ಹಾಡುಗಾರ್ತಿ ಉಷಾ ಉತ್ತುಪ್ ಸೀರೆ ಕಲೆಕ್ಷನ್ ಸಖತ್ ಆಗಿದೆ. ಸಾಕಷ್ಟು ವೆರೈಟಿ ಸೀರೆಗಳನ್ನು ಹೊಂದಿರುವ ಉಷಾ, ಪ್ರತಿಯೊಂದು ಸೀರೆ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹಾಡಿನಷ್ಟೇ ತಮ್ಮ ಸೀರೆಗಳನ್ನು ಅವರು ಇಷ್ಟಪಡ್ತಾರೆ.
ಉಷಾ ಉತ್ತುಪ್ ಅಯ್ಯರ್, ಹೆಸರು ಹೇಳ್ತಿದ್ದಂತೆ ನಿಮಗೆ ಅವರ ದೊಡ್ಡ ಬಿಂದಿ, ಕಲರ್ ಕಲರ್ ಸಾರಿ ನೆನಪಾಗದೆ ಇರೋದಿಲ್ಲ. ಪಾಪ್ ಹಾಡಿನ ಜೊತೆಗೆ ಸಿನಿಮಾ ಹಾಡುಗಳಿಗೆ ಧ್ವನಿ ನೀಡಿರುವ ಉಷಾ ಉತ್ತುಪ್ ಅನೇಕ ಯುವ ಗಾಯಕರಿಗೆ ರೋಲ್ ಮಾಡೆಲ್ ಆಗಿದ್ದಾರೆ. ತಮ್ಮ ವೃತ್ತಿಯಲ್ಲಿ ಎಷ್ಟೇ ಎತ್ತರಕ್ಕೆ ಹೋದ್ರೂ ತಮ್ಮ ಸಂಪ್ರದಾಯ, ಭಾರತದ ಸಂಸ್ಕೃತಿಯನ್ನು ಬಿಟ್ಟಿಲ್ಲ ಉಷಾ ಉತ್ತುಪ್.
ಮಧ್ಯಮ ವರ್ಗದಿಂದ ಬಂದ ಉಷಾ ಉತ್ತುಪ್ (Usha Uthup) , ವೆರೈಟಿ ಬಳೆಗಳು, ಬಿಂದಿಗಳು, ಹೂಗಳ ಜೊತೆ ಸೀರೆ (Saree) ಯ ಉತ್ತಮ ಕಲೆಕ್ಷನ್ ಹೊಂದಿದ್ದಾರೆ. ಆರಂಭದಲ್ಲಿ ಸೀರೆ ಖರೀದಿಗೆ ಹಣವಿಲ್ಲದೆ ಹೋದ್ರೂ ಉಷಾ ಉತ್ತುಪ್ ಸೀರೆ ಗೀಳು ಮಾತ್ರ ಒಂದು ಪಟ್ಟು ಹೆಚ್ಚೇ ಇತ್ತು. ಮದ್ರಾಸ್ ನಲ್ಲಿ 1969 ರಲ್ಲಿ ಮೊದಲ ಸಂಬಳವನ್ನು ಸೀರೆ ರೂಪದಲ್ಲಿ ಪಡೆದ ಉಷಾ ಉತ್ತುಪ್ ಸೀರೆ ಪಯಣ ಅಲ್ಲಿಂದ ಶುರುವಾಯ್ತು. ನಿಧಾನವಾಗಿ ಉಷಾ ಉತ್ತುಪ್ ವಾರ್ಡ್ರೋಬ್ ನಲ್ಲಿ ಸೀರೆಗಳು ಬಂದು ಸೇರಲು ಶುರುವಾದ್ವು. ಉಷಾ ಉತ್ತುಪ್ ಬಳಿ ಇರುವ ಪ್ರತಿ ಸಾರಿಯೂ ತನ್ನದೇ ವಿಶೇಷತೆ ಹೊಂದಿದೆ. ಹಾಗೆ ಒಂದೊಂದು ಸಾರಿ ಹಿಂದೆ ಒಂದೊಂದು ಕಥೆ ಇದೆ.
