ಒಂದು ಹನಿ ಎಣ್ಣೆ, ನೀರಿಲ್ಲದೆ ಮಟನ್‌ ಪೆಪ್ಪರ್‌ ಫ್ರೈ ಮಾಡೋದನ್ನ ಹೇಳಿಕೊಟ್ಟ ನಟ ಪ್ರಕಾಶ್ ರಾಜ್  

Published : May 13, 2025, 05:06 PM IST
ಒಂದು ಹನಿ ಎಣ್ಣೆ, ನೀರಿಲ್ಲದೆ ಮಟನ್‌ ಪೆಪ್ಪರ್‌ ಫ್ರೈ ಮಾಡೋದನ್ನ ಹೇಳಿಕೊಟ್ಟ ನಟ ಪ್ರಕಾಶ್ ರಾಜ್  

ಸಾರಾಂಶ

ನಟ ಪ್ರಕಾಶ್ ರಾಜ್ ಎಣ್ಣೆ ಬಳಸದೆ ಪೆಪ್ಪರ್ ಮಟನ್ ಮಾಡುವ ವಿಧಾನ ಹಂಚಿಕೊಂಡಿದ್ದಾರೆ. ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಲವಂಗ, ಪಲಾವ್ ಎಲೆ, ಅರಿಶಿನ, ಗರಂ ಮಸಾಲೆ, ಕರಿಮೆಣಸನ್ನು ಮಟನ್ ಜೊತೆ ಬೆರೆಸಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ಆರೋಗ್ಯಕರ, ರುಚಿಕರವಾದ ಮಟನ್ ಸವಿಯಲು ಸಿದ್ಧ.

Pepper Mutton Recipe Prakash Raj: ಸೌತ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ,  ಬಾಲಿವುಡ್ ಚಿತ್ರಗಳಲ್ಲಿಯೂ ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾದ ನಟ ಪ್ರಕಾಶ್ ರಾಜ್ ಇತ್ತೀಚಿನ ದಿನಗಳಲ್ಲಿ  ಸಿನಿಮಾ ಅಥವಾ ರಾಜಕೀಯ ವಿಷಯಕ್ಕಾಗಿ ಸುದ್ದಿಯಲ್ಲಿಲ್ಲ. ಬದಲಾಗಿ ವಿಶೇಷ ರೆಸಿಪಿಯಿಂದಾಗಿ ಫುಲ್ ವೈರಲ್ ಆಗಿದ್ದಾರೆ. ಅವರ ನಟನೆಯಂತೆಯೇ, ಪ್ರಕಾಶ್ ರಾಜ್ ರೆಸಿಪಿಯೂ ಜನರಿಗೆ ಇಷ್ಟವಾಗುತ್ತಿದೆ. ಹೌದು, ಇತ್ತೀಚೆಗೆ ಅವರು ಪೆಪ್ಪರ್ ಮಟನ್ ಎಂಬ ತುಂಬಾ ಸುಲಭ ಮತ್ತು ಆರೋಗ್ಯಕರ ಮಟನ್ ಖಾದ್ಯವನ್ನು ಹಂಚಿಕೊಂಡಿದ್ದಾರೆ.  
 
ಈ ಮಟನ್‌ನ ವಿಶೇಷವೆಂದರೆ ಇದನ್ನು ತಯಾರಿಸಲು ಒಂದು ಹನಿ ಎಣ್ಣೆಯನ್ನು ಸಹ ಬಳಸಲಾಗುವುದಿಲ್ಲ, ಆದರೆ ಇದರ ರುಚಿ ಇತರ ಮಟನ್ ಖಾದ್ಯದಷ್ಟೇ ಅದ್ಭುತವಾಗಿದೆ. ನೀವು ಕೂಡ ಮಟನ್ ಪ್ರಿಯರಾಗಿದ್ದರೆ ಮತ್ತು ವಾರಾಂತ್ಯದಲ್ಲಿ ಹೊಸ ಮತ್ತು  ಸಿಂಪಲ್ ಆಗಿರುವ ರೆಸಿಪಿ ಮಾಡಲು ಪ್ರಯತ್ನಿಸಲು ಬಯಸಿದರೆ, ಪ್ರಕಾಶ್ ರಾಜ್ ಅವರ ಈ ರೆಸಿಪಿ  ನಿಮಗೆ ಖಂಡಿತ ಇಷ್ಟವಾಗಬಲ್ಲದು. ಹಾಗಾದರೆ  
ಈ ಪೆಪ್ಪರ್ ಮಟನ್  ವಿಶೇಷತೆ ಏನು, ಮಾಡುವ ವಿಧಾನ ನೋಡೋಣ ಬನ್ನಿ... 

