ದೇಹದಿಂದ ಬೆವರು ವಾಸನೆ ಬರಬಾರದು, ಇಡೀ ದಿನ ಫ್ರೆಶ್ ಆಗಿರ್ಬೇಕು ಎನ್ನುವ ಕಾರಣಕ್ಕೆ ಬಹುತೇಕರು ಡಿಯೋ ಬಳಸ್ತಾರೆ. ಆದ್ರೆ ಕೆಲ ತಪ್ಪಿನಿಂದಾಗಿ ಡಿಯೋ ಅಡ್ಡ ಪರಿಣಾಮ ಚರ್ಮ ಹಾಗೂ ಆರೋಗ್ಯದ ಮೇಲಾಗುತ್ತದೆ. ಹಾಗಾಗಿ ಡಿಯೋ ಖರೀದಿ ಮಾಡುವ ವೇಳೆ ಕೆಲ ವಿಷ್ಯವನ್ನು ಎಂದೂ ಮರೆಯಬಾರದು.
ಸೌಂದರ್ಯದ ವಿಷ್ಯ ಬಂದಾಗ ಮಹಿಳೆಯರು ಹೆಚ್ಚು ಜಾಗೃತರಾಗ್ತಾರೆ. ತಮ್ಮ ಸೌಂದರ್ಯದಲ್ಲಿ ಯಾವುದೇ ರಾಜಿಯನ್ನು ಅವರು ಬಯಸೋದಿಲ್ಲ. ಹೊಸ ಹೊಸ ಫ್ಯಾಷನ್ ಟ್ರೈ ಮಾಡುವ ಮಹಿಳೆಯರು ಹೊಸದಾಗಿ ಮಾರುಕಟ್ಟೆಗೆ ಬಂದ ಎಲ್ಲ ಸೌಂದರ್ಯ ವರ್ದಕಗಳನ್ನೂ ಬಳಸಿ ನೋಡ್ತಾರೆ. ಮುಖ ಚೆನ್ನಾಗಿದ್ದು, ಒಳ್ಳೆ ಡ್ರೆಸ್ ಧರಿಸಿದಾಗ ದೇಹದಿಂದ ಬೆವರು ವಾಸನೆ ಬರ್ತಿದ್ದರೆ ಮುಜುಗರವಾಗೋದು ಸಹಜ. ಬೆವರು ವಾಸನೆ ಬರದಂತೆ ತಡೆಯಲು ನಾನಾ ಪ್ರಯತ್ನವನ್ನು ಎಲ್ಲರೂ ಮಾಡ್ತಾರೆ. ಬಹುತೇಕರು ಡಿಯೋಡರೆಂಟ್ ಬಳಕೆ ಮಾಡ್ತಾರೆ. ಸುಗಂಧ (Fragrance) ಭರಿತ ಉತ್ಪನ್ನ ಮಹಿಳೆಯರಿಗೆ ಬಹಳ ಇಷ್ಟ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಡಿಯೋಡ್ರೆಂಟ್ (Deodorant) ಲಭ್ಯವಿದೆ. ಅದನ್ನು ಖರೀದಿಸಿ, ಪ್ರಯೋಗ ಮಾಡಲು ಮಹಿಳೆಯರು ಆಸಕ್ತಿ ಹೊಂದಿರುತ್ತಾರೆ. ಆದ್ರೆ ಡಿಯೋಡರೆಂಟ್ ಖರೀದಿ (Purchase) ಸುವಾಗ ಕೆಲವು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲವೆಂದ್ರೆ ಕೆಲವೊಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಡಿಯೋಡ್ರೆಂಟ್ ಖರೀದಿ ಮಾಡುವಾಗ ಯಾವೆಲ್ಲ ವಿಷ್ಯ ನೆನಪಿನಲ್ಲಿರಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಡಿಯೋಡ್ರೆಂಟ್ ಖರೀದಿ ವೇಳೆ ನೆನಪಿರಲಿ ಈ ಸಂಗತಿ :
undefined
ಆಲ್ಕೋಹಾಲ್ (Alcohol) ಮುಕ್ತ ಡಿಯೋಡ್ರೆಂಟ್ : ಆಲ್ಕೋಹಾಲ್ ಮುಕ್ತವಾಗಿರುವ ಡಿಯೋಡ್ರೆಂಟ್ ಬಳಕೆ ಮಾಡಿ. ಆಲ್ಕೋಹಾಲ್ ಇರುವ ಡಿಯೋಡ್ರೆಂಟ್ ಖರೀದಿಸುವ ತಪ್ಪನ್ನು ಮಾಡ್ಬೇಡಿ. ಖರೀದಿಸುವ ವೇಳೆ ಅವಶ್ಯಕವಾಗಿ ಡಿಯೋಡ್ರೆಂಟ್ ಗೆ ಯಾವ ಯಾವ ವಸ್ತುಗಳನ್ನು ಹಾಕಲಾಗಿದೆ ಎಂಬುದನ್ನು ಪರೀಕ್ಷಿಸಿ. ಆಲ್ಕೋಹಾಲ್ ಇರುವ ಡಿಯೋಡ್ರೆಂಟನ್ನು ನೀವು ಬಳಸಿದ್ರೆ ತೋಳಿನ ಚರ್ಮ (Skin) ಕಪ್ಪಾಗುತ್ತದೆ. ಇದ್ರಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ.