ಬ್ಯೂಟಿ ಟಿಪ್ಸ್ ಹೇಳಿ, ಪತಿಯೊಂದಿಗೆ ಅಡುಗೆ ಮಾಡಿದ ಅದಿತಿ ಪ್ರಭುದೇವ್!
ಅಮ್ಮ ಕೊಟ್ಟ ಸಾರಿ ಮರೆಯಲು ಸಾಧ್ಯವಿಲ್ಲ : ಉಷಾ ಉತ್ತುಪ್ ಅವರಿಗೆ ಅವರ ಪ್ರೀತಿಯ ಅಮ್ಮನಿಂದ ಸಾಕಷ್ಟು ಸೀರೆಗಳು ಸಿಕ್ಕಿವೆ. ಅದ್ರಲ್ಲೊಂದು ಕಾಂಜಿವರಂ (Kanjivaram Saree) ನ ಕೇಸರಿ ಬಣ್ಣದ ಸಿಲ್ಕ್ ಚೆಕ್ಸ್ ಸೀರೆ. ಇದು ದಕ್ಷಿಣ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೀರೆ ಎನ್ನುತ್ತಾರೆ ಉಷಾ ಉತ್ತುಪ್. ಚೆಕ್ಸ್, ಸ್ಟ್ರೈಟ್ಸ್ ಹಾಗೂ ಡಾಟ್ಸ್ ಸೀರೆಗಳು ಸದಾ ಫ್ಯಾಷನ್ ನಲ್ಲಿರುತ್ತವೆ ಎನ್ನುವ ಉಷಾ ಉತ್ತುಪ್ ಅಮ್ಮನಿಗೆ ಧನ್ಯವಾದ ಹೇಳ್ತಾರೆ.
ದುಬಾರಿ ಸೀರೆ ಖರೀದಿ ಮಾಡ್ತಾರೆ ಮಗಳು : ಉಷಾ ಉತ್ತುಪ್ ಮಗಳು ದುಬಾರಿ ಸೀರೆಗಳನ್ನು ಆಯ್ಕೆ ಮಾಡ್ತಾರಂತೆ. ಕಾಂಜಿವರಂ ಪೂಜಾ ಬಾರ್ಡರ್ ಜೊತೆ ಗೋಲ್ಡ್ ಹಂಸಾ ಮೋಟಿಫ್ ಸೀರೆ ತೋರಿಸಿದ ಉಷಾ ಉತ್ತುಪ್, ಇದು ಮಗಳ ಅಚ್ಚುಮೆಚ್ಚಿನ ಸೀರೆ ಎನ್ನುತ್ತಾರೆ.
ತಿಳಿನೀಲಿ ಸ್ಯಾರಿಯಲ್ಲಿ ಮಿಂಚಿದ ಆಲಿಯಾ, ಸೀರೆಯುಟ್ಟ ನವಿಲು ನೀನು ಎಂದ ಫ್ಯಾನ್ಸ್
ಕಪ್ಪು ಸಾರಿ ನೋಡಿ ಕಣ್ಣು ಬಿಟ್ಟಿದ್ದ ಅತ್ತೆ : ಉಷಾ ಉತ್ತುಪ್ ಅವರಿಗೆ ಕಪ್ಪು ಬಣ್ಣದ ಸೀರೆ ಮೇಲೆ ವಿಶೇಷ ಪ್ರೀತಿ. ಆದ್ರೆ ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಕಪ್ಪು ಸೀರೆಗೆ ಹೆಚ್ಚು ಆದ್ಯತೆ ನೀಡೋದಿಲ್ಲ. ಕೇರಳಲ್ಲಿ ಬಿಳಿ ಬಣ್ಣದ ಸೀರೆಯನ್ನು ಹೆಚ್ಚು ಬಳಸ್ತಾರೆ. ಉಷಾ ಉತ್ತುಪ್ ಕಪ್ಪು ಸೀರೆ ಉಟ್ಟಾಗ ಅವರ ಅತ್ತೆ ಕೋಪ ವ್ಯಕ್ತಪಡಿಸಿದ್ದರಂತೆ. ಕೇರಳ ಕಾಂಜಿವರಂ ಬ್ಲಾಕ್ ಸಿಲ್ಕ್ ಸೀರೆ ತೋರಿಸಿದ ಉಷಾ ಉತ್ತುಪ್, ಇದು ನನ್ನ ಫೆವರೆಟ್ ಸಾರಿ ಎನ್ನುತ್ತಾರೆ. ಕಪ್ಪು ನನ್ನಿಷ್ಟದ ಬಣ್ಣ ಎಂದಿದ್ದಾರೆ.
