'ಮಿಸ್ ದಿವಾ ಯೂನಿವರ್ಸ್​' ರನ್ನರ್​ ಅಪ್​ ಕಿರೀಟ ಪಡೆದ ಕನ್ನಡತಿ ತ್ರಿಶಾ ಶೆಟ್ಟಿ: ಯಾರೀಕೆ?

By Suvarna News  |  First Published Aug 28, 2023, 3:00 PM IST

ಮುಂಬೈನಲ್ಲಿ ನಡೆದ ನಡೆದ  ‘ಮಿಸ್ ದಿವಾ ಯೂನಿವರ್ಸ್​ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ   ರನ್ನರ್ ಅಪ್ ಕಿರೀಟಕ್ಕೆ ಭಾಜನರಾಗಿದ್ದಾರೆ. ಯಾರೀಕೆ?
 


ಮುಂಬೈನಲ್ಲಿ ನಡೆದ ನಡೆದ  ‘ಮಿಸ್ ದಿವಾ ಯೂನಿವರ್ಸ್​ 2023’ ಸ್ಪರ್ಧೆಯಲ್ಲಿ ಕರ್ನಾಟಕದ ತ್ರಿಶಾ ಶೆಟ್ಟಿ ‘ಮಿಸ್ ದಿವಾ   ರನ್ನರ್ ಅಪ್ ಕಿರೀಟಕ್ಕೆ ಭಾಜನರಾಗಿದ್ದಾರೆ. ಕಳೆದ ವರ್ಷ ಮಂಗಳೂರು ಮೂಲದ ಸುಂದರಿ ದಿವಿತಾ ರೈ ಅವರು  (Diwita Rai) ಅವರು  ‘ಮಿಸ್ ದಿವಾ ಯೂನಿವರ್ಸ್​ 2022’ ಆಗಿ ಹೊರಹೊಮ್ಮಿದ್ದರು. ಈ ಬಾರಿ ರನ್ನರ್​ ಅಪ್​  ಸ್ಥಾನಕ್ಕೆ ಕರ್ನಾಟಕ ತೃಪ್ತಿಪಟ್ಟುಕೊಂಡಿದೆ.  ‘ಮಿಸ್ ದಿವಾ ಯೂನಿವರ್ಸ್​ 2023’ ಕಿರೀಟ ಚಂಡೀಗಢದ ಬೆಡಗಿ  ಶ್ವೇತಾ ಶಾರದಾ (Shwetha Sharda) ಅವರ ಪಾಲಾಗಿದೆ. ಕಳೆದ ವರ್ಷದ ವಿಜೇತೆ ದಿವಿತಾ ರೈ ಅವರು ಈ ಕಿರೀಟವನ್ನು ಈ ಸಾಲಿನ ವಿಜೇತೆ ಶ್ವೇತಾ ಶಾರದಾ ಅವರಿಗೆ ತೊಡಿಸಿದರು. 

 72ನೇ ‘ಮಿಸ್ ಯೂನಿವರ್ಸ್’ ಶೀಘ್ರದಲ್ಲೇ ನಡೆಯಲಿದ್ದು, ಶ್ವೇತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ವಿಜೇತೆ ಶ್ವೇತಾ ಶಾರದಾ ಅವರ ಬಗ್ಗೆ ಹೇಳುವುದಾದರೆ ಅವರಿಗೆ 22 ವರ್ಷ ವಯಸ್ಸು.  ಸಿಂಗಲ್‌ ಮದರ್‌ (Single mother) ಮಗಳಾದ ಶ್ವೇತಾ ಶಾರದಾ ಅವರು ತಮ್ಮ ಕನಸು ಈಡೇರಿಸಿಕೊಳ್ಳುವ ಸಲುವಾಗಿ ತನ್ನ 16ನೇ ವಯಸ್ಸಿನಲ್ಲಿ ಮುಂಬೈಗೆ ಆಗಮಿಸಿದ್ದರು. ತಾಯಿಯ ಆರೈಕೆಯಲ್ಲಿ ಬೆಳೆದವರು. ಅವರ ಮೇಲೆ ತಾಯಿಯ ಪ್ರಭಾವ ಸಾಕಷ್ಟಿದೆ.   ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್​’, ‘ಡ್ಯಾನ್ಸ್ ದೀವಾನೆ ಮತ್ತು ಡ್ಯಾನ್ಸ್’ ಹಾಗೂ ‘ಡ್ಯಾನ್ಸ್ +’ ರಿಯಾಲಿಟಿ ಶೋಗಳಲ್ಲಿ ಶ್ವೇತಾ ಭಾಗವಹಿಸಿದ್ದರು. ಈ ಮೂಲಕ ತಾವು ಅದ್ಭುತ ಡ್ಯಾನ್ಸರ್ ಎಂಬುದನ್ನು ಸಾಬೀತು ಮಾಡಿಕೊಂಡಿದ್ದಾರೆ. ಅವರು ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ.

