Face Glowing Tips: ಮುಖ ಫಳ ಫಳ ಹೊಳೀಬೇಕಾ? ಸಿಂಪಲ್ ಸ್ಟೀಮಿಂಗ್ ಟಿಪ್ ಇದು

Published : Jul 05, 2025, 04:32 PM IST
steam

ಸಾರಾಂಶ

ಸೌಂದರ್ಯ ವೃದ್ಧಿಗೆ ಮಹಿಳೆಯರು ಚರ್ಮದ ಆರೈಕೆಗೆ ಹೆಚ್ಚಿನ ಗಮನ ನೀಡುತ್ತಾರೆ. ಮನೆಯಲ್ಲಿಯೇ ಸ್ಟೀಮಿಂಗ್ ತೆರಪಿ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಿಸಬಹುದು. ಮೊಡವೆ, ಕಪ್ಪು ಕಲೆಗಳಂತಹ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸ್ಟೀಮಿಂಗ್ ತೆರಪಿ ಸಹಕಾರಿ.

ಮಹಿಳೆಯರು ಅಲಂಕಾರ ಪ್ರಿಯರು. ಅಂದ ಚಂದವಾಗಿ ಅಲಂಕರಿಸಿಕೊಂಡ ಅಂಗನೆಯನ್ನು ಕಣ್ ತುಂಬಿಕೊಳ್ಳುವುದೇ ಒಂದು ಸೊಗಸು. ಸೌಂದರ್ಯ(Beauty) ಶೃಂಗಾರ ಎಂಬುದು ಪ್ರಕೃತಿ ಹೆಣ್ಣಿಗೆ ನೀಡಿರುವ ವರ ಹಾಗೆ ಪ್ರತಿಯೊಬ್ಬ ಮಹಿಳೆಯು ತಾನು ಸುಂದರವಾಗಿ ರೂಪವತಿಯಾಗಿ ಕಾಣಬೇಕೆಂದು ಬಯಸುತ್ತಾಳೆ. ಸೌಂದರ್ಯ ಕೆಲವರಿಗೆ ದೈವದತ್ತ ಕೊಡುಗೆ ಆದರೆ ಮತ್ತೆ ಕೆಲವರು ಅಲಂಕಾರಿಕ ಪರಿಕರಗಳಿಂದ ಸಾಧಾರಣ ಚೆಲುವಿನಲ್ಲೂ ರೂಪವತಿಯಾಗಿ ಕಂಗೊಳಿಸುತ್ತಾರೆ.

ಸೌಂದರ್ಯವತಿಯಾಗಿ ಕಂಗೊಳಿಸ ಬಯಸುವವರು ಮೊದಲು ತಮ್ಮ ತ್ವಚೆಯ ಆರೋಗ್ಯ ಮತ್ತು ಆರೋಗ್ಯಕ್ಕೆ ವಿಶೇಷ ಗಮನ ನೀಡುತ್ತಾರೆ. ಉತ್ತಮತ್ವಚೆಯ ಆರೋಗ್ಯಕರ ಚರ್ಮ ಸೌಂದರ್ಯವನ್ನ ಪ್ರತಿನಿಧಿಸುವುದರಿಂದ ಮೊದಲು ತ್ವಚೆಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ ಇಲ್ಲದಿದ್ದರೆ ಚರ್ಮ ಸಂಬಂಧಿ ಸಮಸ್ಯೆಗಳು ನಿಮ್ಮ ಸೌಂದರ್ಯಕ್ಕೆ ಕುಂದು ತರಬಹುದು. ಚರ್ಮದ ಆರೋಗ್ಯದ (Health) ಹಿತ ದೃಷ್ಟಿಯಿಂದ ಇಲ್ಲಿ ಪ್ರಸ್ತಾಪಿಸಲಾಗಿರುವ ಈ ಪ್ರಯೋಗ ಹೆಚ್ಚು ಪ್ರಯೋಗಕ್ಕೆ ಬರುತ್ತದೆ ಎಂದರೂ ಅಚ್ಚರಿ ಏನಿಲ್ಲ ಖರ್ಚು ವೆಚ್ಚಗಳಿಲ್ಲದೆ ಮನೆಯಲ್ಲಿಯೇ ಮಾಡಿಕೊಳ್ಳಬಹುದುಈ ವಿಧಾನ ಎಂದರೆ ಸ್ಟೀಮಿಂಗ್ ತೆರಪಿ (Steam Therapy )

ಕಳೆಗುಂದಿದ ಚರ್ಮಕ್ಕೆ ತಾಜಾತನ ನೀಡಲು ಬ್ಯೂಟಿ ಪಾರ್ಲರ್ ಸ್ಟೀಮಿಂಗ್ ತೆರ(Steam Therapy )ಜನಪ್ರಿಯವಾಗಿದೆ. ಉತ್ತಮ ತ್ವಚೆ ಪಡೆಯಲು ಬ್ಯೂಟಿ ಪಾರ್ಲರ್ಗಳಿಗೆ ತೆರಳ ಬೇಕಂತೆನಿಲ್ಲ ಮನೆಯಲ್ಲಿಯೇ ಅನುಸರಿಸಿ ತ್ವಚೆಗೆ ಕಾಂತಿ ನೀಡಬಹುದು ಈ ತೆರಪಿಯಿಂದ ಆಗುವ ಅನುಕೂಲಗಳೇನು ಎಂಬುದರ ಕುರಿತು ಉಪಯುಕ್ತ ಟಿಪ್ಸ್ ಇಲ್ಲಿದೆ ಮನೆಯಲ್ಲಿಯೇ ಸ್ಟೀಮಿಂಗ್ ಪಡೆದು ತ್ವಚೆ ಆರೈಕೆ ಮಾಡಿಕೊಳ್ಳಬಹುದು. ಚರ್ಮದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಟೀಮಿಂಗ್ ತೆರಪಿ ಅನುಸರಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ.

