ಇದು ಪ್ರೀ- ವೆಡ್ಡಿಂಗ್​ ಶೂಟ್​ ಅಂತೆ! ಮದ್ವೆಯಾದ್ಮೇಲಿನ ಫೋಟೋ ನೋಡಲು ತುದಿಗಾಲಲ್ಲಿ ನಿಂತ ನೆಟ್ಟಿಗರು

By Suchethana D  |  First Published Sep 22, 2024, 5:51 PM IST

ಮದುವೆಗೂ ಮೊದಲಿನ ಥಹರೇವಾರಿ ಪ್ರೀ- ವೆಡ್ಡಿಂಗ್​ ಶೂಟ್​ ನೀವು ನೋಡಿರಲಿಕ್ಕೆ ಸಾಕು, ಆದರೆ ಇಂಥ ಫೋಟೋಶೂಟ್​ ಎಲ್ಲಿಯಾದ್ರೂ ನೋಡಿದ್ರಾ? ಏನಿದು ನೋಡಿ.
 


ಕೆಲ ದಶಕಗಳ ಹಿಂದೆ ಮದುವೆಯ ದಿನ ಫೋಟೋ ತೆಗೆಸಿಕೊಂಡರೆ ಅದೇ ದೊಡ್ಡ ಸಂಭ್ರಮವಾಗಿತ್ತು. ಆದರೆ ಬರಬರುತ್ತಾ ಮದುವೆಯ ಬಳಿಕವೂ ಒಂದಿಷ್ಟು ಫೋಟೋಶೂಟ್​, ವಿಡಿಯೋ  ಶೂಟ್​ಗಳು ನಡೆದವು. ತಮಗೆ ಬೇಕಾದ ರೀತಿಯಲ್ಲಿ, ಬೇಕಾದ ಜಾಗವನ್ನು ಆಯ್ಕೆ ಮಾಡಿಕೊಂಡು ವಿವಿಧ ಭಂಗಿಗಳಲ್ಲಿ ಫೋಟೋ, ವಿಡಿಯೋಶೂಟ್​ ಮಾಡಿಸಿಕೊಂಡರು. ಆದರೆ ಕಾಲ ಕ್ರಮೇಣ ಈ ಫೋಟೋ- ವಿಡಿಯೋ ಹುಚ್ಚು ಯಾರ ಮಟ್ಟಿಗೆ ಬೆಳೆಯಿತು ಎಂದರೆ ಈಗಂತೂ ಮದುವೆಗೂ ಮೊದಲಿನ ಫೋಟೋಶೂಟ್​ (ಪ್ರೀ-ವೆಡ್ಡಿಂಗ್​ ಫೋಟೋಶೂಟ್​) ಮಾಮೂಲಾಗಿ ಬಿಟ್ಟಿದೆ. ಯಾರೂ ಮಾಡದ ರೀತಿಯಲ್ಲಿ ತಾವು ಫೋಟೋಶೂಟ್​ ಮಾಡಿಸಬೇಕು ಎಂದು ಎಷ್ಟೋ ಭಾವಿ ದಂಪತಿ ಸಾಹಸಮಯ ಕೃತ್ಯಕ್ಕೂ ಕೈಹಾಕುವುದು ಇದೆ. ನದಿಯ ಮಧ್ಯೆ, ಬೆಟ್ಟದ ತುದಿಯಲ್ಲಿ... ಹೀಗೆ ಏನೇನೋ ಫೋಟೋಶೂಟ್​ ಮಾಡಿಸಲು ಹೋಗಿ ಎಡವಟ್ಟಾಗಿ ಸಾವನ್ನಪ್ಪಿರುವ ಉದಾಹರಣೆಗಳೂ ಇವೆ.

