ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಎಲ್ಲ ರಾಶಿಗಳಿಗೂ ಶುಭಾಶುಭ ಪರಿಣಾಮಗಳು ಉಂಟಾಗುತ್ತವೆ. ಅವುಗಳಲ್ಲಿ ಮೇಷ, ಸಿಂಹ, ಧನು ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಈ ರಾಶಿ ಪರಿವರರ್ತನೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಶುಭ ಪರಿಣಾಮವನ್ನು ನೀಡುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗ್ರಹಗಳ (Planet) ರಾಶಿ (Zodiac) ಪರಿವರ್ತನೆಗೆ ವಿಶೇಷ ಮಹತ್ವವಿದೆ. ಪ್ರತಿ ಗ್ರಹಗಳು ಅವುಗಳ ಸಮಯಕ್ಕೆ ರಾಶಿಯಿಂದ ರಾಶಿಗೆ ಪರಿವರ್ತನೆ ಹೊಂದುತ್ತವೆ. ಈ ಪರಿವರ್ತನೆಯು ಎಲ್ಲ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ ಇದೇ ಏಪ್ರಿಲ್ (April) ತಿಂಗಳಿನಲ್ಲಿ (Month) ಎಲ್ಲ ಗ್ರಹಗಳು ರಾಶಿ ಪರಿವರ್ತನೆ ಹೊಂದುತ್ತವೆ. ಇದೇ ಏಪ್ರಿಲ್ 07ರಂದು ಮಂಗಳ ಗ್ರಹವು ಕುಂಭ ರಾಶಿಗೆ ಪ್ರವೇಶಿಸಲಿದೆ. ಮಂಗಳ ಗ್ರಹದ ರಾಶಿ ಪರಿವರ್ತನೆಯ ಎಲ್ಲ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಈ 3 ರಾಶಿಗಳ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆ. ಅದರ ಬಗ್ಗೆ ತಿಳಿಯೋಣ.
ಮೇಷ ರಾಶಿ (Aries)
ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದಾಗಿ ಮೇಷ ರಾಶಿಗೆ ಆದಾಯ ವೃದ್ಧಿಯಾಗಲಿದೆ. ವ್ಯಾಪಾರದಲ್ಲಿ (Business) ಉತ್ತಮ ಲಾಭ (Good Profit) ಬರಲಿದೆ. ಬಹುದಿನಗಳಿಂದ ನಿರೀಕ್ಷಿಸಿದ ಲಾಭವನ್ನು ವ್ಯಾಪಾರದಲ್ಲಿ ಈ ಬಾರಿ ಗಳಿಸಬಹುದಾಗಿದೆ. ಒಟ್ಟಾರೆಯಾಗಿ ಮಂಗಳಗ್ರಹದ ರಾಶಿ ಪರಿವರ್ತನೆಯ ಆದಾಯ ಮೂಲವನ್ನು (Income Source) ಹೆಚ್ಚಿಸಲಿದೆ. ಮನೆಯನ್ನು ಖರೀದಿ ಮಾಡುವ ಯೋಚನೆ ಇದ್ದರೆ, ಅದಕ್ಕೆ ಇದು ಸೂಕ್ತ ಸಮಯವಾಗಿದೆ. ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಅಂದರೆ ಲಾಭ ಭಾವದಲ್ಲಿ ಮಂಗಳನ (Mars) ಗೋಚಾರವಾಗುವುದರಿಂದ ಎಲ್ಲದರಲ್ಲಿಯೂ ಸಫಲತೆ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ವ್ಯಾಪಾರದಲ್ಲಿ ಏಳಿಗೆ ಉಂಟಾಗಲಿದೆ. ಉದ್ಯೋಗದಲ್ಲಿ (Job) ಹೊಸ ಅವಕಾಶಗಳು (New Opportunity) ಬರುವ ಸಾಧ್ಯತೆ ಇದೆ. ಆರ್ಥಿಕ ಸಬಲತೆಯನ್ನು ಕಾಣಬಹುದಾಗಿದೆ. ಹೊಸ ಉದ್ಯೋಗವನ್ನು ಅರಸುತ್ತಿದ್ದರೆ ಬದಲಾಯಿಸಲು ಇದು ಉತ್ತಮ ಸಮಯವಾಗಿದೆ.
ಇದನ್ನು ಓದಿ: Astrology Prediction: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?! ಇದರಿಂದ ಒಳ್ಳೇದಾಗತ್ತಾ ಅಥವಾ ಕೆಟ್ಟದ್ದಾ?
