
ಕಾಲ (Season) ಯಾವುದೇ ಇರಲಿ, ಮದುವೆ(Marriage)ಯೋ ಮತ್ಯಾವುದೋ ಫಂಕ್ಷನ್ನೋ ಅಂದರೆ ಮೊದಲು ನೆನಪಾಗುವುದೇ ಸೀರೆ. ಯಾವ ಸೀರೆ ಉಡುವುದು ಅಥವಾ ಹೊಸ ಸೀರೆ ಖರೀದಿಸುವುದೋ ಎನ್ನುವ ಜಿಜ್ಞಾಸೆ ಆರಂಭವಾಗುತ್ತದೆ. ಎಲ್ಲ ಕಾಲದಲ್ಲೂ ಸೀರೆ ಮಹಿಳೆಯರ ಫೇವರಿಟ್ ಫ್ಯಾಷನ್ (Fashion).
ಈಗ ಹೇಳಿಕೇಳಿ ಚಳಿಗಾಲ(Winter). ಬೇಗ ಮುಹೂರ್ತವಿದ್ದಾಗ ಅಥವಾ ಸಂಜೆಯ ವೇಳೆಯಲ್ಲಿ ಸೀರೆ (Saree) ಉಡುವುದು ಸ್ವಲ್ಪ ಕಷ್ಟವೆನಿಸಬಹುದು. ಸೀರೆ ಮೊದಲೇ ಹೇಳಿಕೇಳಿ ಸೆಕ್ಸಿ (Sexy) ಉಡುಪು. ಸೊಂಟ, ಬೆನ್ನು ಎಲ್ಲೆಂದರಲ್ಲಿ ಗಾಳಿ ನುಗ್ಗಿ ಹಿಂಸೆ ಎನಿಸಬಹುದು. ಹೀಗಾಗಿ ಸೀರೆ ಆಯ್ಕೆ ಮಾಡುವುದು ಬೇಡವೇನೋ ಎನ್ನುವ ಗೊಂದಲ ನಿಮಗಿದ್ದರೆ ಬದಿಗಿರಿಸಿ. ಸ್ವಲ್ಪ ಡಿಫರೆಂಟ್ ಆಗಿ ಯೋಚಿಸಿದರೆ ಸೀರೆ ಹಾಗೂ ಬ್ಲೌಸ್ (Blouse) ಅನ್ನು ಮೈಮುಚ್ಚುವಂತೆ ಧರಿಸಿ ಗ್ಲಾಮರಸ್ (Glamourous) ಆಗಿಯೂ ಟ್ರೆಂಡಿಯಾಗಿಯೂ ಕಾಣಿಸಬಹುದು.
ಸೀರೆಯೊಂದಿಗೆ ಉದ್ದನೆಯ ಓವರ್ ಕೋಟ್(Overcoat)
ಚಳಿಗಾಲದಲ್ಲಿ ಮೈ ಬೆಚ್ಚಗಿರಬೇಕು ಎನ್ನುವ ಆಸೆ ನಿಮಗಿದ್ದರೆ ಸೀರೆಯ ಮೇಲೆ ಫ್ಯಾಷನೇಬಲ್ ಆಗಿರುವ ಉದ್ದನೆಯ ಓವರ್ ಕೋಟ್ ಧರಿಸಬಹುದು. ಓವರ್ ಕೋಟ್ ಗಳಲ್ಲಿ ಬೇಕಾದಷ್ಟು ವಿನ್ಯಾಸ, ಬಣ್ಣಗಳ ವೆರೈಟಿ ಸಿಗುತ್ತದೆ. ಸಂಜೆಯ ವೇಳೆಯ ಫಂಕ್ಷನ್ ಗಾದರೆ ದಟ್ಟ ಬಣ್ಣದ ಸೀರೆ ಧರಿಸಿ ಅದಕ್ಕೆ ಒಪ್ಪುವ ಕಪ್ಪು, ಬ್ರೌನ್ ಅಥವಾ ನಿಮಗಿಷ್ಟವಾಗುವ ಯಾವುದೇ ಓವರ್ ಕೋಟ್ ಧರಿಸಬಹುದು. ಫಿಟ್ಟಿಂಗ್ ಕುರಿತಾಗಿ ಧ್ಯಾನವಿರಲಿ. ಇನ್ನಷ್ಟು ಸ್ಟೈಲಿಷ್ ಕಾಣಿಸಲು ಬೆಲ್ಟ್ ಕೂಡ ಹಾಕಿಕೊಳ್ಳಬಹುದು.
