Men Fashion: ಹೊಟ್ಟೆ ಹೊರಗೆ ಬಂದಿದ್ಯಾ? ನಾಚಿಕೆ ಬಿಟ್ಟು ಈ ರೀತಿಯ ಡ್ರೆಸ್ ಧರಿಸಿ

By Suvarna News  |  First Published Jan 19, 2022, 2:59 PM IST

ಸುಂದರವಾದ ಶರ್ಟ್ ಧರಿಸಿರ್ತೇವೆ. ನಮಗೆ ಗೊತ್ತಿಲ್ಲದೆ ಹೊಟ್ಟೆ ಹೊರಗೆ ಇಣುಕಿರುತ್ತದೆ. ಟೀ ಶರ್ಟ್ ಹಾಕಿದಾಗ ಕೈ ಎತ್ತಿದ್ರೆ ಹೊಟ್ಟೆ ಹೊರಗೆ ಬರುತ್ತದೆ. ಈ ಹೊಟ್ಟೆಯೊಂದು ಸಮಸ್ಯೆ ಎನ್ನುವವರು ಚಿಂತೆ ಬಿಟ್ಟು, ಸ್ಟೈಲಿಶ್ ಡ್ರೆಸ್ ಧರಿಸಿ.
 


ಬೊಜ್ಜು (Obesity), ದೊಡ್ಡ ಹೊಟ್ಟೆ (Stomach) ಈಗ ಬಹುತೇಕರ ಸಮಸ್ಯೆ. ಬಯಸದೇ ಬರುವ ಒಂದು ಗಿಫ್ಟ್ (Gift) ಅದು. ಇದಕ್ಕೆ ಅನೇಕ ಕಾರಣಗಳಿವೆ. ಮುಂದೆ ಬಂದ ಹೊಟ್ಟೆ ಹೆಚ್ಚಿನ ಸಮಸ್ಯೆಯುಂಟು ಮಾಡದೆ ಹೋದ್ರೂ ಫಿಟ್ನೆಸ್ (Fitness) ವಿಷ್ಯದಲ್ಲಿ ಮುಜುಗರವುಂಟು ಮಾಡುತ್ತದೆ. ಇಷ್ಟವಾದ ಬಟ್ಟೆ ಧರಿಸಲು ಸಾಧ್ಯವಾಗುವುದಿಲ್ಲ. ಹೊಟ್ಟೆ ಕಡಿಮೆ ಮಾಡಿಕೊಳ್ಳಲು ಎಷ್ಟು ಪ್ರಯತ್ನಿಸಿದ್ರೂ ಹೊಟ್ಟೆ ಮಾತ್ರ ಹಿಂದೆ ಹೋಗುವುದಿಲ್ಲ. ಅನೇಕ ಬಾರಿ ನಮ್ಮ ಆತ್ಮವಿಶ್ವಾಸಕ್ಕೆ ಹೊಟ್ಟೆ ಧಕ್ಕೆಯುಂಟು ಮಾಡುತ್ತದೆ. ಎಲ್ಲರ ಮುಂದೆ ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದ್ರೆ ಹೊಟ್ಟೆಯಿಂದ ಎಲ್ಲ ಹಾಳಾಗ್ತಿದೆ ಎನ್ನುವವರಿದ್ದಾರೆ. ನಿಮಗೂ ಹೊಟ್ಟೆ ಬಂದಿದೆ ಎಂದಾದ್ರೆ ಚಿಂತಿಸಬೇಡಿ. ಮುಜುಗರಕ್ಕೆ ಕಾರಣವಾಗದಂತೆ,ನಿಮ್ಮ ಹೊಟ್ಟೆ ಮುಚ್ಚಿಡಬಲ್ಲ, ಎಲ್ಲರ ಮುಂದೆ ಸುಂದರವಾಗಿ ಕಾಣುವ ಡ್ರೆಸ್ ಆಯ್ಕೆ ಮಾಡಿಕೊಳ್ಳಬೇಕು. ಬೆಲ್ಲಿ ಫ್ಯಾಟ್ ಹೊಂದಿರುವ ಹುಡುಗರು ಯಾವ ರೀತಿ ಸ್ಟೈಲ್ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ. 

