ಅಕ್ಕಿ, ಗೋಧಿ ಶೇಖರಿಸಿಡೋ ಗೋಣಿಚೀಲದ ಪ್ಯಾಂಟ್, ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

By Vinutha Perla  |  First Published Feb 18, 2023, 12:16 PM IST

ಫ್ಯಾಷನ್, ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಇಲ್ಲಿ ಉಪಯೋಗಕ್ಕೆ ಬಾರದ ಕಸದಿಂದಲೂ ಅದ್ಭುತ ಫ್ಯಾಷನ್ ಸಿದ್ಧವಾಗುತ್ತದೆ. ಆದ್ರೆ ಸದ್ಯ ಎಲ್ಲೆಡೆ ವೈರಲ್ ಆಗ್ತಿರೋ ಡ್ರೆಸ್‌ ಎಲ್ಲರನ್ನೂ ನಿಬ್ಬೆರಗಾಗಿಸುತ್ತಿದೆ. ಯಾಕಂದ್ರೆ ಇದೊಂದು ಗೋಣಿಚೀಲದಿಂದ ಮಾಡಿರೋ ಪ್ಯಾಂಟ್‌.


ಫ್ಯಾಷನ್ ಜಮಾನಾನೇ ಹಾಗೆ. ಅದು ಆಗಾಗ ಬದಲಾಗುತ್ತಲೇ ಇರುತ್ತದೆ. ಹಿಂದೆಯೆಲ್ಲಾ ಡಿಫರೆಂಟ್ ಡಿಸೈನರ್ ಬಟ್ಟೆಗಳು ಫ್ಯಾಷನ್ ಎಂದು ಕರೆಯಲ್ಪಡುತ್ತಿದ್ದವು. ಆದರೆ ಈಗ ಏನು ಮಾಡಿದರೂ ಫ್ಯಾಷನ್ ಎಂಬಂತಾಗಿದೆ. ಹರಿದ ಜೀನ್ಸ್‌ಗಳು, ತೋಳು ಹರಿದ ಟಾಪ್‌ಗಳು, ಟ್ರಾನ್ಸ್‌ಪರೆಂಟ್ ಸೀರೆ ಎಲ್ಲವೂ ಟ್ರೆಂಡೀ ಟ್ರೆಂಡೀ ಎಂದೇ ಕರೆಯಲ್ಪಡುತ್ತವೆ. ಮಾತ್ರವಲ್ಲ ಫ್ಯಾಷನ್ ಹೆಸರಲ್ಲಿ ಚಿತ್ರ-ವಿಚಿತ್ರ ಡ್ರೆಸ್‌ಗಳು ಮಾರುಕಟ್ಟೆಗೆ ಬರೋದನ್ನು ನಾವು ನೋಡಬಹುದು. ಹಾಗೆಯೇ ಇಲ್ಲೊಂದೆಡೆ ಎಲ್ಲರೂ ಇದೂ ಒಂದು ಬಟ್ಟೇನಾ ಅನ್ನುವಂಥಾ ಡ್ರೆಸ್ ಮಾರುಕಟ್ಟೆಗೆ ಬಂದಿದೆ. 

ಫ್ಯಾಷನ್ ಪ್ರವೃತ್ತಿಗಳು ಬದಲಾಗುತ್ತಲೇ ಇರುತ್ತವೆ. ಹೊಸದು ಮಾರುಕಟ್ಟೆಗೆ ಬಂದ ತಕ್ಷಣ, ದೊಡ್ಡ ವಿನ್ಯಾಸಕರು ಅದರ ಮೇಲೆ ತಮ್ಮ ಟ್ಯಾಗ್ ಅನ್ನು ಹಾಕುತ್ತಾರೆ. ಸೆಲೆಬ್ರಿಟಿಗಳು ಅದನ್ನು ಧರಿಸಲು ಪ್ರಾರಂಭಿಸುತ್ತಾರೆ ಮತ್ತು ಹೊಸ ಟ್ರೆಂಡ್ ಅನ್ನು ಪ್ರಚಾರ ಮಾಡುತ್ತಾರೆ, ಅದು ನಂತರ ಎಲ್ಲರ ಮೆಚ್ಚಿನ ಆಗುತ್ತದೆ. ನಂತರ ಪ್ರತಿಯೊಬ್ಬರೂ ಇತ್ತೀಚಿನ ಶೈಲಿಯೊಂದಿಗೆ ಟ್ಯೂನ್ ಆಗಿ ಉಳಿಯಲು ಅದನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಇತ್ತೀಚೆಗಷ್ಟೇ ಹೊಸ ಟ್ರೆಂಡಿಂಗ್ ಔಟ್ ಫಿಟ್ ಮಾರುಕಟ್ಟೆಗೆ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಫ್ಯಾಶನ್ ಡ್ರೆಸ್‌ನ ಬೆಲೆ ಕೂಡ ಬೆಚ್ಚಿ ಬೀಳುವಂತಿದೆ. ಯಾಕೆಂದರೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರೋ ಈ ಫೋಟೋ, ಗೋಣಿಚೀಲದಿಂದ ಮಾಡಿರೋ ಪ್ಯಾಂಟ್‌.

