Kitchen Hacks: ಬಾಣಲೆ ತಳ ಫಳಫಳಿಸಬೇಕಾದ್ರೆ ಫಟಾಫಟ್ ಅಡುಗೆ ಮನೆಗೆ ಹೋಗಿ

By Suvarna News  |  First Published Dec 8, 2021, 4:04 PM IST

ಅಡುಗೆ ಮನೆಯಲ್ಲಿ ಹೆಚ್ಚು ಬಳಕೆಯಾಗುವ ಪಾತ್ರೆಗಳಲ್ಲಿ ಬಾಣಲೆ ಒಂದು. ಕರಿಯಲು, ಹುರಿಯಲು, ಬಾಡಿಸಲು ಇದನ್ನು ಬಳಸುತ್ತೇವೆ. ಬಹುದಿನಗಳ ಕಾಲ ಬಳಸಿದ ಬಾಣಲೆ ತಳ ಸೀದು ಹೋದಂತೆ ಆಗುತ್ತದೆ. ಅದನ್ನು ಎಸೆಯುವ ಬದಲು ಮತ್ತೆ ಫಳಫಳಿಸುವಂತೆ ಹೀಗೆ ಮಾಡಬಹುದು.


ತಳ ಹಿಡಿದ ಬಾಣಲೆ (Frying pan) ಮಹಿಳೆ (Women )ಯರಿಗೆ ತಲೆನೋವು ತರಿಸುತ್ತದೆ. ಅದನ್ನು ಸ್ವಚ್ಛ(Clean )ಗೊಳಿಸುವುದು ಸವಾಲಿನ ಕೆಲಸ. ಕೆಲವರು ಹಳೆ ಬಾಣಲೆ ಎಸೆದು ಹೊಸ ಬಾಣಲೆ ಖರೀದಿ ಮಾಡುತ್ತಾರೆ. ಕಸಕ್ಕೆ ಎಸೆಯುವ ಬದಲು ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿ ಅದನ್ನು ಸುಲಭಬಾಗಿ ತೆಗೆಯಬಹುದು. ಸೀದು ಹೋದ ಫ್ರೈಯಿಂಗ್ ಪ್ಯಾನ್ ತಳಭಾಗವನ್ನು ಸ್ವಚ್ಛಗೊಳಿಸಲು ಸುಲಭ ಟಿಪ್ಸ್ ಇಲ್ಲಿದೆ..

ಬೇಕಿಂಗ್ ಸೋಡಾ (Baking soda): ಬೇಕಿಂಗ್ ಸೋಡಾ, ಹೈಡ್ರೊಜನ್ ಪೆರಾಕ್ಸೈಡ್ ಮತ್ತು ಡಾನ್ ಡಿಶ್ ವಾಶರ್  ಮುಂತಾದವುಗಳ ಸಹಾಯದಿಂದ ಸೀದು ಹೋಗಿರುವ ಪಾತ್ರೆಯ ತಳವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. 

Latest Videos

ಸ್ವಚ್ಛಗೊಳಿಸುವ ವಿಧಾನ:

-ಹೈಡ್ರೊಜನ್ ಪೆರಾಕ್ಸೈಡ್ ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು.
- ನಂತರ ಅದಕ್ಕೆ ಡಾನ್ ಡಿಶ್ ವಾಶರ್ ನ ಕೆಲ ಹನಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
- ತಯಾರಿಸಿದ ಪೇಸ್ಟ್ ಅನ್ನು ಸ್ಕ್ರಬ್ಲಿಂಗ್ ಪ್ಯಾಡ್ ಸಹಾಯದಿಂದ ಪ್ಯಾನ್ ತಳಭಾಗಕ್ಕೆ ಹಚ್ಚಬೇಕು.
- ಪೇಸ್ಟ್ ಹಚ್ಚಿದ ನಂತರ 30-60 ನಿಮಿಷ ಅದು ಒಣಗಲು ಬಿಡಬೇಕು.
- 1 ಗಂಟೆಯ ನಂತರ ಸ್ಕ್ರಬ್ಲಿಂಗ್ ಪ್ಯಾಡ್ ಮತ್ತು ಟೂತ್ ಬ್ರೆಶ್ ಸಹಾಯದಿಂದ ಪ್ಯಾನ್ ಅನ್ನು ಸ್ಕ್ರಬ್ ಮಾಡಬೇಕು.
- ಸ್ಕ್ರಬ್ ಮಾಡಿದ ನಂತರ ನೀರಿನಿಂದ ತೊಳೆದರೆ ಫ್ರೈಯಿಂಗ್ ಪ್ಯಾನ್ ತಳಭಾಗ ಸ್ವಚ್ಛವಾಗಿರುತ್ತದೆ.