ಅವೆಲ್ಲಾ ಬಿಡಿ. ಈಗ ಈ ಫೋಟೋಗಳನ್ನು ನೋಡಿ. ಒಂದೇ ಬಾಳೆ ಎಲೆಯನ್ನು ಇಬ್ಬರೂ ಸುತ್ತುಕೊಂಡು ಫೋಟೋಶೂಟ್​ ಮಾಡಿಸಿದ್ದಾರೆ. ಇದು ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ಎಂಬ ಶೀರ್ಷಿಕೆಯಡಿಯಲ್ಲಿ ವೈರಲ್​ ಆಗುತ್ತಿದೆ. ಇವರು ಎಲ್ಲಿಯವರು ಎಂಬ ಮಾಹಿತಿ ಇಲ್ಲದಿದ್ದರೂ ಈ ಫೋಟೋ ನೋಡಿದವರು ಶಾಕ್​  ಆಗೋದಂತೂ ಗ್ಯಾರೆಂಟಿ. ಈ ಇಬ್ಬರೂ ಒಳಗೆ ಯಾವ  ಬಟ್ಟೆಗಳನ್ನು ಹಾಕಿಕೊಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ.  ಆದರೆ ಬಾಳೆ ಎಲೆ ಸುತ್ತಿಕೊಂಡು ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಅಂತೂ ಅವರ ಆಸೆ ಈಡೇರಿದೆ. ಯಾರೂ ಮಾಡಿಸದಂತೆ ಫೋಟೋಶೂಟ್​  ಮಾಡಿಸಿದರೆ ಅದು ಜಗಜ್ಜಾಹೀರವಾಗುತ್ತದೆ ಎಂದುಕೊಂಡೇ ಹೀಗೆ  ಮಾಡಿಸಿರಲಿಕ್ಕೆ ಸಾಕು. ಅದೇ ರೀತಿ ಸೋಷಿಯಲ್​ ಮೀಡಿಯಾದಲ್ಲಿಯೂ ಈ ಫೋಟೋಗಳು ಭಾರಿ ಹಲ್​ಚಲ್​ ಸೃಷ್ಟಿಸುತ್ತಿವೆ.

Latest Videos

undefined

ಪ್ರೀತಿಯಲ್ಲಿ ಬಿದ್ದಾಗ ಧರ್ಮದ ತಲೆ ಕೆಡಿಸಿಕೊಳ್ಳಲಿಲ್ಲ, ಆದ್ರೆ ಆಮೇಲೆ ಆಗಿದ್ದೇ ಬೇರೆ... ವೀರ ಕನ್ನಡಿಗ ನಟಿ ಅನಿತಾ ಓಪನ್​ ಮಾತು

ಬಾಳೆ ಎಲೆಯನ್ನು ವಿಭಿನ್ನ ರೀತಿಯಲ್ಲಿ ಸುತ್ತುಕೊಂಡಿರುವುದನ್ನು ಈ ಫೋಟೋಗಳಲ್ಲಿ ನೋಡಬಹುದು. ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ. ಬಹುತೇಕ ಮಂದಿಯ ಆಸೆ ಏನೆಂದರೆ ಪ್ರೀ-ವೆಡ್ಡಿಂಗ್​ ಶೂಟ್​ನಲ್ಲಿಯೇ ಹೀಗೆ ಇದ್ದರೆ ಇನ್ನು ಪೋಸ್ಟ್​ ವೆಡ್ಡಿಂಗ್ ಶೂಟ್​ನಲ್ಲಿ ಇನ್ಯಾವ ರೀತಿ ಇರಬಹುದು ಎನ್ನುವುದು, ಅದಕ್ಕಾಗಿಯೇ ಅದರ ಫೋಟೋಗಳನ್ನೂ ಶೇರ್​ ಮಾಡಿ ಎನ್ನುತ್ತಿದ್ದಾರೆ ತರ್ಲೆ ಕಮೆಂಟಿಗರು. ಮತ್ತೆ ಕೆಲವರಿಗೆ ಕ್ಯಾಮೆರಾಮೆನ್​ ಎಷ್ಟು ಲಕ್ಕಿ, ತಮಗೆ ಇಂಥ ಛಾನ್ಸ್​ ಸಿಗಲಿಲ್ಲ ಎಂಬ ಹೊಟ್ಟೆ ಉರಿಇದ್ದಂತೆ  ಕಾಣುತ್ತಿದೆ. ಈ ಬಗ್ಗೆ ಖುದ್ದು ಕಮೆಂಟಿಗರು ಬರೆದುಕೊಂಡಿದ್ದಾರೆ. ನನಗೂ ಇಂಥ ಛಾನ್ಸ್​ ಸಿಗಬೇಕಿತ್ತು ಎನ್ನುತ್ತಿದ್ದಾರೆ. 