Latest Videos

undefined

ಹ್ಯಾಂಡ್‌ಲೂಮ್‌ ಸೀರೆಗಳಿಗೆ ಮನಸೋತ ಭಾರತೀಯ ಸೆಲೆಬ್ರೆಟಿಗಳು

ನಾವು ದಿನನಿತ್ದ ಮನೆಯಲ್ಲಿ ಗೋಧಿ ಮತ್ತು ಅಕ್ಕಿ ಇಡಲು ಬಳಸುವ ಗೋಣಿಚೀಲಗಳನ್ನು ಈಗ ಡ್ರೆಸ್ ಮಾಡಲು ಬಳಸಲಾಗುತ್ತದೆ. ನೀವೂ ಕೂಡ ಈ ಹೊಸ ಟ್ರೆಂಡ್ ಅಳವಡಿಸಿಕೊಳ್ಳಬೇಕೆಂದರೆ ಗೋಣಿಚೀಲ ಹಾಕಿಕೊಂಡು ತಿರುಗಾಡಬೇಕಾಗುತ್ತದೆ. ಸದ್ಯ ಈ ಗೋಣಿಚೀಲದ ಪಲಾಝೋ ಪ್ಯಾಂಟ್‌ನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗ್ತಿದೆ. ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪಲಾಝೋ ಪ್ಯಾಂಟ್‌ನ ಬೆಲೆ ನೂರರಿಂದ ಆರಂಭವಾಗಿ ಎರಡು ಸಾವಿರ ರೂ. ವರೆಗೂ ಇರುತ್ತದೆ. ಆದರೆ ಈ ಗೋಣಿಚೀಲದ ಪ್ಯಾಂಟ್‌ನ ಬೆಲೆ ಭರ್ತಿ  60,000 ರೂ.

ಉಡುಗೆ ಏಕೆ ತುಂಬಾ ವಿಶೇಷವಾಗಿದೆ ಎಂದು ನೀವು ಯೋಚಿಸುತ್ತಿರಬೇಕು? ಈ ಉಡುಪಿನ ವಿಶಿಷ್ಟ ಅಂಶವೆಂದರೆ ಇದು ಗೋಣಿಚೀಲಗಳಿಂದ ತಯಾರಿಸಲ್ಪಟ್ಟಿದೆ, ನಾವು ಮನೆಯಲ್ಲಿ ನಮ್ಮ ಪಡಿತರವನ್ನು ಸುರಕ್ಷಿತವಾಗಿಡಲು ಗೋಣಿಚೀಲವನ್ನು ಬಳಸುತ್ತೇವೆ. ಅದು ಖಾಲಿಯಾದ ನಂತರ, ಅದನ್ನು ಎಸೆಯುತ್ತೇವೆ. ಕೆಲವರು ಇದನ್ನು ಮ್ಯಾಟ್‌ನಂತೆ ಕಾಲು ಒರೆಸಲು ಬಳಸುತ್ತಾರೆ. ಆದರೆ ಈಗ ದೊಡ್ಡ ದೊಡ್ಡ ಡಿಸೈನರ್ ಗಳು ಹಳೆಯ ಗೋಣಿಚೀಲಗಳಿಂದ ಪೈಜಾಮಾದಂತಹ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಹೊಸ ಟ್ರೆಂಡ್ ಆಗಿದೆ. ಪೈಜಾಮಗಳು ಈಗ ಆಧುನಿಕ ಕಾಲದಲ್ಲಿ ಪಲಾಝೋ ಹೆಸರಿನಿಂದ ಟ್ರೆಂಡ್ ಆಗುತ್ತಿದೆ. ಇದು ಎಲ್ಲರಿಗೂ ಇಷ್ಟವಾಗಿದೆ.

Beauty Tips : ಕೂದಲು ಗುಂಗುರು ಮಾಡುವ ಕರ್ಲರ್ ಖರೀದಿ ಮುನ್ನ ಇವಿಷ್ಟು ಗೊತ್ತಿರಲಿ

ನೀವು ಗೋಣಿಚೀಲದ ಪಲಾಝೋಗೆ  60,000 ರೂ. ಪಾವತಿಸುತ್ತೀರಾ? ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಕ್ಲಿಪ್ ವೈರಲ್ ಆಗಿದ್ದು. ಬಹುತೇಕರು ಇದನ್ನು ಗೇಲಿ ಮಾಡಿದ್ದಾರೆ. ಮಾತ್ರವಲ್ಲ ನೆಟ್ಟಿಗರು ವೀಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ನಮ್ಮ ಮನೆಯಲ್ಲಿ ಇಂಥಾ ಗೋಣಿಚೀಲ ತುಂಬಾ ಇದೆ, ಈಗ ನಮ್ಮ ಬಳಿಯೂ ತುಂಬಾ ಹಣವಿದ್ದಂತಾಯಿರು' ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು 'ಇದು ನಿಜವಾದ ಮರುಬಳಕೆ'" ಎಂದು ಬರೆದಿದ್ದಾರೆ.  'ಇದು ಉರ್ಫಿ ಫ್ಯಾಷನ್‌ ಗೋಲ್ ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಹಲವರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಅದೇನೆ ಇರ್ಲಿ, ಫ್ಯಾಷನ್ ಹೆಸರಲ್ಲಿ ಗೋಣಿಚೀಲ ಸಹ ಟ್ರೆಂಡ್ ಆಗ್ತಿದ್ದು, ಜನರು ನಗಬೇಕೋ ಅಳಬೇಕೋ ಅಂತಿದ್ದಾರೆ.

click me!