ಮಗುಗಾಗಿ ಹಂಬಲಿಸುತ್ತಿದ್ದೀರಾ? ಫಲವತ್ತತೆ ಹೆಚ್ಚಿಸೋ ಈ ಆಹಾರ ಹೆಚ್ಚು ಸೇವಿಸಿ

Published : Jan 28, 2024, 03:37 PM IST
ಮಗುಗಾಗಿ ಹಂಬಲಿಸುತ್ತಿದ್ದೀರಾ? ಫಲವತ್ತತೆ ಹೆಚ್ಚಿಸೋ ಈ ಆಹಾರ ಹೆಚ್ಚು ಸೇವಿಸಿ

ಸಾರಾಂಶ

ಕೆಲ ಆಹಾರಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹೆಚ್ಚು ಆರೋಗ್ಯಕರವಾಗಿಸುತ್ತವೆ. ಈ ಮೂಲಕ ಬೇಗ ಗರ್ಭ ಧರಿಸು ಸಹಾಯ ಮಾಡುತ್ತವೆ. ಅಂಥ ಆಹಾರ ಯಾವೆಲ್ಲ ನೋಡೋಣ. 

ಗರ್ಭ ಧರಿಸಲು ಸಮಯ ತೆಗೆದುಕೊಳ್ಳಬಹುದು. ಕೇವಲ 30% ದಂಪತಿ ಪ್ರಯತ್ನದ ಮೊದಲ ತಿಂಗಳಲ್ಲೇ ಗರ್ಭಿಣಿಯಾಗುತ್ತಾರೆ. ಉಳಿದವರಿಗೆ 6ರಿಂದ 1 ವರ್ಷದವರೆಗೂ ಗರ್ಭಧಾರಣೆಗೆ ಸಮಯ ಹಿಡಿಯಬಹುದು. 
ಯಾವುದೇ ಆಹಾರವು ಫಲವತ್ತತೆಯ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾಗದಿದ್ದರೂ, ಕೆಲವು ಆಹಾರಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮವಾಗಿ ಬೆಂಬಲಿಸುತ್ತವೆ. ಅವುಗಳಲ್ಲಿರುವ ಪೋಷಕಾಂಶಗಳು ಅಂಡೋತ್ಪತ್ತಿಯನ್ನು ಹೆಚ್ಚಿಸುತ್ತವೆ, ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುತ್ತವೆ. ಹಾಗಾಗಿ, ವಿವಾಹಿತ ಜೋಡಿಯು ಮಗುವನ್ನು ಹೊಂದಲು ಬಯಸುತ್ತಿದ್ದರೆ ಇಬ್ಬರೂ ಅತ್ಯುತ್ತಮ ಆಹಾರ ಸೇವಿಸಬೇಕಾಗುತ್ತದೆ. 

ಫಲವತ್ತತೆಗೆ ಅತ್ಯುತ್ತಮ ಆಹಾರ
ಫಲವತ್ತತೆಗೆ ಉತ್ತಮ ಮಾರ್ಗವೆಂದರೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು. ಯಾವ ಆಹಾರ ಫಲವತ್ತತೆ ಹೆಚ್ಚಿಸುತ್ತೃವೆ ನೋಡೋಣ.

ವಾಲ್ನಟ್ಸ್
ವಾಲ್‌ನಟ್ಸ್ ಅಂಡೋತ್ಪತ್ತಿಯನ್ನು ಹೆಚ್ಚಿಸುವ ಮತ್ತು ವೀರ್ಯವನ್ನು ಆರೋಗ್ಯವಾಗಿರಿಸುವ ಸುಲಭವಾದ ಆಹಾರವಾಗಿದೆ. ಅವು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಇದು ನಿಮ್ಮ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಾಲ್‌ನಟ್ಸ್‌ನಲ್ಲಿ ವಿಟಮಿನ್ ಇ ಕೂಡ ಇದೆ, ಇದು ಆ್ಯಂಟಿ ಆಕ್ಸಿಡೆಂಟ್ ಆಗಿದ್ದು, ಅದು ವೀರ್ಯದ ಸಂಖ್ಯೆ ಮತ್ತು ಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿವಾಹಕ್ಕೆ 6 ಅದ್ಭುತ ಶುಭ ನಕ್ಷತ್ರಗಳು; ಸುಖ ದಾಂಪತ್ಯ ತರುವ ಶುಭ ಗಳಿಗೆ

