ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ವೀರವನಿತೆ ಒನಕೆ ಓಬವ್ವನ ವೇಷ ಧರಿಸಿ "ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ" ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು (ಏ.20): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ವೀರವನಿತೆ ಒನಕೆ ಓಬವ್ವನ ವೇಷ ಧರಿಸಿ "ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ" ಎಂದು ಬರೆದುಕೊಂಡಿದ್ದಾರೆ.
ಧೈರ್ಯ, ಸಾಹಸದ ಮೂಲಕ ನಾರಿಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. 'ಧೈರ್ಯಂ ಸರ್ವತ್ರ ಸಾಧನಂ.' ಧೈರ್ಯ ಇದ್ದರೆ ಎಂತಹ ಸಮಸ್ಯೆ ಎದುರಾದರೂ ಜಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಒನಕೆ ಓಬವ್ವ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿದ್ದಾರೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇತ್ತೀಚೆಗೆ ತಾವು ಯೂಟ್ಯೂಬ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ಬಗ್ಗೆ ಒನಕೆ ಓಬವ್ವನ ಬಗ್ಗೆ ಹೇಳಿಕೊಂಡಿದ್ದರು.
ಐಪಿಎಲ್ ಗೆ ಕಿಕ್ ಹೆಚ್ಚಿಸಲು, 120 ರಿಂದ 4 ಸಾವಿರ ಬೆಲೆಯ ಟಾಪ್ 10 ಬೆಸ್ಟ್ ವಿಸ್ಕಿ ಮತ್ತು ಬಿಯರ್
ನನ್ನ ಬಾಲ್ಯದ ರೋಲ್ ಮಾಡೆಲ್ ಒನಕೆ ಓಬವ್ವ, ನಾನು ಮೊದಲು 6 ನೇ ತರಗತಿಯಲ್ಲಿ ನಾಟಕವೊಂದರಲ್ಲಿ ಓಬವ್ವನ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ ಐಕಾನಿಕ್ ವುಮೆನ್ ಪಾಡ್‌ಕ್ಯಾಸ್ಟ್ ಸೀಸನ್ 2ಗೆ ಇತ್ತೀಚಿಗೆ ನೀಡಿದ ಸಂದರ್ಶನದ ಸಂಚಿಕೆಗಾಗಿ ಆ ಪ್ರಮುಖ ಕ್ಷಣವನ್ನು ಮರುಸೃಷ್ಟಿಸಲು ನಾನು ಗೌರವ ಮತ್ತು ಸ್ಫೂರ್ತಿ ಪಡೆದಿದ್ದೇನೆ. ಓಬವ್ವನ ಸಾಂಪ್ರದಾಯಿಕ ಪರಂಪರೆಯನ್ನು ಗೌರವಿಸುವುದು ಮತ್ತು ನನ್ನ ಪ್ರಯಾಣಕ್ಕೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.
ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ವಿಶ್ವದ ಬೆಸ್ಟ್ ಸಿಂಗಲ್ ಮಾಲ್ಟ್ ವಿಸ್ಕಿ ಗೌರವ ಪಡೆದ ಭಾರತದ Godawan Century!
ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿರುವ ಐಶ್ವರ್ಯಾ ಅವರು ಶೈಕ್ಷಣಿಕ ಕೊಡುಗೆ, ತಂತ್ರಜ್ಞಾನದ ಶಕ್ತಿ, ಉದ್ಯಮಶೀಲತೆಯ ಪ್ರಾಮುಖ್ಯತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.