Variety Chutney: ಸ್ನ್ಯಾಕ್ಸ್‌ ಜತೆ ಸವಿಯಲು ಬೆಸ್ಟ್‌ ರೆಸಿಪಿ

By Suvarna News  |  First Published Mar 9, 2022, 11:17 AM IST

ಸಮೋಸಾ, ಪಕೋಡಾ, ಸ್ಯಾಂಡ್‌ವಿಚ್ (Sandwich) ಅಥವಾ ಚಾಟ್ ಯಾವುದೇ ಆಗಿರಲಿ, ನಿಮ್ಮ ಮೆಚ್ಚಿನ ಗರಿಗರಿಯಾದ ಮತ್ತು ಮಸಾಲೆಯುಕ್ತ ತಿಂಡಿ ಟೇಸ್ಟಿ ಚಟ್ನಿ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಸಂಜೆಯ ಸ್ನ್ಯಾಕ್ಸ್‌ (Snacks)ನೊಂದಿಗೆ ನೀವು ಸವಿಯಲು ಇಷ್ಟಪಡಬಹುದಾದ ಕೆಲವು ಟೇಸ್ಟೀ ಚಟ್ನಿ (Chutney) ರೆಸಿಪಿಗಳು ಇಲ್ಲಿವೆ.


ಮನೆಯಲ್ಲಿ ರೆಡಿ ಮಾಡಿಟ್ಟಿರೋ ಚಟ್ನಿ (Chutney)ಯಿದ್ದರೆ ಅದೆಷ್ಟೋ ಸಂದರ್ಭದಲ್ಲಿ ನೆರವಿಗೆ ಬರುತ್ತದೆ. ದೋಸೆ, ಚಟ್ನಿಗೆ ಸಾಂಬಾರು ಸಿದ್ಧಪಡಿಸಲು ಸಮಯವಿಲ್ಲದಿದ್ದಾಗ ಚಟ್ನಿಯೊಂದಿಗೆ ನೆಂಚಿಕೊಂಡು ತಿನ್ನಲು ಸಾಧ್ಯವಾಗುತ್ತದೆ. ಚಟ್ನಿಯು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮನೆಯಲ್ಲಿ ತಯಾರಿಸಿದ ಚಟ್ನಿಗಳು ಹಲವು ಆರೋಗ್ಯ (Health) ಪ್ರಯೋಜನಗಳನ್ನು ಸಹ ಹೊಂದಿವೆ. ಚಟ್ನಿಗಳ ಸೇವನೆ ಜೀರ್ಣಕ್ರಿಯೆಗೆ ಉತ್ತಮ. ಚಯಾಪಚಯವನ್ನು ವೇಗಗೊಳಿಸುತ್ತದೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಸಂಜೆಯ ಸ್ನ್ಯಾಕ್ಸ್‌ (Snacks)ನೊಂದಿಗೆ ನೀವು ಸವಿಯಲು ಇಷ್ಟಪಡಬಹುದಾದ ಕೆಲವು ಟೇಸ್ಟೀ ಚಟ್ನಿ ರೆಸಿಪಿ (Recipe)ಗಳು ಇಲ್ಲಿವೆ.

ಆಮ್ಚೂರ್ ಚಟ್ನಿ
ಬಾಣಸಿಗ ಕುನಾಲ್ ಕಪೂರ್ ಆಮ್ಚೂರ್ ಚಟ್ನಿ ಪಾಕವಿಧಾನವನ್ನು ತಿಳಿಸಿದ್ದಾರೆ.

Latest Videos

undefined

ಬೇಕಾದ ಪದಾರ್ಥಗಳು
1/2 ಕಪ್ ಒಣ ಮಾವಿನ ಪುಡಿ
3 ಚಮಚ ಸಕ್ಕರೆ
1 ಟೀಸ್ಪೂನ್ ಉಪ್ಪು
1 ಟೀಸ್ಪೂನ್ ಮೆಣಸಿನ ಪುಡಿ
2 ಕಪ್ ನೀರು

ಮಾಡುವ ವಿಧಾನ
ಒಂದು ಬೌಲ್‌ನಲ್ಲಿ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಈ ಮಿಕ್ಸ್ ಅನ್ನು ಬಾಣಲೆಯಲ್ಲಿ ಕುದಿಸಿ. ಚಟ್ನಿ ಪಾಕದ ಹದಕ್ಕೆ ಬರುವ ವರೆಗೆ ಬೇಯಿಸಿ. ಇದನ್ನು ಬಿಸಿಯಾಗಿ ಬಡಿಸಿ ಮತ್ತು ಯಾವುದೇ ಕರಿದ ತಿಂಡಿಯೊಂದಿಗೆ ಸವಿಯಲು ಇದು ಚೆನ್ನಾಗಿರುತ್ತದೆ.

