ಬೆಳ್ಳಗಿರಬೇಕೆಂದು ಮುಖಕ್ಕೆ ಬಣ್ಣ ಬಳಿದುಕೊಳ್ಳೋರೇ ಹೆಚ್ಚು. ಚರ್ಮ ಬೆಳ್ಳಗೆ, ಹೊಳೆಯಬೇಕೆಂದು ನಮ್ಮ ದೇಶದ ಜನ ಪರದಾಡ್ತಾರೆ. ಆದ್ರೆ ಇಲ್ಲೊಂದು ದೇಶದ ಮಹಿಳೆಯರು ಅತಿ ಹೆಚ್ಚು ಬೆಳ್ಳಗಿದ್ರೂ ಖುಷಿಯಾಗಿಲ್ಲ. ಮೇಕಪ್ ಇಲ್ಲದೆ ಮನೆ ಹೊರಗೆ ಹೋಗೋದಿಲ್ಲ.
ಕಪ್ಪು – ಬಿಳುಪಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಚರ್ಮದ ಬಣ್ಣಕ್ಕೆ ಪ್ರಪಂಚದ ಜನರು ವಿಚಿತ್ರ ವ್ಯಾಮೋಹ ಹೊಂದಿದ್ದಾರೆ. ಅದ್ರಲ್ಲೂ ಫೇರ್‌ನೆಸ್‌ಗೆ ಸಂಬಂಧಿಸಿದಂತೆ ಅತಿ ಹೆಚ್ಚು ಕ್ರೇಜ್ ಇದೆ. ಬೆಳ್ಳಗೆ, ಸುಂದರವಾಗಿ ಚರ್ಮ ಹೊಳೆಯಬೇಕು ಎಂಬುದು ಬಹುತೇಲ ಎಲ್ಲರ ಬಯಕೆ. ಚರ್ಮಕ್ಕೆ ಹೊಳಪು ನೀಡಲು ದುಬಾರಿ ಉತ್ಪನ್ನಗಳನ್ನು ಜನರು ಬಳಕೆ ಮಾಡ್ತಾರೆ. ಇದಕ್ಕಾಗಿ ವಿವಿಧ ರೀತಿಯ ಚಿಕಿತ್ಸೆಗಳನ್ನು ಪಡೆಯುವವರಿದ್ದಾರೆ. ಬಿಳಿ ಬಣ್ಣದ ಮೋಹಕ್ಕೆ ಕೆಲವರು ಅಪಾಯ ತಂದುಕೊಂಡಿದ್ದಾರೆ. ಬೇರೆ ಬೇರೆ ಚಿಕಿತ್ಸೆ ಹಾಗೂ ಉತ್ಪನ್ನಗಳನ್ನು ಬಳಸಿ, ಚರ್ಮದ ಬಣ್ಣವನ್ನು ಹಾಳು ಮಾಡಿಕೊಂಡವರಿದ್ದಾರೆ. ಈಗಿನ ದಿನಗಳಲ್ಲಿ ಬಿಳಿ ಬಣ್ಣದ ಬಗ್ಗೆ ವ್ಯಾಮೋಹ ಸ್ವಲ್ಪ ಕಡಿಮೆಯಾಗಿದೆ ಅಂದ್ರೆ ತಪ್ಪಾಗಲಾರದು. ಜನರು ನಾವಿರುವ ಬಣ್ಣದಲ್ಲೇ ತಮ್ಮನ್ನು ಸ್ವೀಕರಿಸುವ ನಿರ್ಧಾರಕ್ಕೆ ಬರ್ತಿದ್ದಾರೆ. ಹೆಣ್ಣು ಮಕ್ಕಳು ಕೂಡ ತಮ್ಮ ದೇಹದ ಆಕಾರ ಹಾಗೂ ತ್ವಚೆಯನ್ನು ಒಪ್ಪಿಕೊಳ್ತಿದ್ದಾರೆ. ಬಣ್ಣ ಕಪ್ಪು ಎನ್ನುವ ಕಾರಣಕ್ಕೆ ಹಿಂದೆ ಸರಿಯುವ ಬದಲು ಎಲ್ಲರ ಜೊತೆ ಬೆರೆಯುವ ಆತ್ಮವಿಶ್ವಾಸ ಬೆಳೆಸಿಕೊಳ್ತಿದ್ದಾರೆ.
