ಬೇಸಿಗೆಯಲ್ಲಿ ತಂಪಾಗ್ಬೇಕಾ ? ತಿಂದು ನೋಡಿ ಡ್ರ್ಯಾಗನ್ ಫ್ರೂಟ್

By Suvarna News  |  First Published Apr 7, 2022, 7:50 PM IST

ಹಣ್ಣುಗಳು (Fruits) ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಋತುವಿನಲ್ಲಿ ಸಿಗುವ ಹಣ್ಣುಗಳನ್ನು ಅವಶ್ಯಕವಾಗಿ ಸೇವನೆ ಮಾಡ್ಬೇಕು. ಹಾಗೆ ಬೇಸಿಗೆಯಲ್ಲಿ ಕೆಲ ಹಣ್ಣುಗಳನ್ನು ತಿನ್ನುವುದ್ರಿಂದ ಅನೇಕ ಪ್ರಯೋಜನವಿದೆ. ಅದ್ರಲ್ಲಿ ಡ್ರ್ಯಾಗನ್ ಹಣ್ಣು ( Dragon Fruit) ಕೂಡ ಒಂದು. 


ಮಕ್ಕಳಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಹಣ್ಣು (Fruit) ಗಳಲ್ಲಿ ಡ್ರ್ಯಾಗನ್ (Dragon) ಫ್ರೂಟ್ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ಅದರ ಆಕಾರವೇ ಎಲ್ಲರ ಗಮನ ಸೆಳೆಯುತ್ತದೆ. ರುಚಿಯಲ್ಲೂ ಡ್ರ್ಯಾಗನ್ ಹಣ್ಣು ಕಡಿಮೆಯೇನಿಲ್ಲ. ಬೇಸಿಗೆ (Summer) ಯಲ್ಲಿ ದೇಹಕ್ಕೆ ತಂಪಿನ ಅನುಭವ ನೀಡುವ ಹಣ್ಣು ಡ್ರ್ಯಾಗನ್. 90ನೇ ಶತಮಾನದಲ್ಲಿ ಮೊದಲ ಬಾರಿ ಭಾರತ (India) ಕ್ಕೆ ಇದು ಎಂಟ್ರಿ ಕೊಟ್ಟಿದ್ದರೂ ಈಗಿನ ದಿನಗಳಲ್ಲಿ ಜನರು ಇದಕ್ಕೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ವರ್ಷ ವರ್ಷಕ್ಕೂ ಇದ್ರ ಬೇಡಿಕೆ (Demand) ಹೆಚ್ಚಾಗ್ತಿದೆ. ಡ್ರಾಗನ್ ಹಣ್ಣನ್ನು ಸ್ಟ್ರಾಬೆರಿ ಪಿಯರ್ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಕಮಲಂ ಎಂದೂ ಕರೆಯುತ್ತಾರೆ.  ಕೆಂಪು,ಬಿಳಿಯ ಹಣ್ಣಿನ ಮಧ್ಯದಲ್ಲಿ ಕಪ್ಪು ಬೀಜಗಳಿರುತ್ತವೆ. ಸಿಹಿಯಾದ ರಸಭರಿತವಾದ ಹಣ್ಣಿದು. ಅದ್ಭುತ ಪೋಷಕಾಂಶಗಳನ್ನು ಹೊಂದಿರುವ, ಕಡಿಮೆ ಕ್ಯಾಲೋರಿ ಹಣ್ಣು  ಡ್ರ್ಯಾಗನ್.  

ಡ್ರ್ಯಾಗನ್ ಹಣ್ಣಿನ ಗಿಡವು ಪಾಪಾಸುಕಳ್ಳಿಗೆ ಹೋಲುತ್ತದೆ. ಡ್ರ್ಯಾಗನ್ ಹಣ್ಣಿನ ಪರಿಮಳವನ್ನು ಕಿವಿ, ಪೇರಳೆ ಮತ್ತು ಕಲ್ಲಂಗಡಿಗಳಿಗೆ ಹೋಲಿಕೆ ಮಾಡ್ಬಹುದು.  ಆದರೆ ಬೀಜಗಳು ಅಡಿಕೆ ಪರಿಮಳವನ್ನು ಹೊಂದಿರುತ್ತವೆ. ವಿಟಮಿನ್ ಎ ಮತ್ತು ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿರುವ ಡ್ರ್ಯಾಗನ್ ಹಣ್ಣು ಅನೇಕ ಪ್ರಯೋಜನಗಳನ್ನು ಹೊಂದಿದೆ.  ಡ್ರ್ಯಾಗನ್ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಬೇಸಿಗೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಡ್ರ್ಯಾಗನ್ ಹಣ್ಣಿನ ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.   

