ಕೇರಿಂಗ್, ಲವಿಂಗ್ ರಿಲೇಶನ್‌ಶಿಪ್‌ಗೆ ಈ 4 ರಾಶಿಯವರು ಬೆಸ್ಟ್!

By Suvarna NewsFirst Published Apr 2, 2022, 3:54 PM IST
Highlights

ಎಲ್ಲರಿಗೂ ತಮ್ಮನ್ನು ಪ್ರೀತಿಸುವ, ಕಾಳಜಿ ವಹಿಸುವ ಸಂಗಾತಿ ಬೇಕು ಎಂಬ ಆಕಾಂಕ್ಷೆ ಇರುತ್ತದೆ. ಆದರೆ, ಅದು ಕೆಲವೊಬ್ಬರಿಗೆ ಸಾಧ್ಯವಾಗುವುದಿಲ್ಲ. ಮತ್ತೆ ಕೆಲವರು ಅಂತಹ ಹುಡುಕಾಟದಲ್ಲಿ ಇರುತ್ತಾರೆ. ಆದರೆ, ರಾಶಿಗಳಿಗೆ ಅನುಸಾರವಾಗಿ ಇಂತಹ ವ್ಯಕ್ತಿತ್ವ ಉಳ್ಳವರು ಸಿಗುತ್ತಾರೆ. ಲವಿಂಗ್ ಮತ್ತು ಕೇರಿಂಗ್ ಸ್ವಭಾವವುಳ್ಳ 4 ರಾಶಿಯವರು ಯಾರು ಎಂಬುದನ್ನು ನೋಡೋಣ...

ಭಾರತೀಯ ಸಂಸ್ಕೃತಿಯಲ್ಲಿ (Indian Culture) ಸಂಬಂಧಗಳಿಗೆ (Relationship) ಭಾರಿ ಬೆಲೆ ಇದೆ. ಇಲ್ಲಿ ಕುಟುಂಬ ಪದ್ಧತಿಗೆ ಬಹಳ ಒತ್ತು ಕೊಡಲಾಗುತ್ತದೆ. ಬಾಂಧವ್ಯಗಳಿಗೆ, ಸ್ನೇಹಗಳಿಗೆ (Friendship), ಪದ್ಧತಿಗಳಿಗೆ ಹೆಚ್ಚಿನ ಬೆಲೆ ನೀಡುವ ಗುಣ ಈ ಮಣ್ಣಿನಲ್ಲಿಯೇ ಬಂದಿದೆ. ಆದರೆ, ಒಬ್ಬೊಬ್ಬರದ್ದು ಒಂದೊಂದು ಸ್ವಭಾವ ಇರುತ್ತದೆ. ಮನಸ್ಸಿನಲ್ಲಿ ಪ್ರೀತಿ ಇರುತ್ತದೆ. ತೋರಿಸಿಕೊಳ್ಳಲು ಬರುವುದಿಲ್ಲ. ಮತ್ತೆ ಕೆಲವರು ಹಾಗಲ್ಲ, ತಮ್ಮ ಪ್ರೀತಿಯನ್ನು (Love) ದಾರಾಳವಾಗಿ ವ್ಯಕ್ತಪಡಿಸುತ್ತಾರೆ. ಸಂಬಂಧ ಉತ್ತಮವಾಗಿ ಇರಬೇಕೆಂದರೆ ಇಬ್ಬರು ಪಾಲು ಸಮಾನಗಿರಬೇಕಾಗುತ್ತದೆ. ಪರಸ್ಪರರು ಗೌರವಿಸಿಕೊಳ್ಳಬೇಕಾಗುತ್ತದೆ. ಹಾಗೇ ಪ್ರೀತಿಯ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಪ್ರೀತಿ ಸಿಕ್ಕರೆ ಅವರೇ ಅದೃಷ್ಟವಂತರು. 