ಅಧ್ಯಯನವು ಮೂರು ತಿಂಗಳ ಕಾಲ ಪ್ರತಿದಿನ ಕೇವಲ ಒಂದು ಹಿಡಿ (ಸುಮಾರು 42 ಗ್ರಾಂ) ವಾಲ್‌ನಟ್‌ಗಳನ್ನು ತಿನ್ನುವುದು ಪುರುಷರ ಫಲವತ್ತತೆ ಹೆಚ್ಚಿಸಿ, ಆರೋಗ್ಯಕರ ವೀರ್ಯವನ್ನು ಉತ್ಪಾದಿಸುತ್ತದೆ ಎಂದು ಕಂಡುಹಿಡಿದಿದೆ.

ಟೊಮ್ಯಾಟೋ
ಟೊಮ್ಯಾಟೋ ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ. ಅವುಗಳು ಲೈಕೋಪೀನ್ ಅನ್ನು ಹೊಂದಿರುತ್ತವೆ, ಇದು ಅನೇಕ ಕೆಂಪು ಹಣ್ಣುಗಳು ಮತ್ತು ತರಕಾರಿಗಳಿಗೆ ಅವುಗಳ ಬಣ್ಣವನ್ನು ನೀಡುತ್ತದೆ. ಲೈಕೋಪೀನ್ ವೀರ್ಯಾಣುಗಳ ಸಂಖ್ಯೆ ಮತ್ತು ಚಲನೆಯನ್ನು ಸುಧಾರಿಸುತ್ತದೆ.
ನಿಮ್ಮ ಟೊಮೆಟೊಗಳಿಂದ ಹೆಚ್ಚಿನ ಲೈಕೋಪೀನ್ ಪಡೆಯಲು, ಅವುಗಳನ್ನು ಬೇಯಿಸಿ. ಶಾಖವು ಟೊಮೆಟೊಗಳಲ್ಲಿನ ವಿಟಮಿನ್ ಸಿ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ಇದು ಪೌಷ್ಟಿಕಾಂಶದ ಮೌಲ್ಯ, ಲೈಕೋಪೀನ್ ಅಂಶವನ್ನು ಹೆಚ್ಚಿಸುತ್ತದೆ. ಟೊಮ್ಯಾಟೊಗಳನ್ನು ಕೇವಲ ಎರಡು ನಿಮಿಷಗಳ ಕಾಲ ಬಿಸಿ ಮಾಡುವುದರಿಂದ ಲೈಕೋಪೀನ್ ಅನ್ನು 54% ಹೆಚ್ಚಿಸುತ್ತದೆ. 25 ನಿಮಿಷಗಳ ನಂತರ, ಲೈಕೋಪೀನ್ 75%ರಷ್ಟು ಹೆಚ್ಚಾಗುತ್ತದೆ.

ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಿಂದ ತುಂಬಿವೆ. ಅವು ಪಾಲಿಮೈನ್‌ಗಳಲ್ಲಿಯೂ ಅಧಿಕವಾಗಿವೆ - ಇದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಂತಾನೋತ್ಪತ್ತಿ ಪ್ರಕ್ರಿಯೆಗೆ ನಿರ್ಣಾಯಕ ಸಂಯುಕ್ತಗಳಾಗಿವೆ. 
ಪಾಲಿಮೈನ್‌ಗಳ ಅತ್ಯುತ್ತಮ ಸಿಟ್ರಸ್ ಹಣ್ಣಿನ ಮೂಲಗಳು:
ದ್ರಾಕ್ಷಿಹಣ್ಣು
ನಿಂಬೆಹಣ್ಣುಗಳು
ಕಿತ್ತಳೆಗಳು

