ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಹುಡುಗಿಯರು ನಾನಾ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಕೂದಲು ಮುಖವನ್ನು ಹಾಳು ಮಾಡುತ್ತದೆ. ದಪ್ಪಗೆ ಬೆಳೆಯುವ ಮುಖದ ಕೂದಲು ಹುಡುಗಿಯರ ತಲೆನೋವು ಹೆಚ್ಚಿಸುತ್ತದೆ. ಅದಕ್ಕೇನು ಮಾಡ್ಬೇಕೆಂಬ ಗೊಂದಲಕ್ಕೆ ಉತ್ತರ ಇಲ್ಲಿದೆ.
ಮುಖದ ಮೇಲೆ ಕೂದಲು ಬಂದ್ರೆ ನೀನೇನು ಪುರುಷನಾ ಅಂತಾ ಪ್ರಶ್ನೆ ಮಾಡ್ತಾರೆ. ನಮ್ಮಲ್ಲಿ ಪುರುಷನ ಮುಖದಲ್ಲಿ ಮಾತ್ರ ಗಡ್ಡ, ಮೀಸೆ ಇರಬಹುದು. ಅದೇ ಮಹಿಳೆ ಮುಖದ ಮೇಲೆ ಕೂದಲು ಬೆಳೆಯೋದನ್ನು ನೋಡಿದ್ರೆ ಜನರು ಆಡಿಕೊಳ್ತಾರೆ. ಎಲ್ಲ ಮಹಿಳೆಯರ ಮುಖದ ಮೇಲೂ ಕೂದಲಿರುತ್ತದೆ. ಆದ್ರೆ ಪುರುಷರಷ್ಟು ಗಾಢವಾಗಿರೋದಿಲ್ಲ. ಕೆಲ ಮಹಿಳೆಯರಲ್ಲಾಗುವ ಹಾರ್ಮೋನ್ ಏರುಪೇರು ಹಾಗೂ ಬೇರೆ ಕೆಲ ಕಾರಣದಿಂದ ಮುಖದ ಮೇಲೆ ಗಾಢವಾದ ಕೂದಲು ಬೆಳೆಯುತ್ತದೆ. ಇದು ಮಹಿಳೆಯರನ್ನು ಮುಜುಗರಕ್ಕೀಡು ಮಾಡುತ್ತದೆ.
ಸುಂದರ (Beautiful) ಮುಖವನ್ನು ಬಯಸುವ ಮಹಿಳೆಯರು ವ್ಯಾಕ್ಸ್ (Wax) ಅಥವಾ ಶೇವ್ (Shave) ಗೆ ಮುಂದಾಗ್ತಾರೆ. ಮುಖಕ್ಕೆ ಶೇವ್ ಮಾಡಿದ್ರೆ ಕೂದಲು ಮತ್ತಷ್ಟು ದಪ್ಪಗೆ ಬರುತ್ತದೆ ಎಂಬ ನಂಬಿಕೆಯಿದೆ. ನಾವಿಂದು ಮಹಿಳೆಯರು ಶೇವ್ ಮಾಡ್ಬೇಕೆ, ಬೇಡವೆ ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಮಹಿಳೆಯರು ಫೇಸ್ ಶೇವಿಂಗ್ ಏಕೆ ಮಾಡಬಾರದು? : ಮಹಿಳೆಯರು ಮುಖವನ್ನು ಶೇವಿಂಗ್ ಮಾಡಿದ್ರೆ ಕೆಲ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
Beauty Tips : ಕೂದಲು ಗುಂಗುರು ಮಾಡುವ ಕರ್ಲರ್ ಖರೀದಿ ಮುನ್ನ ಇವಿಷ್ಟು ಗೊತ್ತಿರಲಿ
1. ಪದೇ ಪದೇ ಶೇವ್ ಮಾಡ್ಬೇಕು : ಮಹಿಳೆಯರ ಮುಖದಲ್ಲಿ ಕೂದಲಿದ್ದು, ನೀವು ಒಮ್ಮೆ ಶೇವಿಂಗ್ ಮಾಡಿದ್ರೆ ಮುಗಿಯಲಿಲ್ಲ. ಪದೇ ಪದೇ ಶೇವ್ ಮಾಡೋದು ಅನಿವಾರ್ಯವಾಗುತ್ತದೆ. ನೀವು ತುಂಬಾ ಕಪ್ಪು (Black) ಕೂದಲು ಹೊಂದಿದ್ದರೆ, ಮತ್ತು ಬೇಗ ಅದು ಬೆಳೆಯುತ್ತಿದ್ದರೆ ನೀವು ಎರಡರಿಂದ ಮೂರು ದಿನಗಳಿಗೊಮ್ಮೆಯಾದ್ರೂ ನಿಮ್ಮ ಮುಖವನ್ನು ಶೇವಿಂಗ್ ಮಾಡ್ಬೇಕಾಗುತ್ತದೆ. ಇದು ಕಿರಿಕಿರಿ ಎನ್ನಿಸಬಹುದು.
