ಕೂದಲಿನ ಸೌಂದರ್ಯಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನ ಲಭ್ಯವಿದೆ. ಕೂದಲನ್ನು ಕರ್ಲಿ ಮಾಡಲು ಜನರು ಕರ್ಲರ್ ಖರೀದಿ ಮಾಡ್ತಾರೆ. ಅದನ್ನು ಬಳಸುವ ವಿಧಾನ ಮಾತ್ರವಲ್ಲ ಖರೀದಿ ವೇಳೆ ಯಾವೆಲ್ಲ ವಿಷ್ಯ ಗಮನಿಸಬೇಕು ಎಂಬುದು ಕೂಡ ಜನರಿಗೆ ತಿಳಿದಿರಬೇಕು.
ಚೆಂದದ ಕೂದಲು ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೂದಲು ಕಪ್ಪಗೆ, ದಪ್ಪಗಿರಬೇಕೆಂದು ಅನೇಕರು ಬಯಸ್ತಾರೆ. ಮತ್ತೆ ಕೆಲವರು ನೇರವಾದ ಕೂದಲನ್ನು ಇಷ್ಟಪಡ್ತಾರೆ. ಇನ್ನು ಕೆಲವರು ಕರ್ಲಿ ಕೂದಲನ್ನು ಇಷ್ಟಪಡ್ತಾರೆ. ನೇರವಾದ ಕೂದಲಿಗೆ ಕರ್ಲಿ ಶೇಪ್ ನೀಡುವವರಿದ್ದಾರೆ. ಮಾರುಕಟ್ಟೆಯಲ್ಲಿ ಕೂದಲನ್ನು ಕರ್ಲಿ ಮಾಡಲು ವಿವಿಧ ರೀತಿಯ ಸ್ಟೈಲಿಂಗ್ ಉಪಕರಣಗಳು ಲಭ್ಯವಿದೆ.
ಕೂದಲಿ (Hair) ಗೆ ಸ್ಟೈಲಿ ಲುಕ್ ನೀಡೋದು ಮಾತ್ರ ಮುಖ್ಯವಲ್ಲ. ಕೂದಲಿನ ಆರೋಗ್ಯ (Health) ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾಗಿ ಕರ್ಲರ್ (Curler) ಖರೀದಿ ಮಾಡುವಾಗ ಅನೇಕ ವಿಷ್ಯಗಳನ್ನು ಗಮನಿಸಬೇಕು. ಆನ್‌ಲೈನ್ (Online) ನಲ್ಲಿ ಕರ್ಲರ್ ಶಾಪಿಂಗ್ ಮಾಡಲು ಯೋಚಿಸುತ್ತಿದ್ದರೆ ಕೆಲವು ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲವೆಂದ್ರೆ ಕೂದಲು ಹಾಳಾಗೋದು ಗ್ಯಾರಂಟಿ. ನಾವಿಂದು ಆನ್ಲೈನ್ ನಲ್ಲಿ ಕರ್ಲರ್ ಖರೀದಿಗೆ ಮುನ್ನ ನೀವು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಕೆಜಿಎಫ್ ನಟಿಯ ಹಾಟೆಸ್ಟ್ ಆವತಾರ!
ಕರ್ಲರ್ ಖರೀದಿ ವೇಳೆ ಈ ವಿಷ್ಯ ನೆನಪಿರಲಿ :
ಕರ್ಲರ್ ಗೆ ಬಳಸಿರುವ ವಸ್ತುವನ್ನು ಗಮನಿಸಿ : ಆನ್ಲೈನ್ ನಲ್ಲಿ ಕರ್ಲರ್ ಖರೀದಿ ಮಾಡುವ ಮೊದಲು ಅದಕ್ಕೆ ಯಾವ ವಸ್ತು ಬಳಸಲಾಗಿದೆ ಎಂಬುದನ್ನು ಗಮನಿಸಿ. ಕರ್ಲರ್ ರಾಡ್ ಬೇರೆ ಬೇರೆಯಾಗಿರುತ್ತದೆ. ಸೆರಾಮಿಕ್ ನಿಂದ ಮಾಡಿರುವ ಕರ್ಲಿಂಗ್ ರಾಡ್ ಬಳಕೆ ಮಾಡಿ. ಇದು ಶಾಖವನ್ನು ಚೆನ್ನಾಗಿ ಹೊರಹಾಕುವ ಕಾರಣ ಇದು ಒಳ್ಳೆಯದು. ಕೂದಲು ತೆಳ್ಳಗಿದ್ರೆ ಕರ್ಲರ್ ಬಳಸುವ ವೇಳೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಶಾಖದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ನೀವು ಟೈಟಾನಿಯಂನಿಂದ ಮಾಡಿದ ಕರ್ಲರ್ ಕೂಡ ಬಳಸಬಹುದು. ಇದು ಹಗುರವಾಗಿರುವ ಕಾರಣ ಬಳಕೆ ಸುಲಭ. ಅಲ್ಲದೆ ಇದು ಹೆಚ್ಚು ಶಾಖವನ್ನು ನಿರ್ವಹಿಸುತ್ತದೆ. ಕೂದಲು ದಪ್ಪಗಿದೆ ಎನ್ನುವವರಿಗೆ ಗೋಲ್ಡ್ ಪ್ಲೇಟೆಡ್ ಕರ್ಲರ್ ಬೆಸ್ಟ್.
