Beauty Tips : ಮೇಕಪ್ ಹಚ್ಚೋದು ಮಾತ್ರವಲ್ಲ, ತೆಗೆಯೋದೂ ಗೊತ್ತು ಮಾಡ್ಕೊಳ್ಳಿ

By Suvarna News  |  First Published Feb 6, 2023, 12:27 PM IST

ಮೇಕಪ್ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದೇ ಮೇಕಪ್ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತದೆ. ಚರ್ಮದ ಸೋಂಕು, ಸುಕ್ಕು ಎರಡೂ ಕಾಡಬಾರದು ಎಂದಾದ್ರೆ ಮೇಕಪ್ ತೆಗೆಯುವ ವಿಧಾನ ತಿಳಿದಿರಬೇಕು. ಚರ್ಮಕ್ಕೆ ಹಾನಿಯಾಗದಂತೆ ಮೇಕಪ್ ತೆಗೆಯುವುದು ಒಂದು ಕಲೆ.
 


ಮೇಕಪ್ ಇಲ್ಲದೆ ಕೆಲವರು ಮನೆಯಿಂದ ಹೊರಗೆ ಬೀಳೋದಿಲ್ಲ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮೇಕಪ್ ಉತ್ಪನ್ನಗಳು ಲಭ್ಯವಿದೆ. ಗುಣಮಟ್ಟ ಪರೀಕ್ಷೆ ಮಾಡಿ ಜನರು ಮೇಕಪ್ ಕಿಟ್ ಖರೀದಿ ಮಾಡ್ತಾರೆ. ಇಡೀ ದಿನ ಮೆಕಪ್ ಹಾಕಿಕೊಂಡಿರುವ ಜನರ ಚರ್ಮದ ಮೇಲೆ ಅನೇಕ ಕಲೆಗಳನ್ನು ನಾವು ನೋಡ್ಬಹುದು. ಮುಖ ಸುಕ್ಕುಗಟ್ಟಿದಂತಾಗಿರುತ್ತದೆ. ಕೆಲವೊಮ್ಮೆ ಮೇಕಪ್ ಇಲ್ಲದೆ ಅವರ ಮುಖ ನೋಡೋದು ಕಷ್ಟವಾಗುತ್ತದೆ.

ಮೇಕಪ್ (Makeup) ಬಳಸುವ ಪ್ರತಿಯೊಬ್ಬರಿಗೂ ಮೇಕಪ್ ಹಚ್ಚೋದು ಮಾತ್ರವಲ್ಲ ತೆಗೆಯೋದು ಹೇಗೆ ಎಂಬ ಅರಿವಿರಬೇಕಾಗುತ್ತದೆ. ಎಷ್ಟೇ ತಡವಾಗಿದ್ರೂ ರಾತ್ರಿ (Night) ಮೇಕಪ್ ನಲ್ಲಿ ನಿದ್ರೆ (Sleep) ಗೆ ಜಾರುವ ಕೆಲಸ ಮಾಡಬಾರದು. ಇದು ಚರ್ಮ (Skin) ದ ಸೌಂದರ್ಯ (Beauty) ವನ್ನು, ಆರೋಗ್ಯವನ್ನು ಹಾಳು ಮಾಡುತ್ತದೆ. ಮೇಕಪ್ ಚರ್ಮ ಸರಿಯಾಗಿ ಉಸಿರಾಡದಂತೆ ಮಾಡುತ್ತದೆ. ಇದ್ರಿಂದ ಚರ್ಮ ಶುಷ್ಕವಾಗುತ್ತದೆ. ಕಣ್ಣುಗಳ ಮೇಲಿರುವ ಮೇಕಪ್ ಸೋಂಕಿಗೆ ಕಾರಣವಾಗುತ್ತದೆ. ಚರ್ಮದ ಉರಿಯೂತ, ಕಿರಿಕಿರಿ ಕಾಡುತ್ತದೆ. ಮೇಕಪ್ ತೆಗೆಯಲು ಕೆಲ ಸುಲಭ ವಿಧಾನಗಳನ್ನು ನೀವು ಅನುಸರಿಸಬಹುದು. ನಾವಿಂದು ಮೇಕಪ್ ತೆಗೆಯೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.

