ಹೆಣ್ಮಕ್ಳಿಗೆ ಕೂದಲು ಹಾಗೂ ತ್ವಚೆ ವಿಷಯದಲ್ಲಿ ನಮ್ಮ ಸ್ಟಾರ್ ನಟಿಯರೇ ಅರ್ಧ ಪ್ರೇರಣೆ ಎಂದರೆ ತಪ್ಪಾಗಲಾರದು. ಅವರನ್ನು ಅನುಸರಿಸುವ ಎಷ್ಟೋ ಅಭಿಮಾನಿ ವರ್ಗ ಈ ಬಗ್ಗೆ ಸಿಕ್ರೆಟ್‌ಗಳನ್ನು ಹುಡುಕುತ್ತಾರೆ. ಈ ವಿಚಾರದಲ್ಲಿ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ತಮ್ಮ ತ್ವಚೆ ಹಾಗೂ ಕೂದಲಿನ ಹೊಳಪಿಗೆ ಮೊಟ್ಟೆಯ ಬಿಳಿ ಭಾಗ ಮತ್ತು ಬಿಯರ್ ಕಾರಣ ಎಂದು ತಿಳಿಸಿದ್ದಾರೆ.
ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಅವರ ಫೋಟೊ ಶೂಟ್‌ಗಳನ್ನು ಗಮನಿಸಿದರೆ ಹೆಚ್ಚು ಗಮನ ಸೆಳೆಯುವುದು ಆಕೆಯ ಕೂದಲು ಮತ್ತು ತ್ವಚೆ. ಆಕೆಯ ಕೂದಲೇ ಆಕೆಯ ಪ್ರಮುಖ ಆಸ್ತಿಯಂತೆ. ನನ್ನ ಕೂದಲು ನನ್ನ ಪ್ರಮುಖ ಆಸ್ತಿ. ಪ್ರಯಾಶಃ ಅನುವಂಶಿಕವಾಗಿದೆ. ಕೂದಲ ಬಗ್ಗೆ ಹೆಚ್ಚು ಕಾಳಜಿವಹಿಸುತ್ತೇವೆ. ಅದು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತೇನೆ. ಕೂದಲು ಚೆನ್ನಾಗಿರಲು ಮಸಾಜ್ ಮಾಡುವುದು ಬಹಳ ಮುಖ್ಯ. ಏಕೆಂದರೆ ಕೂದಲನ್ನು ಸ್ಟೆöÊಲಿಂಗ್ ಮಾಡುವ ಮೊದಲು ಉನ್ನತ ಸ್ಥಿತಿಯಲ್ಲಿರಬೇಕು. ನೀವು ಬಳಸುವ ಕಂಡೀಷನರ್‌ಗೆ ಎಲ್ಲಾ ಪ್ರಮುಖ ಅಂಶವಾಗಿದೆ ಹಾಗೂ ಕೂದಲಿಗೆ ಹೆಚ್ಚುವರಿ ಆರೈಕೆ ಬೇಕಾಗುತ್ತದೆ ಎಂದು ಜಾಕ್ವಲಿನ್ ಹೇಳಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡಿಸ್ ಹೇರ್‌ಕೇರ್ ದಿನಚರಿ
ಜಾಕ್ವೆಲಿನ್ ಫರ್ನಾಂಡೀಸ್ ಮೊಸರು ಮತ್ತು ಜೇನುತುಪ್ಪದಿಂದ ಮಾಡಿದ ನೈಸರ್ಗಿಕ ಲಿಪ್ ಬಾಮ್‌ಅನ್ನು ಮನೆಯಲ್ಲಿ ತಯಾರಿಸಿದ ಮಾಸ್ಕ್ ಅನ್ನು ಸೌಂದರ್ಯ ಚಿಕಿತ್ಸೆಯಂತೆ ಬಳಸುತ್ತಾರೆ. ಆಕೆಯ ತ್ವಚೆಯಂತೆಯೇ, ತನ್ನ ಕೂದಲ ರಕ್ಷಣೆಯನ್ನೂ ಮಾಡುತ್ತಾಳೆ.
