ಗುಲಾಬ್ ಜಾಮೂನು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನೋರೆ. ಆದ್ರೆ ಎಲ್ಲರ ಫೇವರಿಟ್ ಆಗಿರೋ ಈ ಸ್ವೀಟ್ಸ್‌ನ ಬೆಲೆ ಕೇಳಿದ್ರೆ ಮಾತ್ರ ತಲೆ ಸುತ್ತೋದು ಗ್ಯಾರಂಟಿ. ಆದ್ರೆ 43 ವರ್ಷಗಳ ಹಿಂದೆ ಜಾಮೂನು ಬೆಲೆ ಎಷ್ಟು ಚೀಪಾಗಿತ್ತು ಗೊತ್ತಾ ? ಆ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತೀಯ ಸ್ವೀಟ್ಸ್‌ಗಳಲ್ಲಿ ಸಿಹಿ ಸಿಹಿಯಾಗಿರುವ ಜಾಮೂನಿಗೆ ಅಗ್ರಸ್ಥಾನವಿದೆ. ಬರ್ತ್‌ಡೇ, ಮದುವೆ, ಪಾರ್ಟಿ, ಹಬ್ಬ ಯಾವುದೇ ಇರಲಿ ಅಲ್ಲಿ ಗುಲಾಬ್ ಜಾಮೂನಂತೂ ಇರಲೇಬೇಕು. ಮೆತ್ತಗೆ ಸಿಹಿ ಸಿಹಿಯಾಗಿರುವ, ಬಾಯಲ್ಲಿಟ್ಟರೆ ಕರಗುವ ಜಾಮೂನನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಈ ಸ್ವೀಟ್ಸ್ ಬೆಲೆ ಕೇಳಿದ್ರೆ ಮಾತ್ರ ತಲೆ ಸುತ್ತು ಬರೋದು ಗ್ಯಾರಂಟಿ. ಒಂದು ಕೆಜಿ ಗುಲಾಬ್ ಜಾಮೂನ್‌ಗೆ ಏನಿಲ್ಲಾಂದ್ರೂ ಬರೋಬ್ಬರಿ ಮುನ್ನೂರು ರೂಪಾಯಿಯಂತೂ ಇರುತ್ತೆ. ಹೀಗಾಗಿಯೇ, ಬಹುತೇಕರು ನೆಚ್ಚಿನ ಸ್ವೀಟ್ಸ್ ಆದ್ರೂ ಇದನ್ನು ಕೊಳ್ಳೋ ಮುಂಚೆ ಯೋಚ್ನೆ ಮಾಡ್ತಾರೆ. ಆದ್ರೆ 43 ವರ್ಷಗಳ ಹಿಂದೆ ಜಾಮೂನು ಬೆಲೆ ಎಷ್ಟು ಚೀಪಾಗಿತ್ತು ಗೊತ್ತಾ ?
ಹರ್ದಯಲ್ ರಸ್ತೆಯ ಜಲಂಧರ್ ಕಂಟೋನ್ಮೆಂಟ್‌ನಲ್ಲಿರುವ ಲವ್ಲಿ ಸ್ವೀಟ್ ಹೌಸ್‌ನ ಹಳೆಯ ಸಿಹಿ ತಿನಿಸುಗಳ ಮೆನುವಿನ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ 1980ರ ಫೇಮಸ್ ಲವ್ಲಿ ಸ್ವೀಟ್ ಬೆಲೆ ಪಟ್ಟಿ ಎಂಬ ಶೀರ್ಷಿಕೆಯನ್ನು ಇದಕ್ಕೆ ಕೊಡಲಾಗಿದೆ. ಇದರ ಮಾಹಿತಿ ಪ್ರಕಾರ, ಸುಮಾರು 30-40 ವರ್ಷಗಳ ಹಿಂದೆ ಸ್ವೀಟ್ಸ್‌ಗಳ ಬೆಲೆ ತುಂಬಾ ಕಡಿಮೆಯಿತ್ತು. ಗ್ಯಾಗ್ರೇಟ್ ಹುಲ್ಚಾಲ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ 4 ದಶಕಗಳ ಹಿಂದಿನ ಮಿಠಾಯಿ ಅಂಗಡಿಯ (Sweets shop) ಮೆನು ಕಾರ್ಡ್ ಒಂದನ್ನು ಪೋಸ್ಟ್ ಮಾಡಲಾಗಿದೆ.
ಉಳಿದ ಸಕ್ಕರೆ ಪಾಕವೇನು ಮಾಡೋದು ಅಂತ ಯೋಚಿಸ್ಬೇಡಿ, ಮತ್ತೊಂದು ಸ್ಟೀಟ್ ಮಾಡಿ!