Flat Butt ಗೆ ಸುಂದರ ಶೇಪ್ ನೀಡ್ಬೇಕೆಂದ್ರೆ ಈ ಟ್ರಿಕ್ಸ್ ಫಾಲೋ ಮಾಡಿ
ರಾಸಾಯನಿಕ (Chemical) ವಿಲ್ಲದ ಡಿಯೋಡ್ರೆಂಟ್ : ಮೊದಲೇ ಹೇಳಿದಂತೆ ಖರೀದಿ ಮೊದಲು, ಅದಕ್ಕೆ ಯಾವ ವಸ್ತುಗಳನ್ನು ಬಳಸಲಾಗಿದೆ ಎಂಬುದನ್ನು ಪರೀಕ್ಷಿಸಿ. ಒಂದ್ವೇಳೆ ರಾಸಾಯನಿಕ ಬೆರೆಸಿದ್ದರೆ ಅದನ್ನು ಖರೀದಿಸಬೇಡಿ. ಪ್ರಬಲ ರಾಸಾಯನಿಕಗಳನ್ನು ಬಳಸುವುದರಿಂದ ಚರ್ಮ (skin) ದ ಕ್ಯಾನ್ಸರ್ (Cancer) ಬರುವ ಸಾಧ್ಯತೆಯಿರುತ್ತದೆ.
ನೈಸರ್ಗಿಕ ಡಿಯೋಡ್ರೆಂಟ್ ಬಳಸಿ : ಆಲ್ಕೋಹಾಲ್ ಮುಕ್ತ ಹಾಗೂ ರಾಸಾಯನ ಮುಕ್ತ ಡಿಯೋಡ್ರೆಂಟ್ ಬಳಕೆಯನ್ನು ನೀವು ಮಾಡ್ಬೇಕು. ಇದರಿಂದ ಯಾವುದೇ ಚರ್ಮದ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಯಾವುದೇ ಅಡ್ಡಪರಿಣಾಮದ ಭಯ ಇರೋದಿಲ್ಲ.
ಪ್ರಯೋಗಿಸಿ ನೋಡಿ : ಡಿಯೋಡ್ರೆಂಟ್ ಖರೀದಿಸುವ ಮುನ್ನ ನೀವು ಅದನ್ನು ಪ್ರಯೋಗಿಸಿ ನೋಡಬೇಕು. ಹೀಗೆ ಮಾಡಿದ್ರೆ ಡಿಯೋಡ್ರೆಂಟ್ ಫ್ಲೇವರ್ ಚೆಕ್ ಮಾಡಬಹುದು. ನಿಮ್ಮ ದೇಹಕ್ಕೆ ಇದು ಸೂಕ್ತವೇ ಇಲ್ಲವೇ ಎಂಬುದನ್ನು ಕೂಡ ಸುಲಭವಾಗಿ ಅರಿಯಬಹುದಾಗಿದೆ. ಒಂದ್ವೇಳೆ ನಿಮ್ಮ ಚರ್ಮ ಸೂಕ್ಷ್ಮವಾಗಿದ್ದರೆ ನೀವು ಪ್ರಯೋಗಕ್ಕೆ ಇಳಿಯಬೇಡಿ. ಯಾಕೆಂದ್ರೆ ಇದ್ರಿಂದ ನಿಮ್ಮ ಚರ್ಮದ ಆರೋಗ್ಯ ಹಾಳಾಗುವ ಸಾಧ್ಯತೆಯಿದೆ.
ಆಫ್ಲೈನ್ ಮಾರ್ಕೆಟ್ ಬೆಸ್ಟ್ : ಆನ್ಲೈನ್ ಮಾರುಕಟ್ಟೆಯಲ್ಲಿ ವಿವಿಧ ಡಿಯೋ ಹಾಗೂ ಕಡಿಮೆ ಬೆಲೆಯ ಡಿಯೋ ನಿಮಗೆ ಲಭ್ಯವಿದೆ. ಆದ್ರೆ ಅದನ್ನು ಪರೀಕ್ಷಿಸುವುದು ಕಷ್ಟವಾಗುತ್ತದೆ. ಹಾಗೆ ಅದಕ್ಕೆ ಏನೆಲ್ಲ ಬಳಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಹಾಗಾಗಿ ನೀವು ಆನ್ಲೈನ್ ಗಿಂತ ಆಫ್ಲೈನ್ ನಲ್ಲಿ ಡಿಯೋ ಖರೀದಿ ಮಾಡಿ.
Fashion Tips : ಹೀಲ್ಸ್ ಧರಿಸಿದ್ರೆ ಪಾದದಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಾ?
ಡಿಯೋ ವಾಸನೆ ಬಗ್ಗೆ ಗಮನವಿರಲಿ : ಡಿಯೋಡರೆಂಟ್‌ಗಳನ್ನು ಖರೀದಿಸುವಾಗ ಸುಗಂಧ ದ್ರವ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಬಲವಾದ ವಾಸನೆಯ ಡಿಯೋ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಸೌಮ್ಯವಾದ ಪರಿಮಳವನ್ನು ಹೊಂದಿರುವ ಡಿಯೋ ಖರೀದಿ ಮಾಡುವುದು ಒಳ್ಳೆಯದು. ಅನೇಕ ಬಾರಿ ಕೆಲ ಫ್ಲೇವರ್ ಜನರಿಗೆ ಇಷ್ಟವಾಗುವುದಿಲ್ಲ. ಕೆಲ ಫ್ಲೇವರ್ ಅಲರ್ಜಿಯುಂಟು ಮಾಡುತ್ತದೆ. ಇಷ್ಟೇ ಅಲ್ಲದೆ, ಡಿಯೋಡರೆಂಟ್ ಖರೀದಿಸುವಾಗ ಪ್ಯಾಚ್ ಟೆಸ್ಟ್ ಮಾಡಲು ಮರೆಯಬೇಡಿ.