ಮುಖ ಫೇಶಿಯಲ್ ಮಾಡಿಸಿದಂತೆ ಕಾಣಬೇಕೇ?, ಈ ಪದಾರ್ಥಗಳನ್ನು ಮೊಸರಿನೊಂದಿಗೆ ಬೆರೆಸಿ ಹಚ್ಚಿ

Published : May 01, 2025, 12:48 PM ISTUpdated : May 02, 2025, 10:45 AM IST
ಮುಖ ಫೇಶಿಯಲ್ ಮಾಡಿಸಿದಂತೆ ಕಾಣಬೇಕೇ?, ಈ ಪದಾರ್ಥಗಳನ್ನು ಮೊಸರಿನೊಂದಿಗೆ ಬೆರೆಸಿ ಹಚ್ಚಿ

ಸಾರಾಂಶ

ಬೇಸಿಗೆಯ ಬಿಸಿಲಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳಾದ ಟ್ಯಾನಿಂಗ್ ಮತ್ತು ಕಪ್ಪು ಕಲೆಗಳನ್ನು ಮೊಸರಿನಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳಿಂದ ಮನೆಯಲ್ಲಿಯೇ ಪರಿಹರಿಸಬಹುದು. 

ವಿಶೇಷವಾಗಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚು. ಹಾಗಾಗಿ  ಚರ್ಮದ ಆರೈಕೆಯ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ಋತುವಿನಲ್ಲಿ  ಸೂರ್ಯನ ಬೆಳಕಿನಿಂದಾಗಿ ಮುಖದ ಮೇಲೆ  ಕಪ್ಪು ಕಲೆಗಳು ಅಥವಾ ಟ್ಯಾನಿಂಗ್ ಸಂಭವಿಸುವುದು ಸಹಜ.  ಟ್ಯಾನಿಂಗ್‌ನಿಂದಾಗಿ ಮುಖದ ಮೇಲೆ ಸತ್ತ ಚರ್ಮದ ಕೋಶಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಮುಖದ ಹೊಳಪು ಮಸುಕಾಗುತ್ತದೆ ಮತ್ತು ಮುಖವು ಮಂದವಾಗಿ ಕಾಣುತ್ತದೆ. ಹೀಗಾಗಿ ತ್ವಚೆಯ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಹಾಗೆಂದು ನೀವು ಈ ಟ್ಯಾನಿಂಗ್ ಮತ್ತು ಕಪ್ಪು ಕಲೆಗಳನ್ನು ತೆಗೆದುಹಾಕಲು  ಪಾರ್ಲರ್‌ಗೆ ಹೋಗಬೇಕಾಗಿಲ್ಲ ಅಥವಾ ದುಬಾರಿ ಉತ್ಪನ್ನಗಳನ್ನು ಖರೀದಿಸಬೇಕಾಗಿಲ್ಲ. ಬದಲಿಗೆ ನೀವು ಮೊಸರಿನೊಂದಿಗೆ ಫೇಸ್ ಪ್ಯಾಕ್‌ಗಳನ್ನು ತಯಾರಿಸಬಹುದು ಮತ್ತು ಅವುಗಳನ್ನು ಮನೆಯಲ್ಲಿಯೇ ಹಚ್ಚಬಹುದು. ಮೊಸರಿನಲ್ಲಿರುವ ಅಂಶಗಳು ಮುಖದ ಮೇಲೆ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ. ಹಾಗಾದರೆ ಮೊಸರಿನಿಂದ ಫೇಸ್ ಪ್ಯಾಕ್ ಮಾಡುವುದು ಹೇಗೆಂದು ನೋಡೋಣ ಬನ್ನಿ... 

