ಪ್ರಕೃತಿಯಲ್ಲಿನ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶವನ್ನು ದೇಶದ ವಿವಿಧೆಡೆ ಪಂಚಭೂತ ಶಿವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
ಬೆಂಗಳೂರು (ಜೂ.08): ನಮ್ಮ ಪ್ರಕೃತಿಯಲ್ಲಿನ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶವನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಈ ಪಂಚಭೂತಗಳು ಮನುಷ್ಯನ ಜೀವನಕ್ಕೆ ಅತ್ಯವಶ್ಯಕವಾಗಿವೆ. ಇವುಗಳನ್ನು ಪೂಜಿಸಲೆಂದು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ಪಂಚಭೂತ ಶಿವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
ಪುರಾಣಗಳ ಪ್ರಕಾರ ಪಂಚಭೂತಗಳೆಂದರೆ 5 ಮೂಲ ವಸ್ತುಗಳು ಎಂದರ್ಥವಾಗುತ್ತದೆ. ಪಂಚವೆಂದರೆ ಐದು, ಭೂತ ಎಂದರೆ- ಮೂಲ ವಸ್ತುಗಳು, ಸ್ಥಳ ಎಂದರೆ- ಸ್ಥಾನ ಆಗಿದೆ. ನಮ್ಮ ಪ್ರಕೃತಿಯಲ್ಲಿರುವ ಮೂಲಭೂತ ವಸ್ತುಗಳಾದ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶ ಇವು ಪಂಚಭೂತಗಳಾಗಿವೆ. ಇವುಗಳಿಲ್ಲದೇ ಯಾವ ಜೀವರಾಶಿಗಳೂ ಕೂಡ ಬದುಕಲು ಸಾಧ್ಯವಿಲ್ಲ. ಹಿಂದೂ ಪುರಾಣದ ಪ್ರಕಾರ ನಮ್ಮ ದೇಶದಲ್ಲಿ ಸ್ಥಾಪಿಸಲಾದ 5 ಲಿಂಗಗಳು ಐದು ಮೂಲ ವಸ್ತುಗಳನ್ನು ಪ್ರತಿನಿಧಿಸುತ್ತವೆ ಎಂದು ಸಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನ ವೇದ ವಿಜ್ಞಾನ ವಲ್ಲರಿ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ಐದು ಪಂಚಭೂತ ದೇವಾಲಯಗಳ ಹೆಸರನ್ನು ಉಲ್ಲೇಖಿಸಲಾಗಿದೆ.
undefined
ಅಯೋಧ್ಯೆ ಜನರು ಖುಷಿಯಾಗಿರಬಾರದೆಂದು ಸೀತಾಮಾತೆ ಶಾಪ ಇದೆಯೇ?
1. ಶ್ರೀ ಕಾಳಹಸ್ತಿ (ವಾಯು-ಗಾಳಿ): ಇಲ್ಲಿ ಶಿವನು ಕಾಳಹಸ್ತೀಶ್ವರನಾಗಿ ಮುಖ್ಯ ದೇವರಾಗಿದ್ದಾನೆ. ಇಲ್ಲಿರುವ ಶಿವಲಿಂಗವು ಐದು ಮೂಲ ಭೂತ ವಸ್ತುಗಳಾದ (ಐದು ಮೂಲ ಭೂತಲಿಂಗಗಳು). ಅಪ್ಪು. ತೇಜಸ್, ವಾಯು, ಆಕಾಶ ಹಾಗೂ ಪೃಥ್ವಿಗಳನ್ನು ನಿರೂಪಿಸುವ ಐದು ಪರಮೋತ್ಕೃಷ್ಟ ಲಿಂಗಗಳಲ್ಲಿ ಒಂದಾಗಿದೆ.
2.ಏಕಾಂಬರೇಶ್ವರ ದೇವಾಲಯ ಕಂಚೀಪುರಂ (ಪೃಥ್ವಿ-ಭೂಮಿ): ತಮಿಳುನಾಡು ರಾಜ್ಯದ ಕಂಚೀಪುರಂನಲ್ಲಿರುವ ಏಕಾಂಬರೇಶ್ವರರ ಮಂದಿರವು ಶಿವನಿಗೆ ಸಮರ್ಪಿಸಲ್ಪಟ್ಟಿರುವ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.
3.ತಿರುವಣ್ಣಾಮಲೈ (ಅಗ್ನಿ-ಬೆಂಕಿ): ಅಣ್ಣಾಮಲೈಯಾರ್ ಮಂದಿರವು ಶಿವನಿಗೆ ಅರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಾಲಯ. ಇದು ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದ ಅಣ್ಣಾಮಲೈ ಬೆಟ್ಟದ ಕೆಳಗಿದೆ.
4.ಚಿದಂಬರ್ (ಆಕಾಶ- ಬಾಹ್ಯಾಕಾಶ)ನಲ್ಲಿರುವ ಚಿದಂಬರಂ ನಟರಾಜ ಮಂದಿರ: ಚಿದಂಬರಂ ದೇವಾಲಯವು ತಮಿಳುನಾಡಿನ ಚಿದಂಬರಂನ ದೇವಾಲಯಗಳ ನಗರದ ಮಧ್ಯ ಭಾಗದಲ್ಲಿ ನೆಲೆಯಾಗಿರುವ ಶಿವನಿಗೆ ಸಮರ್ಪಿತವಾದ ಒಂದು ಪ್ರಸಿದ್ಧ ಹಿಂದೂ ದೇವಲಾಯವಾಗಿದೆ.
ಕೋಲಾರಮ್ಮನ ಪವಾಡ: ಉಗ್ರರೂಪಿ ದೇವಿಯನ್ನ ನೋಡೋದೇ ಅಸಾಧ್ಯ! ಚೇಳು ಕಚ್ಚಿದವರಿಗೆ ಮದ್ದಿದೆ ಇಲ್ಲಿ!
5.ತಿರುವನೈಕೋಯಿಲ್ (ಜಲ-ನೀರು): ತಿರುನೈಕೋಯಿಲ್ ತಿರುಚಿ ನಗರದ ಮಧ್ಯ ಭಾಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾದ ಐತಿಹಾಸಿಕವಾದ ಚಿಕ್ಕ ನಗರ ಶ್ರೀರಂಗಂನ ಪಕ್ಕದಲ್ಲಿದೆ. ಇಲ್ಲಿರುವ ಶಿವನ ದೇವಾಲಯಕ್ಕೆ ತಿರುಚಿ ಸ್ಥಳೀಯ ಜನರು ಜಂಬಹುಕೇಶ್ವರರ್ ಕೋಯಿಲ್ ಎಂದೂ ಕರೆಯುತ್ತಾರೆ. ಇದು, ಪಂಚಭೂತಗಳ ಒಡೆಯ ಭೂತನಾಥ (ಇದು ಕೂಡ ಶಿವನ ಹೆಸರು) ಎಂದೂ ಸಹ ಪ್ರಸಿದ್ಧಿಯಾಗಿದೆ.