ಮಾರುಕಟ್ಟೆಯಲ್ಲಿ ಐದು ರೂಪಾಯಿ ಕೊಟ್ಟರೆ ಸಾಕು ನಿಂಬೆಹಣ್ಣು (Lemon) ಸಿಗುತ್ತೆ. ಕೆಲವೊಮ್ಮೆ ಅಕಾಲಿಕ ಮಳೆ, ಬರ ಮೊದಲಾದ ಸಮಸ್ಯೆ ಬಂದಾಗ ಮಾತ್ರ ನಿಂಬೆಯ ಬೆಲೆ (Price) ದಿಢೀರ್ ಹೆಚ್ಚಾಗುತ್ತೆ. ಆದ್ರೆ ಐದು ರೂಪಾಯಿ ನಿಂಬೆಯಿಂದ ಕೋಟಿ ಕೋಟಿ (Crore) ಗಳಿಸ್ಬೋದು ಅಂದ್ರೆ ನಂಬ್ತೀರಾ ? ನಂಬೋಕೆ ಸ್ಪಲ್ಪ ಕಷ್ಟವಾದರೂ ಇದು ನಿಜ. ಬಾಲಕಿ (Girl)ಯೊಬ್ಬಳು ನಿಂಬೆ ಪಾನಕ ಮಾರಿ ಮಿಲಿಯನೇರ್ (Millionaire) ಆಗಿದ್ದಾಳೆ.
ಅಡುಗೆಮನೆಯಲ್ಲಿ ನಿಂಬೆಗೆ (Lemon) ಅತ್ಯುತ್ತಮ ಸ್ಥಾನವಿದೆ. ಹಲವು ಭಕ್ಷ್ಯಗಳನ್ನು ತಯಾರಿಸುವ ಸಂದರ್ಭ ನಿಂಬೆಹಣ್ಣನ್ನು ಬಳಸಿಕೊಳ್ಳಲಾಗುತ್ತದೆ. ಇದು ಎಲ್ಲಾ ಆಹಾರ (Food)ಕ್ಕೂ ಹೆಚ್ಚಿನ ರುಚಿ ಕೊಡುತ್ತದೆ. ನಿಂಬೆಯಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ (Vitamin) ಸಿ ಇದೆ. ಹೀಗಾಗಿ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಹೊಟ್ಟೆ, ಒಸಡು ಅಥವಾ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ನಿಂಬೆಯ ರಸ ದೊಡ್ಡ ಪ್ರಮಾಣದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದಲ್ಲದೆ ಜ್ಯೋತಿಷ್ಯದಲ್ಲಿ , ತಾಂತ್ರಿಕ ಪೂಜೆಗಳಲ್ಲಿ ನಿಂಬೆಹಣ್ಣನ್ನು ಅಗಾಧವಾಗಿ ಬಳಸಲಾಗುತ್ತದೆ. ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿರೋದು ಓಕೆ, ಆದ್ರೆ ನಿಂಬೆಹಣ್ಣು ಬಳಸಿ ಕೋಟಿಗಟ್ಟಲೆ ಹಣ ಗಳಿಸ್ಬೋದು ಅಂದ್ರೆ ನೀವು ನಂಬ್ತೀರಾ ?
ನಂಬೋಕೆ ಕಷ್ಟವಾದರೂ ಇದು ನಿಜ. ಅಮೆರಿಕದ 11 ವರ್ಷದ ಬಾಲಕಿ ನಿಂಬೆ ಪಾನಕ (Lemonade)ವನ್ನು ಮಾರಾಟ ಮಾಡುವ ಮೂಲಕ ಮಿಲಿಯನೇರ್ ಆಗಿದ್ದಾಳೆ. ಬಾಲಕಿ (Girl0 ತನ್ನ ಅಜ್ಜಿಯ ಪಾಕವಿಧಾನ ಪುಸ್ತಕವನ್ನು ಓದಿದ ನಂತರ,ಮಿಲಿಯನೇರ್ (Millionaire) ಆಗಿದ್ದಾಗಿ ಹೇಳಿಕೊಂಡಿದ್ದಾಳೆ.
