
ವಜ್ರವೆಂದರೆ ಅತ್ಯಪೂರ್ವವಾದುದು. ಹೀಗಿರುವಾಗ ಹಾಕಾಂಗ್‌ನ ಅಪರೂಪದ ವಜ್ರ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಈ ಅಪರೂಪದ ಪಿಂಕ್ ಪೇರ್ ಡೈಮಂಡ್ ಎರಡೂ ಬದಿಯಲ್ಲಿ ಬಿಳಿ ಮತ್ತು ಮಧ್ಯದಲ್ಲಿ ಪಿಂಕ್ ಬಣ್ಣದಿಂದ ಹೊಳೆಯುತ್ತಿರುತ್ತದೆ. ಈ ಉತ್ತಮ ಗುಣಮಟ್ಟದ ವಜ್ರದ ಬೆಲೆ ಕೇಳಿದ್ರೆ ನೀವು ಹೌಹೌರೋದು ಖಂಡಿತ. ಹೌದು, ಈ ಪಿಂಕ್ ಡೈಮಂಡ್ 18.18 ಕ್ಯಾರೆಟ್ ತೂಗುತ್ತದೆ. ಪಿಂಕ್ ಡೈಮಂಡ್ 49.9 ಮಿಲಿಯನ್ ಡಾಲರ್ ಮೊತ್ತಕ್ಕೆ ಮಾರಾಟವಾಗಿದ್ದು, ಹರಾಜಿನಲ್ಲಿ ಮಾರಾಟವಾದ ವಜ್ರಕ್ಕೆ ಪ್ರತಿ ಕ್ಯಾರೆಟ್‌ಗೆ ಅತ್ಯಧಿಕ ಬೆಲೆಯನ್ನು ನೀಡಲಾಗಿದ್ದು ವಿಶ್ವದಾಖಲೆಯನ್ನು ಬರೆದಿದೆ. ಇದು ಹೆಚ್ಚು ಕಡಿಮೆ ಭಾರತೀಯ ರುಪಿಯಲ್ಲಿ ಐದು ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ.
11.15-ಕ್ಯಾರೆಟ್ ವಿಲಿಯಮ್ಸನ್ ಪಿಂಕ್ ಸ್ಟಾರ್ ವಜ್ರವನ್ನು ಸೋಥೆಬಿಸ್ ಹಾಂಗ್ ಕಾಂಗ್ ಹರಾಜು ಹಾಕಲಾಯಿತು. 392 ಮಿಲಿಯನ್ ಹಾಂಗ್ ಕಾಂಗ್ ಡಾಲರ್‌ಗಳಿಗೆ ($49.9 ಮಿಲಿಯನ್) ಮಾರಾಟವಾಯಿತು. ಪಿಂಕ್ ಸ್ಟಾರ್ ತನ್ನ ಹೆಸರನ್ನು ಎರಡು ಪೌರಾಣಿಕ ಗುಲಾಬಿ ವಜ್ರಗಳಿಂದ (Pink diamond) ಸೆಳೆಯುತ್ತದೆ. ಮೊದಲನೆಯದು 23.60-ಕ್ಯಾರೆಟ್ ವಿಲಿಯಮ್ಸನ್ ವಜ್ರವನ್ನು 1947ರಲ್ಲಿ ದಿವಂಗತ ರಾಣಿ ಎಲಿಜಬೆತ್ II ಗೆ ಮದುವೆಯ ಉಡುಗೊರೆ (Gift)ಯಾಗಿ ನೀಡಲಾಯಿತು. ಎರಡನೆಯದು 59.60-ಕ್ಯಾರೆಟ್ ಪಿಂಕ್ ಸ್ಟಾರ್ ವಜ್ರವು 2017 ರಲ್ಲಿ ಹರಾಜಿನಲ್ಲಿ (Auction) ದಾಖಲೆಯ $71.2 ಮಿಲಿಯನ್ ಡಾಲರ್ ಗೆ ಮಾರಾಟ (Sale)ವಾಯಿತು.
ನಮ್ಮ ಕೊಹಿನೂರ್ ವಜ್ರ ಮರಳಿಸಿ: ರಾಣಿ ಅಗಲಿದ ಬಳಿಕ ಟ್ವಿಟ್ಟರ್‌ನಲ್ಲಿ ಭಾರತೀಯರ ಆಗ್ರಹ
ಅಪರೂಪದ ಪಿಂಕ್ ಡೈಮೆಂಡ್ ವಿಶೇಷತೆಗಳೇನು ?
