Apple Health Benefits: ಟೈಪ್-2 ಮಧುಮೇಹಕ್ಕೆ ಬೆಸ್ಟ್ ಮದ್ದು!

By Suvarna NewsFirst Published Dec 11, 2021, 1:36 PM IST
Highlights

ಸೇಬು ತಿನ್ನೋದರಿಂದ ವೈದ್ಯರನ್ನು ದೂರ ಇಡಬಹುದು ಅಂತಾರಲ್ಲ, ಏಕೆ? ಅಷ್ಟಕ್ಕೂ ಈ ಒಂದು ಸೇಬಿನಿಂದ ಇಷ್ಟೆಲ್ಲಾ ಆರೋಗ್ಯ ಸುಧಾರಿಸುತ್ತಾರೆ. ಅಷ್ಟಕ್ಕೂ ಈ ಕೆಂಪು ಹಣ್ಣು ಯಾವ, ಯಾವ ಆರೋಗ್ಯ ಸಮಸ್ಯೆಗೆ ರಾಮಬಾಣ. ಮಧುಮಹೇಕ್ಕೂ ಹೇಗೆ ಮದ್ದಾಗಬಲ್ಲದು? 

ಹಣ್ಣುಗಳ (Fruits) ಸೇವನೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಸೇಬು ಹಣ್ಣು ಹಲವು ಪೋಷಕಾಂಶ (Protein)ಗಳನ್ನು ಹೊಂದಿದ್ದು,, ಆರೋಗ್ಯಕ್ಕೆ ಅತ್ಯುತ್ತಮ. ಅದಕ್ಕೇ ಹೇಳುವುದ ಅಲ್ವಾ, 'An Apple a Day Keeps the Doctor Away' ಎಂದು ಸೇಬಿನಲ್ಲಿರುವ ನ್ಯೂಟ್ರಿಯೆಂಟ್ಸ್, ಆಂಟಿಡಿಯೋಕ್ಸಿಡೆಂಟ್ಸ್ ಅಂಶಗಳು ದೇಹದ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಸಹಕಾರಿಯಾಗಿದೆ. ಇವಿಷ್ಟೇ ಅಲ್ಲದೆ ಆ್ಯಪಲ್ ಹಣ್ಣಿನ ಸೇವನೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಆ್ಯಪಲ್ ಹಣ್ಣಿನ ಸೇವನೆಯಿಂದಾಗುವ ಏಳು ಪ್ರಯೋಜನಗಳು ಯಾವುವೆಲ್ಲಾ ಗೊತ್ತಾ..?    

ಕರುಳಿನ ಆರೋಗ್ಯ ಸುಧಾರಣೆಗೊಳ್ಳುತ್ತದೆ
ಕರುಳು (Gut)ನಲ್ಲಿ ಬ್ಯಾಕ್ಟಿರೀಯಾದಿಂದ ಉಂಟಾಗುವ ಸಮಸ್ಯೆಯಿಂದ ಆಹಾರ ಜೀರ್ಣವಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಧ್ಯಯನಗಳ ಪ್ರಕಾರ, ಇಂಥಹಾ ಸಮಸ್ಯೆಗೆ ಆ್ಯಪಲ್ ಸೇವನೆ ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಸಾವಯವ (Organic)ವಾಗಿ ಬೆಳೆದ ಸೇಬುಗಳ ಸೇವನೆ ಕರುಳಿನ ಸಮಸ್ಯೆಯನ್ನು ದೂರವಾಗಿಸುತ್ತದೆ. 

ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ
ಸಿಪ್ಪೆ ಸಮೇತ ಒಂದು ಸೇಬು 4.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಕರಗುವ ಮತ್ತು ಕರಗದ ಫೈಬರ್ ಆಗಿದ್ದು ಕರುಳಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಸೇಬಿನಲ್ಲಿರುವ ಕರಗುವ ಫೈಬರ್‌ (Fibre) ಅಂಶ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಜೆಲ್ ತರಹದ ವಸ್ತುವಾಗಿ ಬದಲಾಗುತ್ತದೆ. ಇದು ದೇಹದ ಜೀರ್ಣಕ್ರಿಯೆ (Digestion)ಯನ್ನು ನಿಧಾನಗೊಳಿಸುತ್ತದೆ ಮತ್ತು ಅತಿಸಾರವನ್ನು ತಡೆಯುತ್ತದೆ. ಕರಗದ ಫೈಬರ್ ಆಹಾರವು ಕರುಳಿನ ಮೂಲಕ ತ್ವರಿತವಾಗಿ ಹಾದುಹೋಗಲು ಸಹಾಯ ಮಾಡುತ್ತದೆ, ಮಲಬದ್ಧತೆ (Constipation)ಯನ್ನು ತಡೆಯುತ್ತದೆ.

ಸೇಬಿನ ಸಿಪ್ಪೆಯೂ ಆರೋಗ್ಯಕ್ಕೆ ಹಿತ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ (Reduce High Blood Pressure)
ಆ್ಯಪಲ್‌ನಲ್ಲಿರುವ ಸೊಲ್ಯೂಬಲ್ ಅಂಶ ದೇಹದಲ್ಲಿ ರಕ್ತದೊತ್ತಡ (Blood Pressure)ವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ರಕ್ತದೊತ್ತಡ ಕಡಿಮೆಯಾಗುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳು, ಸ್ಟ್ರೋಕ್ಸ್, ಅಧಿಕ ರಕ್ತದೊತ್ತಡ ಮೊದಲಾದ ಆರೋಗ್ಯ ಸಮಸ್ಯೆ (Health Problem)ಗಳು ಕಡಿಮೆಯಾಗುತ್ತವೆ, ಅಧ್ಯಯನವೊಂದರ ಪ್ರಕಾರ ನಿಯಮಿತವಾಗಿ ಸೇಬುಹಣ್ಣುಗಳನ್ನು ತಿನ್ನುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಹಣ್ಣನ್ನು ನಿಯಮಿತವಾಗಿ ಸೇವಿಸದವರಲ್ಲಿ ಇರುವುದರಕ್ಕಿಂತ ಕಡಿಮೆ ಎಂದು ತಿಳಿದುಬಂದಿದೆ.
 
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ (Immunity Power)
ಸೇಬುಗಳಲ್ಲಿ ಕಂಡುಬರುವ ಪೆಕ್ಟಿನ್ ನಂತಹ ಕರಗುವ ಫೈಬರ್ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power)ಯನ್ನು ಬಲಪಡಿಸುತ್ತದೆ. ಕರಗುವ ಫೈಬರ್ ಪ್ರೊಟೀನ್ ಇಂಟರ್ಲ್ಯೂಕಿನ್-4 ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಟಿ-ಕೋಶಗಳನ್ನು ಉತ್ತೇಜಿಸುತ್ತದೆ. ಟಿ-ಕೋಶಗಳು ರೋಗಕಾರಕಗಳಿಗೆ ನಮ್ಮ ಪ್ರತಿರಕ್ಷೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು" ಟೆಕ್ಸಾಸ್ ಟೆಕ್ ವಿಶ್ವವಿದ್ಯಾನಿಲಯದ ಪೌಷ್ಟಿಕಾಂಶದ ವಿಜ್ಞಾನ ವಿಭಾಗದ ಡಯೆಟಿಷಿಯನ್ ಹೇಳುತ್ತಾರೆ. ಅಷ್ಟೇ ಅಲ್ಲ ಆ್ಯಪಲ್ ಸೇವನೆ ಕರುಳನ್ನು ಸೋಂಕಿನಿಂದ ರಕ್ಷಿಸುತ್ತದೆ ಎಂದು ಸಹ ಅಧ್ಯಯನದಿಂದ ತಿಳಿದುಬಂದಿದೆ.

