
ಶಿವಾನಂದ ಕಳವೆ, ಜಲ ತಜ್ಞ
ಮುಂಗಾರು ಜಡಿಮಳೆ ಶುರುವಾಗುತ್ತಿದೆ. ಪ್ರತೀ ಸಲ ಮಳೆಯಾದಾಗಲೂ ಎಣಿಕೆಗೆ ಸಿಗದಷ್ಟುನೀರು ಪೋಲಾಗುವುದು, ಬೇಸಿಗೆಯಲ್ಲಿ ನೀರಿಗಾಗಿ ತಹತಹಿಸುವುದು ಸರ್ವೇ ಸಾಮಾನ್ಯ. ಈ ಬಾರಿಯಾದರೂ ಮಳೆ ಬರುವಾಗಲೇ ನೀರು ಉಳಿಸುವ ಪ್ರಯತ್ನ ಮಾಡೋಣ.
1 ಎಕರೆಯಲ್ಲಿ 20 ಲಕ್ಷ ಲೀಟರ್
1. ಮಳೆಯನ್ನು, ಭೂಮಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳೋದು. 1 ಎಕರೆಯಷ್ಟುಭಾಗದಲ್ಲಿ 15ರಿಂದ 20 ಲಕ್ಷ ಲೀಟರ್ ಮಳೆನೀರು ಸಂಗ್ರಹವಾಗುತ್ತದೆ. ಈ ನೀರನ್ನು ಉಳಿಸುವ ಬಗ್ಗೆ ನಾವು ಚಿಂತಿಸಬೇಕು.
ಕಾಡು ಬೆಳೆಸುವುದು
2. ಬಿದ್ದ ಮಳೆಯ ಶೇ.12ರಷ್ಟನ್ನು ಭೂಮಿಗೆ ಸೇರಿಸುವುದು ಕಾಡು. ಈಗ ಕಾಡು ಬೆಳೆಸಲೇಬೇಕಾದ ಅನಿವಾರ್ಯತೆ ಇದೆ.
ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!
ಅಲ್ಲಲ್ಲಿ ಹೊಂಡ ಮಾಡಿ
3. ಕಣಿವೆಯಲ್ಲಿ ನೀರು ಹರಿದುಹೋಗಲು ಬಿಡದೇ ಅಲ್ಲಲ್ಲಿ ಹೊಂಡ ಮಾಡಿಟ್ಟರೆ ಅದೊಂಥರ ನೀರಿನ ಟ್ಯಾಂಕ್‌ನಂತಾಗುತ್ತದೆ. ಬಿದ್ದ ಹನಿಯನ್ನು ಬಿದ್ದಲ್ಲೇ ಉಳಿಸುವ ಪ್ರಯತ್ನವಾಗಬೇಕು.
ಕೆರೆಗಳನ್ನು ಉಳಿಸೋದು
4. ಕೆರೆಗಳಿದ್ದರೆ ಪ್ರವಾಹದ ಭೀತಿ ಕಡಿಮೆಯಾಗುತ್ತದೆ. ಮೊದಲಿನ ಕೆರೆಗಳನ್ನು ಉಳಿಸಿಕೊಳ್ಳುತ್ತಿದ್ದರೆ ಈ ಬಾರಿಯ ಗಂಗಾವಳಿ ಪ್ರವಾಹದ ಅಪಾಯ ಇರುತ್ತಿರಲಿಲ್ಲ. ಅರ್ಧರಾತ್ರಿಯಲ್ಲಿ ಮಳೆ ಬಂದರೂ ಆ ನೀರನ್ನು ಕೆರೆ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಕೆರೆಗಳನ್ನು ಉಳಿಸೋಣ.