ಹೀಗೆ ಕೇರ್ (Care) ಮಾಡುವ, ಪ್ರೀತಿ ಮಾಡುವ ಗುಣವು ಕೆಲವರಿಗೆ ಹುಟ್ಟಿನಿಂದಲೇ (Birth) ಬಂದಿರುತ್ತದೆ. ಇದು ಅವರ ಜಾತಕ (Horoscope) ಫಲದ ಪರಿಣಾಮವಾಗಿರುತ್ತದೆ. ಜ್ಯೋತಿಷ್ಯದ ಅನುಸಾರ ನೀವು ಇಂತಹ ವ್ಯಕ್ತಿತ್ವದವರನ್ನು ಕಂಡುಕೊಳ್ಳಬಹುದು. ಸಂಬಂಧಗಳಿಗೆ ಬೆಲೆ ಕೊಡುವ, ಪ್ರೀತಿ ಮಾಡುವ, ಕಾಳಜಿ ವಹಿಸುವ ವ್ಯಕ್ತಿತ್ವವುಳ್ಳ ರಾಶಿಯವರ ಬಗ್ಗೆ ನೀವು ತಿಳಿದುಕೊಳ್ಳಬಹುದು. ಅಂತಹ 4 ರಾಶಿಯವರಿದ್ದು, ಅವರು ನಿಮ್ಮ ಸಂಗಾತಿಯಾದರೆ ಪ್ರೀತಿ ಮತ್ತು ಕೇರಿಂಗ್‌ನ ಹೊಳೆಯನ್ನೇ ಹರಿಸಲಾಗುತ್ತದೆ. ಅಂತಹ ರಾಶಿಯವರು ಯಾರು ಎಂಬುದನ್ನು ನೋಡೋಣ ಬನ್ನಿ...

ಇದನ್ನು ಓದಿ: ಯಾವ ಸ್ಪರ್ಧೆ ಇದ್ದರೂ ಈ ರಾಶಿಯವರೇ ವಿನ್ನರ್ಸ್ !

ಮಿಥುನ (Gemini)
ಮಿಥುನ ರಾಶಿಯವರು ತುಂಬಾ ಸೋಷಿಯಲ್ (Social) ಆಗಿರುವ ಸ್ವಭಾವದವರು. ಇವರು ಸಂಬಂಧಗಳಿಗೆ ಬಹಳವೇ ಬೆಲೆ ಕೊಡುತ್ತಾರೆ. ಜೊತೆಗೆ ಸಂಬಂಧಗಳನ್ನು ಗೌರವಿಸುತ್ತಾರೆ ಕೂಡಾ. ಯಾವುದೇ ಸಮಯದಲ್ಲಿಯೂ ಸಹ ಸಂಗಾತಿಯನ್ನು (Partner)  ಕೈಬಿಡುವವರು ಇವರಲ್ಲ. ಅವರನ್ನೂ ತಮ್ಮ ಜೊತೆ ಜೊತೆಯಲ್ಲಿಯೇ ಕೊಂಡೊಯ್ಯುವ ಮೂಲಕ ಅವರಿಗೆ ಅಪಾರವಾದ ಪ್ರೀತಿ, ಕಾಳಜಿಯನ್ನು ತೋರುತ್ತಾರೆ. ಜೊತೆಗೆ ಇವರು ದ್ರೋಹ (Betrayal) ಮಾಡುವವರಲ್ಲ. ಇತರರನ್ನು ನೋಯಿಸಯವವರಲ್ಲ, ದ್ರೋಹ ಮಾಡುವ ಸ್ವಭಾವ ಇವರದ್ದಲ್ಲ. 

ಕರ್ಕಾಟಕ ರಾಶಿ (Cancer)
ಈ ರಾಶಿಯವರು ಪ್ರೀತಿ ಮತ್ತು ಭಾವನೆಗಳ ವಿಚಾರದಲ್ಲಿ ಬಹಳ ಸೂಕ್ಷ್ಮಮತಿಗಳಾಗಿರುತ್ತಾರೆ. ತಮ್ಮವರನ್ನು ಅತ್ಯಂತ ಕಾಳಜಿ ವಹಿಸುವ ಗುಣವುಳ್ಳವರು. ಸಂಬಂಧದಲ್ಲಿದ್ದಾಗ ಅವರ ಭಾವನೆಗಳು ಹೆಚ್ಚಾಗುತ್ತವೆ. ಹೀಗಾಗಿ ಇವರು ತಮ್ಮ ಭಾವನೆಗಳಿಗಿಂತಲೂ ತಮ್ಮ ಸಂಗಾತಿಯ ಭಾವನೆಗಳಿಗೆ (Feeling) ಒತ್ತು ನೀಡುತ್ತಾರೆ. ಹೀಗಾಗಿ ಸಂಗಾತಿಗೆ ಒಂದು ಕಂಫರ್ಟಬಲ್ ಝೋನ್ (Comfortable zone) ನಿರ್ಮಾಣ ಮಾಡುತ್ತಾರೆ. ತಮ್ಮ ಪ್ರೀತಿಯನ್ನೆಲ್ಲಾ ಸಂಗಾತಿಗೆ ಧಾರೆ ಎರೆಯುತ್ತಾರೆ. 

