ಸುಂದರವಾಗಿ ಕಾಣ್ಬೇಕು, ಬಿಳಿ ಕೂದಲು ಕಾಣ್ಬಾರದು ಅಂತಾ ಕೂದಲಿಗೆ ಬಣ್ಣ ಹಚ್ಚಿಕೊಳ್ತೇವೆ. ಆದ್ರೆ ಹಚ್ಚಿದ ಕೆಲವೇ ದಿನಗಳಲ್ಲಿ ಬಣ್ಣ ಮಾಸಲು ಶುರುವಾಗುತ್ತದೆ. ಅದಕ್ಕೆ ನಾವು ಮಾಡುವ ಕೆಲ ತಪ್ಪು ಕಾರಣ. ಬಣ್ಣ ಹಾಗೆ ಇರಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ಹಿಂದೆ ಕೂದಲಿಗೆ ಬಣ್ಣ ಹಚ್ಚೋದು ಫ್ಯಾಷನ್ ಆಗಿತ್ತು. ಈಗ ಮಾಮೂಲಿಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ತಲೆ ಮೇಲೆ ಕಾಣಿಸಿಕೊಳ್ಳೋದ್ರಿಂದ 30 ದಾಟುತ್ತಿದ್ದಂತೆ ಕೂದಲಿಗೆ ಕಪ್ಪು ಬಣ್ಣ ಬಳಿಯಲು ಶುರು ಮಾಡ್ತಾರೆ. ಮತ್ತೆ ಕೆಲವರು ಕಪ್ಪು ಕೂದಲಿಗೆ ಬಣ್ಣದ ಲೇಪನ ಮಾಡಿ ಸ್ಟೈಲ್ ಮಾಡ್ತಾರೆ. ಇನ್‌ಸ್ಟಾಗ್ರಾಮ್ ಬಳಕೆ ಹೆಚ್ಚಾದಾಗಿನಿಂದ ಅನೇಕ ಟ್ರೆಂಡ್‌ಗಳು ಹೆಚ್ಚು ವೈರಲ್ ಆಗಿವೆ. ಜನರು ತಮ್ಮ ಕೂದಲಿಗೆ ವೆರೈಟಿ ಬಣ್ಣ ಹಚ್ಚುತ್ತಿದ್ದಾರೆ.
ಕೂದಲಿ (Hair) ಗೆ ಕಲರ್ (Color) ಹಾಕಲು ಜನರು ಮುಂದೆ ಬರ್ತಿದ್ದಂತೆ ಕಂಪನಿಗಳು ಹೊಸ ಹೊಸ ಜಾಹೀರಾತು ಶುರು ಮಾಡುತ್ವೆ. ಇನ್ನೊಂದಿಷ್ಟು ಕಲರ್ ಗಳು ಮಾರುಕಟ್ಟೆ (Market) ಗೆ ಲಗ್ಗೆ ಇಡುತ್ವೆ. ಕಲರ್ ಹಚ್ಚಿದ್ರೆ ಸಾಲದು, ದುಬಾರಿ ಶಾಂಪೂ (Shampoo) ಸೇರಿದಂತೆ ಕೂದಲನ್ನು ರಕ್ಷಿಸಲು ಕೆಲ ಉತ್ಪನ್ನ ಖರೀದಿ ಮಾಡ್ಬೇಕು ಎಂಬ ಜಾಹೀರಾತುಗಳು ಜಾಸ್ತಿಯಾಗ್ತಿವೆ. ಕೂದಲಿಗೆ ಬಣ್ಣ ಹಚ್ಚಿಸಿಕೊಂಡವರು ಇದನ್ನು ನಂಬಿ ಮೋಸ ಹೋಗ್ತಿದ್ದಾರೆ. ಕೂದಲಿಗೆ ಬಣ್ಣ ಹಚ್ಚಿದ್ರೆ ಕೂದಲ ಆರೈಕೆ ಮಾಡ್ಬೇಕು ನಿಜ. ಹಾಗಂತ ದುಬಾರಿ ಬೆಲೆಯ ಶಾಂಪೂ ಅಥವಾ ಕೂದಲಿನ ಉತ್ಪನ್ನ ಖರೀದಿ ಮಾಡ್ಬೇಕು ಅಂದೇನಿಲ್ಲ. ನಾವಿಂದು ಕೂದಲಿಗೆ ಬಣ್ಣ ಹಚ್ಚುವವರು ಕೂದಲಿನ ಬಗ್ಗೆ ಯಾವೆಲ್ಲ ವಿಷ್ಯ ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
ಕೆಲವು ಕಾಸ್ಮೆಟಿಕ್ಸ್ ಬಳಸಿದರೆ ಕ್ಯಾನಸರ್ ಸಾಧ್ಯತೆ ಇರೋದು ಹೌದಾ?
ಕೂದಲ ಬಣ್ಣ ಉಳಿಸಲು ಸಲ್ಫೇಟ್ ಮುಕ್ತ ಶಾಂಪೂ ಬಳಸೋದು ಅನಿವಾರ್ಯವಾ? : ಕೂದಲಿನ ಬಣ್ಣ ಹಾಗೆ ಉಳಿಯಬೇಕು ಅಂದ್ರೆ ಸೆಲ್ಫೇಟ್ ಮುಕ್ತ ಶಾಂಪೂ ಬಳಸಬೇಕು ಎಂಬ ಮಾತನ್ನು ನೀವು ಕೇಳಿರಬಹುದು. ಆದ್ರೆ ಅದನ್ನು ಬಳಸುವುದು ಅನಿವಾರ್ಯವಲ್ಲ ಎನ್ನುತ್ತಾರೆ ತಜ್ಞರು. ಅವರ ಪ್ರಕಾರ, ಕೂದಲಿನ ಬಣ್ಣಕ್ಕೆ ನೀರು ನಿಜವಾದ ಶತ್ರು. ಶಾಂಪೂ ಅಲ್ಲ.
