ಅಬ್ಬಬ್ಬಾ..ಬಣ್ಣ ಮಾಸಿದ, ಹರಿದಿರೋ ಜೀನ್ಸ್‌ಗೆ ಭರ್ತಿ 71 ಲಕ್ಷ ರೂ. ಕೊಟ್ಟಿದ್ಯಾಕಪ್ಪಾ ?

By Suvarna News  |  First Published Oct 14, 2022, 3:29 PM IST

ಅಬ್ಬಬ್ಬಾ ಅಂದ್ರೆ ನೀವು ಒಂದ್ ಜೀನ್ಸ್‌ಗೆ ಎಷ್ಟು ರೂಪಾಯಿ ಕೊಡೋಕೆ ರೆಡಿ ಇದ್ದೀರಾ ? ಹೆಚ್ಚೆಂದರೆ ಐನೂರರಿಂದ ಸಾವಿರ ರೂ. ಅಷ್ಟೇ ಅಲ್ವಾ. ಬ್ರಾಡೆಂಡ್ ಅಂತಾದರೆ 3,000ದಿಂದ 6,000 ರೂಪಾಯಿ ಖರ್ಚು ಮಾಡಬಹುದು. ಆದ್ರೆ ಇಲ್ಲೊಬ್ಬಾತ ಭರ್ತಿ 71 ಲಕ್ಷ ರೂ. ಖರ್ಚು ಮಾಡಿ ಜೀನ್ಸ್‌ವೊಂದನ್ನು ಖರೀದಿಸಿದ್ದಾನೆ. ಹೌದಾ ಅಂತ ಹೌಹೌರ್ಬೇಡಿ. ಹೆಚ್ಚಿನ ಮಾಹಿತಿ ಇಲ್ಲಿದೆ.


ನ್ಯೂಯಾರ್ಕ್: ಮಾಡರ್ನ್‌ ದಿರಿಸುಗಳಲ್ಲಿ ಟಾಪ್‌ ಲಿಸ್ಟ್‌ನಲ್ಲಿರೋದು ಜೀನ್ಸ್‌. ಯಾವ ಬಟ್ಟೆ ಹಾಕ್ಬೇಕು ಅಂತ ತಲೆಕೆಡಿಸಿಕೊಳ್ಳೋರು ಥಟ್ಟಂತ ಒಂದು ಜೀನ್ಸ್ ಹಾಕಿ, ಮೇಲೊಂದು ಟಾಪ್ ಧರಿಸಿ ಮ್ಯಾನೇಜ್ ಮಾಡಿಬಿಡುತ್ತಾರೆ. ಒಂದು ಜೊತೆ ಜೀನ್ಸ್ ಪ್ಯಾಂಟ್ ಖರೀದಿಗೆ ಸಾಮಾನ್ಯವಾಗಿ ಜನರು 3,000 ದಿಂದ 6,000 ರೂಪಾಯಿ ಖರ್ಚು ಮಾಡಬಹುದು. ಇನ್ನು ಬ್ರ್ಯಾಂಡೆಡ್ ಗೀಳಿಗೆ ಅಂಟಿಕೊಂಡಿರುವ ಮಂದಿ ಅಬ್ಬಬ್ಬಾ ಅಂದರೂ 10,000 ರೂಪಾಯಿ ಖರ್ಚು ಮಾಡಬಹುದು. ಆದರೆ ಇಲ್ಲೊಬ್ಬ ಭೂಪ ಒಂದು ಜೊತೆ ಲೆವೀಸ್ ಜೀನ್ಸ್ ಪ್ಯಾಂಟ್ ಖರೀದಿಗೆ ಬರೋಬ್ಬರಿ 71 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ 1800 ರ ದಶಕದ ಲೆವಿಯ ಜೀನ್ಸ್ ಜೋಡಿಯು USD 76,000 ಅಂದರೆ ಬರೋಬ್ಬರಿ 71 ಲಕ್ಷಕ್ಕಿಂತ ಹೆಚ್ಚು ರೂಪಾಯಿಗೆ ಮಾರಾಟವಾಗಿದೆ. ಇದಕ್ಕೆ ಪ್ರೀಮಿಯಂ ಅಂಶದೊಂದಿಗೆ ಖರೀದಿದಾರರು 87,400 ಯುಎಸ್ ಡಾಲರ್ ಅನ್ನು ಪಾವತಿಸಿದ್ದಾರೆ. 