ಪ್ರಪಂಚದಲ್ಲಿರುವ ಎಲ್ಲ ವ್ಯಕ್ತಿಗಳು ಒಂದೇ ಬಣ್ಣ (Color) ವನ್ನು ಹೊಂದಿಲ್ಲ. ಕೆಲ ದೇಶದ ಜನರು ಅತಿ ಹೆಚ್ಚು ಬೆಳ್ಳಗಿದ್ರೆ ಮತ್ತೆ ಕೆಲವರು ಕಪ್ಪು ಬಣ್ಣವನ್ನು ಹೊಂದಿದ್ದಾರೆ. ಪ್ರಪಂಚದಲ್ಲೇ ಅತಿ ಹೆಚ್ಚು ಬಿಳಿಯರಿರುವ ದೇಶವೊಂದಿದೆ. ಆ ದೇಶಕ್ಕೂ ನಮ್ಮ ಭಾರತ (India) ಕ್ಕೂ ಹಳೇ ಸಂಬಂಧವಿದೆ.
ವರದಿಯೊಂದರ ಪ್ರಕಾರ, ಐರಿಶ್ (Irish) ಜನರು ವಿಶ್ವದ ಅತ್ಯಂತ ಸುಂದರವಾದ ಚರ್ಮವನ್ನು ಹೊಂದಿದ್ದಾರ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ಅವರ ಜೀನ್. ಐರಿಶ್ ಜನರು ಆನುವಂಶಿಕವಾಗಿ ಪಡೆದ ಬಣ್ಣ ಇದು. ಅಲ್ಲಿನ ಹವಾಮಾನವೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಯುವಿ ವಿಕಿರಣ ಇರುವ ಸ್ಥಳದಲ್ಲಿ ಜನರ ಚರ್ಮವು ಬೆಳಕಿನ ಚರ್ಮದ ವರ್ಣದ್ರವ್ಯವನ್ನು ಅಭಿವೃದ್ಧಿಪಡಿಸುತ್ತದೆ. ಐರ್ಲೆಂಡ್ ಕೂಡ ಕಡಿಮೆ ಯುವಿ ಕಿರಣ ಬೀಳುವ ದೇಶವಾಗಿದೆ.
ಯುಎಸ್ ಪೆನ್ ಸ್ಟೇಟ್ ಯೂನಿವರ್ಸಿಟಿಯ ಅಧ್ಯಯನದ ಪ್ರಕಾರ, SLC24A5 ಹೆಸರಿನ ಜೀನ್ ಚರ್ಮದ ವರ್ಣದ್ರವ್ಯವನ್ನು ನಿರ್ಧರಿಸುತ್ತದೆ. ಐರ್ಲೆಂಡ್ ಜನರು A111T ರೂಪಾಂತರವನ್ನು ಹೊಂದಿದ್ದಾರೆ. ಇದು ತೆಳು ಚರ್ಮಕ್ಕೆ ಕಾರಣವಾದ ರೂಪಾಂತರವಾಗಿದೆ. ಈ ರೂಪಾಂತರದಲ್ಲಿ ಕಂಡು ಬರುವ ಎಲ್ಲ ಆನುವಂಶಿಕ ಸಂಕೇತ ಒಂದೇ ವ್ಯಕ್ತಿಯಿಂದ ಬಂದಿದೆ ಎಂದು ವರದಿ ಹೇಳಿದೆ.