Latest Videos

undefined

ಉಗುರು ಬೆಚ್ಚಗಿನ ನೀರು : ಯಾವುದೇ ಕಾರ್ಣಕ್ಕೂ ಮೇಕಪ್ ತೆಗೆಯಲು ಬಿಸಿ ನೀರನ್ನು ಬಳಕೆ ಮಾಡಬೇಡಿ. ಚರ್ಮ ಸೂಕ್ಷ್ಮವಾಗಿರುತ್ತದೆ. ಬಿಸಿನೀರಿನಲ್ಲಿ ಮೇಕ್ಅಪ್ ತೆಗೆದಾಗ ಚರ್ಮ ಹಾನಿಗೊಳಗಾಗುತ್ತದೆ. ಮೇಕ್ಅಪ್ ತೆಗೆಯಲು ತಣ್ಣೀರು ಬಳಸುವುದು ಕೂಡ ಒಳ್ಳೆಯದಲ್ಲ. ನಿಮ್ಮ ತ್ವಚೆಯಿಂದ ಎಣ್ಣೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಕೆಲಸವನ್ನು ತಣ್ಣನೆಯ ನೀರು ಮಾಡುವುದಿಲ್ಲ. ಸಂಪೂರ್ಣವಾಗಿ ಮೇಕ್ಅಪ್ ತೆಗೆಯಲು ನೀವು ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಇದು ಚರ್ಮದಲ್ಲಿ ಎಣ್ಣೆ ಉಳಿಸುವ ಜೊತೆಗೆ ಮೇಕಪ್ ತೆಗೆಯಲು ನೆರವಾಗುತ್ತದೆ. 

ಕೈನಿಂದ ಮುಟ್ಟಬೇಡಿ : ನೀವು ಮೇಕಪ್ ತೆಗೆಯುವ ಮುನ್ನ ಮುಖವನ್ನು ಕೈನಿಂದ ಮುಟ್ಟಬೇಡಿ. ಬರಿ ಕೈನಲ್ಲಿ ಮುಖ ಮುಟ್ಟಿದ್ರೆ ಕೈನಲ್ಲಿರುವ ಕೊಳಕು ಮೇಕಪ್ ಸೇರಿ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ನೀವು ಕೈಗಳನ್ನು ಮೊದಲು ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತ್ರ ಮುಖವನ್ನು ಮುಟ್ಟಿ.

ಮುಖ ಸ್ವಚ್ಛಗೊಳಿಸುವಾಗ ಹೀಗೆ ಮಾಡಿ : ಮೇಕಪನ್ನು ಬರೀ ಮುಖಕ್ಕೆ ಹಾಕುವುದಿಲ್ಲ. ಹಣೆಯ ಮೇಲ್ಭಾಗ, ಕುತ್ತಿಗೆ ಎಲ್ಲದಕ್ಕೂ ಅನ್ವಯಿಸಲಾಗುತ್ತದೆ. ಎಲ್ಲ ಭಾಗದಲ್ಲಿರುವ ಮೇಕಪ್ ತೆಗೆಯುವುದು ಅವಶ್ಯಕ. ಹಾಗಾಗಿ ಮುಖ ಸ್ವಚ್ಛಗೊಳಿಸುವ ಮೊದಲು ಕೂದಲನ್ನು ಕಟ್ಟಿಕೊಂಡು ನಂತ್ರ ಕ್ಲೀನ್ ಮಾಡಿ. ಆಗ ಮೇಕಪ್ ಕೂದಲಿಗೆ ಅಂಟಿಕೊಳ್ಳುವುದಿಲ್ಲ. ಮೇಕಪ್ ಸ್ವಚ್ಛವಾಗಿ ಹೋಗುತ್ತದೆ.     