142 ವರ್ಷ ಹಳೆಯ ಜೀನ್ಸ್‌ ಹರಾಜಿನಲ್ಲಿ ಮಾರಾಟ
ಅಕ್ಟೋಬರ್ 1ರಂದು ಹರಾಜಿನಲ್ಲಿ ಸ್ಯಾನ್ ಡಿಯಾಗೋದ 23 ವರ್ಷ ವಯಸ್ಸಿನ ವಿಂಟೇಜ್ ಬಟ್ಟೆ ವ್ಯಾಪಾರಿ ಕೈಲ್ ಹೌಪೆಟ್ ಎನ್ನುವವರು ಈ ಜೋಡಿ ಜೀನ್ಸ್ ಅನ್ನು ಖರೀದಿಸಿದ್ದಾರೆ. ಮೈಕೆಲ್ ಹ್ಯಾರಿಸ್ ಅವರು ಅಮೇರಿಕನ್ ವೆಸ್ಟ್‌ನಲ್ಲಿ ಪ್ಯಾಂಟ್‌ಗಳನ್ನು ಕಂಡುಕೊಂಡರು ಮತ್ತು ನ್ಯೂ ಮೆಕ್ಸಿಕೋದ ಅಜ್ಟೆಕ್‌ನಲ್ಲಿರುವ ಡುರಾಂಗೊ ವಿಂಟೇಜ್ ಫೆಸ್ಟಿವಸ್‌ನಲ್ಲಿ ಡೆನಿಮ್ ವೈದ್ಯರಿಗೆ ಮಾರಾಟ ಮಾಡಿದರು.

Latest Videos

undefined

ಅಬ್ಬಬ್ಬಾ..ಕಸ ಎಸೆಯೋ ಬ್ಯಾಗ್ ಇಷ್ಟೊಂದು ಕಾಸ್ಟ್ಲೀನಾ?

ವಾಲ್ ಸ್ಟ್ರೀಟ್ ಜರ್ನಲ್‌ನೊಂದಿಗೆ ಮಾತನಾಡುವಾಗ ಹೌಪೆಟ್‌,'ನಾನು ಇನ್ನೂ ಒಂದು ರೀತಿಯ ದಿಗ್ಭ್ರಮೆಯಲ್ಲಿದ್ದೇನೆ, ಅವುಗಳನ್ನು ನಾನು ಖರೀದಿಸಿದ್ದೇನೆಂದು ನನಗೆ ನಂಬಲಾಗುತ್ತಿಲ್ಲ. 'ಜೀನ್ಸ್ ಜೋಡಿಯನ್ನು ವಿಂಟೇಜ್ ಬಟ್ಟೆ ಕಂಪನಿ ಡೆನಿಮ್ ಡಾಕ್ಟರ್ಸ್ ಮಾಲೀಕ ಜಿಪ್ ಸ್ಟೀವನ್ಸನ್ ಮಾರಾಟ ಮಾಡಿದರು' ಎಂದು ಹೇಳಿದ್ದಾರೆ. ಹೌಪೆಟ್‌ ಹರಾಜಿನ ವೀಡಿಯೊ ಮತ್ತು ಜೀನ್ಸ್ ಜೋಡಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ (Socia media) ಶೇರ್ ಮಾಡಿಕೊಂಡಿದ್ದಾರೆ. ಫೋಟೋದ ಕೆಳಗೆ 'ಇವುಗಳು ತಮ್ಮಷ್ಟಕ್ಕೆ ತಾನೇ ಮಾತನಾಡುತ್ತವೆ' ಎಂಬ ಶೀರ್ಷಿಕೆ ಅನ್ನು ನೀಡಿದ್ದಾರೆ. 