ಭಾರತಕ್ಕೂ ಈ ಚರ್ಮದ ಬಣ್ಣಕ್ಕೂ ಸಂಬಂಧವೇನು?: ಈ ಜಿನ್ ಗೆ ಕಾರಣವಾದ ವ್ಯಕ್ತಿ ಯಾರು ಎಂಬುದನ್ನು ಕಂಡು ಹಿಡಿಯುವುದು ಕಷ್ಟ. ಆದ್ರೆ ಸಂಶೋಧಕರ ಪ್ರಕಾರ ಆ ವ್ಯಕ್ತಿಯು 10,000 ವರ್ಷಗಳ ಹಿಂದೆ ಭಾರತ ಅಥವಾ ಮಧ್ಯಪ್ರಾಚ್ಯದ ನಿವಾಸಿಯಾಗಿದ್ದನು. ಅವನ ವಂಶಸ್ಥರು ಐಬೆರಿಯನ್ ಪೆನಿನ್ಸುಲಾ ಮೂಲಕ ಐರ್ಲೆಂಡ್‌ಗೆ ತಮ್ಮ ಜೀನ್‌ಗಳನ್ನು ತಂದರು ಎಂದು ಹೇಳಲಾಗಿದೆ.
Culture : ಸಾಯೋವರೆಗೂ ಕೂದಲು ಕತ್ತರಿಸಲ್ಲ ಈ ಮಹಿಳೆಯರು!
ಇಷ್ಟಿದ್ರೂ ಮಹಿಳೆಯರಿಗೆ ಸಂತೋಷವಿಲ್ಲ: ವಿಶ್ವದಲ್ಲಿಯೇ ಅತ್ಯಂತ ಸುಂದರ ಚರ್ಮವನ್ನು ಹೊಂದಿರುವ ಮಹಿಳೆಯರು ಎಂಬ ಕೀರ್ತಿ ಐರ್ಲೆಂಡ್ ಮಹಿಳೆಯರಿಗಿದೆ. ಆದ್ರೆ ಈ ಮಹಿಳೆಯರು ತಮ್ಮ ಬಣ್ಣದಿಂದ ಖುಷಿಯಾಗಿಲ್ಲ. ವಿಶ್ವದ ಕೆಲ ದೇಶದ ಮಹಿಳೆಯರಿಗಿಂತ ತಾವು ಆಕರ್ಷಕವಾಗಿಲ್ಲವೆಂದು ಅವರು ಭಾವಿಸ್ತಾರೆ. ಸಮೀಕ್ಷೆಯಲ್ಲಿ ಶೇಕಡಾ 61ರಷ್ಟು ಮಹಿಳೆಯರು ಈ ವಿಷ್ಯವನ್ನು ಒಪ್ಪಿಕೊಂಡಿದ್ದಾರೆ.
DEAR MEN ವ್ಯಾಕ್ಸ್ ಮಾಡೋ ಮುನ್ನ ಈ ಟಿಪ್ಸ್ ಟ್ರೈ ಮಾಡಿ
ಐರಿಶ್ ನ 10 ಮಹಿಳೆಯರಲ್ಲಿ ಒಬ್ಬರು ಮೇಕಪ್, ಸನ್ಟ್ಯಾನ್ ಲೋಷನ್ ಮತ್ತು ಸನ್‌ಬೆಡ್‌ಗಳಿಲ್ಲದೆ ಮನೆಯಿಂದ ಹೊರಗೆ ಬರುವುದಿಲ್ಲವಂತೆ. ಈ ಮೂರು ಚರ್ಮವನ್ನು ಸ್ವಲ್ಪ ಡಾರ್ಕ್ ಮಾಡಲು ನೆರವಾಗುತ್ತೆ ಎಂದು ಅವರು ಹೇಳ್ತಾರೆ. ಅಷ್ಟೇ ಅಲ್ಲ ಅಲ್ಲಿನ ಶೇಕಡಾ 52ರಷ್ಟು ಮಹಿಳೆಯರು ಸಂಬಂಧಕ್ಕೆ ಬಂದ ಎರಡು ವಾರಗಳ ಕಾಲ ತಮ್ಮ ನಿಜ ಬಣ್ಣವನ್ನು ಸಂಗಾತಿಗೆ ತೋರಿಸುವುದಿಲ್ಲವಂತೆ.