ಏಳು ಬಣ್ಣಗಳ ಮಳೆಬಿಲ್ಲು ಚಹಾ; ಒಂದೊಂದು ಪದರಕ್ಕೊಂದು ರುಚಿ, ಸ್ವಾದ!

By Suvarna News  |  First Published Jan 27, 2024, 5:04 PM IST

ಬಾಂಗ್ಲಾದೇಶದ ಹಳ್ಳಿಯಲ್ಲಿ ಹುಟ್ಟಿ ತನ್ನ ವಿಶೇಷತೆಯಿಂದಾಗಿ ಹೆಸರು ಮಾಡಿದೆ ಮಳೆಬಿಲ್ಲು ಚಹಾ. ಈ ಏಳು ಪದರಗಳ ಚಹಾ ಸವಿಯೋದು ನಿಮ್ಮ ನಾಲಿಗೆಗೊಂದು ಪ್ರವಾಸವಿದ್ದ ಹಾಗೆ. ಒಂದಾದ ಮೇಲೊಂದು ರುಚಿಯನ್ನು ಸವಿಯುತ್ತಾ ಸಾಗಬಹುದು.


ಸ್ಟೌವ್ ಆನ್ ಮಾಡು. ಹಾಲು ಕಾಯಿಸು, ಚಹಾಪುಡಿ, ಸಕ್ಕರೆ ಬೆರೆಸಿ ಕುದಿಸಿ ಶೋಧಿಸು- ಟೀ ರೆಡಿ. ಇದಂತೂ ಕಣ್ಣು ಮುಚ್ಚಿಕೊಂಡೂ ಮಾಡಬಹುದು, ಕಣ್ಣು ಮುಚ್ಚಿಕೊಂಡು ಆಸ್ವಾದಿಸಬಹುದು. ಆದರೆ, 7 ಪದರಗಳ ಟೀಯಾದರೆ? ಒಂದೊಂದು ಪದರವನ್ನೂ ಅದರ ರುಚಿಗೆ ಆಸ್ವಾದಿಸುತ್ತಾ, ಅದು ಮತ್ತೊಂದು ಪದರಕ್ಕೆ ಜಾಗ ಮಾಡಿ ನಿಮ್ಮೊಳಗೆ ಹೋಗುವುದನ್ನು ನೋಡುತ್ತಾ ಹೀರಬಹುದು. ಆದರೆ, 7 ಲೇಯರ್‌ಗಳ ಟೀ ಮಾಡಲು ಸಾಧ್ಯವೇ?

ಖಂಡಿತಾ ಸಾಧ್ಯ ಎಂದು ಸಾಬೀತುಪಡಿಸಿದೆ ಬಾಂಗ್ಲಾದೇಶ. ಇಲ್ಲಿನ ರೈನ್ ಬೋ ಟೀ ಬಹಳ ಹೆಸರುವಾಸಿಯಾಗಿದೆ. ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿರುವ ರೋಮೇಶ್ ರಾಮ್ ಗೌರ್ ಅವರು ಏಳು-ಪದರದ ಚಹಾದ ಆವಿಷ್ಕಾರ ಮಾಡಿದ್ದಾರೆ. ಅವರು ಅದನ್ನು ಸಿಲ್ಹೆಟ್‌ನ ಈಶಾನ್ಯ ಪ್ರದೇಶದಲ್ಲಿ ತಮ್ಮ ಎರಡು ಮಳಿಗೆಗಳಲ್ಲಿ ಮಾರುತ್ತಾರೆ.

ಮೊದಲ ಮಗಳನ್ನು 24ನೇ ವಯಸ್ಸಿಗೇ ದತ್ತು ತೆಗೆದುಕೊಂಡ ಸುಶ್ಮಿತಾ ಸೇನ್; ವ ...