ಈ 5 ತರಕಾರಿ ಹೆಚ್ಚು ಸೇವಿಸಿದ್ರೆ ಹೃದಯ ನಾಳ ಬ್ಲಾಕೇಜ್ ತಪ್ಪಿಸ್ಬೋದು

ಪೂರ್ಣ ಕೊಬ್ಬಿನ ಡೈರಿ
ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಎಷ್ಟು ಹಾಲಿನ ಪದಾರ್ಥ ಸೇವಿಸಬೇಕು ಎಂಬುದರ ಕುರಿತು ಯಾವುದೇ ಮಾರ್ಗಸೂಚಿಗಳಿಲ್ಲ. ಆದರೆ ಹೆಣ್ಣುಮಕ್ಕಳಿಗೆ, ಪೂರ್ಣ-ಕೊಬ್ಬಿನ ಡೈರಿ ಉತ್ಪನ್ನಗಳು  ಅಂಡೋತ್ಪತ್ತಿ ಹೆಚ್ಚಿಸುತ್ತವೆ. ಪೂರ್ಣ-ಕೊಬ್ಬಿನ ಡೈರಿಯು ವಿಟಮಿನ್ ಎ, ಇ ಮತ್ತು ಡಿಗಳ ಅತ್ಯುತ್ತಮ ಮೂಲವಾಗಿದೆ. ಚೀಸ್‌ಗಳು ಹೆಚ್ಚಿನ ಮಟ್ಟದ ಪಾಲಿಮೈನ್‌ಗಳನ್ನು ಒಳಗೊಂಡಿರುತ್ತವೆ, ಗಟ್ಟಿಯಾದ ಚೀಸ್‌ನಂಥ ಕಚ್ಚಾ ಹಾಲಿನ ಚೀಸ್‌ಗಳು ಪೀರಿಯಡ್ಸ್ ಸರಿಯಾಗಿ ಆಗಲು ಸಹಾಯ ಮಾಡುತ್ತದೆ.

ಬೀನ್ಸ್ ಮತ್ತು ಮಸೂರ
ನೀವು ಫಲವತ್ತತೆಯನ್ನು ಹೆಚ್ಚಿಸುವ ಶಕ್ತಿಯನ್ನು ಹುಡುಕುತ್ತಿದ್ದರೆ ಬೇಳೆಕಾಳುಗಳನ್ನು ಸರಿಯಾಗಿ ಸೇವಿಸಿ. ಅವು ಸ್ಪೆರ್ಮಿಡಿನ್‌ನ ಉತ್ತಮ ಮೂಲಗಳಾಗಿವೆ - ಇದು ಫಲವತ್ತತೆಗೆ ಧನಾತ್ಮಕವಾಗಿ ಸಂಬಂಧಿಸಿದ ಪಾಲಿಮೈನ್ - ಮತ್ತು ಫೋಲೇಟ್ ಹೊಂದಿದೆ. ಪುರುಷರಲ್ಲಿ, ಹೆಚ್ಚಿನ ಫೋಲೇಟ್ ಮಟ್ಟವು ಉತ್ತಮ ವೀರ್ಯ ಎಣಿಕೆ ಮತ್ತು ಗುಣಮಟ್ಟವನ್ನು ಉಂಟುಮಾಡುತ್ತದೆ.

ಗರ್ಭಿಣಿಯಾಗಲು ಪ್ರಯತ್ನಿಸುವಾಗ ತಪ್ಪಿಸಬೇಕಾದ ಆಹಾರಗಳು
ಗರ್ಭಿಣಿಯಾಗಲು ಪ್ರಯತ್ನಿಸುವಾಗ, ಪತಿ ಪತ್ನಿ ಇಬ್ಬರೂ ಈ ಆಹಾರಗಳಿಂದ ದೂರವಿರಬೇಕು:

  • ಸಕ್ಕರೆಯುಕ್ತ ಪಾನೀಯಗಳು, ಅಲ್ಟ್ರಾ-ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು.
  • ಆಲ್ಕೋಹಾಲ್ ಬಳಕೆ
  • ಹೆಚ್ಚಿನ ಮಟ್ಟದ ಕೆಫೀನ್, ಇದು ಗಂಡು ಹೆಣ್ಣು ಇಬ್ಬರಲ್ಲೂ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ.
  • ಕೆಂಪು ಮತ್ತು ಸಂಸ್ಕರಿಸಿದ ಮಾಂಸ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?