ಈ ಫೋಟೋಗೆ ಜನರು ಅದ್ಯಾವ ಪರಿಯಲ್ಲಿ ಫಿದಾ ಆಗಿದ್ದಾರೆ ಎಂದರೆ ಫೋಟೋ ಅಪ್​ಲೋಡ್​ ಮಾಡಿದ ಒಂದೇ ದಿನಕ್ಕೆ ಐದೂವರೆ ಸಾವಿರಕ್ಕೂ ಅಧಿಕ ಮಂದಿ ಕಮೆಂಟ್​  ಮಾಡಿದ್ದು, ಇದನ್ನು ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಶೇರ್​ ಮಾಡಿದ್ದಾರೆ. ಅಲ್ಲಿಗೆ ಈ ಮದುಮಕ್ಕಳ ಆಸೆ ಈಡೇರಿದೆ. ಆದರೆ ಫೋಟೋಶೂಟ್​  ಮಾಡಿಸುವಾಗ ಸ್ವಲ್ಪ ಎಡವಟ್ಟು ಆಗಿದ್ದರೂ ಬಾಳೆ ಎಲೆ ಜಾರಿದ್ದರೂ ಏನಾಗುತ್ತಿತ್ತು ಎನ್ನುವ ಚಿಂತೆ ಕೆಲವರದ್ದಾದರೆ, ಹಾಗೆ ಆಗಿದ್ದರೂ ಅದು ಗೊತ್ತಾಗುವುದು ಹೇಗೆ ಎನ್ನುವುದನ್ನು ಮತ್ತಿಷ್ಟು ಮಂದಿಯ ಪ್ರತಿಕ್ರಿಯೆ. ಒಟ್ಟಿನಲ್ಲಿ ಈ ಫೋಟೋಶೂಟ್​ ನೆಟ್ಟಿಗರ ನಿದ್ದೆ ಕದಿಯುತ್ತಿದೆ. ಇನ್ನು ತಮಗೆ ಯಾವ ರೀತಿಯ ಫೋಟೋಶೂಟ್​ ಬಾಕಿ ಇದೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ತಿದ್ದಾರೆ ಹೈಕಳು. ಶೋಯೇಬ್​ ಶೇಖ್​ ಎನ್ನುವವರು ಫೋಟೋಗಳನ್ನು ಶೇರ್​ ಮಾಡಿದ್ದಾರೆ. 

ಆಟೋದವ ಪ್ಯಾಂಟ್​ ಜಿಪ್​ ತೆರೆದ, ಟೈಲರ್​ ತಬ್ಬಿಕೊಂಡ... ಭಯಾನಕ ಘಟನೆ ನೆನಪಿಸಿಕೊಂಡ 'ವೀರ ಕನ್ನಡಿಗ' ನಟಿ ಅನಿತಾ

ಇದರ ಫೋಟೋ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದವರ ಲಿಂಕ್​ ಇಲ್ಲಿದೆ ನೋಡಿ

https://www.facebook.com/100022469253102/posts/1715709319188027/?mibextid=oFDknk&rdid=a8iEkL1ActoExRQw

click me!