ಕಿತ್ತಳೆ ಅಥವಾ ನಿಂಬೆ, ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು
ನಿಂಬೆ ಪಾನಕವನ್ನು ತಯಾರಿಸಲು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆರೋಗ್ಯ ಹದಗೆಟ್ಟಾಗ, ದಿಢೀರ್ ರಿಲ್ಯಾಕ್ಸ್ ಆಗಲು ಹೆಚ್ಚಿನವರು ನಿಂಬೆ ಪಾನಕದ ಮೊರೆ ಹೋಗುತ್ತಾರೆ. ನಿಂಬೆ ಪಾನಕವನ್ನು ತಯಾರಿಸಲು ಒಂದು ಲೋಟ ನೀರು, ಅದರಲ್ಲಿ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಪಾನೀಯವನ್ನು ಸೇರಿಸಿದರಾಯಿತು. ಕೆಲವೊಬ್ಬರು ಇದಕ್ಕೆ ಹೆಚ್ಚುವರಿಯಾಗಿ ಪುದೀನಾ, ಶುಂಠಿಯನ್ನು ಸಹ ಸೇರಿಸಿಕೊಳ್ಳುತ್ತಾರೆ. ಆದ್ರೆ ಇದ್ಯಾವುದನ್ನೂ ಸೇರಿಸಿಕೊಳ್ಳದೆ ಸಿಂಪಲ್ ನಿಂಬೆ ಪಾನಕದಿಂದ ಅಮೆರಿಕದ ಹುಡುಗಿಯೊಬ್ಬಳು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾಳೆ. ಈಕೆಯ ಹೆಸರು ಮಿಕೈಲಾ ಉಲ್ಮರ್. ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಮಿಕೈಲಾ ಉಲ್ಮರ್‌ಗೆ 17 ವರ್ಷ. ಆದರೆ 11ನೇ ವಯಸ್ಸಿನಲ್ಲಿ ನಿಂಬೆ ಪಾನಕದ ಉದ್ಯಮ ಆರಂಭಿಸಿ ಮಿಲಿಯನೇರ್ ಆಗಿದ್ದಾಳೆ.
ಮಿಕೈಲಾ ಉಲ್ಮರ್ 4ನೇ ವಯಸ್ಸಿನಲ್ಲಿ ನಿಂಬೆ ಪಾನಕವನ್ನು ತಯಾರಿಸಲು ಕಲಿತರು. ಈಗ ಅವರ ಉತ್ಪನ್ನಗಳನ್ನು ಲಿಂಬೆ ಸ್ಟ್ಯಾಂಡ್‌ಗಳಿಂದ ಅಮೆರಿಕದ ರೆಸ್ಟೋರೆಂಟ್‌ಗಳು ಮತ್ತು ಕಿರಾಣಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತದೆ. ಮಿಕೈಲಾ ಉಲ್ಮೆರಾ ವ್ಯಾಪಾರವನ್ನು ಹೇಗೆ ಪ್ರಾರಂಭಿಸಿದರು ಮತ್ತು ಅವರ ಪಾನೀಯವನ್ನು ವಿಶೇಷವೇನು ಎಂದು ತಿಳಿಯೋಣ.
ನಾಲ್ಕನೇ ವಯಸ್ಸಿನಲ್ಲಿ ನಿಂಬೆ ಪಾನಕ ಮಾಡಲು ಪ್ರಾರಂಭಿಸಿದ ಬಾಲಕಿ
ಮಿಕೈಲಾ ನಾಲ್ಕು ವರ್ಷದವಳಿದ್ದಾಗ, ಅವಳು ತನ್ನ ಮುತ್ತಜ್ಜಿಯಿಂದ ಹಳೆಯ ಪಾಕವಿಧಾನ ಪುಸ್ತಕವನ್ನು ಪಡೆದಳು. ಆ ಪುಸ್ತಕದಲ್ಲಿ, ಮೈಕೆಲ್ 1940 ರ ದಶಕದಲ್ಲಿ ತಯಾರಿಸಲಾದ ಫ್ಲಾಕ್ಸ್ ಸೀಡ್ ಲೆಮನೇಡ್‌ನ ಪಾಕವಿಧಾನವನ್ನು ಕಂಡುಕೊಂಡಳು. ಅದನ್ನು ತಾವು ಕೂಡಾ ತಯಾರಿಸಲು ಯತ್ನಿಸಿದಳು. ಚಿಕ್ಕವಯಸ್ಸಿನಲ್ಲೇ ಮನೆಯ ಹೊರಗೆ ನಿಂಬೆ ಪಾನಕ ಮಾರತೊಡಗಿದಳು. ಸಕ್ಕರೆಯ ಬದಲು ಜೇನುತುಪ್ಪವನ್ನು ಸೇರಿಸಿ ಸಿಹಿಯಾಗಿಸಲು ಪ್ರಾರಂಭಿಸಿದಳು. ಜನರು ಅವರ ಪಾನೀಯವನ್ನು ಇಷ್ಟಪಡಲು ಪ್ರಾರಂಭಿಸಿದರು. ಕ್ರಮೇಣ ಮಿಕೈಲಾ ಆದಾಯವೂ ಹೆಚ್ಚತೊಡಗಿತು.
