ಮದುವೆ ಗೌನ್‌ನ್ನು ಸ್ಟೈಲಿಶ್ ಪಾರ್ಟಿ ಡ್ರೆಸ್ ಆಗಿ ಬದಲಾಯಿಸಿದ ಸಮಂತಾ ರುತು ಪ್ರಭು

By Vinutha Perla  |  First Published Apr 26, 2024, 11:07 AM IST

ಚಬಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚ್ತಿರೋ ನಟಿ ಸಮಂತಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಸ್ಟೈಲಿಶ್ ಲುಕ್‌, ಫ್ಯಾಷನ್‌ ಸೆನ್ಸ್‌ನಿಂದಲೇ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ತಮ್ಮ ವೆಡ್ಡಿಂಗ್ ಗೌನ್‌ ಮೇಕ್‌ಓವರ್‌ ಮಾಡಿಕೊಳ್ಳೋ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.


ಬಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚ್ತಿರೋ ನಟಿ ಸಮಂತಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಸ್ಟೈಲಿಶ್ ಲುಕ್‌, ಫ್ಯಾಷನ್‌ ಸೆನ್ಸ್‌ನಿಂದಲೇ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ತಮ್ಮ ವೆಡ್ಡಿಂಗ್ ಗೌನ್‌ ಮೇಕ್‌ಓವರ್‌ ಮಾಡಿಕೊಳ್ಳೋ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸಮಂತಾ ರುತ್ ಪ್ರಭು ನಿನ್ನೆ ಸಂಜೆ 'ಎಲ್ಲೆ ಸಸ್ಟೈನಬಿಲಿಟಿ ಅವಾರ್ಡ್ಸ್‌'ಗೆ ಹಾಜರಾದಾಗ ಎಲ್ಲರ ಗಮನ ಸೆಳೆದರು. ಬ್ಲ್ಯಾಕ್‌ ಶೈನಿಂಗ್ ಗೌನ್‌ನ್ನು ಸಮಂತಾ ಧರಿಸಿದ್ದು ಸ್ಟೈಲಿಶ್ ಲುಕ್‌ನಲ್ಲಿ ರೆಡ್‌ ಕಾರ್ಪೆಟ್ ಮೇಲೆ ನಡೆದರು. ಅದರೇ ಇದು ಸಮಂತಾ ವೆಡ್ಡಿಂಗ್ ಗೌನ್ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಹೌದು, ಸಮಂತಾ ಅವಾರ್ಡ್‌ ಫಂಕ್ಷನ್‌ಗೆ ತಮ್ಮ ಮದುವೆಯ ಗೌನ್‌ನ್ನು ಸುಂದರವಾಗಿ ಆಲ್ಟರ್ ಮಾಡಿಕೊಂಡಿದ್ದರು. 2017ರಲ್ಲಿ ನಾಗ ಚೈತನ್ಯ ಅವರ ಜೊತೆಗೆ ಮದುವೆಯಾಗುವಾಗ ಧರಿಸಿದ್ದ ಅದೇ ಬಿಳಿ ಗೌನ್‌ನ್ನು ಸ್ಯಾಮ್ ಧರಿಸಿದ್ದರು.. ಮದುವೆಯ ಸಮಯದಲ್ಲಿ ಸಮಂತಾ ಧರಿಸಿದ್ದ ಮಣಿ ಮತ್ತು ಹೂವಿನ ಅಪ್ಲಿಕ್‌ನಿಂದ ಮುಚ್ಚಿದ ಬಿಳಿ ಬಣ್ಣದ ಗೌನ್ ಈಗ ಕಪ್ಪು ಕಾಕ್‌ಟೈಲ್ ಡ್ರೆಸ್ ಆಗಿ ಬದಲಾಗಿದೆ.

Tap to resize

Latest Videos

ಗರ್ಲ್‌ಫ್ರೆಂಡ್‌ ಜೊತೆ ಹಾಲಿಡೇ ಎಂಜಾಯ್‌ ಮಾಡ್ತಿದ್ದಾರೆ ಸಮಂತಾ ಮಾಜಿ ಪತಿ?