ತಲೆ ಸ್ನಾನ ಕಡಿಮೆ ಮಾಡಿ : ನೀವು ಕೂದಲನ್ನು ನೀರಿನಿಂದ ಸ್ವಚ್ಛಗೊಳಿಸಿದಾಗ ಕೂದಲು ಊದುತ್ತದೆ. ಸಲ್ಫೇಟ್ ಬಳಸಿದಾಗ ಕೂದಲು ಊದುವುದಿಲ್ಲ. ಹಾಗಾಗಿಯೇ ನೀರನ್ನು ಕೂದಲಿನ ನಿಜವಾದ ಶತ್ರು ಎನ್ನಬಹುದು. ಕೂದಲಿನಲ್ಲಿ ಕಾಣಿಸಿಕೊಳ್ಳುವ ಊತದಿಂದಾಗಿ ಕೂದಲಿನಲ್ಲಿ ರಂಧ್ರಗಳು ರೂಪುಗೊಳ್ಳುತ್ತವೆ. ಕೂದಲಿನ ಬಣ್ಣ ಬಿಡಲು ಶುರುವಾಗುತ್ತದೆ. ನೀವು ಎರಡು ದಿನಕ್ಕೊಮ್ಮೆ ತಲೆ ಸ್ನಾನ ಮಾಡ್ತಿದ್ದರೆ ಅಥವಾ ಬೇಸಿಗೆಯಲ್ಲಿ ಪ್ರತಿ ದಿನ ತಲೆ ಸ್ನಾನ ಮಾಡಿದ್ರೆ ನಿಮ್ಮ ಕೂದಲಿನ ಬಣ್ಣ ಬೇಗ ಹೋಗುತ್ತದೆ. ಕೂದಲಿನ ಬಣ್ಣ ತುಂಬಾ ದಿನ ಇರಬೇಕೆಂದ್ರೆ ತಲೆ ಸ್ನಾನ ಕಡಿಮೆ ಮಾಡಿ.
ಕೂದಲು ಒಣಗಿಸೋದು ಮುಖ್ಯ : ನಾವು ಒಂದು ಟವೆಲ್ ತೊಳೆದ್ರೆ ಅದನ್ನು ಹಿಂಡುತ್ತೇವೆ. ಆಗ ಅದ್ರಲ್ಲಿರುವ ನೀರು ಬೇಗ ಹೋಗಿ, ಟವೆಲ್ ಬೇಗ ಒಣಗುತ್ತದೆ. ಅದೇ ರೀತಿ ತಲೆ ಸ್ನಾನ ಮಾಡಿದ ನಂತ್ರ ಕೂದಲಿನಲ್ಲಿರುವ ನೀರನ್ನು ಹೊರ ತೆಗೆಯಬೇಕು. ಅದನ್ನು ಬೇಗ ಒಣಗಿಸಿಕೊಳ್ಳಬೇಕು. ಆಗ ಕೂದಲಲ್ಲಿ ರಂಧ್ರವಾಗೋದಿಲ್ಲ.
ಈ ಬಾಲಿವುಡ್ ನಟಿಯರ ಬೋಲ್ಡ್ ದೃಶ್ಯ ನೋಡಲಾಗದೇ ಕಣ್ಮುಚ್ಚಿಕೊಂಡ ನೆಟ್ಟಿಗರು!
ಬ್ಲೋ ಡ್ರೈ ಟ್ರೈ ಮಾಡಿ : ಕೂದಲಿಗೆ ಬಿಸಿ ನೀಡೋದು ಒಳ್ಳೆಯದಲ್ಲ. ಇದು ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಆದ್ರೆ ಕೂದಲಿನ ಬಣ್ಣ ಬೇಗ ಹೋಗ್ಬಾರದು ಅಂದ್ರೆ ಇದು ಅನಿವಾರ್ಯ. ಕೂದಲಿಗೆ ಹೀಟ್ ಅಪ್ಲೈ ಮಾಡುವ ಮೊದಲು ಹೀಟ್ ಪ್ರೋಟೆಕ್ಟರ್ ಬಳಕೆ ಮಾಡಿ. ಕೂದಲು ಒಣಗಿಸಲು ನೀವು ಬ್ಲೋ ಡ್ರೈ ಮಾಡ್ತಿದ್ದರೆ ಡ್ರೈಯರ್ ಹಾಗೂ ಕೂದಲಿನ ಮಧ್ಯೆ ಅಂತರವಿರಲಿ. 15 ಸೆಂಟಿಮೀಟರ್ ಅಂತರದಲ್ಲಿ ಕೂದಲನ್ನು ಒಣಗಿಸಿಕೊಳ್ಳಿ. ಆಗ ಕೂದಲಿಗೆ ಅಪಾಯ ಕಡಿಮೆ. ಹಾಗೆಯೇ ಡ್ರೈಯರನ್ನು ನೀವು ಮೇಲಿಂದ ಕೆಳಗೆ ಮಾಡ್ತಿರಬೇಕು.