ಪೆಪ್ಪರ್ ಮಟನ್ ಎಂಬ ಈ ಖಾದ್ಯವು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ಇದು ತುಂಬಾ ಸರಳ ಮತ್ತು ಬೇಗ ಮಾಡಬಹುದಾದ ಅಡುಗೆಯಾಗಿದ್ದು, ಇದಕ್ಕೆ ಹೆಚ್ಚು ಮಸಾಲೆ ಸೇರಿಸೋದು ಬೇಡ. ಎಣ್ಣೆ ಅಥವಾ ತುಪ್ಪದ ಅಗತ್ಯವಿಲ್ಲ. ಆದರೂ ಇದರ ರುಚಿ ಅದ್ಭುತವಾಗಿದ್ದು, ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡುವ ಆಸೆ ಮೂಡುತ್ತದೆ. ಈ ಖಾದ್ಯದ ದೊಡ್ಡ ವೈಶಿಷ್ಟ್ಯವೆಂದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಎಣ್ಣೆ ಇಲ್ಲದೆ ಮತ್ತು ಸೀಮಿತ ಮಸಾಲೆಯೊಂದಿಗೆ ಬೇಯಿಸುವುದರಿಂದ, ಇದು ಹೊಟ್ಟೆಯ ಮೇಲೆ ಒತ್ತಡ ಹೇರುವುದಿಲ್ಲ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.

ಪೆಪ್ಪರ್ ಮಟನ್ ಮಾಡುವುದು ಹೇಗೆ? 
ಈ ರುಚಿಕರವಾದ ರೆಸಿಪಿ ತಯಾರಿಸಲು ನಿಮಗೆ ಹೆಚ್ಚು ಪದಾರ್ಥಗಳು ಅಗತ್ಯವಿಲ್ಲ.  ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಕಂಡುಬರುವ ಪದಾರ್ಥಗಳನ್ನು ಬಳಸಿ ತಯಾರಿಸಬಹುದು. 

ಬೇಕಾಗುವ ಪದಾರ್ಥಗಳು 
500 ಗ್ರಾಂ ಮಟನ್
2 ಈರುಳ್ಳಿ (ಸಣ್ಣಗೆ ಕತ್ತರಿಸಿದ್ದು)
2 ಟೊಮ್ಯಾಟೊ (ಕತ್ತರಿಸಿದ್ದು)
1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
2-3 ಲವಂಗ
1 ಪಲಾವ್ ಎಲೆ
ಅರ್ಧ ಟೀ ಚಮಚ ಅರಿಶಿನ
ರುಚಿಗೆ ತಕ್ಕಷ್ಟು ಕರಿಮೆಣಸು
ಸ್ವಲ್ಪ ಗರಂ ಮಸಾಲ

ಮಾಡುವ ವಿಧಾನ 
ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಇದನ್ನು ತಯಾರಿಸುವ ವಿಧಾನವನ್ನು ತುಂಬಾ ಸುಲಭವಾದ ರೀತಿಯಲ್ಲಿ ವಿವರಿಸಿದ್ದಾರೆ. ಪೆಪ್ಪರ್ ಮಟನ್ ಮಾಡಲು, ಮೊದಲು ಮಟನ್ ಅನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ. ನಂತರ ಅದಕ್ಕೆ ಲವಂಗ, ಪಲಾವ್ ಎಲೆ, ಅರಿಶಿನ ಮತ್ತು ಸ್ವಲ್ಪ ಗರಂ ಮಸಾಲ ಸೇರಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಎಲ್ಲವನ್ನೂ ಮಟನ್ ಜೊತೆ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಈ ಪಾತ್ರೆಯನ್ನು ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಲು ಬಿಡಿ. ಮಟನ್ ನಿಧಾನವಾಗಿ ತನ್ನ ನೀರನ್ನು ಬಿಡುತ್ತದೆ. ಇದೇ ನೀರಿನಲ್ಲಿ ಮಟನ್  ಬೇಯಲು ಅನುವು ಮಾಡಿಕೊಡುತ್ತದೆ. ಕಡಿಮೆ ಉರಿಯಲ್ಲಿ ಸುಮಾರು 30 ರಿಂದ 40 ನಿಮಿಷಗಳ ಕಾಲ ಮಟನ್ ಬೇಯಿಸಿದ ನಂತರ ಮತ್ತು ಎಲ್ಲಾ ಮಸಾಲೆಗಳು ಅದರಲ್ಲಿ ಚೆನ್ನಾಗಿ ಮಿಶ್ರಣವಾದ ನಂತರ, ಗ್ಯಾಸ್ ಆಫ್ ಮಾಡಿ. ಸ್ವಲ್ಪ ಪ್ರಯತ್ನ ಪಟ್ಟರೆ, ರುಚಿಕರವಾದ ಎಣ್ಣೆ ರಹಿತ ಪೆಪ್ಪರ್ ಮಟನ್ ನಿಮಗಾಗಿ ಸಿದ್ಧವಾಗಿದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