ಬಟ್ಟೆಗಳನ್ನು ಮರುಬಳಕೆ ಮಾಡುವ ಅಭ್ಯಾಸ ಬೆಸ್ಟ್ ಎಂದ ಸ್ಯಾಮ್‌
ಡಿಸೈನರ್ ಕ್ರೇಶಾ ಬಜಾಜ್ ಅವರ ಸಹಯೋಗದೊಂದಿಗೆ, ಸಮಂತಾ ತಮ್ಮ ಮದುವೆಯ ಗೌನ್‌ನ್ನು ರಿ-ಡಿಸೈನ್ ಮಾಡಿದರು. ಈ ಬಗ್ಗೆ ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಪೋಟೋಸ್ ಮತ್ತು ವೀಡಿಯೋ ಹಂಚಿಕೊಂಡಿದ್ದಾರೆ

'ನಾನು ಇಂದು ಧರಿಸಿರುವ ಉಡುಗೆ ಅತ್ಯಂತ ಪ್ರತಿಭಾವಂತ ಡಿಸೈನರ್‌ @kreshabajajofficial ಮರುರೂಪಿಸಿದ ಗೌನ್ ಆಗಿದೆ. ಇದು ಸಣ್ಣ ಹೆಜ್ಜೆಯಂತೆ ಅನಿಸುತ್ತಿದೆಯಾದರೂ ನಮ್ಮ ಭೂಮಿಯನ್ನು ಮಾಡಿಕೊಳ್ಳಲು ನಾವು ಇಂಥಾ ಕೆಲಸವನ್ನು ಮಾಡಬೇಕಿದೆ. ಇದು ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡುವ ನನ್ನ ಅಭ್ಯಾಸವನನ್ನು ಹೆಚ್ಚು ಸಮರ್ಥನೀಯವಾಗಿಸಲು ನಾನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳುತ್ತಿರುವ ಹಲವು ಕ್ರಮಗಳಲ್ಲಿ ಒಂದಾಗಿದೆ . ನಿಮ್ಮ ಹೃದಯದಲ್ಲಿ ನನ್ನ ಬಗ್ಗೆ ಸದ್ಭಾವನೆ ಹೊಂದಿರುವ ನಿಮ್ಮೆಲ್ಲರನ್ನು ನಾನು ಅಭಾರಿಯಾಗಿದ್ದೇನೆ' ಎಂದು ಸಮಂತಾ ಬರೆದುಕೊಂಡಿದ್ದಾರೆ.

ಬ್ರಾ ಹಾಕದೆ ಕೈಯಲ್ಲಿ ಎದೆ ಮುಚ್ಚಿಕೊಂಡು, ಇದು ಫ್ಯಾಷನ್ ಬೇಬಿ ಎಂದ ಸಮಂತಾ!

ಸ್ಯಾಮ್‌ ಸಿನಿ ಕೆರಿಯರ್ ಬಗ್ಗೆ ಹೇಳುವುದಾದರೆ ಇತ್ತೀಚಿಗೆ ಆಕೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಪುಷ್ಪಾ ಸಿನಿಮಾದ ಐಟಂ ಸಾಂಗ್ ಹಿಟ್ ಆದ ನಂತರ ಆರೋಗ್ಯ ಸಮಸ್ಯೆಯಿಂದ ಬಳಲ್ತಿದ್ದು ಅಭಿನಯದಿಂದ ಸ್ಪಲ್ಪ ದೂರ ಉಳಿದಿದ್ದಾರೆ. ಇತ್ತೀಚಿಗೆ ವಿಜಯ್‌ ದೇವರಕೊಂಡ ಜೊತೆಗಿನ ತೆಲುಗು ಸಿನಿಮಾ 'ಖುಷಿ' ಚಿತ್ರದಲ್ಲಿ ಅಭಿನಯಿಸಿದ್ದರು. 'ಸಿಟಾಡೆಲ್‌, ಹನಿ ಬನ್ನಿ' ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದು ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ವರುಣ್ ಧವನ್ ಕೂಡ ಕಾಣಿಸಿಕೊಂಡಿದ್ದಾರೆ.

ಮದುವೆಯಾದ ನಾಲ್ಕು ವರ್ಷಗಳ ನಂತರ, ಸಮಂತಾ ಮತ್ತು ನಾಗ 2021ರಲ್ಲಿ ಡಿವೋರ್ಸ್ ಘೋಷಿಸಿದರು. ಈ ಜೋಡಿಯು 2009ರಲ್ಲಿ ರೋಮ್ಯಾಂಟಿಕ್ ಮೂವಿ 'ಯೇ ಮಾಯಾ ಚೇಸಾವೆ'ಯ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.

click me!