ಕಾಲಿನ ಅಂದ ಹೆಚ್ಚಿಸುತ್ತೆ ವೆರೈಟಿ Anklets

By Contributor Asianet  |  First Published Feb 7, 2022, 5:53 PM IST

ಅನೇಕರು ಕಾಲಿನ ಆರೈಕೆ, ಕಾಲಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಆದ್ರೆ ಕಾಲು ಕೂಡ ಇಂಪಾರ್ಟೆಂಟ್. ಹೆಣ್ಣಿನ ಕಾಲ್ಬೆರಳು, ಪಾದ, ಆಕೆ ಧರಿಸುವ ಕಾಲ್ಗೆಜ್ಜೆಗೆ ಮನ ಸೋಲುವವರಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಪಾದದ ಸೌಂದರ್ಯ ಹೆಚ್ಚಿಸಲು ನಾನಾ ಬಗೆಯ ಆಂಕ್ಲೆಟ್ ಲಭ್ಯವಿದೆ.
 


ಸೌಂದರ್ಯ(Beauty)ಕ್ಕೆ ಇನ್ನೊಂದು ಹೆಸರು ಮಹಿಳೆ (Woman). ಎಷ್ಟೇ ಸುಂದರವಾಗಿರಲಿ,ಮಹಿಳೆಯರು ಮೇಕಪ್ (Makeup )ಗೆ ವಿಶೇಷ ಗಮನ ನೀಡ್ತಾರೆ. ಸುಂದರ ಡ್ರೆಸ್ (Dress) ಜೊತೆ ಅದಕ್ಕೆ ಹೊಂದಿಕೆಯಾಗುವ ಮೇಕಪ್ ಮಾಡಿಕೊಳ್ತಾರೆ. ಮನೆಯಲ್ಲಿ ಕೂಡ ಲಘುವಾದ ಮೇಕಪ್ ಮಾಡಿಕೊಳ್ಳುವವರು ಬಹಳಷ್ಟು ಮಂದಿ. ಆಭರಣದ ಬಗ್ಗೆ ಮಹಿಳೆಯರಿಗೆ ವಿಶೇಷ ಒಲವಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಡಿಸೈನ್ ಆಭರಣಗಳು ಬರ್ತಿರುತ್ತವೆ. ಬಳೆ,ಕಿವಿಯೋಲೆ,ಸೊಂಟದ ಪಟ್ಟಿ,ಬಿಂದಿ ಹೀಗೆ ಮಹಿಳೆ ಅಡಿಯಿಂದ ಮುಡಿಯವರೆಗೆ ಅಲಂಕಾರ ಮಾಡಿಕೊಳ್ಳಲು ಅಲಂಕಾರಿಕ ವಸ್ತುಗಳನ್ನು ಲಭ್ಯವಿದೆ. ಇದ್ರಲ್ಲಿ ಕಾಲಿಗೆ ಹಾಕಿಕೊಳ್ಳುವ ಕಾಲ್ಗೆಜ್ಜೆ ಕೂಡ ಒಂದು. ಹಿಂದಿನ ಕಾಲದಲ್ಲಿ ಮಹಿಳೆಯರು ಕಾಲ್ಗೆಜ್ಜೆ ಧರಿಸಲು ಆಸಕ್ತಿ ತೋರುತ್ತಿದ್ದರು. ಆದ್ರೀಗ ಕಾಲ್ಗೆಜ್ಜೆ ಬದಲು ಆಂಕ್ಲೆಟ್‌ (Anklets )ಪ್ರಸಿದ್ಧಿಯಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಆಂಕ್ಲೆಟ್ ಗಳು ಸಿಗ್ತವೆ. ಸುಂದರ ಆಂಕ್ಲೆಟ್ ಕಂಡ ತಕ್ಷಣ ಖರೀದಿ ಮಾಡುವ ಮಹಿಳೆಯರಿದ್ದಾರೆ. ಆದ್ರೆ ಎಲ್ಲ ಮಹಿಳೆಯರಿಗೂ ಎಲ್ಲ ಆಂಕ್ಲೆಟ್ ಆಗಿ ಬರುವುದಿಲ್ಲ. ಕೆಲವೊಂದು ಅವಳ ಕಾಲಿನ ಸೌಂದರ್ಯವನ್ನು ಹಾಳು ಮಾಡ್ಬಹುದು. ಹಾಗಾಗಿ ಪಾದಕ್ಕೆ ಹೊಂದಿಕೆಯಾಗುವ ಆಂಕ್ಲೆಟ್ ಧರಿಸುವುದು ಒಳ್ಳೆಯದು. ಎಷ್ಟು ಬಗೆಯ ಆಂಕ್ಲೆಟ್ ಇವೆ ಎಂಬುದನ್ನು ತಿಳಿದುಕೊಂಡು,ಯಾವುದು ನಿಮಗೆ ಸೂಕ್ತ ಎಂಬುದನ್ನು ನೀವು ಆಯ್ಕೆ ಮಾಡಬಹುದು. ಇಂದು ಕಾಲಿನ ಸೌಂದರ್ಯ ಇಮ್ಮಡಿಗೊಳಿಸುವ ಆಂಕ್ಲೆಟ್ ಗಳ ಬಗ್ಗೆ ಹೇಳ್ತೆವೆ.