ಸಿಂಹ ರಾಶಿ (Leo)
ಮಂಗಳ ಗ್ರಹದ ರಾಶಿ ಪರಿವರ್ತನೆಯ ಈ ರಾಶಿಯವರಿಗೆ ಉತ್ತಮ ಭಾಗ್ಯವನ್ನು ನೀಡಲಿದೆ. ಹೊಸ ಉದ್ಯೋಗ ಅವಕಾಶ ಒದಗಿ ಬರಲಿದೆ. ಕೆಲಸ ಕಾರ್ಯಗಳಲ್ಲಿ ಎದುರಾಗುತ್ತಿರುವ ಅಡೆತಡೆಗಳು ಕೊನೆಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚುತ್ತವೆ. ರಾಶಿಯಿಂದ ಸಪ್ತಮ ಅಂದರೆ ದಾಂಪತ್ಯ ಭಾವದಲ್ಲಿ ಮಂಗಳನ ಗೋಚರವಾಗುವುದರಿಂದ ಸಫಲತೆ ಪ್ರಾಪ್ತವಾಗುತ್ತದೆ. ಆರ್ಯ ಮತ್ತು ವ್ಯಾಪಾರದಲ್ಲಿ ಉನ್ನತಿ ಯಾಗುವುದಲ್ಲದೆ, ದೊಡ್ಡ ದೊಡ್ಡ ಕೆಲಸಗಳನ್ನು ಆರಂಭಿಸಬಹುದಾಗಿದೆ. ಅದಕ್ಕೆ ಒಪ್ಪಂದ ಮಾಡಿಕೊಳ್ಳುವುದಾದರೂ ಇದು ಉತ್ತಮ ಕಾಲವಾಗಿದೆ. ಮದುವೆ (Marriage) ಮುಂತಾದ ಶುಭ ಕಾರ್ಯಗಳಿಗೆ ಸ್ವಲ್ಪ ತಡವಾಗುವ (Late) ಸಾಧ್ಯತೆ ಇದೆ.
ಧನು ರಾಶಿ (Sagittarius)
ಈ ರಾಶಿಯವರಿಗೆ ಮಂಗಳನ ರಾಶಿ ಪರಿವರ್ತನೆಯ ಶುಭ ಪರಿಣಾಮವನ್ನು ನೀಡಲಿದೆ. ಅದೃಷ್ಟದ (Luck) ಸಾಥ್ ಈ ರಾಶಿಯವರಿಗೆ ಸಿಗಲಿದೆ. ಪರೀಕ್ಷೆಯಲ್ಲಿ ಸಫಲತೆ ಸಿಗುತ್ತದೆ. ರಾಶಿಯಿಂದ ತೃತೀಯ ಭಾವದಲ್ಲಿ ಅಂದರೆ ಪರಾಕ್ರಮ ಭಾವದಲ್ಲಿ ಮಂಗಳನ ಗೋಚರವಾಗಲಿದೆ. ಇದರಿಂದ ಉತ್ತಮ ಯಶಸ್ಸು ಸಿಗಲಿದೆ. ಬುದ್ಧಿವಂತಿಕೆ ಶಕ್ತಿ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ. ಯೋಜನೆಗಳನ್ನು ಗೌಪ್ಯವಾಗಿಟ್ಟು (Secret) ಕಾರ್ಯ ಸಾಧಿಸಿದರೆ ಒಳಿತಾಗುತ್ತದೆ.
ಇದನ್ನು ಓದಿ: Astrology Tips: ಮನಶ್ಶಾಂತಿ ಬೇಕಿದ್ದರೆ ಜ್ಯೋತಿಷ್ಯದ ಈ ಸೂತ್ರ ಪಾಲಿಸಿ!
ಕುಂಭ ರಾಶಿ (Aquarius)
ಮಂಗಳ ಗ್ರಹವು ಕುಂಭರಾಶಿಯಲ್ಲಿ ಗೋಚರವಾಗುವುದರಿಂದ ಉತ್ತಮ ಏಳ್ಗೆ ಸಾಧ್ಯವಿದೆ. ಆದಾಯದ ಮೂಲ ಹೆಚ್ಚಲಿದೆ ಅಷ್ಟೇ ಅಲ್ಲದೆ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವೆಂದು ಸಾಬೀತಾಗುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚುವುದಲ್ಲದೆ ಜವಾಬ್ದಾರಿ ಸಹ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಿಗೆ (Government Job) ಆಹ್ವಾನ ಬರುವ ಸಾಧ್ಯತೆ ಇದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಗ್ರಹಗಳು ವಿಚಾರಗಳ ಅನುಕೂಲವಿದ್ದು, ಕೆಲಸದಲ್ಲಿ ಯಶಸ್ಸು ಲಭಿಸಲಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.