ಮಧುಮೇಹ ಸ್ನೇಹಿಯಾಗಿದೆ
ಆ್ಯಪಲ್ ಸೇವನೆ ಮಧುಮೇಹ(diabetes) ಹೊಂದಿರುವ ಜನರಿಗೆ ಆರೋಗ್ಯಕರ ಆಯ್ಕೆಯಾಗಿದೆ. 2005 ಅಧ್ಯಯನವೊಂದರ ಪ್ರಕಾರ ಆ್ಯಪಲ್ ಸೇವನೆಯಿಂದ ಸಕ್ಕರೆ ಕಾಯಿಲೆಯ ಅಪಾಯ ಕಡಿಮೆ. ದಿನವೊಂದಕ್ಕೆ ಒಂದು ಸೇಬು ಸೇವಿಸುವ ವ್ಯಕ್ತಿಗೆ ಮಧುಮೇಹದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ 28%ಕ್ಕಿಂತಲೂ ಕಡಿಮೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ತೂಕ ಇಳಿಸಿಕೊಳ್ಳಲು ಎಬಿಸಿ ಜ್ಯೂಸ್ ಬೆಸ್ಟ್

ಜೀವಕೋಶಕ್ಕೆ ಆಗುವ ಹಾನಿಯನ್ನು ತಪ್ಪಿಸುತ್ತದೆ
ಸೇಬಿನಲ್ಲಿ ಪಾಲಿಫಿನಾಲ್‌ ಸಮೃದ್ಧವಾಗಿವೆ ಆಂಟಿ ಆಕ್ಸಿಡೆಂಟ್‌ ಗಳು ಸಹ ಅಧಿಕ ಪ್ರಮಾಣದಲ್ಲಿರುವ ಕಾರಣ ಇದು ದೇಹದಲ್ಲಿ ಜೀವಕೋಶ(cell)ಕ್ಕೆ ಆಗುವ ಹಾನಿಯನ್ನು ತಪ್ಪಿಸುತ್ತದೆ. ದೇಹದಲ್ಲಿರುವ ಜೀವಕೋಶಗಳು ಸಂರಕ್ಷಿಸಲ್ಪಡುವುದರಿಂದ ಕ್ಯಾನ್ಸರ್, ಹೃದಯ ರೋಗಗಳು, ಮಧುಮೇಹ, ಕಣ್ಣಿನ ರೋಗಗಳು, ಆಲ್ಝೈಮರ್ಸ್, ಪಾರ್ಕಿನ್ಸನ್ ಮೊದಲಾದ ರೋಗಗಳಿಂದ ದೂರವಿರಬಹುದು. ಅದರಲ್ಲೂ ಮುಖ್ಯವಾದ ಅಂಶವೆಂದರೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದರಿಂದ ದೇಹದಲ್ಲಿ ಆಂಟಿಡಿಯೋಕ್ಸಿಡೆಂಟ್ಸ್ ಹೆಚ್ಚಾಗುತ್ತದೆ. ಹೀಗಾಗಿ ಸೇಬು ಹಣ್ಣನ್ನು ಯಾವಾಗಲೂ ಸಿಪ್ಪೆ ಸಹಿತ ತಿನ್ನುವುದು ಅತ್ಯುತ್ತಮ ಎನ್ನುತ್ತಾರೆ ಆಹಾರತಜ್ಞರು.

ಮೂಳೆಯ ಆರೋಗ್ಯಕ್ಕೆ ಸಹಕಾರಿ
ಸೇಬುಗಳನ್ನು ತಿನ್ನುವುದು ಮೂಳೆ(bone)ಯ ಆರೋಗ್ಯಕ್ಕೂ ಉತ್ತಮವಾಗಿದೆ. ಸೇಬಿನಲ್ಲಿರುವ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್‌ನಂತಹ ವಿಟಮಿನ್‌ಗಳು ಮತ್ತು ಖನಿಜಗಳು ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಮೂಳೆಯ ಆರೋಗ್ಯವನ್ನು ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ.

click me!