ಇನ್ನೇನು ರಾಮನವಮಿ ಅಂದರೆ ರಾಮ ಜನ್ಮ ದಿನ ಬಂದೇ ಬಿಟ್ಟಿತು. ಶ್ರೀ ರಾಮನ ಕುರಿತ ಜಪತಪ, ಭಜನೆಗಳು ಎಲ್ಲೆಡೆ ನಡೆಯುತ್ತಿವೆ. ರಾಮನ ಕುರಿತ ಈ ಮಂತ್ರಗಳನ್ನು ಪ್ರತಿ ದಿನ ಹೇಳಿದರೆ ಫಲ ಖಾತ್ರಿಯಾಗಿದೆ.
ಮರ್ಯಾದಾ ಪುರುಷೋತ್ತಮನಾಗಿ ರಾಮ ರಾಜ್ಯ ಕಟ್ಟಿದ ರಾಮ ಆದರ್ಶ ರಾಜ ಕೂಡಾ. ಅತ್ಯುತ್ತಮ ಆಡಳಿತ ಹೇಗಿರಬೇಕೆಂದರೆ ರಾಮರಾಜ್ಯದಂತಿರಬೇಕು ಎನ್ನುತ್ತೇವೆ. 11 ಸಾವಿರ ವರ್ಷಗಳ ಕಾಲ ಅಂಥದೊಂದು ಆಡಳಿತ ಕೊಟ್ಟಾತ ಅವನು. ರಾವಣನ ದುರಾಡಳಿತಕ್ಕೆ ಕೊನೆ ಹಾಡಿ ಧರ್ಮವನ್ನು ಪುನರ್‌ಸ್ಥಾಪಿಸಿದವನು. ವಿಷ್ಣುವಿನ 7ನೇ ಅವತಾರವಾಗಿರುವ ಆತನಿಗೆ ಜಗತ್ತಿನಾದ್ಯಂತ ಭಕ್ತರಿದ್ದಾರೆ. ರಾಮನವಮಿ ಹತ್ತಿರ ಬರುತ್ತಿದೆ. ಈ ದಿನದಿಂದಲೇ ರಾಮ ಧ್ಯಾನ ಮಾಡಿ, ಆತನ ಕರುಣೆಗೆ ಪಾತ್ರರಾಗಿ. ರಾಮನ ಕುರಿತಾದ ಅತ್ಯಂತ ಶಕ್ತಿಶಾಲಿ ಮಂತ್ರಗಳಿವು.
ರಾಮ ನಾಮ ಧ್ಯಾನ
ರಾಮ(Rama) ಅನ್ನೋದೇ ಒಂದು ಅಗ್ನಿ ಬೀಜ ಮಂತ್ರ. ರಾಮ ಎಂಬ ಹೆಸರಿನಲ್ಲಿ ಮೂರು ಅಕ್ಷರಗಳಿವೆ. ರಾ, ಆ ಹಾಗೂ ಮ- ಈ ಮೂರೂ ಅಕ್ಷರಗಳೂ ಬೀಜಾಕ್ಷರಗಳೇ ಆಗಿವೆ. 'ರಾ' ಎಂಬುದು ಅಗ್ನಿಯ ಬೀಜಾಕ್ಷರವಾಗಿದೆ. ಇದರೊಳಗೆ ಬೆಂಕಿಯ ಶಕ್ತಿ ಇದೆ. 'ಆ' ಎಂಬುದು ಭಾನು ಬೀಜ. ಭಾನು ಎಂದರೆ ಸೂರ್ಯ. 'ಮ' ಎಂದರೆ ಚಂದ್ರಮ. ಅಂದರೆ ರಾಮ ನಾಮದಲ್ಲಿ ಅಗ್ನಿ, ಸೂರ್ಯ ಹಾಗೂ ಚಂದ್ರರಿದ್ದಾರೆ.
ಹೆಸರೇ ಅಗ್ನಿ ಬೀಜಮಂತ್ರವಾಗಿರುವಾಗ ರಾಮನ ಸ್ಮರಣೆಗೆ ರಾಮ ನಾಮ ಧ್ಯಾನ ಮಾಡಿದರೂ ಸಾಕಾಗುತ್ತದೆ.
