ಅಪಘಾತದಲ್ಲಿ ಕೈ, ಕಾಲು ಕಳ್ಕೊಂಡೋರು ಅದೆಷ್ಟೋ ಬಾರಿ ಜೀವನಾ (Life)ನೇ ಮುಗೀತೇನೋ ಅನ್ನುವಷ್ಟು ನಿರಾಶರಾಗಿರ್ತಾರೆ. ಆದ್ರೆ ಇಲ್ಲೊಬ್ರು ವೈಕಲ್ಯವನ್ನೂ ಮೆಟ್ಟಿ ಸಾಧಿಸಿ ತೋರಿಸಿದ್ದಾರೆ. ಭಾರತದ ಮೊದಲ ವೀಲ್‌ಚೇರ್ (Wheelchair) ಫುಡ್ ಡೆಲಿವರಿ (Food delivery) ಬಾಯ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂದು ತಂತ್ರಜ್ಞಾನ ಅತೀವೇಗದಲ್ಲಿ ಮುಂದುವರೆದಿದ್ದು, ಹಣ ಹಾಗೂ ಸ್ಮಾರ್ಟ್‌ಫೋನ್ (Smartphone) ಒಂದು ಇದ್ದರೆ ಸಾಕು ಎಲ್ಲವೂ ಮನೆ ಬಾಗಿಲಿಗೆ ಬಂದು ತಲುಪುವಷ್ಟರ ಮಟ್ಟಿಗೆ ಇಂದು ತಂತ್ರಜ್ಞಾನ ಮುಂದುವರೆದಿದೆ. ಬಟ್ಟೆ, ಫರ್ನೀಚರ್, ಟ್ಯಾಬ್ಲೆಟ್ಸ್, ಫುಡ್ ಎಲ್ಲವೂ ಆರ್ಡರ್ ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಮನೆ ಬಾಗಿಲಿನ ಮುಂದಿರುತ್ತದೆ. ಹೀಗೆ ಮನೆಗೆ ಫುಡ್ ಆರ್ಡರ್ (Food order) ಮಾಡಿದಾಗ ತಂದುಕೊಟ್ಟವರು ಸಾಮಾನ್ಯವಾಗಿ ಹೇಗಿರುತ್ತಾರೆ. ಗಟ್ಟಿಮುಟ್ಟಾದ ಯುವಕರು ಅಲ್ವಾ. ಆದ್ರೆ ಚೆನ್ನೈನಲ್ಲಿ ವ್ಯಕ್ತಿಯೊಬ್ಬರು ಗಾಲಿಕುರ್ಚಿ (Wheelchair)ಯಲ್ಲಿ ಹೋಗಿ ಜನರಿಗೆ ಫುಡ್ ಆರ್ಡರ್ ಮಾಡುತ್ತಾರೆ.
ಸಾಧಿಸುವ ಮನಸ್ಸೊಂದಿದ್ದರೆ ಯಾವ ಸಮಸ್ಯೆಯೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಈ ಕಾಲದಲ್ಲಿ ಕೈ ಕಾಲು ಗಟ್ಟಿಯಿದ್ದೋರು ದುಡಿಯೋಕೆ ಹಿಂಜರಿಯುತ್ತಾರೆ. ಸುಮ್ ಸುಮ್ನೆ ಕಾಲಹರಣ ಮಾಡ್ತಾರೆ. ವಿಕಲಚೇತನರಂರೂ ಉದ್ಯೋಗವಿಲ್ಲದೆ ತೊಂದರೆ ಅನುಭವಿಸುತ್ತಿರುತ್ತಾರೆ. ಕೆಲವೊಬ್ಬರು ನಮ್ಮ ಕೈಲಿ ಸಾಧ್ಯವಿಲ್ಲ ಎಂದು ಕುಳಿತರೆ ಇನ್ನು ಕೆಲವರು ಉದ್ಯೋಗ ಕೊಡುವವರು ಯಾರೂ ಇಲ್ಲವೆಂದು ನಿರಾಶರಾಗುತ್ತಾರೆ. ಆದ್ರೆ ಇಲ್ಲೊಬ್ಬರು ಕೈಲಾಗದಿದ್ದರೂ ದುಡಿದೇ ತಿನ್ನಬೇಕು ಎಂಬ ಹಠದಲ್ಲಿ ಗಾಲಿಕುರ್ಚಿಯ ಸಹಾಯದಿಂದ ಹೋಗಿ ಫುಡ್ ವಿತರಣೆ (Food Delivery) ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ Onion Rings ಬುಕ್ ಮಾಡಿದವನಿಗೆ ಏನ್ ಬಂತು ನೋಡಿ
ಸ್ವಿಗ್ವಿ, ಝೊಮೆಟೋದಂತಹಾ ಫುಡ್ ಡೆಲಿವರಿ ಆಪ್‌ಗಳು ಅದೆಷ್ಟೋ ಮಂದಿಯ ಜೀವನವನ್ನು ರೂಪಿಸಿದೆ. ಕೆಲಸ ಸಿಗದೆ ಕಂಗಾಲಾಗಿದ್ದ ಅದೆಷ್ಟೋ ಯುವಕರು ಫುಡ್ ಡೆಲಿವರಿ ಬಾಯ್‌ಗಳಾಗಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕಡಿಮೆ ಸಂಬಳಕ್ಕಾಗಿ ದುಡಿಯುವವರು ಪಾರ್ಟ್ ಟೈಮ್ ಆಗಿ ಫುಡ್ ಡೆಲಿವರಿ ಮಾಡಿ ಹಣ ಗಳಿಸುತ್ತಾರೆ. ಹಾಗೆಯೇ ಇಲ್ಲಿ ವಿಕಲಚೇತನರೊಬ್ಬರ ಪಾಲಿಗೆ ಫುಡ್ ಡೆಲಿವರಿ ಆಪ್ ವರದಾನವಾಗಿದೆ.