ತುಲಾ ರಾಶಿ (Libra)
ಇವರು ಸಮತೋಲಿತ (Balanced) ವ್ಯಕ್ತಿತ್ವವುಳ್ಳವರು. ಎಂತಹ ಕಠಿಣ ಸಂದರ್ಭಗಳು ಎದುರಾದರೂ ವಿಚಲಿತರಾಗುವವರು ಇವರಲ್ಲ. ಬಂದ ಸಮಸ್ಯೆ ಬಗ್ಗೆ ಕೂಲಂಕಷವಾಗಿ ಪರಾಮರ್ಶಿಸಿ ಸರಿಯಾದ ನಿರ್ಧಾರಗಳನ್ನು (Decision) ತೆಗೆದುಕೊಳ್ಳುತ್ತಾರೆ. ಅಲ್ಲದೆ, ಇವರು ಶಾಂತ ಸ್ವಭಾವದವರಾಗಿದ್ದು, ಇವರ ಜೊತೆಗೆ ವಿಶ್ವಾಸ (Trust) ಹೊಂದಲು ಬಹಳಷ್ಟು ಜನ ಹಾತರೊಯುತ್ತಾರೆ. ಹೀಗಾಗಿ ತುಲಾ ರಾಶಿಯ ವ್ಯಕ್ತಿಗಳಿಗೆ ಸಮಾಜದಲ್ಲಿ ಗೌರವ ಆದರಗಳು ತುಸು ಹೆಚ್ಚೇ ಸಿಗುತ್ತಿದೆ. 

ಇದನ್ನು ಓದಿ:  Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು

ಧನುಸ್ಸು (Sagittarius)
ಧನು ರಾಶಿಯವರು ಕಾಳಜಿ ಮತ್ತು ಪ್ರೀತಿ ವಿಷಯದಲ್ಲಿ ಬಹಳ ಚ್ಯೂಸಿಗಳು. ಇವರು ತಮ್ಮ ಸಂಗಾತಿಯೂ ಹೆಚ್ಚಿನ ಸಮಯ ಅಂದರೆ ಯಾವಾಗಲೂ ತಮ್ಮ ಜೊತೆಯಲ್ಲಿಯೇ ಸಮಯ (Time) ಕಳೆಯಬೇಕು ಎಂದು ಆಸೆಪಡುವವರು. ಹಾಗಾಗಿ ಅಂತಹ ಸಂಗಾತಿಯ ಹುಡುಕಾಟದಲ್ಲಿ ಇವರು ಇರುತ್ತಾರೆ. ಇವರದ್ದು ಸಾಹಸ ಪ್ರವೃತ್ತಿಯಾಗಿದ್ದು, ಪ್ರವಾಸ (Tour), ಪ್ರಯಾಣ ಅಚ್ಚುಮೆಚ್ಚು. ಜೊತೆಗೆ ತಮ್ಮನ್ನು ಯಾರೂ ಸಹ ನಿಯಂತ್ರಿಸುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರು ತಮ್ಮ ಸಂಗಾತಿಗೆ ಸರ್ವಸ್ವವನ್ನೂ ನೀಡುತ್ತಾರೆ. ಹೀಗಾಗಿ ಈ ರಾಶಿಯವರು ಸಂಗಾತಿಯಾಗಿ ಸಿಕ್ಕರೆ ಬಹಳ ಅದೃಷ್ಟವನ್ನು (Luck) ಮಾಡಿದಂತೆ.

click me!