ಫ್ಯಾಷನ್ ಜಮಾನದಲ್ಲಿ ಎಲ್ಲರ ಕೈ, ಕಾಲು, ಕುತ್ತಿಗೆ ಎಲ್ಲಿ ನೋಡಿದ್ರೂ ಟ್ಯಾಟೂನೆ. ಎಲ್ರೂ ದೇಹದಲ್ಲಿ ಚಿತ್ರ-ವಿಚಿತ್ರ ಡಿಸೈನ್‌ನ ಟ್ಯಾಟೂ ಹಾಕಿರೋದನ್ನು ನೀವು ನೋಡಿರ್ತೀರಾ. ಆದ್ರೆ ಈ ಟ್ಯಾಟೂ ಅದೆಲ್ಲಕ್ಕಿಂತಲೂ ಡಿಫರೆಂಟ್. ಯಾಕಂದ್ರೆ ಇದು ಆಗಾಗ ಆಕಾರ ಬದಲಾಯಿಸುತ್ತೆ.
ವರ್ಷಗಳು ಬದಲಾಗುತ್ತಾ ಹೋಗುವ ಹಾಗೆಯೇ ಟ್ರೆಂಡ್‌ಗಳು ಸಹ ಬದಲಾಗುತ್ತಾ ಹೋಗುತ್ತವೆ. ಫ್ಯಾಷನ್, ಮೇಕಪ್, ಲೈಫ್‌ಸ್ಟೈಲ್ ಎಲ್ಲದರಲ್ಲೂ ಹೊಸ ಹೊಸ ಬದಲಾವಣೆಯಾಗುತ್ತಾ ಬರುತ್ತದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್ ಆಗಿರೋದು ಟ್ಯಾಟೂ ಫ್ಯಾಷನ್. ಕೈ, ಕಾಲು, ಬೆನ್ನು, ತೋಳು, ಸೊಂಟ ಹೀಗೆ ಹಲವೆಡೆ ಆಕರ್ಷಕವಾಗಿ ಟ್ಯಾಟೂ ಹಾಕಿಕೊಳ್ಳುತ್ತಾರೆ. ಚಿಟ್ಟೆ, ಮ್ಯೂಸಿಕ್, ಸ್ಪೈಡರ್, ದೇವರ ಫೋಟೋ ಮೊದಲಾದವುಗಳನ್ನು ಟ್ಯಾಟೂ ಆಗಿ ಹಾಕಲಾಗುತ್ತದೆ. ಟ್ಯಾಟೋಗಳು ಸಾಮಾನ್ಯವಾಗಿ ಹೇಗೆ ಹಾಕಿಕೊಂಡಿರುತ್ತಾರೋ ಹಾಗೆಯೇ ಕಾಣಿಸಿಕೊಳ್ಳೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು ಬಿಡಿಸೋ ಟ್ಯಾಟೋ ಭಿನ್ನ-ವಿಭಿನ್ನ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಅದ್ಹೇಗೆ ಸಾಧ್ಯ ಅಂತೀರಾ ? ಹೆಚ್ಚಿನ ಮಾಹಿತಿ ಇಲ್ಲಿದೆ.
ಆಕಾರ ಬದಲಾಯಿಸುವ ಟ್ಯಾಟೂ
ನೀವು ಹಚ್ಚೆ ಹಾಕಿಸಿಕೊಂಡಾಗ, ನಿಮ್ಮ ಚರ್ಮದ (Skin) ಮೇಲೆ ಶಾಶ್ವತವಾಗಿ ಶಾಯಿ ಹಾಕಲಾದ ಕೇವಲ ಒಂದು ಚಿತ್ರ ಎಂದು ನೀವು ಸಾಮಾನ್ಯವಾಗಿ ನಿರೀಕ್ಷಿಸುತ್ತೀರಿ. ಆದರೆ ಫ್ರಾನ್ಸ್‌ನ ಟ್ಯಾಟೂ ಕಲಾವಿದನೊಬ್ಬ ವಿಭಿನ್ನ ರೀತಿಯಲ್ಲಿ ನೋಡಬಹುದಾದ ಅದ್ಭುತ ವಿನ್ಯಾಸಗಳನ್ನು ರಚಿಸುತ್ತಾರೆ. ಮೊಣಕಾಲುಗಳು ಮತ್ತು ಮೊಣಕೈಗಳನ್ನು ಬಾಗಿದಾಗ ಆಕಾರ (Shape)ವನ್ನು ಬದಲಾಯಿಸುವ ಹಚ್ಚೆಗಳನ್ನು ರಚಿಸುತ್ತಾರೆ. ಹಚ್ಚೆ ಕಲಾವಿದ (Tattoo Artist) ವೆಕ್ಸ್ ವ್ಯಾನ್ ಹಿಲ್ಲಿಕ್ ಬುದ್ಧಿವಂತ ಕಪ್ಪು ಮತ್ತು ಬಿಳಿ ಕಲಾಕೃತಿಗಳಲ್ಲಿ ಪರಿಣತಿ ಹೊಂದಿದ್ದು, ವ್ಯಕ್ತಿಯು ತಮ್ಮ ತೋಳುಗಳು ಅಥವಾ ಕಾಲುಗಳನ್ನು ಬಾಗಿಸಿದಾಗ ಆಕಾರವನ್ನು ಬದಲಾಯಿಸುತ್ತದೆ.
ಜನರ ದೇಹಗಳೊಂದಿಗೆ ಸಂವಹನ ನಡೆಸಲು ವಿನ್ಯಾಸಗಳನ್ನು ಎಳೆಯಲಾಗುತ್ತದೆ. ಜನರು ತಮ್ಮ ಮೊಣಕಾಲುಗಳನ್ನು ಬಾಗಿ ಅಥವಾ ನೇರಗೊಳಿಸಿದಾಗ, ಅವರು ಎರಡು ವಿಭಿನ್ನ ಆದರೆ ಸಂಬಂಧಿತ ಚಿತ್ರಗಳನ್ನು ನೋಡುತ್ತಾರೆ.