ಈ ಜೀನ್ಸ್ ಜೋಡಿಗೆ ಯಾಕಿಷ್ಟು ಬೆಲೆ ?
ಅಕ್ಟೋಬರ್ 1ರಂದು ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನ (Auction) ಪಟ್ಟಿಯ ಪ್ರಕಾರ, ಈ ಜೋಡಿಯು ಗೋಲ್ಡ್ ರಶ್ ಯುಗದ ಅತ್ಯಂತ ಹಳೆಯ ಲೆವಿಗಳಲ್ಲಿ ಈ ಜೀನ್ಸ್‌ ಒಂದಾಗಿದೆ. ಅಲ್ಲದೇ ವಿಂಟೇಜ್ ಡೆನಿಮ್ ಸಂಗ್ರಹದ (Collection) ಹೋಲಿ ಗ್ರೇಲ್ ಆಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಜೀನ್ಸ್ ಅತ್ಯಂತ ಅಪರೂಪ ಎಂದು ಲಾಸ್ ಏಂಜಲೀಸ್ ಮೂಲದ ಬಿಡ್ಡರ್ ಜಿಪ್ ಸ್ಟೀವನ್ಸನ್ ಹೇಳಿದ್ದಾರೆ. ಜೀನ್ಸ್‌ನಲ್ಲಿ ಒಂದೆರಡು ಕಲೆಗಳಿವೆ. ಅದನ್ನು ತೆಗೆಯಬಹುದು. ಹೀಗಾಗಿ ಇದು ಸೂಪರ್ ಡ್ಯೂಪರ್ ಜೀನ್ಸ್ ಆಗಿದೆ' ಎಂದು ಡೆನಿಮ್ ಡಾಕ್ಟರ್ಸ್ ರಿಪೇರಿ ಅಂಗಡಿಯ ಮಾಲೀಕರು ಹೇಳಿದರು. ಕೈಲ್ ಹಾಟ್ನರ್ ಜೊತೆಗೆ ಜೀನ್ಸ್ ಖರೀದಿಸಿದ ಸ್ಟೀವನ್ಸನ್, ಈ 1880ರ ಲೆವಿಯ ಜೀನ್ಸ್ ತುಂಬಾ ಅಪರೂಪವಾಗಿದ್ದು, ಆ ಕಾಲದ ಒಂದೆರಡು ಜೋಡಿಗಳು ಮಾತ್ರ ಇಂದು ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ ಎಂದಿದ್ದಾರೆ.

ಅಬ್ಬಬ್ಬಾ.. ಇದು 24,679 ವಜ್ರ ಅಳವಡಿಸಿದ ಉಂಗುರ, ಗಿನ್ನಿಸ್‌ ದಾಖಲೆಗೆ ಸೇರ್ಪಡೆ

ಹಳೆಯದಾಗಿರುವ ಈ ಜೀನ್ಸ್‌ ಧರಿಸಬಹುದಾದ ಸ್ಥಿತಿಯಲ್ಲಿಲ್ಲದಿದ್ದರೂ, ಹೊಸದಾಗಿ ಪತ್ತೆಯಾದ ಈ ಜೀನ್ಸ್‌ಗಳನ್ನು ಕೆಲವು ಸಣ್ಣ ರಿಪೇರಿಗಳೊಂದಿಗೆ ಧರಿಸಬಹುದು. ಜೀನ್ಸ್‌ನ ಒಳಗೆ ಒಂದು ಲೇಬಲ್ ಇದೆ. ಇದರಲ್ಲಿ 'ಬಿಳಿಯ ಕಾರ್ಮಿಕರಿಂದ ಮಾಡಲ್ಪಟ್ಟ ಏಕೈಕ ಪ್ರಕಾರ' ಎಂದು ಬರೆಯಲಾಗಿದೆ. 1882ರ ಚೈನೀಸ್ ಹೊರಗಿಡುವ ಕಾಯಿದೆಯ ನಂತರ ಲೆವಿಸ್ ಅಳವಡಿಸಿಕೊಂಡ ಘೋಷಣೆ, ಇದು ಚೀನೀ ಕೆಲಸಗಾರರನ್ನು US ಪ್ರವೇಶಿಸುವುದನ್ನು ನಿಷೇಧಿಸಿತು. ಈ ಜೀನ್ಸ್ ತುಂಬಾ ಹಳೆಯದು, ಇದರ ಹೊಸ ಮಾಲೀಕರು ಜೀನ್ಸ್ ಅನ್ನು ಬ್ಯಾಂಕ್ ವಾಲ್ಟ್‌ನಲ್ಲಿ ಇರಿಸಿದ್ದಾರೆ. ಅಪಾಯಿಂಟ್‌ಮೆಂಟ್ ಮೂಲಕ ಇದನ್ನು ನೋಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

click me!