Tap to resize

Latest Videos

ವಯಸ್ಸು ಮುಚ್ಚಿಡ್ಬೇಕು,ಕ್ಯಾನ್ಸರ್ ಬರ್ಬಾರದೆಂದ್ರೆ ತಿನ್ನಿ ಡ್ರ್ಯಾಗನ್ ಹಣ್ಣು : ಡ್ರ್ಯಾಗನ್ ಹಣ್ಣಿನಲ್ಲಿ ಫ್ಲೇವನಾಯ್ಡ್ ಗಳು, ಫೀನಾಲಿಕ್ ಆಮ್ಲಗಳು ಮತ್ತು ಬೆಟಾಸಯಾನಿನ್‌ಗಳಂತಹ ಉತ್ಕರ್ಷಣ ನಿರೋಧಕ ಹೆಚ್ಚಿದೆ. ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಇವು ಜೀವಕೋಶಗಳನ್ನು ರಕ್ಷಿಸುತ್ತವೆ. ಇದು ಕ್ಯಾನ್ಸರ್ ತಡೆಯಲು ನೆರವಾಗುತ್ತದೆ. ಹಾಗೆ  ವಯಸ್ಸಾದಂತೆ ಕಾಣುವ ಖಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆರೋಗ್ಯ ಕಾಪಾಡುವ ಈ ಹಣ್ಣನ್ನು ನೀವೂ ನಿಯಮಿತವಾಗಿ ಸೇವನೆ ಮಾಡಿ. 

ಮಾವಿನ ಹಣ್ಣನ್ನು ತಪ್ಪಿಯೂ ಫ್ರಿಡ್ಜ್‌ನಲ್ಲಿಡಬೇಡಿ!

ಮಧುಮೇಹಿಗಳಿಗೆ ಅಮೃತ : ಮಧುಮೇಹ ಇರುವವರು ಹಣ್ಣುಗಳನ್ನು ತಿನ್ನುವಾಗ  ಜಾಗರೂಕರಾಗಿರಬೇಕು. ಆದ್ರೆ ಡ್ರ್ಯಾಗನ್ ಹಣ್ಣನ್ನು ಆರಾಮವಾಗಿ ತಿನ್ನಬಹುದು. ಇದು  ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸ್ವಾಭಾವಿಕವಾಗಿ ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. 

ಪ್ರತಿರಕ್ಷೆಯನ್ನು ಬಲಪಡಿಸುತ್ತದೆ - ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ : ಡ್ರ್ಯಾಗನ್ ಹಣ್ಣು  ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ, ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಮತ್ತು ಬಳಸಲು ಸಹಾಯ ಮಾಡುತ್ತದೆ. ಇದಲ್ಲದೆ ಮಲಬದ್ಧತೆಗೆ ಪರಿಹಾರವಾಗಿದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. 

Health Tips: ಈ 5 ರೀತಿಯ ಬೇಳೆಕಾಳುಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತೆ!

ಡ್ರ್ಯಾಗನ್ ಹಣ್ಣುನ್ನು ಹೀಗೆ ತಿನ್ನಿ : 
ಡ್ರ್ಯಾಗನ್ ಹಣ್ಣು ತಿನ್ನಲು, ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ. ಚಮಚ, ಐಸ್ ಕ್ರೀಮ್ ಸ್ಕೂಪ್ ಸಹಾಯದಿಂದ ಒಳಗಿರುವ ಗುಳವನ್ನು ತಿನ್ನಿ. ಅದರ ಸಿಪ್ಪೆಯನ್ನು ತಿನ್ನಬೇಡಿ.   ಡ್ರ್ಯಾಗನ್ ಹಣ್ಣನ್ನು ವಿವಿಧ ರೀತಿಯಲ್ಲಿ ತಿನ್ನಬಹುದು. ಇದನ್ನು ಅನಾನಸ್ ಮತ್ತು ಮಾವಿನ ಹಣ್ಣಿನ ಜೊತೆ ಸಲಾಡ್ ರೂಪದಲ್ಲಿ ತಿನ್ನಬಹುದು. ಐಸ್ ಕ್ರೀಂ ತಯಾರಿಸಿಯೂ ತಿನ್ನಬಹುದು. ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಮೂರರಿಂದ ಐದು ದಿನಗಳವರೆಗೆ ಮಾತ್ರ ಹಣ್ಣನ್ನು ಫ್ರಿಜ್ ನಲ್ಲಿಡಿ. ಅದಕ್ಕಿಂತ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ತಿನ್ನಬೇಡಿ. 

click me!