ಮೊಡವೆ( Pimpal)
ಮುಖ್ಯವಾಗಿ ಮೊಡವೆ ಮುಖದ ಮೇಲಿನ ಮೊಡವೆ ಸಾಮಾನ್ಯ ಸಮಸ್ಯೆಯಾಗಿದೆ. ಮುಖದ ಮೇಲೆ ಮೊಡವೆಗಳು ಎದ್ದು ಮುಖದ ಅಂದವನ್ನೆ ಕೆಡಿಸಬಹುದು ಚರ್ಮದ ರಂದ್ರಗಳು ಮುಚ್ಚಿಕೊಳ್ಳುವ ಕಾರಣದಿಂದ ಮುಖದ ಮೇಲೆ ಮೊಡವೆಗಳಾಗುತ್ತವೆ. ಮೊಡವೆಗಳು ನಿಮ್ಮ ಮುಖದ ಸೌಂದರ್ಯವನ್ನು ಕುಂದಿಸಬಹುದು. ಇಂಥ ಸಂದರ್ಭಗಳಲ್ಲಿ ಸ್ಟೀಮಿಂಗ್ ತೆರಪಿ ಚರ್ಮದ ರಕ್ಷಣಾ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.ಮುಖಕ್ಕೆ ಬಿಸಿ ನೀರಿನ ಹಬೆ ತೊರೆದಾಗ ಚರ್ಮದ ರಂದ್ರಗಳು ತೆರೆದು ಮುಖದ ಕೊಳೆಯಲ್ಲ ಹೊಗೆ ಮುಖಲ್ಲೆ ಹೊಳಪನ್ನ ನೀಡುತ್ತದೆ.

ಕಪ್ಪು ಕಲೆಗಳಿಗೆ (Blackhead)
ಕಪ್ಪು ಕಲೆಗಳಿಗೆ ಇದು ಮದ್ದು. ದಿನದಲ್ಲಿ ಹೆಚ್ಚಿನ ಸಮಯ ಮಹಿಳೆಯರು ಹೊರಗಿರುವ ಕಾರಣ ಮುಖದಲ್ಲಿ ಬ್ಲಾಕ್ಹೆಡ್ (Blackhead) ಕಲೆಗಳು ಸಾಮಾನ್ಯ ಧೂಳು ಹೊಗೆ ಬಿಸಿಲು ಚರ್ಮಕ್ಕೆ ಹಾನಿ ಮಾಡುವುದರಿಂದ ಮುಖ

ಕಪ್ಪಾಗುತ್ತದೆ. ಸ್ಟೀಮಿಂಗ್ ವಾರದಲ್ಲಿ ಎರಡರಿಂದ ಮೂರು ಬಾರಿ ತೆಗೆದುಕೊಳ್ಳುವುದರಿಂದ ಮುಖದಲ್ಲಿ ಕಪ್ಪು ಕಲೆಗಳು ಕಡಿಮೆಯಾಗಿ ಹೊಳೆಯಲು ಸಹಾಯ ಮಾಡುತ್ತದೆ.

ಡೆಡ್ ಸೆಲ್ಸ್ (Dead cells)
ಡೆಡ್ ಸೆಲ್ಸ್ ನಿವಾರಣೆಗೆ ಬಿಸಿನೀರಿನಿಂದ ಪಡೆಯುವ ಹಬೆ ಸ್ಕಿನ್ (Skin) ಗೆ ಫೇಶಿಯಲ್ನಂತೆ ಕೆಲಸ ಮಾಡಲಿದೆ. ಚರ್ಮದಲ್ಲಿನ ನಿರ್ಜೀವಕೋಶಗಳನ್ನು ನಿವಾರಣೆ ಮಾಡುವುದಲ್ಲದೆ ವೈಟ್ ಹೆಡ್ ತಡೆಯಲು ಹಾಗೇ ಚರ್ಮದ ಆರೈಕೆಗಾಗಿ ಇದು ಸಹಾಯ ಮಾಡುತ್ತದೆ. ಮನೆಯಲ್ಲಿ ಯಾವುದೇ ಖರ್ಚು ವೆಚ್ಚಗಳಿಲ್ಲದೆ ಈ ಕ್ರಮ ಪಾಲಿಸಿ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು.

ಆಂಟಿ ಏಜಿಂಗ್ (Anti Aging)
ವಯಸ್ಸು ಹೆಚ್ಚಾದಂತೆ ಅದರ ಲಕ್ಷಣಗಳು ಮುಖದಲ್ಲಿ ಕಾಣಿಸಿಕೊಳ್ಳುತ್ತವೆ ಮುಖದಲ್ಲಿ ನೆರಿಗೆಗಳನ್ನು ಸುಕ್ಕುಗಟ್ಟುವುದನ್ನು ಮುಂದೂಡಲು ಸ್ಟೀಮಿಂಗ್ ತೆರಪಿಯನ್ನು ಅನುಸರಿಸಬಹುದು ಸ್ಕಿನ್ ಟ್ಯಾಕ್ಸಿನ್(Skin tanning )ಬಿಡುಗಡೆ ನೆರವಾಗಲಿದೆ.ಮುಖದಲ್ಲಿ ಸುಕ್ಕು ಗಟ್ಟುವುದನ್ನು ಸಹ ಇದು ನಿಯಂತ್ರಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!