ಉದ್ದತೋಳಿನ (Long Sleeve) ಬ್ಲೌಸ್ ಜತೆ ಸೀರೆ ಅಂದ
ಉದ್ದತೋಳಿನ ಬ್ಲೌಸ್ ಗ್ರ್ಯಾಂಡ್ ಲುಕ್ ನೀಡುವುದರಲ್ಲಿ ಅನುಮಾನವಿಲ್ಲ. ಸೆರಗನ್ನು ಒಂದೇ ಫೋಲ್ಡ್ ನಲ್ಲಿರಿಸಿಕೊಂಡರೆ ಹೆಚ್ಚು ಚೆಂದ. ಇದರೊಂದಿಗೆ ಸೊಂಟದ ಪಟ್ಟಿಯನ್ನು ಸಹ ಧರಿಸಬಹುದು. ಈಗಂತೂ ಮಾರುಕಟ್ಟೆಯಲ್ಲಿ ವಿಧವಿಧ ವಿನ್ಯಾಸದ ಬ್ಲೌಸ್ ಗಳು ದೊರೆಯುತ್ತವೆ. ಯಾವುದೇ ರೀತಿಯ ಸೀರೆಗಾದರೂ ಇವುಗಳನ್ನು ಧರಿಸಬಹುದು.
Personality Development: ನೀವು ನಿಂತುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ
ಬ್ಲೌಸೇ ಬೇಡ, ಶರ್ಟ್ (Shirt) ಧರಿಸಿ
ಹೌದು, ಇದೂ ಕೂಡ ಟ್ರೆಂಡಿಯಾಗಿದೆ. ಬ್ಲೌಸ್ ಬದಲು ಶರ್ಟ್ ಧರಿಸಿಬಿಡುವ ಹುಡುಗಿಯರು ಫ್ಯಾಷನೇಬಲ್ ಎನಿಸಿಕೊಳ್ಳುತ್ತಿದ್ದಾರೆ. ಅಥವಾ ಶರ್ಟ್ ಮಾದರಿಯ ಬ್ಲೌಸ್ ಅನ್ನೂ ಧರಿಸಬಹುದು. ಇತರರಿಗಿಂತ ತುಂಬ ಭಿನ್ನವಾಗಿ ಕಾಣಿಸಬೇಕೆಂಬ ಆಸೆಯಿದ್ದರೆ ಖಂಡಿತ ಹೀಗೆ ಮಾಡಬಹುದು. ಮ್ಯಾಚಿಂಗ್ ಕುರಿತಾಗಿ ಗಮನವಿರಲಿ. ಹಾಗೂ ಸಿಂಪಲ್ ಎನಿಸುವ ಆಭರಣಗಳನ್ನು ಧರಿಸಿ. ಕಿವಿಗೆ ದೊಡ್ಡ ಓಲೆ ಓಕೆ.