ರಾಮ ಮೂಲ ಮಂತ್ರ( Rama Moola Mantra)
ॐ श्री रामाय नमः॥
ಓಂ ಶ್ರೀ ರಾಮಾಯ ನಮಃ
'ಸಂತೋಷ, ಆತ್ಮ ಶಾಂತಿ ಹಾಗೂ ಸಮತೋಲನ ಕಾರಕನಾದ ರಾಮನಿಗೆ ನಮಸ್ಕಾರಗಳು. '
ರಾಮ ತಾರಕ ಮಂತ್ರ(Rama Taraka Mantra)
श्री राम जय राम जय जय राम॥
'ಶ್ರೀ ರಾಮ ಜಯ ರಾಮ, ಜಯ ಜಯ ರಾಮ'
ಶ್ರೀರಾಮನಿಗೆ ಜಯವಾಗಲಿ ಎಂದು ಈ ಮಂತ್ರದ ಅರ್ಥ. ತಾರಕ ಮಂತ್ರದಲ್ಲಿ ಶ್ರೀ ಎಂದರೆ ಶಕ್ತಿಯಾಗಿದೆ ಅಥವಾ ಸೀತಾದೇವಿಯಾಗಿದೆ. ರಾ ಎಂಬುದು ಕರ್ಮಗಳನ್ನು ತೊಳೆಯುವ ಅಗ್ನಿಯಾಗಿದೆ. ಮ ಎಂಬದು ಜಲವನ್ನು ಪ್ರತಿನಿಧಿಸಿದ್ದು, ಶಾಂತಿಯ ಸಂಕೇತವಾಗಿದೆ. ಜಯ ಎಂಬುದು ಆತ್ಮಕ್ಕೆ ಜಯ ದೊರೆಯಲಿ ಎಂಬುದನ್ನು ಹೇಳುತ್ತದೆ. ಅಂದರೆ, ಮಂತ್ರವು ಪತ್ನಿ ಸೀತಾದೇವಿಯ ಜೊತೆಗೆ ರಾಮನಿಗೆ ಜಯವಾಗಲಿ ಎಂದು ಹೇಳುತ್ತದೆ.
Cat's Eye: ಕೇತು ಸಮಸ್ಯೆ ತಂದೊಡ್ಡುತ್ತಿದ್ದರೆ ಈ ಹರಳನ್ನು ಧರಿಸಿ ಸಾಕು!
ರಾಮ ಗಾಯತ್ರಿ ಮಂತ್ರ
ॐ दाशरथये विद्महे सीतावल्लभाय धीमहि, तन्नो राम प्रचोदयात्॥
ಓಂ ದಶರತಾಯೇ ವಿದ್ಮಹೇ ಸೀತಾವಲ್ಲಭಾಯ ಧೀಮಹೀ, ತನ್ನೋ ರಾಮ ಪ್ರಚೋದಯಾತ್
ಮಂತ್ರದ ಅರ್ಥ: ದಶರಥ ಪುತ್ರನ ಹೆಸರಲ್ಲಿ ಧ್ಯಾನ ಮಾಡುತ್ತೇನೆ. ಸೀತಾ ಪತಿಯೇ ನನಗೆ ಜ್ಞಾನವನ್ನು ನೀಡು. ರಾಮ ನನ್ನ ಮನಸ್ಸನ್ನು ತುಂಬು.
ರಾಮಧ್ಯಾನ ಮಂತ್ರ(Rama Dhyana Mantra)
ॐ आपदामपहर्तारम् दाताराम् सर्वसम्पदाम्।
लोकाभिरामम् श्रीरामम् भूयो-भूयो नमाम्यहम्॥
ಓಂ ಅಪದಮಪಹಾರ್ತ್ರಮ್ ದಾತಾರಾಂ ಸರ್ವಸಂಪದಂ
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮ್ಯಾಮಹಂ
ಮಂತ್ರದ ಅರ್ಥ: ಈ ಜಗತ್ತಿನ ಅತಿ ಸುಂದರನಾದ, ಎಲ್ಲ ದುಃಖಗಳನ್ನು ಕಳೆಯುವ, ಭಕ್ತರಿಗೆ ಸಂಪತ್ತನ್ನು ಕರುಣಿಸುವ ಶ್ರೀರಾಮನಿಗೆ ನಾನು ಮತ್ತೆ ಮತ್ತೆ ತಲೆ ಬಾಗುತ್ತೇನೆ.
Ramnavami 2022: ಯಾವಾಗ? ಆಚರಣೆಯ ವಿಧಿವಿಧಾನಗಳೇನು?
ಕೋದಂಡ ರಾಮ ಮಂತ್ರ(Kodanda Rama Mantra)
श्री राम जय राम कोदण्ड राम॥
ಶ್ರೀರಾಂ ಜಯರಾಮ ಕೋದಂಡರಾಮ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.