ನಾಚಿಕೆ ಬಿಟ್ಟುಬಿಡಿ: ದೇಹದ ಗಾತ್ರ, ಆಕಾರದ ಬಗ್ಗೆ ಅನೇಕರು ಕಮೆಂಟ್ ಮಾಡ್ತಾರೆ. ಹೊಟ್ಟೆ ನೋಡು ಅಂತಾ ನಿಮಗೂ ಅನೇಕ ಬಾರಿ ಛೇಡಿಸಿರಬಹುದು. ನನ್ನ ಹೊಟ್ಟೆ ದೊಡ್ಡದಾಗಿದೆ, ಹುಡುಗಿಯರು ನನ್ನನ್ನು ನೋಡುವುದಿಲ್ಲ, ನನ್ನನ್ನು ಯಾರೂ ಇಷ್ಟಪಡುವುದಿಲ್ಲ ಹೀಗೆ ನೀವೇ ನಿಮ್ಮ ಬಗ್ಗೆ ಸಾಕಷ್ಟು ನೊಂದುಕೊಂಡಿರ್ತೀರಿ. ಮೊದಲು ಇದನ್ನು ಬಿಟ್ಟುಬಿಡಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಿಮಗೆ ನಿಮ್ಮ ಹೊಟ್ಟೆ ಬಗ್ಗೆ ಚಿಂತೆಯಿಲ್ಲವೆಂದ್ರೆ ಬೇರೆಯವರ ಮಾತಿಗೆ ಏಕೆ ತಲೆಕೆಡಿಸಿಕೊಳ್ಳುತ್ತೀರಿ ?. ಡ್ರೆಸ್ ನಲ್ಲಿ ಸ್ವಲ್ಪ ಬದಲಾವಣೆ ಮಾಡುವ ಮೂಲಕ ನಾಚಿಕೆ ಬಿಟ್ಟು,ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ.

Latest Videos

undefined

ನಿಮ್ಮ ಇಷ್ಟಕ್ಕೆ ಮಹತ್ವ ನೀಡಿ: ಈ ದೇಹಕ್ಕೆ ಈ ಬಟ್ಟೆ, ಈ ದೇಹ ಆಕಾರಕ್ಕೆ ಈ ಬಣ್ಣ ಎಂದು ಎಲ್ಲೂ ನಿಯಮವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಎಲ್ಲಾ ರೀತಿಯ ಬಟ್ಟೆಗಳನ್ನು ಧರಿಸಬಹುದು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ನೀವು ಇಷ್ಟಪಡುವ ಬಟ್ಟೆ ಧರಿಸಿ. ಶರ್ಟ್ ಹಾಕಬೇಡಿ, ಟೀ ಶರ್ಟ್ ಹಾಕಬೇಡಿ, ಇದನ್ನು ಹಾಕಬೇಡಿ, ಇದನ್ನು ಧರಿಸಬೇಡಿ ಎಂದು ಯಾರಾದರೂ ಹೇಳಿದರೆ ಅಂತವರಿಂದ ದೂರವಿರಿ. 

ಟೈಟ್ ಫಿಟ್ ಡ್ರೆಸ್ ಧರಿಸಬೇಡಿ : ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವ ಅಭ್ಯಾಸ ಅನೇಕರಿಗೆ ಇರುತ್ತದೆ. ವಿಶೇಷವಾಗಿ ಟೈಟ್ ಫಿಟ್  ಟಿ-ಶರ್ಟ್, ಶರ್ಟ್ ಅಥವಾ ಕುರ್ತಾ  ಉಡುಗೆಗಳನ್ನು ಧರಿಸುತ್ತಾರೆ. ಬಿಗಿಯಾದ ಬಟ್ಟೆ ಧರಿಸಿದಾಗ ಹೊಟ್ಟೆ ಆಕಾರ ಸರಿಯಾಗಿ ಕಾಣುತ್ತದೆ. ಡ್ರೆಸ್ ಹೊಟ್ಟೆಗಿಂತ ಮೇಲೆ ಬರುತ್ತದೆ. ಆಗ ಹೊಟ್ಟೆ ಕೆಳಗೆ ನೇತಾಡಿದಂತೆ ಕಾಣುತ್ತದೆ.  ಇದು ನಿಮ್ಮ ಲುಕ್ ಹಾಳು ಮಾಡುತ್ತದೆ.  ಹಾಗಾಗಿ ಬಿಗಿಯಾದ ಬಟ್ಟೆಯನ್ನು ಧರಿಸುವುದನ್ನು ತಪ್ಪಿಸಿ. ಸಡಿಲವಾದ ಟಿ-ಶರ್ಟ್, ಶರ್ಟ್ ಅಥವಾ ಕುರ್ತಾ ಧರಿಸಿ. 