undefined

ಕಿಚನ್ ಸಿಂಕ್ ಕ್ಲೀನ್ ಮಾಡೋ ಈಸಿ ವಿಧಾನ

ವಿನೆಗರ್ (Vinegar) :  ವಿನೆಗರ್, ಎಸಿಡ್ ತರಹ ಕೆಲಸ ಮಾಡುತ್ತದೆ. ವಿನೆಗರನ್ನು ನೀವು ಎಲ್ಲ ರೀತಿಯ ಬಾಣಲೆಗಳಿಗೂ ಬಳಸಬಹುದು.
ವಿನೆಗರ್ ಮೂಲಕ ಸ್ವಚ್ಛಗೊಳಿಸುವ ವಿಧಾನ (Cleaning method):
- ಮೊದಲು ಬಾಣಲೆ ತಳಭಾಗ ಮುಚ್ಚುವಷ್ಟು ವಿನೆಗರ್ ಹಾಕಿ ನೆನೆಯಲು ಬಿಡಬೇಕು.
- ಒಂದೆರಡು ಗಂಟೆಗಳ ಹಾಗೆ ನೆನೆಯಲು ಬಿಡಬೇಕು.
- ನಂತರ ಸ್ಕ್ರಬ್ಲಿಂಗ್ ಪ್ಯಾಡ್ ಮತ್ತು ಟೂತ್ ಬ್ರೆಶ್ ಸಹಾಯದಿಂದ ಪ್ಯಾನ್ ಅನ್ನು ಸ್ಕ್ರಬ್ ಮಾಡಬೇಕು. ಡಾನ್ ಡಿಶ್ ವಾಶರನ್ನು ಕೂಡ ನೀವು ಬಳಸಬಹುದು.

ಕೆಚಪ್ (Ketchup) : 
ಮಕ್ಕಳ ಅಚ್ಚುಮೆಚ್ಚು ಕೆಚಪ್. ಬಾಯಿಗೆ ರುಚಿ ನೀಡುವ  ಕೆಚಪ್ ಬಾಣಲೆಯನ್ನು ಸ್ವಚ್ಛಗೊಳಿಸಲೂ ಬಳಸಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದು ಸುಟ್ಟ ಜಾಗವನ್ನು ಮೃದುಗೊಳಿಸಿ ಪ್ಯಾನ್ ಅನ್ನು ಸ್ವಚ್ಛಗೊಳಿಸುತ್ತದೆ. ಉಳಿದ ವಿಧಾನಗಳಿಗೆ ಹೋಲಿಸಿದರೆ ಇದಕ್ಕೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ.
ಕೆಚಪ್ ಮೂಲಕ ತಳ ಹಿಡಿದ ಬಾಣಲೆ ಸ್ವಚ್ಛಗೊಳಿಸುವ ವಿಧಾನ (Cleaning method):
- ಕೆಚಪ್ ಅನ್ನು ಪ್ಯಾನ್ ನ ತಳಭಾಗಕ್ಕೆ ಸವರಬೇಕು.
- ಒಂದು ರಾತ್ರಿ ಅದನ್ನು ಹಾಗೆ ಬಿಡಬೇಕು.
- ನಂತರ ಡಾನ್ ಡಿಶ್ ವಾಶರ್ ಅನ್ನು ಬಳಸಿ ಸ್ಕ್ರಬ್ ಮಾಡಬೇಕು.

ಕಾಪರ್ ಬಾಟಲಿಯಿಂದ ನೀರು ಕುಡಿದರೇನು ಪ್ರಯೋಜನ

ವಿನೆಗರ್ ಮತ್ತು ಉಪ್ಪು (Vinegar and salt) :
ವಿನೆಗರ್ ಜಿಡ್ಡನ್ನು ಸುಲಭವಾಗಿ ತೆಗೆಯುತ್ತದೆ. ವಿನೆಗರ್ ಜೊತೆ ಉಪ್ಪು ಬೆರೆಸಿ ತೊಳೆದರೆ ಎಂತಹ ಕಲೆಗಳನ್ನೂ ಸುಲಭವಾಗಿ ತೆಗೆಯಬಹುದು.
ವಿನೆಗರ್ ಮತ್ತು ಉಪ್ಪಿನ ಮೂಲಕ ಸ್ವಚ್ಛಗೊಳಿಸುವ ವಿಧಾನ (Cleaning method) :
- ಒಂದು ಗಂಟೆಗಳ ಕಾಲ ಬಿಳಿ ವಿನೆಗರ್ ನಲ್ಲಿ ಪ್ಯಾನ್ ಅನ್ನು ನೆನೆಸಿಡಬೇಕು.
- ಪ್ಯಾನ್ ತಳಭಾಗಕ್ಕೆ ಉಪ್ಪು ಮತ್ತು ಡಾನ್ ವಾಶರ್ ಹಚ್ಚಬೇಕು.
- ಪ್ಯಾನ್ ತಳಭಾಗವನ್ನು ಜೋರಾಗಿ ಉಜ್ಜಬೇಕು. ಅವಶ್ಯವೆನಿಸಿದರೆ ಮತ್ತಷ್ಟು ಡಾನ್ ಡಿಶ್ ವಾಶರ್ ಸೇರಿಸಬೇಕು.
ಈ ಎಲ್ಲ ವಿಧಾನದ ಮೂಲಕ ಬಾಣಲೆಯನ್ನು ಸುಲಭವಾಗಿ ಸ್ವಚ್ಛಗೊಳಿಬಹುದು. ಮನೆಯ ಮೂಲೆ ಸೇರಿರುವ ಬಾಣಲೆಯನ್ನು ಹೊರ ತೆಗೆದು ಇಂದೇ ಟ್ರೈ ಮಾಡಿ. 

click me!