ಕೈಗಳ ಅಂದದ ವಿಷಯಕ್ಕೆ ಬಂದಾಗ ಉಗುರುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ನೇಲ್ ಶೇಪ್ ಕೊಟ್ಟು ಬಣ್ಣ ಹಚ್ಚಿದರೆ ಉಗುರುಗಳು ಸುಂದರವಾಗಿ ಕಾಣುತ್ತವೆ. ನೇಲ್ ಆರ್ಟ್ ಸಹ ಉಗುರುಗಳಿಗೆ ಇನ್ನಷ್ಟು ಸೊಬಗು ನೀಡುತ್ತದೆ. ಬಣ್ಣ (Color)ಗಳನ್ನು ಬಳಸಿ ನೇಲ್ ಆರ್ಟ್ (Nail Art)ಮಾಡೋದು ಎಲ್ಲರಿಗೂ ಗೊತ್ತು. ಆದ್ರೆ ಇಲ್ಲೊಬ್ಬಳು ಮಹಿಳೆ ನಿಂಬೆಹಣ್ಣನ್ನು ಬಳಸಿ ನೇಲ್ ಆರ್ಟ್ ಮಾಡಿದ್ದು ವೀಡಿಯೋ ಎಲ್ಲೆಡೆ ವೈರಲ್(Viral) ಆಗ್ತಿದೆ.
ಮುಖ ಸುಂದರವಾಗಿರುವ ಹಾಗೆಯೇ ಕೈ, ಕಾಲುಗಳು ಸಹ ಅಂದವಾಗಿರಬೇಕೆಂದು ಹೆಣ್ಣುಮಕ್ಕಳು ಬಯಸುತ್ತಾರೆ. ಇದಕ್ಕಾಗಿ ಮೆನಿಕ್ಯೂರ್, ಪೆಡಿಕ್ಯೂರ್ ಮೊದಲಾದವುಗಳನ್ನು ಮಾಡಿಕೊಳ್ಳುತ್ತಾರೆ. ಕೈಗಳ ಸೌಂದರ್ಯದ ವಿಷಯಕ್ಕೆ ಬಂದಾಗ ಉಗುರುಗಳಿಗೆ ಮಹತ್ವವಾದ ಸ್ಥಾನವಿದೆ. ಶೇಪ್ ನೀಡಿದ, ಬಣ್ಣ ಹಚ್ಚಿದ ನೀಳವಾದ ಉಗುರುಗಳು ಎಲ್ಲರನ್ನೂ ಸೆಳೆಯುತ್ತವೆ. ಹೀಗಾಗಿಯೇ ಹೆಣ್ಣು ಮಕ್ಕಳನ್ನು ಉಗುರನ್ನು ಉದ್ದವಾಗಿ ಬೆಳೆಸಿ ವಿ, ಯು ಎಂದು ಬೇರೆ ಬೇರೆ ರೀತಿಯ ಶೇಪ್‌ಗಳನ್ನು ನೀಡಿ ಅತ್ಯಾಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. ಮಾತ್ರವಲ್ಲ ಕಲರ್ (Color) ಕಲರ್ ನೇಲ್ ಪಾಲಿಶ್ (Nail Polish) ಹಚ್ಚಿ ಉಗುರಿಗೆ ಮತ್ತಷ್ಟು ಮೆರುಗು ನೀಡುತ್ತಾರೆ.
ಉಗುರುಗಳ ಸೌಂದರ್ಯವನ್ನು ವೃದ್ಧಿಸುವಲ್ಲಿ ಮುಖ್ಯವಾದುದು ನೇಲ್ ಪಾಲಿಶ್. ಅದಕ್ಕಾಗಿ ಹೆಣ್ಣು ಮಕ್ಕಳು ತಿಳಿ ಬಣ್ಣ, ಗಾಢವಾದ ಕಲರ್ ಹೀಗೆ ತಮ್ಮ ಉಗುರಿಗೆ ಸೂಕ್ತವಾಗುವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎರಡೂ ಬಣ್ಣವನ್ನು ಹಾಫ್ ಹಾಫ್ ಶೇಡ್‌ನಲ್ಲಿ ಹಾಕಿಕೊಳ್ಳುವ ಟ್ರೆಂಡ್ ಕೂಡಾ ಇದೆ. ಅಷ್ಟೇ ಅಲ್ಲ ಕೈ ಬೆರಳುಗಳ ಒಂದೊಂದು ಉಗುರಿಗೆ ಒಂದೊಂದು ಬಣ್ಣವನ್ನು ಹಾಕಿಕೊಂಡು ಅಟ್ರ್ಯಾಕ್ಟಿವ್ ಆಗಿ ಕಾಣುವಂತೆ ಮಾಡುತ್ತಾರೆ. ಮಾತ್ರವಲ್ಲ ಗ್ಲಿಟ್ಟರ್ ನೇಲ್ ಪಾಲಿಶ್, ಮೇಟ್ ಕಲರ್ ನೇಲ್ ಪಾಲಿಶ್ ಸಹ ಇತ್ತೀಚಿಗೆ ಹೆಚ್ಚು ಟ್ರೆಂಡಿಂಗ್ ಆಗ್ತಿದೆ.
