ನೀವು ಕೆಲಸಕ್ಕೆ ಹೋಗುವಾಗ, ಅಥವಾ ಕಾಲೇಜಿಗೆ ಹೋಗುವಾಗ ಹೇಗೆ ತಯಾರಾಗಿ ಹೋಗಲು ಬಯಸುತ್ತೀರಾ? ಇರೋದು ಒಂದು ಜೀವನ ಈಗ ಮೇಕಪ್ ಮಾಡದೇನೆ ಇನ್ಯಾವಾಗ ಮಾಡೋಕಾಗುತ್ತೆ ಅಲ್ವಾ? ಹಾಗಾದರೆ ಸಿಂಪಲ್ ಆಗಿ ಸುಂದರವಾಗಿ ಕಾಣಲು ಹೀಗೆ ತಯಾರಾಗಬೇಕು.
ಹೆಣ್ಣು ಮಕ್ಕಳು ಸಾಮಾನ್ಯವಾಗಿ ಮೇಕಪ್ (Makeup) ಪ್ರಿಯರೇ ಆಗಿರುತ್ತಾರೆ. ಮದುವೆ ಅಥವಾ ಯಾವುದಾದರೂ ಸಮಾರಂಭಗಳಿಗೆ ಹೋಗಬೇಕು ಎಂದರೆ ಒಂದು ವಾರ ಮುಂಚೆಯಿಂದಲೇ ತಯಾರಿ ನಡೆಸುತ್ತಾರೆ. ಯಾವ ಬಟ್ಟೆ ಧರಿಸಬೇಕು, ಅದಕ್ಕೆ ಸರಿ ಹೊಂದುವ ಮ್ಯಾಚಿಂಗ್ ಸರ, ಬಳೆಗಳು, ಕಿವಿಯೋಲೆ ಹೀಗೆ ಹಲವಾರು ಸಿದ್ಧತೆಗಳನ್ನು ನಡೆಸಿರುತ್ತೀರಿ. ಇನ್ನು ಸಮಾರಂಭದ ದಿನ ಮೇಕಪ್ ನ ಚಿಂತೆ, ಯಾವ ರೀತಿಯ ಮೇಕಪ್ ಮಾಡಿಕೊಳ್ಳುವುದು ಎಂದು. ಇದು ಸಮಾರಂಭಗಳಿಗೆ (Function) ಹೊರಡುವ ಸಿದ್ಧತೆಯಾದರೆ ಪ್ರತಿದಿನ ಹೊರಗೆ ಹೋಗುವಾಗ ಮೇಕಪ್ ಮಾಡಬೇಕಲ್ಲವೇ, ಅದು ಸಮಾರಂಭಗಳಿಗೆ ಹೊರಡುವಾಗ ಮಾಡುವಷ್ಟು ಹೆಚ್ಚು ಮೇಕಪ್ ಇರಬಾರದು. ಸಿಂಪಲ್ ಆಗಿ ಕಾಣುವಂತೆ ಇರಬೇಕು. ಅದರಲ್ಲೂ ಈಗಿನ ಟ್ರೆಂಡ್ ಎಂದರೆ ನೋ ಮೇಕಪ್ ನಂತೆ ಕಾಣುವ ಮೇಕಪ್ ಮಾಡಿಕೊಳ್ಳುವುದು.
ಇಂತಹ ನೈಸರ್ಗಿಕವಾಗಿ (Natural) ಕಾಣುವ ಮೇಕಪ್ ಮಾಡಿಕೊಳ್ಳಲು ಇಲ್ಲಿದೆ ಸಲಹೆಗಳು..
undefined
ಬಿಬಿ ಕ್ರೀಮ್ (BB Cream) ಅಥವಾ ಲೈಟ್ ಫೌಂಡೇಶನ್ (Light Foundation)
ನಿತ್ಯ ಮೇಕಪ್ ಮಾಡಿಕೊಳ್ಳುವಾಗ ಫೌಂಡೇಶನ್ ಅನ್ನು ಬಳಸಲು ಸಾಧ್ಯವಾಗದೇ ಇದ್ದಾಗ ಬಿಬಿ ಕ್ರೀಮ್ ಅನ್ನು ಬಳಸಬಹುದು, ಇದನ್ನು ಒಂದು ಬಾರಿ ಮುಖಕ್ಕೆ ಹಚ್ಚಿದಾಗ ಇದು ಮಖದ ಮೇಲೆ ಒಂದು ತಿಳಿ ಲೇಪನ ಆಗಿ ಬಿಡುತ್ತದೆ. ಮುಖಕ್ಕೆ ಹೊಸ ಮೆರುಗು ನೀಡುತ್ತದೆಯಾದರೂ ನೋಡಿದವರಿಗೆ ತುಂಬಾ ಮೇಕಪ್ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಆದ್ದರಿಂದ ನಿಮ್ಮ ನಿತ್ಯದ ನೈಸರ್ಗಿಕ ಮೇಕಪ್‌ಗೆ ಲುಕ್‌ಗೆ ಇದು ಹೇಳಿ ಮಾಡಿಸಿದಂತೆ ಇರುತ್ತದೆ.
Kumkumadi Tailam: ಮುಖಕ್ಕೆ ಹಚ್ಚುತ್ತಿದ್ದರೆ ವಯಸ್ಸೇ ಆಗುವುದಿಲ್ಲ !