Tap to resize

Latest Videos

undefined

ವಿಭಿನ್ನ ಚಹಾ ಎಲೆಗಳು, ಮಸಾಲೆಗಳು ಮತ್ತು ಹಾಲನ್ನು ಬಳಸಿ ಮಾಡಿದ ಚಹಾಗಳನ್ನು ಗಾಜಿನೊಳಗೆ ಒಂದರ ಮೇಲೊಂದು ಸುರಿಯುತ್ತಿದ್ದರೆ, ವಿಭಿನ್ನ ಚಹಾಗಳ ವಿಭಿನ್ನ ಸಾಂದ್ರತೆಯು ವಿಭಿನ್ನ ಮತ್ತು ವಿಶಿಷ್ಟವಾದ ಪದರಗಳನ್ನು ಸೃಷ್ಟಿಸುತ್ತದೆ. ಇದನ್ನು 12 ವರ್ಷದ ಹಿಂದೆ ಅವರು ಕಂಡು ಹಿಡಿದರು. ಬಳಿಕ ಇದು ಸಾತ್ ರಂಗ್ ಚಾ ಎಂಬ ಸಂಚಲನವನ್ನೇ ಸೃಷ್ಟಿಸಿತು. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಪ್ರಸಿದ್ಧ ಪಾನೀಯವನ್ನು ವೈಯಕ್ತಿಕವಾಗಿ ಪುನರುತ್ಪಾದಿಸಲು ರೋಮೇಶ್ ಅವರನ್ನು ಕರೆದರು. ಆಕೆಯೊಂದಿಗೆ ಛಾಯಾಚಿತ್ರ ಸಿಗದ ಕಾರಣ, ಆಕೆ ಕುಡಿದ ಲೋಟವನ್ನೇ ಸ್ಮರಣಿಕೆಯಾಗಿ ಇಟ್ಟುಕೊಂಡಿದ್ದಾರೆ ರೋಮೇಶ್. 2017ರಲ್ಲಿ, ಬಾಂಗ್ಲಾದೇಶದ ಕತಾರಿ ರಾಯಭಾರಿ ಅಹ್ಮದ್ ಬಿನ್ ಮೊಹಮ್ಮದ್ ಅಲ್-ದೇಹೈಮಿ ಅವರು ರೋಮೇಶ್ ಅವರ ಸ್ಟಾಲ್‌ಗೆ ಭೇಟಿ ನೀಡಿದರು ಮತ್ತು ಅವರ ಗ್ಲಾಸ್ ಚಹಾಕ್ಕಾಗಿ 7,000 ಬಾಂಗ್ಲಾದೇಶಿ ಟಾಕಾ (ಸುಮಾರು ರೂ 6,000) ಪಾವತಿಸಿದರು ಎಂದು ವರದಿಯಾಗಿತ್ತು.

ರೋಮೇಶ್ ಅವರು 10-ಲೇಯರ್ಡ್ ಪಾನೀಯವನ್ನು ತಯಾರಿಸುವಲ್ಲಿ ಸಹ ಯಶಸ್ವಿಯಾಗಿದ್ದಾರೆ. ಈ ರೈನ್ ಬೋ ಚಹಾದ ಪಾಕವಿಧಾನ ರಹಸ್ಯವಾಗಿಯೇ ಉಳಿದಿದ್ದರೂ, ಪಾನೀಯವನ್ನು ರುಚಿ ಮಾಡಿದವರು ನಿಂಬೆ, ಲವಂಗ, ಮಂದಗೊಳಿಸಿದ ಹಾಲು ಮತ್ತು ದಾಲ್ಚಿನ್ನಿ ರುಚಿಯನ್ನು ಅನುಭವಿಸಿದ್ದಾರೆ. ಶ್ರೀಮಂಗೋಲ್‌ನಲ್ಲಿ ಬೆಳೆಯುವ 3 ವಿಧದ ಚಹಾ ಎಲೆಗಳು, ಗ್ರೀನ್ ಟೀ, ಮಂದಗೊಳಿಸಿದ ಹಾಲು, ಮಸಾಲೆಗಳು ಮತ್ತು ನಿಂಬೆಹಣ್ಣುಗಳನ್ನು ಚಹಾ ಒಳಗೊಂಡಿದೆ ಎಂದು ತಿಳಿದುಬಂದಿದೆ.

ಒಂದೊಂದು ಲೇಯರ್ ಕೂಡಾ ಒಂದೊಂದು ಫ್ಲೇವರ್ ಹಾಗೂ ಪರಿಮಳದೊಂದಿಗೆ ನಿಮ್ಮನ್ನು ಬೆರಗುಗೊಳಿಸುತ್ತದೆ. ಇದು ಸಂಪೂರ್ಣ ಆರ್ಗ್ಯಾನಿಕ್ ಆಗಿದೆ. ಚಹಾದ ನಿಖರವಾದ ಪಾಕವಿಧಾನ ಯಾರಿಗೂ ತಿಳಿದಿಲ್ಲ ಮತ್ತು ಗೌರ್ ಅಂಗಡಿಯಲ್ಲಿ ಮಾತ್ರ ಈ ಅಧಿಕೃತ ಚಹಾವನ್ನು ಮಾರಾಟ ಮಾಡಲಾಗುತ್ತದೆ. ಈ ಅಂಗಡಿಯಲ್ಲಿ ಸಾಮಾನ್ಯ ಚಹಾ 6 ರುಪಾಯಿಗೆ ಸಿಕ್ಕಿದರೆ, ರೈನ್ ಬೋ ಚಹಾ ದರ 70 ರುಪಾಯಿಗಳು. 

click me!