ಇದಲ್ಲದೆ, ನೇಲ್ ಆರ್ಟ್ (Nail Art) ಅನ್ನೋದು ಹಲವು ವರ್ಷಗಳಿಂದ ಟ್ರೆಂಡಿಂಗ್ (Trending)ನಲ್ಲಿದೆ. ಉಗುರುಗಳಲ್ಲೇ ಹಲವು ಟೂಲ್ಸ್‌ಗಳನ್ನು ಬಳಸಿ ಸುಂದರವಾಗಿ ಚಿತ್ತಾರ ಬಿಡಿಸಲಾಗುತ್ತದೆ. ಈ ಥರ ನೇಲ್ ಆರ್ಟ್ ಸಿದ್ಧವಿರುವ ಸ್ಟಿಕ್ಕರ್‌ಗಳು ಸಹ ದೊರೆಯುತ್ತದೆ. ಇಷ್ಟು ಮಾತ್ರವಲ್ಲ, ಈ ಮಧ್ಯೆ ಫ್ಯಾಷನ್ ಪ್ರಿಯರು ಉಗುರುಗಳ ಮೇಲೆ ಆಗಿಂದಾಗೆ ಹೊಸ ಹೊಸ ಎಕ್ಸಮರಿಮೆಂಟ್ ಮಾಡ್ತಾನೆ ಇರ್ತಾರೆ. ಈ ಹಿಂದೆ ಒಬ್ಬ ಮಹಿಳೆ ಈರುಳ್ಳಿಯನ್ನು ಸೇರಿಸಿ ನೇಲ್ ಆರ್ಟ್ ಮಾಡಿದ್ದರು.
ಈರುಳ್ಳಿ ನೇಲ್ ಆರ್ಟ್..! ವಿಡಿಯೋ ವೈರಲ್
ಕ್ರೇಜಿ ನೇಲ್ ಬ್ಲಾಗರ್ ಎಂಬವರು ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿದ್ದರು. ಇದರಲ್ಲಿ ಉಗುರಿನ ಮೇಲೆ ಈರುಳ್ಳಿ ಇರಿಸಿ ಜೆಲ್ ಹಾಕಿ ನೇಲ್ ಆರ್ಟ್ ಸಿದ್ಧಪಡಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ಸದ್ಯ ಡಿಫರೆಂಟ್ ಆಗಿರೋ ಇನ್ನೊಂದು ನೈಲ್ ಆರ್ಟ್ ವೈರಲ್ ಆಗ್ತಿದೆ. ಇದರಲ್ಲಿ ಮಹಿಳೆ ನಿಂಬೆಯನ್ನು ಬಳಸಿ ನೇಲ್ ಆರ್ಟ್ ಮಾಡೋದನ್ನು ನೋಡಬಹುದು. ಸದ್ಯ 'ಲೆಮನ್ ನೇಲ್ ಆರ್ಟ್' ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಿದೆ.
Ilysmnails ಎಂಬ ಇನ್‌ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡಿರುವ ವೀಡಿಯೋದಲ್ಲಿ ನಿಂಬೆಯ ಸಿಪ್ಪೆಯನ್ನು ಬಳಸಿ ನೈಲ್ ಆರ್ಟ್ ಮಾಡಲಾಗುತ್ತಿದೆ. ಮಹಿಳೆ ಉಗುರುಗಳ ಮೇಲೆ ನಿಂಬೆ (Lemon) ಸಿಪ್ಪೆಯನ್ನು ಅಂಟಿಸಿ, ಉಗುರುಗಳ ಆಕಾರಕ್ಕೆ ತಕ್ಕಂತೆ ನಿಂಬೆ ಸಿಪ್ಪೆಯನ್ನು ಕಟ್ ಮಾಡಿಕೊಳ್ಳುವ ಮೂಲಕ ವೀಡಿಯೋ ಪ್ರಾರಂಭವಾಗುತ್ತದೆ. ನಂತರ ಅವರು ಇದರ ಮೇಲೆ ಜೆಲ್ ಅನ್ನು ಹಾಕುತ್ತಾರೆ. ಅದು ಮುಗಿದ ನಂತರ, ಅವಳು ಶೇಪರ್ ಬಳಸಿಕೊಂಡು ಉಗುರಿನ ಮೇಲ್ಮೈಯನ್ನು ಚೆನ್ನಾಗಿ ಕಾಣುವಂತೆ ಮಾಡುತ್ತಾರೆ. ನಂತರ ಅದರ ಮೇಲೆ ನೈಲ್ ಕಲರ್ ನೇಲ್ ಪೈಯಿಂಟ್‌ನ್ನು ಹಚ್ಚಿ ಬಳಿಕ ಗ್ಲಿಟ್ಟರ್ ಡಿಸೈನ್ ಹಾಕಲಾಗುತ್ತದೆ.
Nail shapes : ಚಂದದ ಉಗುರಿನಲ್ಲಿದೆ ಇಷ್ಟೊಂದು ಗುಟ್ಟು
ಈ ವೀಡಿಯೋವನ್ನು ಅಪ್‌ಲೋಡ್ ಮಾಡಿದಾಗಿನಿಂದ, ಇದು 2.3 ಮಿಲಿಯನ್ ವೀಕ್ಷಣೆಗಳು, 1 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿದೆ. ಕೆಲವೊಬ್ಬರು ಈ ನೈಟ್ ಆರ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವೊಬ್ಬರು ಇದೆಂಥಾ ಕೆಟ್ಟ ನೈಲ್ ಆರ್ಟ್ ಎಂದು ಕಮೆಂಟಿಸಿದ್ದಾರೆ. ಇನ್ನು ಕೆಲವೊಬ್ಬರು ನಿಂಬೆ ಸಿಪ್ಪೆಗಳನ್ನು ಹಾಗೆಯೇ ಇಟ್ಟರೆ ಕೊಳೆಯುವುದಿಲ್ಲವೇ ಇದೆಂಥಾ ವಿಚಿತ್ರ ಎಂದು ಟೀಕಿಸಿದ್ದಾರೆ