ಮೊಸರು ಮತ್ತು ಕಡಲೆ ಹಿಟ್ಟು (Curd and Gram Flour) 
ಮೊಸರು ಮತ್ತು ಕಡಲೆ ಹಿಟ್ಟು ಬಳಸಿ ತ್ವಚೆಗೆ ಪರಿಣಾಮಕಾರಿಯಾದ ಫೇಸ್ ಪ್ಯಾಕ್ ತಯಾರಿಸಬಹುದು. ಈ ಫೇಸ್ ಪ್ಯಾಕ್ ತಯಾರಿಸಲು, ಅಗತ್ಯಕ್ಕೆ ಅನುಗುಣವಾಗಿ 2 ಚಮಚ ಕಡಲೆ ಹಿಟ್ಟು ಮತ್ತು ಮೊಸರನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಟ್ಯಾನಿಂಗ್ ಕಡಿಮೆ ಮಾಡುತ್ತದೆ ಮತ್ತು ಮುಖದಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಇದನ್ನು ಮುಖಕ್ಕೆ ಹಾಗೂ ಕುತ್ತಿಗೆ ಮತ್ತು ಗಂಟಲಿಗೂ ಹಚ್ಚಿ.  

ಮೊಸರು ಮತ್ತು ಅರಿಶಿನ (Curd and Turmeric)
ಉರಿಯೂತ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಈ ಫೇಸ್ ಪ್ಯಾಕ್ ಚರ್ಮವನ್ನು ಹೊಳೆಯುವಂತೆ ಮಾಡುವಲ್ಲಿ ಸಹಕಾರಿಯಾಗಿದೆ. ಇದನ್ನು ಮೊಸರು ಮತ್ತು ಅರಿಶಿನ ಪುಡಿಯನ್ನು ಬೆರೆಸಿ ತಯಾರಿಸಲಾಗುತ್ತದೆ. 2 ಟೀ ಚಮಚ ಮೊಸರಿನಲ್ಲಿ ಅರ್ಧ ಟೀ ಚಮಚ ಅರಿಶಿನ ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಕಳೆದ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ಹೆಚ್ಚು ಹೊತ್ತು ಹಚ್ಚಬೇಡಿ, ಇಲ್ಲದಿದ್ದರೆ ಮುಖದ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳಬಹುದು.  

ಶ್ರೀಲೀಲಾ ಧರಿಸಿರುವ ಈ 6 ಸೂಟ್ ಗಳು ಹಬ್ಬಕ್ಕೆ ಹೇಳಿ ಮಾಡಿಸಿದಂತಿದೆ

ಮೊಸರು ಮತ್ತು ಜೇನುತುಪ್ಪ ( Curd and Honey)
ಈ ಫೇಸ್ ಪ್ಯಾಕ್ ಸಹ ಮುಖವನ್ನು ಹೊಳೆಯುವಂತೆ ಮಾಡುವಲ್ಲಿ ಸಹಕಾರಿಯಾಗಿದೆ. ಇದು ಚರ್ಮಕ್ಕೆ ಸಾಕಷ್ಟು ತೇವಾಂಶವನ್ನು ನೀಡುತ್ತದೆ. ಫೇಸ್ ಪ್ಯಾಕ್ ತಯಾರಿಸಲು, ಮೊಸರು ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಹಚ್ಚಿ. ಈ ಫೇಸ್ ಪ್ಯಾಕ್ ವಿಶೇಷವಾಗಿ ಒಣ ಮತ್ತು ಸೂಕ್ಷ್ಮ ಚರ್ಮಕ್ಕೆ ವಿಶೇಷವಾಗಿ ಒಳ್ಳೆಯದು.  ಮೊಸರು ಮತ್ತು ಅಲೋವೆರಾ 
ಚರ್ಮಕ್ಕೆ ಹಿತವೆನಿಸಿಸುವಂತೆ ಫೀಲ್ ಕೊಡುವ ಈ ಫೇಸ್ ಪ್ಯಾಕ್, ಸೂರ್ಯನ ಬೆಳಕಿನಿಂದ ಉಂಟಾಗುವ ಟ್ಯಾನಿಂಗ್ ಅನ್ನು ಕಡಿಮೆ ಮಾಡುತ್ತದೆ. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ನೀವು ಬಯಸಿದರೆ ತಾಜಾ ಅಲೋವೆರಾ ಜೆಲ್ ಬಳಸಬಹುದು ಅಥವಾ ರೆಡಿಮೇಡ್ ಅಲೋವೆರಾ ಜೆಲ್ ಅನ್ನು ಬೆರೆಸಬಹುದು. ಮೊಸರು ಮತ್ತು ಅಲೋವೆರಾವನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.   

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?