ಗ್ರಾಹಕರನ್ನು ಸೆಳೆಯಲು ಹೋಟೆಲ್ ಗಳು ಏನೆಲ್ಲ ಕಸರತ್ತು ಮಾಡ್ತವೆ. ಈಗಿನ ದಿನಗಳಲ್ಲಿ ಆಕರ್ಷಕ ಮೆನು ಗಮನ ಸೆಳೆಯುತ್ತಿದೆ. ರೆಸ್ಟೋರೆಂಟ್ ಒಂದರಲ್ಲಿ ಕನ್ಫ್ಯೂಜ್ ಆಹಾರದ ಹೆಸರುಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿವೆ.
ಅಚ್ಚರಿ ಹುಟ್ಟಿಸುವ ಖಾದ್ಯಗಳು, ಹೋಟೆಲ್ ಹೆಸರುಗಳು, ಹೋಟೆಲ್ ಮೆನು ಹಾಗೂ ಆಹಾರ ಈಗಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡ್ತಿದೆ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಖಾದ್ಯಗಳು ಚರ್ಚೆಗೆ ಬರ್ತಿವೆ. ಹಾಗೆಯೇ ಹೋಟೆಲ್ ಮೆನುಗಳು ಕೂಡ ಗಮನ ಸೆಳೆಯುತ್ತಿವೆ.
ಹೋಟೆಲ್ (Hotel) ಗೆ ಹೋದಾಗ ನಾವು ಮೊದಲು ನೋಡೋದು ಏನೇನಿದೆ ಅನ್ನೋದನ್ನು. ವೇಟರ್ (Waiter) ಬಂದು ಫಟ್ ಫಟ್ ಅಂತಾ ಲೀಸ್ಟ್ ಹೇಳಿದ್ರೂ ನಮಗೆ ಅದು ಸರಿಯಾಗಿ ಅರ್ಥವಾಗೋದಿಲ್ಲ. ಹಾಗಾಗಿ ಮೆನು ಕಾರ್ಡ್ ಹಿಡಿದು ಕುಳಿತುಕೊಳ್ತೇವೆ. ಕಾರ್ಡ್ ದೊಡ್ಡದಿದ್ರೆ ಕನ್ಫ್ಯೂಸ್ ಹೆಚ್ಚು. ಯಾವ ಆಹಾರ (food) ತಿನ್ನೋದಪ್ಪ ಎಂಬ ತಲೆಬಿಸಿ. ಕೆಲವರು ಮನೆಯ ಆಹಾರ ಬೋರ್ ಆಗಿದೆ ಅಂತ ಹೋಟೆಲ್ ಗೆ ಹೋಗ್ತಾರೆ, ಆದ್ರೆ ಅಲ್ಲಿಯೂ ಮನೆಯಲ್ಲಿ ಮಾಡೋ ಉಪ್ಪಿಟ್ಟು, ದೋಸೆ ತಿಂದು ಬರ್ತಾರೆ. ಹೊಸ ಆಹಾರವನ್ನು ಟ್ರೈ ಮಾಡೋ ಪ್ರಯತ್ನ ಮಾಡೋದಿಲ್ಲ. ಮತ್ತೆ ಕೆಲವರು ಪ್ರತಿ ಬಾರಿ ಹೊಸ ಆಹಾರ ಟೇಸ್ಟ್ ಮಾಡಲು ಬಯಸ್ತಾರೆ. ಕೆಲವರಿಗೆ ಚೌಚೌ ಬಾತ್ ಅಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಆರ್ಡರ್ ಮಾಡಿ ಪ್ಲೇಟ್ ಬಂದಾಗ, ಓ ಇದಾ ಅಂತಾ ಮುಖ ಸಣ್ಣಗೆ ಮಾಡ್ತಾರೆ. ಇದೇ ಕಾರಣಕ್ಕೆ ಹೋಟೆಲ್ ನಲ್ಲಿ ಮೆನು (Menu) ವನ್ನು ಆಕರ್ಷವಾಗಿ ಮಾಡಲಾಗುತ್ತದೆ. ಜನರಿಗೆ ತಿಳಿಯದ ಹೆಸರಿಟ್ಟು ಜನರ ಗಮನ ಸೆಳೆಯಲಾಗುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್ ಒಂದರ ವಿಚಿತ್ರ ಮೆನು ಫುಲ್ ವೈರಲ್ ಆಗಿದೆ.
Viral Video : ತಾಜ್ ಹೋಟೆಲ್‌ನಲ್ಲಿ ಚಿಲ್ಲರೆ ನೀಡಿ ಬಿಲ್ ಪಾವತಿಸಿದ ಮುಂಬೈ ವ್ಯಕ್ತಿ!
ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ ರೆಸ್ಟೋರೆಂಟ್ ನ ವಿಲಕ್ಷಣ ಮೆನು : Officialtis ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೆಸ್ಟೋರೆಂಟ್ ಮೆನುವನ್ನು ಹಂಚಿಕೊಳ್ಳಲಾಗಿದೆ. ಪರ್ಫೆಕ್ಟ್ ಮೆನು ಅವಶ್ಯಕವಲ್ಲ ಎಂದು ಶೀರ್ಷಿಕೆ ಹಾಕಲಾಗಿದೆ. ಈ ಮೆನುವಿನಲ್ಲಿ Mps ಕಿಚನ್ ಸ್ಪೆಷಲ್ ಎಂಬ ವಿಶೇಷ ವಿಭಾಗವನ್ನು ತೋರಿಸುತ್ತದೆ. ಇದ್ರಲ್ಲಿರುವ ಆಹಾರದ ಹೆಸರು ಓದಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ.
ಮೆನುವಿನಲ್ಲಿ ಅಂತಹದ್ದೇನಿದೆ? : ಅಷ್ಟಕ್ಕೂ ಆ ಮೆನುವಿನಲ್ಲಿ ಏನಿದೆ ಅಂತಾ ನೀವು ಕೇಳ್ಬಹುದು. ಕೆಲ ರೆಸ್ಟೋರೆಂಟ್ ನಲ್ಲಿ ಅವರ ಹೆಸರಿನ ಕೆಲ ಖಾದ್ಯಗಳನ್ನು ಪಟ್ಟಿಯಲ್ಲಿ ಸೇರಿಸಿರ್ತಾರೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಲಂಟೈನ್ ಡೇ ಮೆನು ವೈರಲ್ ಆಗಿತ್ತು. ಅದ್ರಲ್ಲಿ ಗರ್ಲ್ ಫ್ರೆಂಡ್ ಕೇಕ್, ಬ್ರೇಕ್ ಅಪ್ ಕೇಕ್ ಹೀಗೆ ಬೇರೆ ಬೇರೆ ಕೇಕ್ ಗಳ ಹೆಸರಿತ್ತು. ಈ ರೆಸ್ಟೋರೆಂಟ್ ನ ಮೆನು ಹೀಗಿದೆ – ಮೆನುವಿನಲ್ಲಿ ಕುಚ್ ನಹಿ ಹೆಸರಿನ ಆಹಾರವಿದ್ದು ಅದ್ರ ಬೆಲೆ 220 ರೂಪಾಯಿಯಂತೆ. ಇನ್ನು ಕುಚ್ ಬಿ ಅಂತಾ ಇನ್ನೊಂದು ಹೆಸರಿದೆ. ಅದಕ್ಕೆ ರೆಸ್ಟೋರೆಂಟ್ 240 ರೂಪಾಯಿ ಚಾರ್ಜ್ ಮಾಡುತ್ತದೆ. ಎಸ್ ಯು ವಿಶ್ ಹೆಸರಿನ ಖಾದ್ಯದ ಬೆಲೆ 260 ರೂಪಾಯಿ. ನಹಿ ತುಂಬ್ ಬೋಲೋ ಹೆಸರಿನ ಆಹಾರ ಕೂಡ ಇದೆ. ಅದಕ್ಕೆ ನೀವು 280 ರೂಪಾಯಿ ಪಾವತಿ ಮಾಡ್ಬೇಕು. ಇನ್ನೊಂದು ಖಾದ್ಯದ ಹೆಸರು, ನಹಿ ನಹಿ ತುಮ್ ಬೋಲೋ ಅಂತಾ. ಅದ್ರೆ ಬೆಲೆ 300 ರೂಪಾಯಿ ಅಂತಾ ಮೆನುವಿನಲ್ಲಿ ಹೇಳಲಾಗಿದೆ. ಮೆನುವಿನ ಕೆಳಗೆ, ನಿಮ್ಮ ಆಹಾರವು ಬ್ಯಾಂಕ್ ಖಾತೆಯಾಗಿದೆ, ಉತ್ತಮ ಆಹಾರದ ಆಯ್ಕೆಗಳು ಉತ್ತಮ ಹೂಡಿಕೆಗಳಾಗಿವೆ ಎಂದು ಬರೆಯಲಾಗಿದೆ.
Healthy Recipes : ಬಾಯಲ್ಲಿ ನೀರೂರಿಸುತ್ತೆ ಈ ಟೊಮೇಟೊ ಚಟ್ನಿ
ಕಮೆಂಟ್ ನಲ್ಲಿ ತಿಳಿದಿದೆ ರೆಸ್ಟೋರೆಂಟ್ ಹೆಸರು : ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋಕ್ಕೆ ಭರ್ಜರಿ ಕಮೆಂಟ್ ನೀಡಿದ್ದಾರೆ. ಕಮೆಂಟ್ ಸೆಕ್ಷನ್ ನಲ್ಲಿ ಎಮೋಜಿಗಳು ತುಂಬಿವೆ. ಕೆಲವರು ಈ ರೆಸ್ಟೋರೆಂಟ್ ಪತ್ತೆ ಮಾಡಿದ್ದಾರೆ. ಇದು ನಮ್ಮ ರಾಯಪುರ ಎಂಪಿ ಢಾಬಾ ಎಂದು ಬಳಕೆದಾರನೊಬ್ಬ ಬರೆದಿದ್ದಾನೆ.