ನೀವು ಮೊಮೊಸ್ ಪ್ರಿಯರೆ? ಹಾಗಿದ್ರೆ ಹೆಚ್ಚು ತಿನ್ನೋ ಮುನ್ನ ಇದನ್ನೊಮ್ಮೆ ಓದಿ

ಸಿಹಿ ಮತ್ತು ಹುಳಿ ಈರುಳ್ಳಿ ಚಟ್ನಿ
ಮಾಸ್ಟರ್ ಚೆಫ್ ಪಂಕಜ್ ಬದೌರಿಯಾ ಸಿಹಿ ಮತ್ತು ಹುಳಿ ಈರುಳ್ಳಿ (Onion) ಚಟ್ನಿ ಪಾಕವಿಧಾನವನ್ನು ವಿವರಿಸಿದ್ದಾರೆ.

ಬೇಕಾದ ಪದಾರ್ಥಗಳು
250 ಗ್ರಾಂ ಬೇಬಿ ಈರುಳ್ಳಿ
1 ಚಮಚ ಎಣ್ಣೆ
1 ಟೀಸ್ಪೂನ್ ಉಪ್ಪು
2 ಟೊಮೇಟೋ
2 ಬೇ ಎಲೆಗಳು
3 ಕಪ್ಪು ಏಲಕ್ಕಿ
1 ಟೀ ಸ್ಪೂನ್ ಕಪ್ಪು ಮೆಣಸು 
1/2 ಕಪ್ ನೆನೆಸಿದ ಒಣದ್ರಾಕ್ಷಿ
3/4 ಕಪ್ ಸಕ್ಕರೆ
50 ಮಿಲಿ ವಿನೇಗರ್
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ

ಮಾಡುವ ವಿಧಾನ
ಈರುಳ್ಳಿ ಸಿಪ್ಪೆ ತೆಗೆದು ಪಕ್ಕಕ್ಕೆ ಇಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ ಮತ್ತು ಒಂದು ಚಮಚ ಉಪ್ಪನ್ನು ಹಾಕಿ. 4-5 ನಿಮಿಷ ಮುಚ್ಚಿ ಬೇಯಿಸಿ. ಸೇರಿಸಿ. ನಂತರ ಬೇ ಎಲೆಗಳು, ಏಲಕ್ಕಿ, ಕರಿಮೆಣಸು ಪಯಡಿ, ಒಣದ್ರಾಕ್ಷಿ, ಟೊಮೆಟೊ ರಸ ಸೇರಿಸಿ ಮತ್ತು ಮತ್ತೊಮ್ಮೆ ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಸಕ್ಕರೆ, ವಿನೇಗರ್ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ ಮತ್ತು ಸಿರಪ್ ಆಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಇದನ್ನು ತಣ್ಣಗಾಗಿಸಿ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ.

ಬಾಳೆಕಾಯಿ ಸಿಪ್ಪೆಯ ಈ ಚಟ್ನಿ ಸವಿದ್ರೆ ಮತ್ಯಾವತ್ತೂ ನೀವು ಸಿಪ್ಪೆನಾ ಎಸೆಯೋಲ್ಲ

ಅನಾನಸ್ ಚಟ್ನಿ
ಬಾಣಸಿಗ ಕುನಾಲ್ ಕಪೂರ್ ಅನಾನಸ್ ಚಟ್ನಿಯ ಪಾಕವಿಧಾನವನ್ನು ವಿವರಿಸಿದ್ದಾರೆ

ಬೇಕಾಗುವ ಪದಾರ್ಥಗಳು
ಅನಾನಸ್ ಚೂರುಗಳು  2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ  ½ ಟೀಸ್ಪೂನ್
ಹುರಿದ ಜೀರಿಗೆ ಪುಡಿ 1 ಟೀಸ್ಪೂನ್
ಕರಿಬೇವಿನ ಎಲೆಗಳು 
ವಿನೇಗರ್ 6 ಟೀಸ್ಪೂನ್
ಸಕ್ಕರೆ  ½ ಕಪ್

