಹಜ, ಆದರೆ ಕೆಲವೊಮ್ಮೆ ಇದು ಬಹಳಷ್ಟು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹೀಗಿದ್ದಾಗ ಸೋಂಪು ಅಥವಾ ಫೆನ್ನೆಲ್ ಬೀಜಗಳು ಮತ್ತು ಜೇನುತುಪ್ಪ (Honey)ದೊಂದಿಗೆ ಬೆರೆಸಿದ ಈ ಸರಳವಾದ ಚಹಾವು ವಾಯು, ಅಸ್ವಸ್ಥತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಫೆನ್ನೆಲ್ ಬೀಜಗಳಲ್ಲಿನ ಫೈಬರ್ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಈ ಚಹಾವನ್ನು ತಯಾರಿಸಲು, ಒಂದು ಕಪ್ ನೀರನ್ನು ಕುದಿಸಿ, ಗ್ಯಾಸ್ ಸ್ಟವ್ ಆಫ್ ಮಾಡಿ. ನೀರು ಬಿಸಿಯಾದ ನಂತರ, 1 ಟೀಚಮಚ ಫೆನ್ನೆಲ್ ಬೀಜಗಳನ್ನು ಸೇರಿಸಿ ಮತ್ತು 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಸರಳವಾದ ಫೆನ್ನೆಲ್ ಮತ್ತು ಜೇನುತುಪ್ಪದ ಚಹಾ ಆಹಾರವನ್ನು ಜೀರ್ಣಿಸಿಕೊಳ್ಳಲು, ಕೊಬ್ಬನ್ನು ಸುಡಲು ಮತ್ತು ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.