ಜಾಕೆಟ್ (Jacket) ಅಥವಾ ಬ್ಲೇಜರ್ ಓಕೆ
ಸ್ಟೈಲಿಷ್ ಸೀರೆಯೊಂದಿಗೆ ಎಥ್ನಿಕ್ ಲುಕ್ ನೀಡುವ ಡೆನಿಮ್ ಅಥವಾ ಲೆದರ್ ಜಾಕೆಟ್ ಅಥವಾ ಬ್ಲೇಜರ್ ಧರಿಸಬಹುದು. ಇದಕ್ಕಾಗಿ ಹೆಚ್ಚಿನ ಶ್ರಮವಹಿಸುವ ಅಗತ್ಯವೂ ಇರುವುದಿಲ್ಲ. ನೀವು ಯಾವ ಸೀರೆ ಉಡಬೇಕೆಂದಿರುವಿರೋ ಅದನ್ನು ಉಟ್ಟು ಅದರ ಮೇಲೆ ಜಾಕೆಟ್ ಅಥವಾ ಬ್ಲೇಜರ್ ಹಾಕಿಕೊಂಡರಾಯಿತು. ಬಟನ್ ತೆರೆದುಕೊಂಡಿದ್ದರೂ ಸರಿ, ಹಾಕಿಕೊಂಡರೂ ಸರಿ. ಒಟ್ಟಿನಲ್ಲಿ ನೋಡಲು ಗ್ರ್ಯಾಂಡ್ ಅನಿಸುತ್ತದೆ.
CCD Growth: ವೈರಲ್ ಪೋಸ್ಟ್, ಕಂಪನಿ ಪ್ರಗತಿ ಬಗ್ಗೆ ಮಾಳವಿಕಾ ಹೇಳಿದ್ದಿಷ್ಟು
ಫ್ಯಾಷನ್ ಲುಕ್ ನೀಡುವ ಹೈ ನೆಕ್ (High Neck) ಬ್ಲೌಸ್
ಹೈ ನೆಕ್ ಬ್ಲೌಸ್ ಜತೆಗೆ ಸೀರೆ ಧರಿಸುವುದು ಹೆಚ್ಚು ಅಂದವೆನಿಸುತ್ತದೆ. ಗಾಢವರ್ಣದ ಸೀರೆಯೊಂದಿಗೆ ಲೈಟ್ ಬಣ್ಣದ ಹೈ ನೆಕ್ ಬ್ಲೌಸ್ ಹೊಂದುತ್ತದೆ. ಗಾಢವರ್ಣದ ಹೈ ನೆಕ್ ಬ್ಲೌಸ್ ಜತೆಗೆ ತಿಳಿಬಣ್ಣದ ಸೀರೆಯನ್ನೂ ಧರಿಸಬಹುದು.
ಸೀರೆಯೊಂದಿಗೆ ಶಾಲ್ (Shawl)
ಸೀರೆಯೊಂದಿಗೆ ಶಾಲ್ ಧರಿಸುವ ಪದ್ಧತಿ ಹಲವರಿಗಿದೆ. ಯಾವುದೇ ರೀತಿಯ ಗ್ರ್ಯಾಂಡ್ ಸೀರೆಗೆ ಕಾಶ್ಮೀರದ ಪಶ್ಮಿನಾ ಅಥವಾ ರೇಷ್ಮೆಯ ಶಾಲ್ ಧರಿಸಬಹುದು. ಇನ್ನೂ ಸ್ಟೈಲಿಷ್ ಲುಕ್ ಬೇಕೆಂದರೆ, ಶಾಲನ್ನು ಎಡ ಭುಜಕ್ಕೆ ಹಾಕಿಕೊಂಡು ಇನ್ನೊಂದು ತುದಿಯನ್ನು ಬಲ ಕೈ ಮೇಲೆ ಬರುವಂತೆ ಧರಿಸಿದರೆ ಅದ್ದೂರಿ ಲುಕ್ ನಿಮ್ಮದಾಗುತ್ತದೆ. ಆದರೆ, ಸೀರೆಯೊಂದಿಗೆ ಶಾಲ್ ಧರಿಸುವ ಪದ್ಧತಿ ಸ್ವಲ್ಪ ಹಳೆಯದಾಯಿತು. ಹೀಗಾಗಿ, ಇದು ಟ್ರೆಂಡಿ ಲುಕ್ ನೀಡುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.