ಕೂದಲಿಗೆ ಮೊಟ್ಟೆ
ಮೊಟ್ಟೆಯಲ್ಲಿ ಹೇರಳವಾದ ಪ್ರೋಟೀನ್, ವಿಟಮಿನ್, ಖನಿಜಾಂಶಗಳು ಇವೆ. ಇದು ಕೂದಲು ದಪ್ಪ, ಆರೋಗ್ಯಕಾರಿ, ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಮೊಟ್ಟೆಯ ಬಿಳಿ ಭಾಗದ ಜೊತೆಗೆ ಎಣ್ಣೆಯನ್ನೂ ಹಾಕಿ ಹಚ್ಚಬಹುದು. ಇದರಿಂದ ಕೂದಲು ಆರೋಗ್ಯವಾಗಿ ಬೆಳೆಯುವುದಲ್ಲದೆ ಸ್ಟೆçöÊಟ್ ಹೇರ್‌ಗೆ ಸಹಾಯ ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗವನ್ನು ಕೂದಲಿಗೆ ಹಚ್ಚುವುದರಿಂದ ನೆತ್ತಿಯನ್ನು ಶುದ್ಧೀಕರಿಸುವುದಲ್ಲದೆ, ಕೂದಲು ಒಣಗದಂತೆ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ತಲೆಹೊಟ್ಟಿನ ವಿರುದ್ಧ ಹೋರಾಡುತ್ತದೆ.
ಕೂದಲಿಗೆ ಮೊಟ್ಟೆಯ ಬಿಳಿ ಮಾಸ್ಕ್ ಹೀಗೆ ತಯಾರಿಸಿ
1. ಒಂದು ಬೌಲ್‌ನಲ್ಲಿ ನಾಲ್ಕು ಚಮಚ ಬಾದಾಮಿ ಹಾಲು, ಮೂರು ಚಮಚ ಮೊಟ್ಟೆಯ ಬಿಳಿ ಮತ್ತು ಎರಡು ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
2. ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಮಾಸ್ಕ್ ಅನ್ನು ನೆತ್ತಿ ಮತ್ತು ಕೂದಲಿಗೆ ನಿಧಾನವಾಗಿ ಅನ್ವಯಿಸಿ.
3. ಮಾಸ್ಕ್ಅನ್ನು ಕೂದಲಿಗೆ ಚೆನ್ನಾಗಿ ಹಚ್ಚಿದ ನಂತರ ೩೦ ನಿಮಿಷಗಳ ಕಾಲ ಅದನ್ನು ಬಿಡಿ.
4. ತಣ್ಣೀರು ಅಥವಾ ಬೆಚ್ಚಗಿನ ನೀರಿನಿಂದ ಕೂದಲನ್ನು ಶಾಂಪುವಿನಲ್ಲಿ ತೊಳೆಯಿರಿ.
5. ಕೂದಲು ತೊಳೆದ ನಂತರ ಕಂಡೀಷನ್ ಬಳಸಬೇಡಿ.
6. ವಾರಕ್ಕೆ ಮೂರು ಬಾರಿ ಈ ರೀತಿ ಮಾಸ್ಕ್ ಬಳಸಿ ಮತ್ತು ಒಣ ಕೂದಲು ಮತ್ತೆ ಹೊಳೆಯುವಂತೆ ಮಾಡುತ್ತದೆ.
ಇದನ್ನೂ ಓದಿ: ಲೈಂಗಿಕಾಸಕ್ತಿ ಹೆಚ್ಚಬೇಕೆಂದರೆ ಮನಸ್ಸು, ತಿನ್ನೋ ಆಹಾರದಲ್ಲೂ ಆಗಬೇಕು ಚೇಂಜಸ್!