Latest Videos

undefined

ಇನ್ನು ತ್ರಿಶಾ ಶೆಟ್ಟಿ ಅವರ ಕುರಿತು ಹೇಳುವುದಾದರೆ,  22 ನೇ ವಯಸ್ಸಿನಲ್ಲಿ, ತ್ರಿಶಾ ಮನೋವಿಜ್ಞಾನದಲ್ಲಿ ಪದವೀಧರರಾಗಿ, ಮಾಡೆಲ್ ಮತ್ತು ನಟರಾಗಿ (Acting) ನಿಂತಿದ್ದಾರೆ. ಈಕೆ ನೃತ್ಯಗಾತಿ.  ಭರತನಾಟ್ಯ, ಕಥಕ್ ಮತ್ತು ಬೆಲ್ಲಿ ಡ್ಯಾನ್ಸ್‌ನ ಆಕರ್ಷಕ ಲಯಗಳನ್ನು ಕರಗತ ಮಾಡಿಕೊಂಡಿದ್ದಾರೆ.   ಫೋಟೋಗಳು ಮತ್ತು ವಿಡಿಯೋಗಳ  ಮೂಲಕ  ಮೋಡಿಮಾಡುವ ನೃತ್ಯ ಪ್ರದರ್ಶನಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಮನೋವಿಜ್ಞಾನದ ಅಧ್ಯಯನ ಮಾಡಿರುವ ತ್ರಿಶಾ ಅವರು,  ವಿಕಲಾಂಗ ಮಕ್ಕಳಿಗೆ ಸೃಜನಾತ್ಮಕ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

Miss Diva Universe 2022 ಕಿರೀಟ ಮುಡಿಗೇರಿಸಿಕೊಂಡ ಕರ್ನಾಟಕ ಬ್ಯೂಟಿ ದಿವಿತಾ ರೈ

ಮಿಸ್ ದಿವಾ ಯೂನಿವರ್ಸ್ 2023 ಹಂತವನ್ನು ಅಲಂಕರಿಸುವ ಮೊದಲು, ತ್ರಿಶಾ ಈ ಹಿಂದೆ ಫೆಮಿನಾ ಮಿಸ್ ಗೋವಾ 2020 ರಲ್ಲಿ ಭಾಗವಹಿಸಿದ್ದರು. ಅವರ ಮಾಡೆಲಿಂಗ್ (Modeling) ಪ್ರಯಾಣವು ಅವರ ಜೀವನದ ಗಣನೀಯ ಭಾಗವಾಗಿದೆ, ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ಮತ್ತು ಟೈಮ್ಸ್ ಫ್ಯಾಷನ್ ವೀಕ್‌ನಂತಹ ಪ್ರಮುಖ ಘಟನೆಗಳು ಸೇರಿದಂತೆ ಹಲವಾರು ಫ್ಯಾಷನ್ ಷೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಮಿಸ್ ದಿವಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅವಿಭಾಜ್ಯ ವಿಭಾಗವಾಗಿದೆ. ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಿಗೆ ಭಾರತದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಇದು ಪ್ರಾಥಮಿಕವಾಗಿ ಹೊಂದಿದೆ. 

 ಇನ್ನು ಕಳೆದ ವರ್ಷದ ವಿನ್ನರ್​ ದಿವಿತಾ ರೈ (Divita Rai) ಅವರ ಬಗ್ಗೆ ಹೇಳುವುದಾದರೆ ಇವರ ತಂದೆ ಸರ್ಕಾರಿ ನೌಕರಿಯಲ್ಲಿ ಇದ್ದುದರಿಂದ ದೇಶದ ವಿವಿಧ ನಗರಗಳಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಾರೆ. 23 ವರ್ಷದ ಈಕೆ ಆರ್ಕಿಟೆಕ್ಟ್‌ ಓದಿದ್ದು, ಮಾಡೆಲ್‌ ವೃತ್ತಿಯಲ್ಲಿ ಮುನ್ನಡೆದಿದ್ದಾರೆ, ಇದರೊಂದಿಗೆ ಅವರು ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಪೈಂಟಿಂಗ್‌ ನಲ್ಲಿ ಆಸಕ್ತಿ ಇದ್ದು, ಸಂಗೀತ ಕೇಳುವುದು ಪುಸ್ತಕ ಓದುವುದು ಇವರ ಹವ್ಯಾಸವಾಗಿದೆ. ಇದರೊಂದಿಗೆ ಅವರು 71ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 

 

 
 
 
 
 
 
 
 
 
 
 
 
 
 
 

A post shared by Miss Diva (@missdivaorg)

click me!