
ನಿಶಾಂತ ಕಮ್ಮರಡಿ
ಯಾರೇನೇ ಅಂದ್ರೂ, ಎಷ್ಟೇ ಬೈದ್ರೂ ಇವತ್ತು ಕೋಟ್ಯಂತರ ಜನರ ಹೊಟ್ಟೆತುಂಬಿಸುತ್ತಿರೋದು ಹೆಣ್ಮಕ್ಕಳು ಅನ್ನೋದಂತೂ ಸತ್ಯ ತಾನೇ! ಮನೇಲಿ ಅಡುಗೆ ಮಾಡಿ ಬಡಿಸೋ ಹೆಂಗಸರ ಕತೆ ಅಲ್ಲ ಇದು, ಕೋಟ್ಯಂತರ ರುಪಾಯಿ ಉದ್ಯಮವಾಗಿ ಬೆಳೀತಿರೋ ಫ್ಯಾಶನ್ ಇಂಡಸ್ಟ್ರಿ ವಿಷ್ಯ. ಫ್ಯಾಶನ್, ಟ್ರೆಂಡ್ ಅಂದ್ರೆ ಹುಡುಗೀರ ಕಿವಿ ನೆಟ್ಟಗಾಗುತ್ತೆ. ಅಷ್ಟಾದ್ರೆ ಫ್ಯಾಶನ್ ಇಂಡಸ್ಟ್ರಿಗೆ ನೆಮ್ಮದಿಯ ನಿಟ್ಟುಸಿರು.
ಸದ್ಯಕ್ಕೀಗ ಹುಡುಗೀರು ಮಿಂದೇಳುತ್ತಿರೋದು ಪಾಸ್ಟಲ್ ಸೀರೆಯಲ್ಲಿ. ಜಾನ್ವಿ ಕಪೂರ್ ಅನ್ನೋ ಜೇನು ಕಣ್ಣಿನ ಹುಡುಗಿ ಮಿಣ ಮಿಣ ಮಿಣ ಮಿಂಚೋ ಸೀರೆಯಲ್ಲಿ ಫಳ ಫಳ ಹೊಳೆಯುತ್ತಾ ಇನ್‌ಸ್ಟಾದಲ್ಲೊಂದು ಪೋಸ್ಟ್ ಹಾಕಿದ್ದೇ ಹಾಕಿದ್ದು, ಸಮ್ಮರ್ ಟ್ರೆಂಡ್ ಒಂದು ರಾರಯಂಪ್‌ಗೆ ಬೆಕ್ಕಿನ ನಡಿಗೆಯಲ್ಲಿ ಬಂತು. ಹೌದು, ಸದ್ಯಕ್ಕೀಗ ಪಾಸ್ಟಲ್ ಸೀರೆಗಳು ಝಗಮಗಿಸುತ್ತಿವೆ.
Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!
ಅಷ್ಟಕ್ಕೂ ಪಾಸ್ಟಲ್ ಅಂದರೇನು ಅಂತ ನೀವು ಕೇಳಬಹುದು. ಪಾಸ್ಟಲ್ ಅನ್ನೋದು ಬಣ್ಣದ ಒಂದು ಮಾದರಿಯಷ್ಟೇ. ಈ ಮಾದರಿಯಲ್ಲಿ ಒಂದಿಷ್ಟುಬಣ್ಣಗಳು ಬರುತ್ತವೆ. ನವಿರುತನ ಹೊಂದಿರುವ ಈ ಬಣ್ಣಗಳು ಹುಡುಗಿಯರ ಕೋಮಲತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದಂತೆ. ಸದ್ಯಕ್ಕೀಗ ಬಾಲಿವುಡ್‌ನಲ್ಲಿ ಅನೇಕ ತಾರೆಯರು ಪಾಸ್ಟಲ್ ಸೀರೆಯಲ್ಲಿ ಜಾಯ್‌ಫುಲ್ ಆಗಿ ಕಾಣಿಸಿಕೊಳ್ತಿದ್ದಾರೆ.