ಸಾಮಾನ್ಯವಾಗಿ ವಜ್ರಗಳು ಬಿಳಿ ಬಣ್ಣದಲ್ಲಿ ಕಾಣ ಸಿಗುತ್ತವೆ. ಹೀಗಾಗಿ ಬಣ್ಣದ ವಜ್ರಗಳಲ್ಲಿ ಗುಲಾಬಿ ವಜ್ರಗಳು ಅಪರೂಪ ಮತ್ತು ಅತ್ಯಮೂಲ್ಯವಾಗಿವೆ. ವಿಲಿಯಮ್ಸನ್ ಪಿಂಕ್ ವಜ್ರವು ಹರಾಜಿನಲ್ಲಿ ಕಾಣಿಸಿಕೊಂಡ ಎರಡನೇ ಅತಿದೊಡ್ಡ ಗುಲಾಬಿ ವಜ್ರವಾಗಿದೆ. ಪಿಂಕ್ ಡೈಮಂಡ್ ಅಸ್ಥಿರ ಆರ್ಥಿಕತೆಯಲ್ಲಿ ಅಗ್ರ ವಜ್ರಗಳ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸುತ್ತದೆ ಎಂದು 77 ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟೋಬಿಯಾಸ್ ಕೊರ್ಮಿಂಡ್ ಹೇಳಿದ್ದಾರೆ.
'ಗುಲಾಬಿ ಬಣ್ಣದ ವಜ್ರ ವಿಶ್ವ ದರ್ಜೆಯ ವಜ್ರಗಳಂತಹ ಹಾರ್ಡ್ ಸ್ವತ್ತುಗಳು ಅಸ್ಥಿರತೆಯ ಸಮಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವ ಇತಿಹಾಸವನ್ನು ಹೊಂದಿವೆ. ಕಳೆದ 10 ವರ್ಷಗಳಲ್ಲಿ ವಿಶ್ವದ ಕೆಲವು ಉತ್ತಮ ಗುಣಮಟ್ಟದ (Quality) ವಜ್ರಗಳ ಬೆಲೆ ದ್ವಿಗುಣಗೊಂಡಿದೆ' ಎಂದು ಅವರು ಹೇಳಿದರು.
Neeraj Chopra: ಡೈಮಂಡ್ ಲೀಗ್ ಟ್ರೋಫಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ..!
ಅಕ್ಟೋಬರ್ 7ರಂದು ಹಾಂಗ್ ಕಾಂಗ್‌ನಲ್ಲಿ ಗುಲಾಬಿ ವಜ್ರವನ್ನು ಹರಾಜು ಮಾಡಲಾಯಿತು. ಹರಾಜಿನಲ್ಲಿ ವಿಲಿಯಮ್ಸನ್ ಪಿಂಕ್ ಸ್ಟಾರ್ ಹರಾಜಿನಲ್ಲಿ ಕಾಣಿಸಿಕೊಂಡ ಎರಡನೇ ಅತಿದೊಡ್ಡ ಗುಲಾಬಿ ವಜ್ರವಾಗಿದೆ. ಬಣ್ಣದ ವಜ್ರಗಳಲ್ಲಿ ಗುಲಾಬಿ ವಜ್ರಗಳು ಅಪರೂಪ ಮತ್ತು ಅತ್ಯಮೂಲ್ಯವಾಗಿವೆ.
'ಪಿಂಕ್ ವಜ್ರದ ಹರಾಜು ಏಷ್ಯಾದಲ್ಲಿ ಉತ್ತಮ ಗುಣಮಟ್ಟದ ವಜ್ರಗಳಿಗೆ ಚೇತರಿಸಿಕೊಳ್ಳುವ ಬೇಡಿಕೆಯನ್ನು ದೃಢೀಕರಿಸುತ್ತದೆ, ಆದರೆ ಗುಲಾಬಿ ವಜ್ರಗಳ ದೊಡ್ಡ ಕೊರತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತದೆ' ಎಂದು ಸೋಥೆಬಿಸ್ ಏಷ್ಯಾದ ಆಭರಣ ಮತ್ತು ಕೈಗಡಿಯಾರಗಳ ಅಧ್ಯಕ್ಷ ವೆನ್ಹಾವೊ ಯು ಹೇಳಿದರು. UK ಆಭರಣ ಚಿಲ್ಲರೆ ವ್ಯಾಪಾರಿ 77 ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟೋಬಿಯಾಸ್ ಕೊರ್ಮಿಂಡ್, ಮಾರಾಟವು ಉತ್ತಮ ಗುಣಮಟ್ಟದ ವಜ್ರಗಳು ಅಸ್ಥಿರ ಆರ್ಥಿಕತೆಯಲ್ಲಿ ಇನ್ನೂ ಪ್ರಮುಖ ಬೆಲೆಗಳನ್ನು ಪಡೆಯಬಹುದು ಎಂದು ಸಾಬೀತುಪಡಿಸಿದೆ ಎಂದು ಹೇಳಿದರು.
ಅಬ್ಬಬ್ಬಾ.. ಇದು 24,679 ವಜ್ರ ಅಳವಡಿಸಿದ ಉಂಗುರ, ಗಿನ್ನಿಸ್ ದಾಖಲೆಗೆ ಸೇರ್ಪಡೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.