ಹೆಣ್ಮಕ್ಕಳಿಗೆ ಸೌಂದರ್ಯದ ಬಗ್ಗೆ ಅತಿಯಾದ ಕಾಳಜಿ ಮಾಮೂಲಿ. ಕೊರೊನಾ ಸಮಯದಲ್ಲಿ ಬ್ಯೂಟಿಪಾರ್ಲರ್ ಗೆ ಹೋಗಲು ಅನೇಕರು ಹೆದರುತ್ತಾರೆ. ಆದ್ರೆ ಐಬ್ರೋ, ಹೇರ್ ಕಟ್, ಬ್ಲೀಚಿಂಗ್ ಇವುಗಳನ್ನು ಮಾಡಿಸದೆ ಹೋದ್ರೆ ನಿದ್ರೆ ಬರುವುದಿಲ್ಲ. ಅಂತವರು ಮನೆಗೆ ಬ್ಯೂಟಿಷಿಯನ್ ಕರೆಯಿಸಿಕೊಳ್ತಾರೆ. ನೀವೂ ಅವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿ ಓದಿ.
ದೇಶಕ್ಕೆ ಕೊರೊನಾ (Corona)ದ ಮೂರನೇ ಅಲೆ ಕಾಲಿಟ್ಟಿದೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕ ಪ್ರದೇಶಗಳಿಗೆ ಹೋಗುವುದು ಅಪಾಯಕಾರಿ. ಹಾಗೆಯೇ ಸಲೂನ್ (Salon) ಗಳಿಗೆ ಹೋಗುವುದು ಕೂಡ ಸುರಕ್ಷಿತವಲ್ಲ. ಮನೆಯಲ್ಲಿ ಸಲೂನ್ ಸೇವೆಯನ್ನು ಪಡೆಯಬಹುದು. ಕೊರೊನಾ ನಂತರ ಸಲೂನ್ ಸೇವೆಗಳನ್ನು ಆನ್ಲೈನ್ (Online) ಮಾಡಲಾಗಿದೆ. ಆನ್ಲೈನ್ ಮೂಲಕ ಸಲೂನ್ ಬುಕ್ ಮಾಡಿ,ಮನೆಯಲ್ಲಿಯೇ ಬ್ಯೂಟಿಪಾರ್ಲರ್ (Beauty Parlor) ಸೇವೆಯನ್ನು ಪಡೆಯಬಹುದು. ಮನೆಯಲ್ಲಿಯೇ ಸಲೂನ್ ಸೇವೆ ಪಡೆಯಲು ನೀವು ಮುಂದಾಗಿದ್ದರೆ ಕೆಲವೊಂದು ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ಮನೆ (Home)ಯಲ್ಲಿಯೇ ಸಲೂನ್ ಸೇವೆ ಪಡೆಯುವವರು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಹೋಮ್ ಸಲೂನ್ ಸೇವೆಗಾಗಿ ಸಲಹೆಗಳು
ಸಲೂನ್ ಬುಕ್ ಮಾಡುವ ಮೊದಲು : ಆನ್ಲೈನ್ ನಲ್ಲಿ ಸಾಕಷ್ಟು ಸಲೂನ್ ಕಂಪನಿಗಳ ಹೆಸರು ಕಾಣಿಸುತ್ತದೆ. ನಿಮಗೆ ಗೊತ್ತಿಲ್ಲದ ಸಲೂನ್ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲು ಹೋಗಬೇಡಿ. ಈಗಾಗಲೇ ನೀವು ಭೇಟಿ ನೀಡಿರುವ ಸಲೂನ್ ಆನ್ಲೈನ್ ಸೇವೆ ನೀಡುತ್ತಿದ್ದರೆ ಅದನ್ನು ಆಯ್ಕೆ ಮಾಡಿ. ಇಲ್ಲವೇ ಪ್ರಸಿದ್ಧ ಕಂಪನಿಗಳ ಸೇವೆ ಪಡೆಯಿರಿ. ಇದ್ಯಾವುದೂ ಸಾಧ್ಯವಿಲ್ಲ ಎಂದಾಗ ನೀವು ಬುಕ್ ಮಾಡ್ತಿರುವ ಸಲೂನ್ ಕಂಪನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.
ರೇಟಿಂಗ್ ಪರಿಶೀಲನೆ : ಯಾವುದೇ ಪಾರ್ಲರ್‌ನ ಸೇವೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಬಯಸಿದರೆ, ಆ ಪಾರ್ಲರ್‌ಗೆ ಸಂಬಂಧಿಸಿದ ರೇಟಿಂಗ್ ಮತ್ತು ವಿಮರ್ಶೆಯನ್ನು ಒಮ್ಮೆ ಪರಿಶೀಲಿಸಿ. ಹೀಗೆ ಮಾಡುವುದರಿಂದ ನೀವು ಯಾವುದೇ ಪಾರ್ಲರ್ ಬಗ್ಗೆ ಮೂಲಭೂತ ಮಾಹಿತಿಯನ್ನು ಪಡೆಯುತ್ತೀರಿ.