ಇಳಕಲ್ ಸೀರೆ ಅಂದ್ರೆ ಸುಮ್ನೆ ಏನಲ್ಲ..ಸಾಂಪ್ರದಾಯಿಕ ಸೀರೆಗಿದೆ 1000 ವರ್ಷದ ಇತಿಹಾಸ

ತುಟಿಯ ಮೇಕಪ್ ಹೀಗೆ ತೆಗೆಯಿರಿ : ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿಲ್ಲವೆಂದ್ರೆ ಮೇಕಪ್ ಮಾಡಿ ಪ್ರಯೋಜನವಿಲ್ಲ. ದಿನವಿಡಿ ಇರಲಿ ಎನ್ನುವ ಕಾರಣಕ್ಕೆ ಅನೇಕರು ಆಗಾಗ ತುಟಿಗೆ ಲಿಪ್ಸ್ಟಿಕ್ ಬಳಿದುಕೊಳ್ತಿರುತ್ತಾರೆ. ಲಿಪ್ಸ್ಟಿಕ್ ಹಚ್ಚಿದ್ರೆ ಆಗಿಲ್ಲ, ಅದನ್ನು ಕೂಡ ತೆಗೆದು ಮಲಗಬೇಕು. ಕೆಲ ಲಿಪ್ಸ್ಟಿಕ್ ಎಷ್ಟೇ ಸ್ವಚ್ಛಗೊಳಿಸಿದ್ರೂ ಹೋಗೋದಿಲ್ಲ. ಅಂಥ ಸಂದರ್ಭದಲ್ಲಿ ನೀವು ಕ್ಲೆನ್ಸರ್ ಅಥವಾ ಮೈಕೆಲ್ಲರ್ ನೀರಿಗೆ ಹತ್ತಿಯನ್ನು ಅದ್ದಿ ಅದರಿಂದ ತುಟಿಯನ್ನು ಸ್ವಚ್ಛಗೊಳಿಸಬೇಕು. ಅದ್ದಿದ ಹತ್ತಿಯನ್ನ ಕೆಲ ಸೆಕೆಂಡ್ ತುಟಿ ಮೇಲೆ ಇಟ್ಟು ನಂತ್ರ ಸ್ವಚ್ಛಗೊಳಿಸಬೇಕು. 

Flowers For Skin - Hair: ಸುಳ್ಳಲ್ಲ… ಹೂವುಗಳು ಹೆಚ್ಚಿಸುತ್ತೆ ತ್ವಚೆಯ ಸೌಂದರ್ಯವನ್ನು

ಮುಖದ ಮೇಕಪ್ ತೆಗೆಯಲು ಇದನ್ನು ಬಳಸಿ : ನೀವು ಮುಖದ ಮೇಕಪ್ ಸ್ವಚ್ಛಗೊಳಿಸಲು ಕ್ಲೆನ್ಸಿಂಗ್ ಬಾಮ್ ಬಳಸಬಹುದು. ಕೈನಲ್ಲಿ ಸ್ವಲ್ಪ ಕ್ಲೆನ್ಸಿಂಗ್ ಬಾಮ್ ತೆಗೆದುಕೊಂಡು ಅದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. ನಂತ್ರ ಬಟ್ಟೆ ಅಥವಾ ಹತ್ತಿಯಿಂದ ಮುಖವನ್ನು ಒರೆಸಬೇಕು. ನಂತ್ರ ಫೇಸ್ ವಾಶ್ ಬಳಸಿ ಮುಖವನ್ನು ತೊಳೆಯಬೇಕು. ಮುಖವನ್ನು ಸ್ವಚ್ಛಗೊಳಿಸಿದ ನಂತ್ರ ನೀವು ಟೋನರ್,   ಮಾಯಿಶ್ಚರೈಸರ್  ಹಚ್ಚಲು ಮರೆಯಬೇಡಿ. 
 

click me!