ಪ್ಲಾಸ್ಟಿಕ್ ಸರ್ಜರಿ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದ್ದರೂ ಬೆಲೆ ಮಾತ್ರ ಕಡಿಮೆಯೇನಿಲ್ಲ. ಜನರು ದುಬಾರಿ ಹಣ ನೀಡಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ತಾರೆ. ಅವರಲ್ಲಿ ಒಂದಾಗಿರುವ ಈ ಮಹಿಳೆ, ಚೆಂದ ಕಾಣ್ಬೇಕು ಅಂತಾ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುತ್ತದೆ.
ಸುಂದರವಾಗಿ ಕಾಣ್ಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಯೌವನದಲ್ಲಿ ಸೌಂದರ್ಯದ ಬಗ್ಗೆ ಕಾಳಜಿವಹಿಸೋರ ಸಂಖ್ಯೆ ಹೆಚ್ಚು. ವಯಸ್ಸಾಗ್ತಿದ್ದಂತೆ ವಯಸ್ಸನ್ನು ಮುಚ್ಚಿಟ್ಟುಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗುವವರ ಸಂಖ್ಯೆ ಕಡಿಮೆ ಏನಿಲ್ಲ. ಮುಖದ ಸುಕ್ಕನ್ನು ಕಡಿಮೆ ಮಾಡಿಕೊಂಡು, ಕೂದಲಿಗೆ ಕಲರ್ ಮಾಡಿ ನಾನಿನ್ನು ಯಂಗ್ ಎಂಬುದನ್ನು ತೋರಿಸುವ ಪ್ರಯತ್ನ ನಡೆಯುತ್ತಿರುತ್ತದೆ.
ವಯಸ್ಸು 50 ದಾಟುತ್ತಿದ್ದಂತೆ ಕೆಲವರು ಮುಖದ ಚರ್ಮ (Skin) ಸಡಿಲವಾಗಿ ಆಕರ್ಷಣೆ ಕಳೆದುಕೊಳ್ಳುತ್ತದೆ. ಸದಾ ಯಂಗ್ ಆಗಿ ಕಾಣಲು ಈಗ ಬ್ಯೂಟಿಪಾರ್ಲರ್ ಮಾತ್ರವಲ್ಲ ಪ್ಲಾಸ್ಟಿಕ್ ಸರ್ಜರಿ (Plastic surgery) ಗೆ ಅವಕಾಶವಿದೆ. ಅನೇಕ ಪ್ರಸಿದ್ಧ ಕಲಾವಿದರು ಕೂಡ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿ ತಮ್ಮ ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ. ಇಲ್ಲೊಬ್ಬ ಮಹಿಳೆಗೆ ತನಗೆ ವಯಸ್ಸಾಗ್ತಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಆಗ್ತಿಲ್ಲ. ತಾನು ಸದಾ ಯಂಗ್ ಆಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್ ಸರ್ಜರಿಗೆ (Plastic Surgery) ಒಳಗಾಗಿದ್ದಾಳೆ. ಈಕೆಯ ವಿಶೇಷವೆಂದ್ರೆ ಪ್ಲಾಸ್ಟಿಕ್ ಸರ್ಜರಿಗಾಗಿ ಮನೆಯನ್ನೇ ಮಾರಾಟ ಮಾಡಿದ್ದು, ಈಗ ಆಕೆ ಜೀವನ ವ್ಯಾನ್ ನಲ್ಲಿ ಸಾಗ್ತಿದೆ.
undefined
ತಮ್ಮದೇ ಬ್ಯೂಟಿ ಪ್ರೊಡಕ್ಟ್ಸ್ ಇರೋ ಕೃತಿ ಸನೂನ್ ಮಾತ್ರ ಬಳಸೋದು ಕೊಬ್ಬರಿಯಣ್ಣೆಯಂತೆ!
ಪ್ಲಾಸ್ಟಿಕ್ ಸರ್ಜರಿಗಾಗಿ ಮನೆ ಮಾರಿದವರು ಯಾರು ಗೊತ್ತಾ?: ಘಟನೆ ನಡೆದಿರೋದು ಕ್ಯಾಲಿಫೋರ್ನಿಯಾ (California) ದ ಲೇಕ್ ತಾಹೋದಲ್ಲಿ. ಮಹಿಳೆ ಹೆಸರು ಕೆಲ್ಲಿ ಬೀಸ್ಲಿ. ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಾಗಿ (Cosmemtic Treatment) ಈಕೆ ಮನೆ ಮಾರಾಟ ಮಾಡಿದ್ದಾಳೆ. ಆಕೆಗೆ ಈಗ 50 ವರ್ಷ ವಯಸ್ಸು. ಮಹಿಳೆ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬೇಕೆಂದು ಫೇಸ್ ಲಿಫ್ಟ್ ಪಡೆಯಲು ಮುಂದಾಗಿದ್ದಾಳೆ.