Tattoo Side Effects: ಹಚ್ಚೆ ಹಾಕಿಸ್ಕೊಳ್ಳೋ ಮುನ್ನ ಈ ವಿಚಾರ ಗೊತ್ತಿರಲಿ
ಟ್ಯಾಟೂ ಕಲಾವಿದ ಹಿಲ್ಲಿಕ್ ಅವರ ಸೃಜನಶೀಲ ಮತ್ತು ಬುದ್ಧಿವಂತ ವಿನ್ಯಾಸಗಳು ನೆಟಿಜನ್‌ಗಳನ್ನು ಬೆರಗುಗೊಳಿಸಿವೆ. ಟ್ಯಾಟೂ ಕಲಾವಿದರಲ್ಲದೆ, ಹಿಲಿಕ್ ಸ್ಥಾಪಿತ ವರ್ಣಚಿತ್ರಕಾರರೂ ಹೌದು. ಅವರ ಪಾಪ್ ಸರ್ರಿಯಲಿಸಂ ಶೈಲಿಯು ಯುವ ಪೀಳಿಗೆಯ ಕಲಾ ಪ್ರೇಮಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಈ ಟ್ಯಾಟೂ ಲೇಡಿ ದೇಹದಲ್ಲಿ ಜಾಗ ಇಲ್ಲ ಖಾಲಿ !
ಯುವತಿಯೊಬ್ಬಳು ತನ್ನ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ಈಗ ಜನ ದೆವ್ವ ಅಂತಾರೆ ಎಂದು ಗೋಳು ತೋಡಿಕೊಂಡಿದ್ದಾಳೆ. 34 ವರ್ಷದ ಈಕೆ 2009ರಲ್ಲಿ ಮೊದಲ ಬಾರಿಗೆ ತನ್ನ ದೇಹಕ್ಕೆ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇದಾದ ನಂತರ ಇಡೀ ದೇಹಕ್ಕೆ ಒಂದೊಂದೇ ಟ್ಯಾಟೂವನ್ನು ಹಾಕಿಸಿಕೊಂಡಿದ್ದು, ಇಡೀ ದೇಹವನ್ನು ಟ್ಯಾಟೂವಿಂದ ಭರ್ತಿ ಮಾಡಿದ್ದಾಳೆ. ಬರೀ ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ತನ್ನ ನಾಲಗೆಗೆ ಕೂಡ ಕತ್ತರಿ ಹಾಕಿಸಿಕೊಂಡಿರುವ ಅಕೆ ಎದೆ ಹಾಗೂ ಕೈಗಳ ಭಾಗಕ್ಕೆ ಇಂಪ್ಲಾಂಟ್ (ಕಸಿ) ಮಾಡಿಸಿಕೊಂಡಿದ್ದಾರೆ.
Tattoo Craze: ಮೈಯಲ್ಲಿ ಅಲ್ಲ..ಮೈತುಂಬಾ ಟ್ಯಾಟೂನೇ..!
ಜನರು ಆಕೆಗೆ ಈ ಹಿಂದೆ ಆಕೆಯ ದೇಹ ಬಗ್ಗೆ ಅವಮಾನ ಮಾಡಿ ಕಿರುಕುಳ ನೀಡಿದ್ದರಂತೆ ಆದರೆ ಆಕೆ ಅದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನ ಚರ್ಮದ ಬಗ್ಗೆ ಆಕೆ ಸಂತೋಷವಾಗಿದ್ದಳಂತೆ. ತನ್ನ ಲುಕ್ ಬಗ್ಗೆ ಆತ್ಮವಿಶ್ವಾಸದಿಂದ ಇರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ತಾನು ಇರುವ ರೀತಿ ಬಗ್ಗೆ ನನಗೆ ಇಷ್ಟ ಇರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಆದರೆ ಕೆಲವು ಜನರು ನಾನು ಇರುವ ರೀತಿಯನ್ನು ಇಷ್ಟಪಡುವುದಿಲ್ಲ. ಮತ್ತೆ ಇನ್ನು ಕೆಲವರು ನನ್ನನ್ನು ದೆವ್ವ ಎಂದು ಕರೆಯುತ್ತಾರೆ ಎಂದು ಅವಳು ಅಳಲು ತೋಡಿಕೊಂಡಿದ್ದಾಳೆ. ಆದಾಗ್ಯೂ ಕೆಲವರು ತನ್ನ ವಿಭಿನ್ನತೆಯನ್ನು ಸ್ವೀಕರಿಸುತ್ತಾರೆ. ಒಂದು ಪುಟ್ಟ ಮಗು ತನ್ನನ್ನು ಸೂಪರ್ ಹೀರೋ ಎಂದು ಕರೆದಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ಅನೇಕ ಸಲ ನನ್ನ ಈ ಅವತಾರಕ್ಕೆ ನನಗೆ ಜನ ಮೆಚ್ಚಗೆ ಸೂಚಿಸಿದ್ದಾರೆ. ಒಂದು ಮಗು ನನ್ನನ್ನು ನೋಡಿ ನಾನೂ ಸೂಪರ್ ಹೀರೋ ಆಗಬಹುದೇ ಎಂದು ಅದರ ತಾಯಿಯನ್ನು ಕೇಳಿತ್ತು ಎಂದು ಅಹ್ವಲಾ ಹೇಳಿಕೊಂಡಿದ್ದಾಳೆ.