ಕರ್ಲರ್ ಗಾತ್ರದ ಬಗ್ಗೆ ಗಮನ ಹರಿಸಿ : ಕರ್ಲರ್ ಗಾತ್ರ ಕೂಡ ಭಿನ್ನವಾಗಿರುತ್ತದೆ. ಕರ್ಲಿಂಗ್ ಐರನ್‌ಗಳು 3/8 ರಿಂದ 2ರಷ್ಟು ಅಗಲದಲ್ಲಿ ಬರುತ್ತವೆ. ನೀವು ಬಿಗಿಯಾದ ಸುರುಳಿಗಳನ್ನು ಬಯಸಿದರೆ, ಕಿರಿದಾದ ಕರ್ಲರ್ ಬಳಸಿ. ನೀವು ಸಡಿಲವಾದ ಸುರುಳಿಗಳನ್ನು ಬಯಸಿದರೆ, ದೊಡ್ಡ ಸುರುಳಿರುವ ಕರ್ಲರ್ ಬಳಸಿ. ಉದ್ದನೆಯ ಕೂದಲಿಗೆ ಅರ್ಧ ಇಂಚಿನ ಬ್ಯಾರೆಲ್ ಗಾತ್ರವು ಪರಿಪೂರ್ಣವಾಗಿರುತ್ತದೆ.
ಹೀಟ್ ಸೆಟ್ಟಿಂಗ್ : ಕರ್ಲರ್ ಖರೀದಿ ಮಾಡುವಾಗ ಹೀಟ್ ಸೆಟ್ಟಿಂಗ್ ಬಗ್ಗೆಯೂ ಗಮನಹರಿಸಿ. ಕೂದಲಿಗೆ ನೀವು ಯಾವ ವಿನ್ಯಾಸ ನೀಡ್ತಿರಿ ಎಂಬ ಆಧಾರದ ಮೇಲೆ ಹೀಟ್ ಸೆಟ್ಟಿಂಗ್ ಮಾಡ್ಬೇಕು. ದಪ್ಪ ಕೂದಲು ಹೊಂದಿದ್ದರೆ ಹೆಚ್ಚಿನ ಸೆಟ್ಟಿಂಗ್ ಆನ್ ಮಾಡಬೇಕು. ಒಂದೇ ಬಾರಿ ಎಲ್ಲ ಕೂದಲನ್ನು ಸೆಟ್ ಮಾಡ್ತಿದ್ದರೂ ಶಾಖ ಹೆಚ್ಚಿಗೆ ಬೇಕಾಗುತ್ತದೆ. ಅದೇ ನೀವು ತೆಳ್ಳಗಿನ ಕೂದಲು ಸೆಟ್ಟಿಂಗ್ ಮಾಡ್ತಿದ್ದರೆ ಶಾಖವನ್ನು ಕಡಿಮೆ ಇಟ್ಟುಕೊಳ್ಳಿ.
ಕರ್ಲರ್ ಆಕಾರ : ಹೇರ್ ಕರ್ಲರ್‌ಗಳು ಸಹ ಅನೇಕ ಆಕಾರಗಳಲ್ಲಿ ಬರುತ್ತವೆ. ಇದು ಕೋನ್, ಬ್ಯಾರೆಲ್, ಸುರುಳಿ ಇತ್ಯಾದಿಗಳನ್ನು ಒಳಗೊಂಡಿದೆ. ಕೋನ್ ಆಕಾರದ ಕರ್ಲರ್ ಗಳು ಸಣ್ಣ ತುದಿಗಳನ್ನು ಹೊಂದಿರುತ್ತವೆ. ನಿಮಗೆ ಯಾವ ಆಕಾರದ ಕರ್ಲ್ ಬೇಕು ಎನ್ನುವುದ್ರ ಮೇಲೆ ನೀವು ಕರ್ಲರ್ ಖರೀದಿ ಮಾಡ್ಬೇಕು.
Beauty Tips : ಮೇಕಪ್ ಹಚ್ಚೋದು ಮಾತ್ರವಲ್ಲ, ತೆಗೆಯೋದೂ ಗೊತ್ತು ಮಾಡ್ಕೊಳ್ಳಿ
ಬ್ರ್ಯಾಂಡ್ ಗಮನಿಸಿ : ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ಬ್ರಾಂಡ್ ಕರ್ಲರ್‌ಗಳನ್ನು ಆಯ್ಕೆ ಮಾಡಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಸ್ಥಳೀಯ ಕರ್ಲರ್‌ಗಳಿಗೆ ಹೋಲಿಸಿದರೆ ಬ್ರ್ಯಾಂಡ್ ಕರ್ಲರ್ ಮತ್ತೆ ಮತ್ತೆ ಹಾಳಾಗುವುದಿಲ್ಲ. ಅಷ್ಟೇ ಅಲ್ಲ ವಿದ್ಯುತ್ ಕೂಡ ಉಳಿತಾಯವಾಗುತ್ತದೆ.
ಯಾವುದು ಬೆಸ್ಟ್ ? : ಮಾರುಕಟ್ಟೆಯಲ್ಲಿ ಎರಡು ರೀತಿಯ ಕರ್ಲಿಂಗ್ ಲಭ್ಯವಿದೆ. ಒಂದು ವಿದ್ಯುತ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನೊಂದು ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತದೆ. ಸಾಕಷ್ಟು ಪ್ರಯಾಣ ಬೆಳೆಸುವವರು ನೀವಾಗಿದ್ದರೆ ಪೋರ್ಟಬಲ್ ಕರ್ಲಿಂಗ್ ಬಳಸುವುದು ಒಳ್ಳೆಯದು.