ಹಳೆಯ ಕಾಲದ ಸಿಹಿ ತಿಂಡಿಗಳ ಮೆನುವಿನ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್
ಇಂದಿನ ದಿನಗಳ ಮಾನದಂಡಗಳಿಗೆ ಹೋಲಿಸಿದರೆ ಅದರಲ್ಲಿದ್ದ ತಿನಿಸುಗಳ ಬೆಲೆ ತುಂಬಾನೇ ಕಡಿಮೆಯಾಗಿದೆ. ಹುಬ್ಬೇರಿಸುವಂತಹ ಹಳೆಯ ಕಾಲದ ಸಿಹಿ ತಿಂಡಿಗಳ ಮೆನುವಿನ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಈ ಪೋಸ್ಟ್ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು (Reaction) ಪಡೆಯುತ್ತಿದೆ.
1980ರ ಫೇಮಸ್ ಲವ್ಲಿ ಸ್ವೀಟ್ ಬೆಲೆ ಪಟ್ಟಿ ಎಂಬ ಶೀರ್ಷಿಕೆಯಡಿಯಲ್ಲಿ ವಿವರಗಳನ್ನು ತಿಳಿಸಲಾಗಿದೆ. ಮೋತಿಚೂರ್ ಲಡ್ಡು, ರಸಗುಲ್ಲಾ, ಗುಲಾಬ್ ಜಾಮೂನ್ ಇತ್ಯಾದಿ ಸಿಹಿತಿಂಡಿಗಳ ಬೆಲೆ ಕೆಜಿಗೆ ರೂ. 10 ರಿಂದ 14 ರೂಪಾಯಿ ಇತ್ತು. ಚಾಕೋಲೆಟ್ ಬರ್ಫಿ ಮತ್ತು ಪಿಸ್ತಾ ಬರ್ಫಿಯಂತಹ ಸ್ವಲ್ಪ ಪ್ರೀಮಿಯಂ ವಿಧದ ಮಿಠಾಯಿಗಳ ಬೆಲೆ ಪ್ರತಿ ಕೆ.ಜಿಗೆ 18 ರಿಂದ 20 ರೂಪಾಯಿಗಳಿದ್ದವು ಎಂಬುದನ್ನು ಇಲ್ಲಿ ನೋಡಬಹುದು. ನೆಟ್ಟಿಗರು ಸಹಜವಾಗಿಯೇ ವೈರಲ್ ಆಗಿರುವ ಮೆನುವನ್ನು ನೋಡಿ ಸಂತಸ (Happy) ವ್ಯಕ್ತಪಡಿಸಿದ್ದಾರೆ.
ಸಿಹಿ ತಿನ್ನೋಕೆ ಆಸೆ, ಆದ್ರೆ ಹಲ್ಲು ಹುಳುಕಾಗೋ ಭಯನಾ ? ಈ ಟಿಪ್ಸ್ ಫಾಲೋ ಮಾಡಿ
ಸಮೋಸಾ, ಕಚೋರಿ, ಪನೀರ್ ಪಕೋಡಾ ಬೆಲೆ 1 ರೂ.ಗಿಂತಲೂ ಕಡಿಮೆ
ಸಮೋಸಾ, ಕಚೋರಿ, ಪನೀರ್ ಪಕೋಡಾ ಮುಂತಾದ ತಿಂಡಿಗಳ ಬೆಲೆ ಆ ಕಾಲದಲ್ಲಿ 1 ರೂಪಾಯಿಗಿಂತಲೂ ಕಡಿಮೆ ಇತ್ತು. ಇಂದು ಅದೇ ತಿಂಡಿಗಳ ಬೆಲೆ ಈಗ 10ರಿಂದ 100 ರೂಪಾಯಿಗಳ ವರೆಗೂ ಇದೆ. ವೈರಲ್ ಆದ ಈ ಪೋಸ್ಟ್ನ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾದರು ಇಂಥಾ ದಿನಗಳು ಎಂದಿಗೂ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು 'ಪಂಜಾಬ್‌ನ ಅತ್ಯುತ್ತಮ ಸಿಹಿತಿಂಡಿಗಳ ಅಂಗಡಿಗಳಲ್ಲಿಇದು ಸಹ ಒಂದಾಗಿದೆ' ಎಂದು ತಿಳಿಸಿದ್ದಾರೆ. ಸ್ವೀಟ್ಸ್ ಬೆಲೆಯ ಈ ಪೋಸ್ಟ್ ಇದುವರೆಗೆ 28,000 ಲೈಕ್ಸ್ ಮತ್ತು 1,600 ಕಾಮೆಂಟ್‌ಗಳನ್ನು ಗಳಿಸಿದೆ. ಅದೇನೆ ಇರ್ಲಿ, ಸ್ವೀಟ್ಸ್ ಬೆಲೆ ಇಷ್ಟು ಚೀಪಾಗಿರೋದನ್ನು ನೋಡಿ ಅದೆಷ್ಟೋ ಮಂದಿ ನಾವು ಅದೇ ಕಾಲದಲ್ಲಿ ಹುಟ್ಬಾರ್ದಿತ್ತಪ್ಪಾ ಅಂತಿದ್ದಾರೆ.