2. ನೋವಿ (Pain) ನ ಕೂದಲು : ನೀವು ಮುಖದ ಕೂದಲನ್ನು ಹಲವಾರು ಬಾರಿ ಶೇವಿಂಗ್ ಮಾಡಿ ತೆಗೆಯುತ್ತಿದ್ದರೆ ಕೂದಲು (Hair) ಮತ್ತಷ್ಟು ದಪ್ಪಗೆ ಬೆಳೆಯುತ್ತದೆ. ಇದ್ರಿಂದ ನೀವು ಹೆಚ್ಚು ನೋವನ್ನು ಅನುಭವಿಸಬೇಕಾಗುತ್ತದೆ.
3. ಉರಿ – ಗಾಯ : ಶೇವಿಂಗ್ ಮಾಡಿದ ನಂತ್ರ ಚರ್ಮದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಮುಖದ ಚರ್ಮಕ್ಕೆ ಶೇವಿಂಗ್ ವೇಳೆ ಗಾಯವಾಗುವ ಸಾಧ್ಯತೆಯಿರುತ್ತದೆ. ಮುಖದ ಉರಿಯನ್ನು ಕೂಡ ಅನುಭವಿಸಬೇಕಾಗುತ್ತದೆ.
4. ಶುಷ್ಕವಾಗುವ ಚರ್ಮ : ಒಣ ಚರ್ಮವನ್ನು ಹೊಂದಿರುವವರು ಶೇವಿಂಗ್ ಮಾಡಿದ್ರೆ ಚರ್ಮ ಮತ್ತಷ್ಟು ಶುಷ್ಕವಾಗುತ್ತದೆ. ಆಗ ತುರಿಕೆ, ಉರಿ ಸಮಸ್ಯೆ ಹೆಚ್ಚಾಗುತ್ತದೆ. ಶೇವಿಂಗ್ ಅನಿವಾರ್ಯ ಎನ್ನುವವರು ಶೇವಿಂಗ್ ನಂತ್ರ ಕ್ರೀಮ್ ಬಳಕೆಯನ್ನು ಮರೆಯಬಾರದು.
5. ಸೌಂದರ್ಯಕ್ಕೆ ಧಕ್ಕೆ : ಮುಖದ ಮೇಲಿರುವ ಕೂದಲನ್ನು ಶೇವಿಂಗ್ ಮಾಡಿ ತೆಗೆದ ನಂತ್ರ ಮುಖದ ಸೌಂದರ್ಯ ಬದಲಾಗುತ್ತದೆ. ನಿಮ್ಮ ಮುಖ ಹೆಚ್ಚು ಬೆಳ್ಳಗೆ ಕಾಣುತ್ತದೆ. ಬೇರೆಯವರಿಗೆ ನೀವು ಶೇವಿಂಗ್ ಮಾಡಿದ್ದೀರಿ ಎಂಬುದು ಸುಲಭವಾಗಿ ತಿಳಿಯುತ್ತದೆ.
Beauty Tips : ಮೇಕಪ್ ಹಚ್ಚೋದು ಮಾತ್ರವಲ್ಲ, ತೆಗೆಯೋದೂ ಗೊತ್ತು ಮಾಡ್ಕೊಳ್ಳಿ
ಮಹಿಳೆಯರಿಗೆ ಫೇಸ್ ಶೇವಿಂಗ್ ಎಷ್ಟು ಪ್ರಯೋಜನಕಾರಿ? : ಕೆಲ ಮಹಿಳೆಯರ ಮುಖದ ಮೇಲೆ ಅತಿಯಾದ ಕೂದಲು ಬೆಳೆಯುವುದ್ರಿಂದ ಅದು ಅವರ ಸೌಂದರ್ಯವನ್ನು ಹಾಳು ಮಾಡುತ್ತದೆ. ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಕೆಲ ಮಹಿಳೆಯರು ಮನೆಯಿಂದ ಹೊರಗೆ ಹೋಗಲು ಇಚ್ಛಿಸುವುದಿಲ್ಲ. ಅಂಥವರು ಶೇವಿಂಗ್ ಮಾಡುವುದು ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮುಖದ ಕೂದಲನ್ನು ಶೇವಿಂಗ್ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೇಜರ್‌ಗಳು ಲಭ್ಯವಿವೆ. ಈ ರೇಜರ್ ಕೂದಲು, ಹೆಚ್ಚುವರಿ ಎಣ್ಣೆ ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಇದರಿಂದಾಗಿ ಚರ್ಮವು ಸುಂದರವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತದೆ. ತಕ್ಷಣ ಕೂದಲು ಬೆಳವಣಿಗೆಯನ್ನು ತಪ್ಪಿಸುತ್ತದೆ. ನೀವು ಎರಡೇ ದಿನಕ್ಕೆ ಶೇವಿಂಗ್ ಮಾಡುವ ಅಗತ್ಯ ಆಗಿರೋದಿಲ್ಲ. ಮುಖದ ಕೂದಲು ತೆಗೆಯುವ ಮುನ್ನ ಯಾವುದು ನಿಮ್ಮ ಚರ್ಮಕ್ಕೆ ಬೆಸ್ಟ್ ಎಂಬುದನ್ನು ಪರೀಕ್ಷಿಸಿಕೊಂಡು ನಂತ್ರ ಬಳಕೆ ಮಾಡಿ.