ನಿಂಬೆಹಣ್ಣು ಹೆಚ್ಚು ಕಾಲ ಫ್ರೆಶ್ ಅಗಿಡಲು ಈ ಟಿಪ್ಸ್ ಫಾಲೋ ಮಾಡಿ!
ನಿಂಬೆ ಪಾನಕದ ರುಚಿ ಹೆಚ್ಚಿಸಲು ಜೇನುತುಪ್ಪ ಮಿಕ್ಸ್
ನಂತರದ ದಿನಗಳಲ್ಲಿ ಮಿಕೈಲಾ ನಿಂಬೆ ಪಾನಕವನ್ನು ಹೆಚ್ಚು ರುಚಿಕರವಾಗಿಸಲು ಜೇನುತುಪ್ಪಕ್ಕಾಗಿ ಸ್ವಂತವಾಗಿ ಜೇನುನೊಣಗಳನ್ನು ಸಾಕಲು ಪ್ರಾರಂಭಿಸಿದಳು. ಮ್ಮ ಬ್ರ್ಯಾಂಡ್‌ಗೆ ಮಿ & ದಿ ಬೀಸ್ ಲೆಮನೇಡ್ ಎಂದು ಹೆಸರಿಸಿದಳು. ಕೇವಲ ಸಕ್ಕರೆಯ ಬದಲು ಜೇನುತುಪ್ಪವನ್ನು ಸೇರಿಸುವ ಮೂಲಕ ನಿಂಬೆ ಪಾನಕಕ್ಕೆ ಹೊಸ ರುಚಿ ನೀಡಲಾಯಿತು.
ಶಾರ್ಕ್ ಟ್ಯಾಂಕ್‌ನಿಂದ 46 ಲಕ್ಷ ಹೂಡಿಕೆ
ಮನೆಯ ಹೊರಗೆ ಶುರುವಾದ ವ್ಯಾಪಾರ ಅಂಗಡಿಗಳಿಗೂ ತಲುಪಿತು. ಮಿಕೈಲಾನ ಈ ಪಾನೀಯವು ಸಣ್ಣ ಅಂಗಡಿಗಳಿಗೆ ಹೋಗಲಾರಂಭಿಸಿತು. ಇದರ ನಂತರ, 201 ರಲ್ಲಿ, ಅವರನ್ನು ಟಿವಿ ಶೋ ಶಾರ್ಕ್ ಟ್ಯಾಂಕ್‌ನಲ್ಲಿ ಕರೆಯಲಾಯಿತು. ಇದರಲ್ಲಿ 46 ಲಕ್ಷ ಹೂಡಿಕೆಯನ್ನು ಪಡೆಯುವಲ್ಲಿ ಬಾಲಕಿ ಯಶಸ್ವಿಯಾಗಿದ್ದಳು. ಪುಟ್ಟ ಮೈಕೆಲ್ ಆಗಿನ ಅಧ್ಯಕ್ಷ ಬರಾಕ್ ಒಬಾಮಾಗೆ ಈ ಪಾನೀಯವನ್ನು ನೀಡಿದಾಗ, ಅದರ ಖ್ಯಾತಿಯು ಮತ್ತಷ್ಟು ಹೆಚ್ಚಾಯಿತು.
85 ಕೋಟಿಗೂ ಹೆಚ್ಚು ಡೀಲ್
2016 ರಲ್ಲಿ, ಸೂಪರ್ ಮಾರ್ಕೆಟ್ ಕಂಪನಿ ಹೋಲ್ ಫುಡ್ಸ್ ಮಾರ್ಕೆಟ್ ಮೈಕೆಜ್ ಜೊತೆ ಒಪ್ಪಂದ ಮಾಡಿಕೊಂಡಿತು. ಈ ಡೀಲ್ ನಲ್ಲಿ 85 ಕೋಟಿಗೂ ಹೆಚ್ಚು ಹಣ ನೀಡಲಾಯಿತು. ಈ ಮೂಲಕ 11 ವರ್ಷದ ಬಾಲಕಿ ದಿಢೀರ್ ಮಿಲಿಯನೇರ್ ಆಗಿದ್ದಾರೆ. ಅವರ ಪಾನೀಯಗಳು ಈಗ ಸಾವಿರಾರು ಅಂಗಡಿಗಳಲ್ಲಿ ಮಾರಾಟವಾಗ್ತಿದೆ.