ಬಂಗಾರದ ಆಂಕ್ಲೆಟ್ : ಹೆಸರೇ ಹೇಳುವಂತೆ ಇದು ಐಷಾರಾಮಿಯ ಸೂಚಕ. ಚಿನ್ನದ ಆಂಕ್ಲೆಟ್ ನಿಮ್ಮ ಉಡುಪಿಗೆ ಕ್ಲಾಸಿ ಲುಕ್ ನೀಡುತ್ತದೆ.  ಚಿನ್ನದ ಆಂಕ್ಲೆಟ್ ತೆಳುವಾಗಿರುತ್ತದೆ. ಇದು ಯಾವುದೇ ಬಟ್ಟೆಗೆ ಹೊಂದಿಕೊಳ್ಳುತ್ತದೆ. ಕಾಲಿಗೆ ಬಂಗಾರದ ಆಭರಣ ಧರಿಸ್ತೇವೆ ಎನ್ನುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು. 

Latest Videos

undefined

ಬೆಳ್ಳಿ ಆಂಕ್ಲೆಟ್ : ಸಿಲ್ವರ್ ಆಂಕ್ಲೆಟ್‌ಗಳು ಕೂಡ ನಿಮ್ಮ ಕಾಲಿನ ಸೌಂದರ್ಯ ಹೆಚ್ಚಿಸುತ್ತವೆ. ಚಿನ್ನದ ಆಂಕ್ಲೆಟ್ ಗಳನ್ನು ವಿಶೇಷ ಸಂದರ್ಭದಲ್ಲಿ ಧರಿಸಿದ್ರೆ ಬೆಳ್ಳಿ ಆಂಕ್ಲೆಟ್ ಗಳನ್ನು ನೀವು ದಿನನಿತ್ಯ ಬಳಕೆ ಮಾಡಬಹುದು. ಇದು ಕೂಡ ಎಲ್ಲ ಡ್ರೆಸ್ ಗೆ ಹೊಂದಿಕೊಳ್ಳುತ್ತದೆ. ಬೆಳ್ಳಿಯಲ್ಲಿ ಬಗೆ ಬಗೆಯ ಆಂಕ್ಲೆಟ್ ಗಳು ಲಭ್ಯವಿದೆ. ನಿಮ್ಮ ಖಾಲಿಗೆ ಸೂಕ್ತವೆನಿಸುವ ಆಂಕ್ಲೆಟ್ ನೀವು ಖರೀದಿ ಮಾಡಬಹುದು.

ಮಣಿಯ ಆಂಕ್ಲೆಟ್ : ಬೀಡ್ ಆಂಕ್ಲೆಟ್ ಗಳು ನೋಡಿದ ತಕ್ಷಣ ಗಮನ ಸೆಳೆಯುತ್ತವೆ. ಇದು ಕ್ಯಾಶುಯಲ್ ಆಭರಣವಾಗಿದೆ. ಬೇಸಿಗೆಯಲ್ಲಿ ಶಾರ್ಟ್ಸ್ ಮತ್ತು ಸ್ಯಾಂಡಲ್‌ಗಳೊಂದಿಗೆ ಈ ಆಂಕ್ಲೆಟ್  ಧರಿಸಬಹುದು. ದೊಡ್ಡ ಮಣಿ ಹಾಗೂ ಸಣ್ಣ ಮಣಿ ಹೀಗೆ ಬೇರೆ ಬೇರೆ ಆಕಾರದ ಮಣಿಗಳ ಆಂಕ್ಲೆಟ್ ಲಭ್ಯವಿದೆ. ನೀವು ಇವುಗಳನ್ನು ಚಿನ್ನ ಅಥವಾ ಬೆಳ್ಳಿ ಜೊತೆಯೂ ಕೂಡಿಸಬಹುದು.