ಕೆಲ್ಲಿ ಬೀಸ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಕಾರಣವೇನು? : ಕೆಲ್ಲಿ ಬೀಸ್ಲಿ ಮೂಲತಃ ಬ್ಲಾಗರ್ (Blogger). ವಯಸ್ಸಿನ ಕಾರಣಕ್ಕೆ ಕೆಲ್ಲಿ ಬೀಸ್ಲಿ ಮುಖದ ಚರ್ಮ (Skin) ಜೋತು ಬೀಳಲು ಶುರುವಾಗಿತ್ತು. ಅದರ ಬಗ್ಗೆ ಅವಳು ತುಂಬಾ ಚಿಂತಿತಳಾಗಿದ್ದಳು. ಮತ್ತೆ ತನ್ನ ಸೌಂದರ್ಯಪಡೆಯಲು ಮುಂದಾದ ಕೆಲ್ಲಿ ಬೀಸ್ಲಿ ಫೇಸ್ ಲಿಫ್ಟ್ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದ್ದಳು.
ದಿನಗೂಲಿ ಮಾಡುತ್ತಿದ್ದಾಕೆ ಈಗ ಡಾಕ್ಟರ್ ಭಾರತಿ
ಸೌಂದರ್ಯವರ್ದಕ ಶಸ್ತ್ರಚಿಕಿತ್ಸೆಗೆ ಖರ್ಚಾಗಿದ್ದು ಎಷ್ಟು?: ಕೆಲ್ಲಿ ಬೀಸ್ಲಿ ತನ್ನ ಸೌಂದರ್ಯ ಚಿಕಿತ್ಸೆಗೆ 11.51 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಈ ಹಣ ಪಡೆಯಲು ಮನೆಯನ್ನು ಮಾರಾಟ ಮಾಡಿದ್ದಾಳೆ. 48 ನೇ ವಯಸ್ಸಿನಲ್ಲಿ ಕೆಲ್ಲಿ ಬೀಸ್ಲಿ ಮುಖದ ಚರ್ಮ ಸುಕ್ಕುಗಟ್ಟಲು ಶುರುವಾಗಿತ್ತು. ಮುಖ ಶುಷ್ಕವಾಗುತ್ತಿತ್ತು. ಚರ್ಮವನ್ನು ಆರೋಗ್ಯಕರವಾಗಿಡಲು ಬೀಸ್ಲಿ ಕಳೆದ 15 ವರ್ಷಗಳಿಂದ ಫಿಲ್ಲರ್ ಮಾಡುತ್ತಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಅದರ ನಂತರ ಕೆಲ್ಲಿ ಬೀಸ್ಲಿ ತನ್ನ ಮನೆಯನ್ನು ಮಾರಿ ಪ್ಲಾಸ್ಟಿಕ್ ಸರ್ಜರಿ ಮಾಡಲು ಯೋಚಿಸಿದ್ದಳು. ಮಹಿಳೆ ಮೂರು ಕೋಣೆಗಳಿರುವ ಮನೆಯನ್ನು ಮಾರಾಟ ಮಾಡಿ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಿದ್ದಾಳೆ.
ಮನೆ ಬದಲು ವ್ಯಾನ್ ವಾಸ : ಹಲವಾರು ಶಸ್ತ್ರಚಿಕಿತ್ಸಕರೊಂದಿಗೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಬೀಸ್ಲಿ ಮಾತನಾಡಿದಳು. ಕೆಲವು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು 41 ಲಕ್ಷ ಮತ್ತು ಕೆಲವರು 49 ಲಕ್ಷ ವೆಚ್ಚವಾಗುತ್ತದೆ ಎಂದಿದ್ದರು. ಆದರೆ, ಮೆಕ್ಸಿಕೋದ ಟಿಜುವಾನಾದಲ್ಲಿ ಕೇವಲ 11.51 ಲಕ್ಷ ರೂಪಾಯಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತದೆ ಎಂಬ ವಿಷ್ಯವನ್ನು ತಿಳಿದ ಬಿಸ್ಲಿ ಅಲ್ಲಿಗೆ ಹೋಗಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ವಾರಗಳ ಕಾಲ ಮೆಕ್ಸಿಕೋದ ಟಿಜುವಾನಾದಲ್ಲಿ ವಿಶ್ರಾಂತಿ ಪಡೆದ ಕೆಲ್ಲಿ ಬಿಸ್ಲಿ ಈಗ ಅಮೆರಿಕಾಕ್ಕೆ ವಾಪಸ್ ಆಗಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಬಿಸ್ಲಿ ವಾಸಕ್ಕೆ ಮನೆಯಿಲ್ಲ. ಹಾಗಾಗಿ ಸದ್ಯ ವ್ಯಾನನ್ನೇ ಮನೆ ಮಾಡಿಕೊಂಡಿರುವ ಕೆಲ್ಲಿ ಬಿಸ್ಲಿ , ಬದಲಾದ ತನ್ನ ಮುಖ ನೋಡಿ ಖುಷಿಯಾಗಿದ್ದಾಳೆ.