ಕೋವಿಡ್‌ಗೆ ಸಂಬಂಧಿಸಿದ ನಿಯಮಗಳಿಗೆ ಗಮನ ಕೊಡಿ : ಈ ಸಮಯದಲ್ಲಿ ಕೋವಿಡ್ ಅಪಾಯವು ಹೆಚ್ಚಿರುವ ಕಾರಣ, ಅಂತಹ ಪರಿಸ್ಥಿತಿಯಲ್ಲಿ ನೀವು ಕರೆ ಮಾಡುವ ಕಂಪನಿಗೆ ಸಂಬಂಧಿಸಿದ ಬ್ಯೂಟಿಷಿಯನ್ ಕೊರೊನಾ ನಿಯಮಗಳನ್ನು ಸರಿಯಾಗಿ ಅನುಸರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಗಮನಿಸಬೇಕು. ಬೇಕಿದ್ದರೆ ಬಂದ ಬ್ಯೂಟಿಷಿಯನ್ ನ ತಾಪಮಾನವನ್ನೂ ಪರೀಕ್ಷೆ ಮಾಡಬಹುದು. ಹಾಗೆಯೇ ಬ್ಯೂಟಿಷಿಯನ್ ಎರಡು ಡೋಸ್ ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕೊರೊನಾ ಸಂರ್ಭದಲ್ಲಿ ಕುಟುಂಬ ಹಾಗೂ ನಿಮ್ಮ ಆರೋಗ್ಯ ಮಹತ್ವಪಡೆಯುತ್ತದೆ ಎಂಬುದನ್ನು ನೆನಪಿನಲ್ಲಿಡಿ.
Fashion Tips : ಪುರುಷರ ಡ್ರೆಸ್ ಧರಿಸುವ ಹುಡುಗಿಯರಿಗೆ ಇಲ್ಲಿವೆ ಬೆಸ್ಟ್ ಟಿಪ್ಸ್
ಹೊಸ ಕಿಟ್ ಬಗ್ಗೆ ಗಮನವಿರಲಿ : ಒಬ್ಬರಿಗೆ ಬಳಸಿದ ಬ್ಯೂಟಿ ಐಟಂಗಳನ್ನೇ ಅನೇಕ ಬಾರಿ ಇನ್ನೊಬ್ಬರಿಗೆ ಬಳಸಲಾಗುತ್ತದೆ. ನಿಮ್ಮ ಮನೆಗೆ ಬಂದ ಬ್ಯೂಟಿಷಿಯನ್ ಕೂಡ ಹಾಗೆ ಮಾಡ್ತಿದ್ದಾರಾ ಎಂಬುದನ್ನು ನೋಡಿ. ಮನೆಗೆ ತಂದ ಎಲ್ಲ ಸೌಂದರ್ಯ ವರ್ದಕಗಳನ್ನು ಪ್ಯಾಕ್ ಮಾಡಲಾಗಿದೆಯೇ ಅಥವಾ ಸೀಲ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ಮರುಬಳಕೆಗೆ ಅವಕಾಶ ನೀಡಬೇಡಿ.
ಸೇವೆಯ ಬೆಲೆ : ಹೋಮ್ ಸಲೂನ್ ಸೇವೆಯು ಆಫ್ಲೈನ್ ಸಲೂನ್ ಸೇವೆಗಿಂತ ಹೆಚ್ಚು ದುಬಾರಿಯಾಗಿದೆ. ಆದರೆ ನೀವು ಮೋಸ ಹೋಗದಂತೆ ನೋಡಿಕೊಳ್ಳಿ. ಸೇವೆಗೆ ಕರೆ ಮಾಡುವ ಮೊದಲು ವಿವಿಧ ಸ್ಥಳಗಳಿಂದ ಬೆಲೆಯನ್ನು ಹೋಲಿಕೆ ಮಾಡಿ ಮತ್ತು ಶುಲ್ಕವನ್ನು ಕೇಳಿ ತಿಳಿದಿರಿ. ಆಗ ನಿಮಗೆ ಒಂದು ಸ್ಪಷ್ಟತೆ ಸಿಗುತ್ತದೆ. ಜೊತೆಗೆ ಚೌಕಾಸಿ ಮಾಡಲು ಅವಕಾಶವಿರುತ್ತದೆ.
ಬ್ರ್ಯಾಂಡ್ ಉತ್ಪನ್ನ ಬಳಸಿ : ಬ್ಯೂಟಿಷಿಯನ್ ಮನೆಗೆ ತಂದ ಎಲ್ಲಾ ಉತ್ಪನ್ನಗಳನ್ನು ಒಮ್ಮೆ ಪರಿಶೀಲಿಸಿ. ಉತ್ಪನ್ನದ ಬ್ರಾಂಡ್ ಬಗ್ಗೆ ಗಮನವಿರಲಿ. ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಕೆಲವರಿಗೆ ಎಲ್ಲ ಬ್ರಾಂಡ್ ಉತ್ಪನ್ನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
Tattoo Side Effects : ಯುರೋಪಲ್ಲಿ ಹಚ್ಚೆ ಬಣ್ಣದ ಮೇಲೆ ಕಡಿವಾಣ! ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ಇದನ್ನೋದಿ
ವಿಲೇವಾರಿ ಬಗ್ಗೆ ಗಮನವಿರಲಿ : ಬ್ಯೂಟಿಷಿಯನ್ ಎಲ್ಲವನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ, ಹಾಗೆಯೇ ಎಲ್ಲಾ ಬಳಸಿದ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಿದ್ದಾರೆಯೇ ಎಂಬುದನ್ನು ನೋಡಿ. ನಿಮಗೆ ಬಳಸಿದ ವಸ್ತುವನ್ನು ಅವರು ಇನ್ನೊಬ್ಬರಿಗೆ ಬಳಸದಂತೆ ನೋಡಿಕೊಳ್ಳಿ.