ಹಗುರವಾದ ಫ್ಯಾಬ್ರಿಕ್ ಉಡುಗೆ ಧರಿಸಿ : ಅನೇಕ ಉಡುಪುಗಳ ಫ್ಯಾಬ್ರಿಕ್ ತುಂಬಾ ದಪ್ಪವಾಗಿರುತ್ತದೆ. ಅಂತಹ ಡ್ರೆಸ್ ಧರಿಸಿದ್ರೆ ನೀವು ಮತ್ತಷ್ಟು ದಪ್ಪಗಿರುವಂತೆ ಕಾಣ್ತೀರಿ. ಹಾಗಾಗಿ ಹಗುರವಾದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ. ಮುಂದಿನ ಬಾರಿ ಬಟ್ಟೆ ಖರೀದಿಸುವಾಗ ಅದ್ರ ಗಾತ್ರದ ಬಗ್ಗೆ ಗಮನವಿರಲಿ.

Night Dress : ಪುರುಷ ಬಂಜೆತನಕ್ಕೆ ಕಾರಣವಾಗುತ್ತೆ ಬಿಗಿಯಾದ ಒಳಉಡುಪು!

ಬಣ್ಣದ ಆಯ್ಕೆ ವೇಳೆ ಇರಲಿ ಎಚ್ಚರ : ಡ್ರೆಸ್ ಸ್ಟೈಲ್ ಜೊತೆ ಅದ್ರ ಬಣ್ಣ ಬಹಳ ಮುಖ್ಯ. ಕೆಲವೊಂದು ಬಣ್ಣ ನಮ್ಮ ಹೊಟ್ಟೆ ಎದ್ದು ಕಾಣುವಂತೆ ಮಾಡುತ್ತದೆ. ಹಾಗಾಗಿ ಗಾಢ ಬಣ್ಣದ ಬಟ್ಟೆ ಖರೀದಿಸಿ.

ಪಟ್ಟೆ ಡಿಸೈನ್ ಡ್ರೆಸ್ : ಹೊಟ್ಟೆ ಕೊಬ್ಬು ಹೊಂದಿರುವ ಜನರು   ಪಟ್ಟೆ ಡಿಸೈನ್ ಇರುವ ಬಟ್ಟೆ ಖರೀದಿಸಬೇಕು. ಲಂಬವಾದ ಗೆರೆ ಹೊಂದಿರುವ ಡಿಸೈನ್ ಬೆಸ್ಟ್. 

Saree in Winter: ಚಳಿಗಾಲದಲ್ಲಿ ವಿಭಿನ್ನವಾಗಿ ಸೀರೆ ಧರಿಸಿ ಟ್ರೆಂಡಿಯಾಗಿ ಕಾಣಿ

ಜಾಕೆಟ್ : ನೀವು ಡ್ರೆಸ್ ಮೇಲೆ ಸೂಟ್ ಆಗುವ ಜಾಕೆಟ್ ಧರಿಸಬಹುದು. ಜಾಕೆಟ್ ಗಳು ನಿಮ್ಮ ಹೊಟ್ಟೆ ಮುಚ್ಚಿಡುವಲ್ಲಿ ಮಹತ್ವದ ಕೆಲಸ ಮಾಡ್ತವೆ. 

click me!