ಅಮಿತಾಬಚ್ಚನ್ ನೆನಪು ಮಾಡುತ್ತೆ ಈ ಸೀರೆ : ಗೋಲ್ಡನ್ ಜರಿ ಬಾರ್ಡರ್ ಹೊಂದಿರುವ ಕಾಂಜಿವರಂ ಗ್ರೀನ್ ಸೀರೆ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನೆನಪು ತರಿಸುತ್ತಂತೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಉಷಾ ಉತ್ತುಪ್ ಈ ಸೀರೆ ಉಟ್ಟು ಹೋಗಿದ್ದರಂತೆ. ಈ ಸಾರಿ ಕೂಡ ಅಮಿತಾಬ್ ಬಚ್ಚನ್ ರಂತೆ ಅಸಮಾನ್ಯ ಹಾಗೂ ಟ್ರೆಡಿಷನಲ್ ಎಂದು ಉಷಾ ಉತ್ತುಪ್ ಹೇಳಿದ್ದಾರೆ.
ಗೋಲ್ಡ್ ಎಲಿಫಂಟ್ ಮೊಟೀಫ್ ಪಿಂಕ್ ಮತ್ತು ಪರ್ಪಲ್ ಬಣ್ಣದ ಕಾಂಜಿವರಂ ಸೀರೆಯನ್ನು ಉಷಾ ಉತ್ತುಪ್ ಗೆ ನಟ ಕಮಲ್ ಹಾಸನ್ ಗಿಫ್ಟ್ ಆಗಿ ನೀಡಿದ್ದಾರೆ. ನವೆಂಬರ್ 7ರಂದು ಕಮಲ್ ಹುಟ್ಟುಹಬ್ಬವಾದ್ರೆ ನವೆಂಬರ್ 8ರಂದು ಉಷಾ ಹುಟ್ಟುಹಬ್ಬ. ಅವರು ಈ ಸೀರೆಯನ್ನು ಕೋರಿಯರ್ ಮಾಡಿ ಸರ್ಪ್ರೈಸ್ ನೀಡಿದ್ದರಂತೆ. ಅಸ್ಸಾಂನಿಂದ ಬಂದ ಸೀರೆ, ಕೋಲ್ಕತ್ತಾದಲ್ಲಿ ಪೂಜೆಗೆ ಬಳಸುವ ಸೀರೆ ಸೇರಿದಂತೆ ಉಷಾ ಉತ್ತುಪ್ ಬಳಿ 600ಕ್ಕಿಂತಲೂ ಹೆಚ್ಚು ಸೀರೆಗಳಿವೆ. ಅದ್ರಲ್ಲಿ ಬಹುತೇಕ ಎಲ್ಲವೂ ಕಾಂಜಿವರಂ ಸೀರೆ ಅನ್ನೋದು ವಿಶೇಷ. ಬರೀ ವೆರೈಟಿ ಸೀರೆ ಮಾತ್ರವಲ್ಲ ಉಷಾ ಉತ್ತುಪ್ ಬಳಿ ಎಲ್ಲ ಸೀರೆಗೆ ಮ್ಯಾಚ್ ಆಗುವ ಶೂ ಕೂಡ ಇದೆ.