ಹೊಳೆಯುವ ತ್ವಚೆ ಮತ್ತು ಕೂದಲಿಗೆ ಬಿಯರ್
ಕೂದಲಿಗೆ ಹಾಗೂ ತ್ವಚೆಗೆ ಬಿಯರ್ ಬಳಸುವುದು ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂದು ಕ್ಲಿನಿಕಲ್ ಸಂಶೋಧನೆಯಲ್ಲಿ ಸಾಬೀತಾಗಿದೆ. ಬಿಯರ್‌ನಲ್ಲಿರುವ ಕೆಲವು ಅಂಶಗಳು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ಈ ಪದಾರ್ಥಗಳು ಹೆಚ್ಚಾಗಿ ಆಹಾರದಿಂದ ಪಡೆದಿದ್ದರೂ, ನೇರವಾಗಿ ತ್ವಚೆಗೆ ಹಚ್ಚುವುದರಿಂದ ಹೊಳೆಯುವಂತೆ ಮಾಡುತ್ತದೆ. ಇದು ನೈಸರ್ಗಿಕವಾಗಿ ತಯಾರಿಸುವ ಕೆಮಿಕಲ್ ರಹಿತ ಮನೆಯಲ್ಲೇ ಮಾಡಬಹುದಾದ ಮಾಸ್ಕ್ ಆಗಿದೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ಉತ್ತಮ ಫಲಿತಾಂಶ ನೀಡುತ್ತದೆ.
ಬಿಯರ್‌ನಲ್ಲಿ ಪಿಹೆಚ್ ಲೆವೆಲ್ ಕಡಿಮೆ ಪ್ರಮಾಣದಲ್ಲಿದೆ. ಹಾಗಾಗಿ ಇದು ತಲೆ ಕೂದಲಿನ ಸಂದುಗಳಲ್ಲಿ ಸಂಗ್ರಹವಾದ ಕೊಳೆ, ಗ್ರೀಸ್ ಅನ್ನು ತೆಗೆದು ಹಾಕುತ್ತದೆ. ತ್ವಚೆಗೆ ಬಳಸುವುದರಿಂದ ಮುಖದ ಮೇಲಾಗುವ ಮೊಡವೆಗಳನ್ನು ತಡೆಯುತ್ತದೆ. ಬಿಯರ್‌ನಲ್ಲಿ ಈಸ್ಟ್ ಅಂಶ ಇರುವುದರಿಂದ ವಿಟಮಿನ್ ಬಿ, ಪ್ರೋಟೀನ್, ಸೆಲೆನಿಯಂ, ಪೊಟ್ಯಾಶಿಯಂ, ಕಬ್ಬಿಣ, ಜಿಂಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಇದು ತ್ವಚೆ ಹಾಗೂ ಕೂದಲಿಗೆ ಉತ್ತಮವಾದ ನೈಸರ್ಗಿಕ ಮೆಡಿಸಿನ್ ಎನ್ನಬಹುದು.
ಇದನ್ನೂ ಓದಿ: ಆಯಸ್ಸು ಹೆಚ್ಚಾಗ್ಬೇಕು ಅಂದ್ರೆ ವಯಸ್ಸಾದಾಗ ಇಂಥಾ ಆಹಾರ ತಿನ್ನೋದನ್ನು ಮರೀಬೇಡಿ
ಮಾಸ್ಕ್ ಹೀಗೆ ತಯಾರಿಸಿ
1. ಮುಚ್ಚಳವಿಲ್ಲದ ಕಪ್‌ಗೆ 1 ಕಪ್ ಬಿಯರ್ ಸುರಿಯಿರಿ, ನಂತರ ಅದು ಚಪ್ಪಟೆಯಾಗುವವರೆಗೆ ಕಾಯಿರಿ.
2. ಎಂದಿನAತೆ, ಕೂದಲನ್ನು ತೊಳೆಯಿರಿ ಮತ್ತು ಕಂಡೀಷನ್ ಮಾಡಿ.
3. ಫ್ಲಾಟ್ ಬಿಯರ್ ಅನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಮಸಾಜ್ ಮಾಡಿ.
4. 15 ನಿಮಿಷಗಳ ಕಾಲ ಕೂದಲು ಬಿಯರ್ ಅನ್ನು ಹೀರಿಕೊಳ್ಳಲು ಅಥವಾ ಸೆಟ್ ಆಗಲು ಬಿಡಿ.
5. ಸ್ವಲ್ಪ ಸಮಯದ ನಂತರ ಕೂದಲನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.