ಮಾಡುವ ವಿಧಾನ
ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಅನಾನಸ್, ಉಪ್ಪು (Salt), ಮೆಣಸಿನ ಪುಡಿ, ಹುರಿದ ಜೀರಿಗೆ ಪುಡಿ ಸೇರಿಸಿ ಬೇಯಿಸಿ. ಸ್ಪಲ್ಪ ಹೊತ್ತಿನ ನಂತರ ಕರಿಬೇವಿನ ಎಲೆಗಳು, ವಿನೇಗರ್ ಮತ್ತು ಸಕ್ಕರೆಯನ್ನು ಸೇರಿಸಿಕೊಳ್ಳಿ. ಬೆಂಕಿಯನ್ನು ಕಡಿಮೆ ಮಾಡಿ ಮತ್ತು 5 ನಿಮಿಷ ಬೇಯಿಸಲು ಮುಚ್ಚಿ. ಮೆಣಸಿನ ಹುಡಿ ಸೇರಿಸಿ ಚಟ್ನಿ ಪಾಕದ ಹದಕ್ಕೆ ಬರುವ ವರೆಗೆ ಬೇಯಿಸಿ, ಬಿಸಿಯಾಗಿಯೇ ಸರ್ವ್ ಮಾಡಬಹುದು.

ಸ್ಟ್ರೀಟ್ ಶೈಲಿಯ ಹಸಿರು ಚಟ್ನಿ
ಹಿಂದಿ ಕಿರುತೆರೆ ನಟಿ ಎರಿಕಾ ಫೆರ್ನಾಂಡಿಸ್ ಸ್ಟ್ರೀಟ್ ಶೈಲಿಯ ಹಸಿರು ಚಟ್ನಿ ಪಾಕವಿಧಾನವನ್ನು ವಿವರಿಸಿದ್ದಾರೆ.

ಬೇಕಾಗುವ ಪದಾರ್ಥಗಳು
ಕೊತ್ತಂಬರಿ ಸೊಪ್ಪಿನ 2 ಗೊಂಚಲುಗಳು
ಸ್ಪಲ್ಪ ಪುದೀನ ಎಲೆಗಳು
8 ಟೇಬಲ್ ಸ್ಪೂನ್ ಬೂಂದಿ 
2 ಟೇಬಲ್ ಹುರಿದ ಚನ್ನಾ (ಹುರಿದ ಕಡಲೆಕಾಯಿಯನ್ನು ಸಹ ಬಳಸಬಹುದು)
8-10 ಹಸಿರು ಮೆಣಸಿನಕಾಯಿಗಳು 
ಶುಂಠಿ ಸ್ಪಲ್ಪ
ಬೆಳ್ಳುಳ್ಳಿ ಬೀಜಗಳು 1-2
1 ಟೀಸ್ಪೂನ್ ಜೀರಿಗೆ 
1 ಸ್ಪೂನ್ ನಿಂಬೆ ರಸ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲು ಬೂಂದಿ ಮತ್ತು ಹುರಿದ ಚನ್ನಾ ದಾಲ್ ಅನ್ನು ತಣ್ಣೀರಿನಿಲ್ಲಿ ನೆನೆಸಿಡಿ. ಇದರಿಂದ ಅವು ಸ್ವಲ್ಪ ಮೃದುವಾಗುತ್ತವೆ ಮತ್ತು ಮಿಶ್ರಣ ಮಾಡಲು ಸುಲಭವಾಗುತ್ತದೆ. ನಂತರ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಕ್ಸರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ಈಗ ಖಾರವಾದ ಹಸಿರು ಚಟ್ನಿ ಸವಿಯಲು ಸಿದ್ಧ. ಕೆಲವರು ಇದಕ್ಕೆ ಮೊಸರು (Curd) ಅಥವಾ ತುರಿದ ತೆಂಗಿನಕಾಯಿಯನ್ನು ಸೇರಿಸಲು ಇಷ್ಟಪಡುತ್ತಾರೆ.

click me!