मिलिए भारत के पहले व्हीलचेयर फूड डिलीवरी बॉय गणेश मुरुगन से.वे अपनी व्हीलचेयर पर फ़ूड डिलीवरी करते है.
चेन्नई के दिव्यांग गणेश मुरुगन ने परिस्थितियों से समझौता किए बगैर रास्ता निकाला और आत्मनिर्भरता की राह थामी.वे उन सभी के लिए प्रेरणा हैं जो मुसीबतों से लड़ने की जगह झुक जाते हैं pic.twitter.com/Y4QWR49JJg
ಗಣೇಶ್ ಮುರುಗನ್ ಚೆನ್ನೈನ 37 ವರ್ಷದ ವ್ಯಕ್ತಿಯಾಗಿದ್ದು, ಅವರು ಗಾಲಿಕುರ್ಚಿಯಲ್ಲಿ ಜನರಿಗೆ ಆಹಾರವನ್ನು ತಲುಪಿಸುತ್ತಾರೆ. ಸುಮಾರು ಆರು ವರ್ಷಗಳ ಹಿಂದೆ, ಅವರು ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಬೆನ್ನುಹುರಿಗೆ ತೀವ್ರವಾದ ಗಾಯವನ್ನು ಅನುಭವಿಸಿದರು. ಇದರಿಂದಾಗಿ ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಆದರೆ ಈ ದುರ್ಘಟನೆಯಿಂದ ವಿಚಲಿತರಾಗದೆ, ತಮ್ಮ ಮೋಟಾರು ಚಾಲಿತ ಗಾಲಿಕುರ್ಚಿಯನ್ನು ತೆಗೆದುಕೊಂಡು ಕೆಲಸದಲ್ಲಿ ಉಳಿಯಲು ಯಶಸ್ವಿಯಾದರು. ಪ್ರಸ್ತುತ ಈ ಗಾಲಿಕುರ್ಚಿಯನ್ನು ಬಳಸಿಕೊಂಡೇ ಅವರು ಫುಡ್ ಡೆಲಿವರಿ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ.
ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ, ಸಿಇಒ ದೀಪಿಂದರ್ ಘೋಷಣೆ
ಐಐಟಿ ಮದ್ರಾಸ್‌ನ ಸ್ಟಾರ್ಟ್‌ಅಪ್‌ನಿಂದ ಮೋಟಾರೀಕೃತ 2-ಇನ್-1 ಗಾಲಿಕುರ್ಚಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಐಪಿಎಸ್ ಆಫೀಸರ್ ದೀಪಾಂಶು ಕಾಬ್ರಾ ಬಹಿರಂಗಪಡಿಸಿದ್ದಾರೆ. ಗಾಲಿಕುರ್ಚಿಯು ಪುಶ್ ಬಟನ್ ಅನ್ನು ಹೊಂದಿದ್ದು, ಇದು ಗಣೇಶ್‌ಗೆ ಎತ್ತರದ ಕಟ್ಟಡಗಳು ಮತ್ತು ಸವಾರಿ ಕಷ್ಟಕರವಾಗಿರುವ ಇತರ ಸ್ಥಳಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ವೀಲ್‌ಚೇರ್ ಚಾರ್ಜ್ ಮಾಡಲು ನಾಲ್ಕು ಗಂಟೆ ತಗಲುತ್ತದೆ ಮತ್ತು 25 ಕಿಲೋಮೀಟರ್‌ಗಳವರೆಗೆ ಸಾಧ್ಯವಾಗುತ್ತದೆ ಎಂದು ದೀಪಾಂಶು ಕಾಬ್ರಾ ಹಂಚಿಕೊಂಡಿದ್ದಾರೆ. ಮುರುಗನ್ ಅವರನ್ನು ಶ್ಲಾಘಿಸಿದ ಅವರು, ಗಣೇಶ್ ಮುರುಗನ್ ಕಷ್ಟಗಳ ವಿರುದ್ಧ ಹೋರಾಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಬರೆದಿದ್ದಾರೆ.
ಅದೇನೆ ಇರ್ಲಿ ಕೈ ಕಾಲು ಗಟ್ಟಿಯಾಗಿರುವವರೇ ಸೋಮಾರಿಗಳಂತೇ ಕಾಲ ಕಳೆಯುವ ಈ ಸಮಯದಲ್ಲಿ ಗಣೇಶ್ ಮುರುಗನ್ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರೋದಂತೂ ನಿಜ.