ಲೆದರ್ : ಲೆದರ್ ಆಂಕ್ಲೆಟ್‌ಗಳು ಕ್ಯಾಶುಯಲ್ ಶೈಲಿಯಾಗಿದ್ದು, ಇದನ್ನು ಶಾರ್ಟ್ಸ್, ಸ್ಕರ್ಟ್‌ಗಳು ಅಥವಾ ಜೀನ್ಸ್ ಗಳೊಂದಿಗೆ ಧರಿಸಬಹುದು.  ಲೆದರ್ ಆಂಕ್ಲೆಟ್ ಯಾವಾಗಲೂ ಫ್ಯಾಶನ್.  

Food In Fashion: ಸ್ಯಾಂಡ್‌ವಿಚ್‌ನ್ನೇ ಚಪ್ಪಲಿ ಮಾಡ್ಕೊಂಡ್ರು !

ಟೋ ರಿಂಗ್ ಆಂಕ್ಲೆಟ್ : ಟೋ ರಿಂಗ್ ಆಂಕ್ಲೆಟ್ ಗಳನ್ನೂ ಆರಾಮವಾಗಿ ಧರಿಸಬಹುದು.ಇದನ್ನು  ಬೆಳ್ಳಿ, ಚಿನ್ನ ಮತ್ತು ಮುತ್ತುಗಳಿಂದ ಕೂಡ ತಯಾರಿಸಲಾಗುತ್ತದೆ. ಇದು ಹಗುರವಾದ ಮತ್ತು ಭಾರವಾದ ಎರಡೂ ವಿಧಗಳಲ್ಲಿ ಲಭ್ಯವಿದೆ.

ರತ್ನದ ಆಂಕ್ಲೆಟ್ : ರತ್ನದ ಆಂಕ್ಲೆಟ್ ಶ್ರೇಷ್ಠ ಆಯ್ಕೆಯಾಗಿದೆ. ನಿಮ್ಮ ಜನ್ಮ ದಿನಾಂಕ ಹಾಗೂ ರಾಶಿ,ನಕ್ಷತ್ರದ ಆಧಾರದ ಮೇಲೆ ಇದ್ರ ಆಯ್ಕೆ ಮಾಡಿಕೊಳ್ಳಬೇಕು.  

MISS PAKISTAN UNIVERSE 2022: ಪಾಕಿಸ್ತಾನದ ಅತಿ ಸುಂದರ ವೈದ್ಯೆ ಈಕೆ

ಕಪ್ಪೆಚಿಪ್ಪಿನ ಆಂಕ್ಲೆಟ್ : ಕಪ್ಪೆ ಚಿಪ್ಪಿನಿಂದ ಅನೇಕ ಆಭರಣಗಳನ್ನು ಸಿದ್ಧಪಡಿಸಲಾಗುತ್ತದೆ. ಅದ್ರಲ್ಲಿ ಆಂಕ್ಲೆಟ್ ಕೂಡ ಸೇರಿದೆ. ಇದು ನಿಮ್ಮ ಕಾಲಿಗೆ ವಿಭಿನ್ನ ಲುಕ್ ನೀಡುತ್ತದೆ.ಚಿಪ್ಪುಗಳ ಗಾತ್ರ ಹಾಗೂ ಅವುಗಳನ್ನು ಯಾವುದರ ಜೊತೆ ನೆಯ್ಯಲಾಗಿದೆ ಎಂಬುದು ಇಲ್ಲಿ ಮಹತ್ವ ಪಡೆಯುತ್ತದೆ.

ಕಪ್ಪು ದಾರದ ಆಂಕ್ಲೆಟ್ : ಅನೇಕರು ಕಪ್ಪು ದಾರದ ಆಂಕ್ಲೆಟ್ ಬಳಸುತ್ತಾರೆ. ಕಪ್ಪು ದಾರವನ್ನು ನೇಯ್ಗೆ ಮಾಡಲಾಗುತ್ತದೆ. ಇದು ಎಲ್ಲ ರೀತಿಯ ಡ್ರೆಸ್ ಗೆ ಹೊಂದಿಕೆಯಾಗುತ್ತದೆ.

click me!