ಹೊಲದ ಬದು, ಮರದ ರಕ್ಷಣೆ
5. ಹೊಲದ ಬದು ಮತ್ತು ಸಸ್ಯಗಳನ್ನು ಕಾಯಬೇಕು. ಹೊಲಗಳ ಬದು ಹೊಲದ ನೀರನ್ನು ತಡೆಯುತ್ತದೆ. ಬದುವಿನಲ್ಲಿರುವ ಮರ ಮಳೆ ನೀರನ್ನು ಇಂಗಿಸುತ್ತದೆ. ಬಯಲುಸೀಮೆಯ ಕಪ್ಪು ನೆಲದಲ್ಲಿ ಎರೆಹುಳುಗಳು ಸಮೃದ್ಧವಾಗಿದ್ದರೆ ವರ್ಷಕ್ಕೆ 300 ರಿಂದ 600 ಮಿಮೀನಷ್ಟುಮಳೆ ಬಿದ್ದರೂ ಸಾಕಾಗುತ್ತದೆ. ಕೃಷಿ ಹೊಂಡಗಳೂ ಸಹಕಾರಿ.
ಶ್ರುತಿ ನಾಯ್ಡು ವಿಚಾರಗಳು: ಮಕ್ಕಳಿಗೆ ವಿದೇಶದ ಬದಲು ಕಾಡು ತೋರಿಸೋಣ!
ರಸ್ತೆಯಿಂದ ಕೆರೆ ನಿರ್ಮಾಣ
6. ಕೋಟ್ಯಂತರ ರುಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೇವೆ. ಆ ವೇಳೆಗೆ ಬಹಳಷ್ಟುಮಣ್ಣು ಬೇಕಾಗುತ್ತದೆ. ಸುರಕ್ಷಿತ ಜಾಗದಲ್ಲಿ ಕೆರೆಯ ರೂಪದಲ್ಲಿ ಆ ಮಣ್ಣು ತೆಗೆಯಬಹುದು. ರಸ್ತೆಯ ಪಕ್ಕದ ಕಾಲುವೆ ನೀರನ್ನು ಹಾಗೆ ನಿರ್ಮಾಣವಾದ ಕೆರೆಗೆ ಸೇರಿಸಬಹುದು.
ತೋಟಕ್ಕೆ ತ್ಯಾಜ್ಯ ನೀರು
7. ಮನೆಯಲ್ಲಿ ಬಳಸುವ ನೀರನ್ನು ಗಟಾರಕ್ಕೆ ಸುರಿಯುವ ಬದಲು ತ್ಯಾಜ್ಯ ನೀರಿನ ಮರುಬಳಕೆ ಮಾಡಬಹುದು. ಕೈತೋಟಕ್ಕೆ, ತರಕಾರಿ ಬೆಳೆಯಲು, ಟಾಯ್ಲೆಟ್‌ನಲ್ಲಿ ಬಳಕೆಗೆ ಈ ತ್ಯಾಜ್ಯದ ನೀರನ್ನು ಬಳಸಬಹುದು.
ತಾರಸಿ ನೀರು ಕೆರೆಗೆ
8. ಕೆರೆಗೆ ಗಟಾರಗಳ ಮೂಲಕ ತ್ಯಾಜ್ಯದ ನೀರನ್ನು ಬಿಡುವ ಬದಲು, ಮನೆಯ ತಾರಸಿಯ ಮಳೆ ನೀರನ್ನು ಕೆರೆಗೆ ಹೋಗುವಂತೆ ಮಾಡಿ ಸಂಗ್ರಹಿಸಿಡಬಹುದು.
ಮನೆಬಳಕೆ ನೀರು ಪಾರ್ಕ್‌ಗೆ
9. .ಮನೆಯ ತ್ಯಾಜ್ಯ ನೀರನ್ನು ಮರು ಬಳಕೆ ಮಾಡಿ ಸಾರ್ವಜನಿಕ ಪಾರ್ಕ್‌ಗೆ ಆ ನೀರನ್ನು ಬಳಸಬಹುದು
ಕೃಷ್ಣಭೈರೇಗೌಡರ ಯೋಜನೆಗಳು
10. ಕೃಷ್ಣಭೈರೇಗೌಡ ಅವರು ಕೃಷಿ ಸಚಿವರಾಗಿದ್ದಾಗ ಅನೇಕ ಪರಿಸರಕ್ಕೆ ಪೂರಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಬಹಳ ಪರಿಣಾಮಕಾರಿದ ಆ ಯೋಜನೆಗಳನ್ನು ವಿಸ್ತರಿಸಿದರೂ ಬಹಳಷ್ಟುನೀರಿನ ಉಳಿತಾಯ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.