ಐಲೈನರ್ (Eyeliner)
ನೀವು ಬೇರೆ ಯಾವುದೇ ರೀತಿಯ ಮೇಕಪ್ ಮಾಡದೇ ಬರೀ ಐಲೈನರ್ ಒಂದನ್ನು ಬಳಸಿದರೂ ಇದು ನಿಮ್ಮ ಅಂದವನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಮುಖದಲ್ಲಿ ಕಣ್ಣೇ ಕೇಂದ್ರ ಬಿಂದು. ಕಣ್ಣುನ್ನು ಎಷ್ಟು ಸುಂದರವಾಗಿ ಕಾಣುವಂತೆ ನೋಡಿಕೊಳ್ಳುತ್ತೀರೋ ನಿಮ್ಮ ಅಂದ ಅಷ್ಟು ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ವಿಧ ವಿಧವಾದ ಐಲೈನರ್‌ಗಳು ದೊರೆಯುತ್ತವೆ. ಇದರಲ್ಲಿ ನಿಮಗೆ ಸರಿ ಹೊಂದುವಂತಹ ಐಲೈನರ್ ಬಳಸಿ ನೀಟಾಗಿ ಐಲೈನರ್ ಹಚ್ಚಿಕೊಂಡು ಆಕರ್ಷಕವಾಗಿ ಕಾಣಿಸಿಕೊಳ್ಳಿ.
ಮಸ್ಕರಾ (Mascara)
ಒಂದು ಪರ್ಫೆಕ್ಟ್ ಲುಕ್ (Perfect Look) ಬೇಕು ಎಂದರೆ ಅದು ಮಸ್ಕರವಿಲ್ಲದೆ ಸಂಪೂರ್ಣವಾಗುವುದಿಲ್ಲ. ಮಸ್ಕರಾ ನಿಮ್ಮ ಕಣ್ಣು ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತದೆ. ಸುತ್ತಲಿನ ಜನರನ್ನು ನಿಮ್ಮತ್ತ ಸೆಳೆಯುವ ಹಾಗೆ ಮಾಡುತ್ತದೆ. ಬೇರೆ ಏನೂ ಮೇಕಪ್ ಬಳಸದೇ ಮಸ್ಕರ ಒಂದಿದ್ದರೂ ಸುಂದರವಾಗಿ ಕಾಣುತ್ತೀರಿ.
Sleep Tips: ನೀವೆಷ್ಟು ಗಂಟೆ ನಿದ್ದೆ ಮಾಡಬೇಕು ಅಂದ್ರೆ..
ಲಿಪ್‌ಸ್ಟಿಕ್ (Lipstick)
ಕೊನೆಯದಾಗಿ ಲಿಪ್‌ಸ್ಟಿಕ್. ಆದರೆ ಮೇಕಪ್‌ನಲ್ಲಿ ಇದಕ್ಕೇ ಹೆಚ್ಚಿನ ಮಹತ್ವ ಇರುವುದು. ನಿಮ್ಮ ಅಂದವನ್ನು ಹೆಚ್ಚಿಸುವುದು ಅಥವಾ ಕಡಿಮೆಮಾಡುವುದು ಎರಡೂ ನೀವು ಬಳಸುವ ಲಿಪ್‌ಸ್ಟಿಕ್‌ನ ಬಣ್ಣದ (Colour) ಮೇಲೆ ಆಧಾರವಾಗಿರುತ್ತದೆ. ತುಂಬಾ ಡಾರ್ಕ್ (Dark) ಎನಿಸುವ ಬಣ್ಣಗಳು ಎಲ್ಲಾ ರೀತಿಯ ಬಟ್ಟೆಗಳಿಗೆ ಹೊಂದಿಕೆಯಾಗುವುದಿಲ್ಲ. ನ್ಯೂಡ್ ಕಲರ್ ಬಳಸುವುದು ಈಗಿನ ಟ್ರೆಂಡ್ ಆಗಿದೆ. ಇದರಿಂದ ನೀವು ಲಿಪ್ಸ್ಟಿಕ್ ಹಚ್ಚಿದ್ದೀರ ಎಂಬುದೇ ಗೊತ್ತಾಗುವುದಿಲ್ಲ. ಆದರೆ ಮುಖಕ್ಕೆ ಮೆರುಗು ನೀಡುತ್ತದೆ. ಜೊತೆಗೆ ನಿಮ್ಮ ನಗುವನ್ನು ಇನ್ನೂ ಅಂದವಾಗಿ ಕಾಣುವಂತೆ ಮಾಡುತ್ತದೆ.
ಮುಗುಳುನಗೆ (Smile)
ನಿಮ್ಮ ಮುಖದಲ್ಲಿ ನಗು ಇಲ್ಲ ಎಂದಾದರೆ ಎಂತಹದೇ ಮೇಕಪ್ ಮಾಡಿದರೂ ಅದು ವ್ಯರ್ಥ (Useless). ಮುಖದಲ್ಲಿ ಒಂದು ಕಿರುನಗೆ ಇದ್ದರೆ ಅದರ ಮುಂದೆ ಬೇರೆಲ್ಲಾ ಮೇಕಪ್ ಶೂನ್ಯ. ಸಾದ್ಯವಾದಷ್ಟರ ಮಟ್ಟಿಗೆ ನಗುಮೊಗದಿಂದ ಇರಲು ಪ್ರಯತ್ನಿಸಿ. ಇದು ನಿಮ್ಮ ಸುತ್ತಮುತ್ತಲಿನ ಜನ ನಿಮ್ಮೆಡೆಗೆ ಆಕರ್ಷಕರಾಗುವಂತೆ ಮಾಡುತ್ತದೆ.