ಹಾಗಂತ ಬರೀ ಪಾಸ್ಟಲ್ ಕಲರ್ ಸೀರೆಗಳಲ್ಲ. ಅದಕ್ಕಿಂತ ಹೆಚ್ಚಾಗಿ ಟ್ರೆಂಡ್‌ನಲ್ಲಿರೋದು ಪಾಸ್ಟಲ್ ಕಲರ್‌ನಲ್ಲಿರುವ ಶಿಮ್ಮರ್ ಸಾರಿಗಳು. ಶಿಮ್ಮರ್ ಸೀರೆಗಳಲ್ಲಿ ಹೊಳೆಯುವ ಗುಣ ಇದೆ. ಮೈಗಂಟಿ ನಿಲ್ಲುತ್ತಾ, ನಿಲ್ಲದೇ ಜಾರುತ್ತಾ, ಥಳ ಥಳ ಹೊಳೆಯುವ ಈ ಸೀರೆಗಳು ಪಾರ್ಟಿಯ ಝಗಮಗಿಸುವ ಬೆಳಕಿನಲ್ಲಿ ಮಿರ ಮಿರ ಮಿನುಗುತ್ತವೆ. ನಿಮ್ಮ ಫ್ರೆಂಡ್ ಮದುವೆ ರಿಸೆಪ್ಶನ್‌ಗೂ ಇದನ್ನು ಉಟ್ಟುಕೊಂಡು ಹೋಗಬಹುದು.
ಪಾಸ್ಟಲ್ ಬಣ್ಣಗಳ ಶಿಮ್ಮರ್ ಸೀರೆಯುಟ್ಟನಲಿದ ಬಾಲೆ ಜಾನ್ವಿ ಎಂಬ ಮುಗುದೆ. ನಸು ನೇರಳೆ ಬಣ್ಣದ ಹೊಳೆಯುವ ಈ ಸೀರೆ ಸಖತ್ ಸೆಕ್ಸಿಯಾಗೂ ಇದೆ, ನೋಡೋದಕ್ಕೂ ಬ್ಯೂಟಿಫುಲ್ ಆಗಿದೆ. ಬೇರಾರಯವ ಆಕ್ಸೆಸರೀಸ್ ಇಲ್ಲದೆಯೂ ನೀವೀ ಸೀರೆಯುಟ್ಟು, ಫ್ರೀ ಹೇರ್ಸ್ ಬಿಟ್ಟು ನಿರಾಭರಣ ಸುಂದರಿಯಾಗಿ ಮಿಂಚಬಹುದು. ಕಿವಿಗೊಂದು ಚೆಂದದ ಆಕ್ಸೆಸರೀಸ್ ಇದ್ದರೆ ಇನ್ನೂ ಚೆಂದ.
ಹೇಗೇ ಇದ್ರೂ ಓಕೆ, ಸೀರೇನೇ ಬೇಕು ಅನ್ನೋ ನಟಿ ಈಕೆ..!
ಟಿಫ್ಸ್
- ನೀವು ಪಾಸ್ಟಲ್ ಸೀರೆ ತಗೊಳ್ಳೋದಿದ್ರೆ ಶಿಮ್ಮರ್ ವೆರೈಟಿಯಲ್ಲಿ ತಗೊಳ್ಳಿ.
- ಈ ಸೀರೆಗೇ ಗ್ರಾಂಡ್ ಲುಕ್ ಇರೋ ಕಾರಣ ಬರೀ ಯಿಯರ್ ರಿಂಗ್ ಮಾತ್ರ ಸಾಕು. ಅದು ಮಾತ್ರ ಅದ್ದೂರಿಯಾಗಿರಲಿ.
- ಫ್ರೀ ಹೇರ್ಸ್ ಚೆಂದ.
- ಚೂಪು ಹಿಮ್ಮಡಿಯ ಹೀಲ್ಸ್ ಸ್ಯಾಂಡಲ್ ಧರಿಸಿ.
- ಗಾಢ ಮೇಕಪ್‌ಗಿಂತ ಸಿಂಪಲ್ ಆದ ಮೇಕಪ್ ಚೆನ್ನಾಗಿರುತ್ತೆ. ಸಹಜತೆಗೆ ಆದ್ಯತೆ ಇರಲಿ.
ನಮ್ಮ ಕನ್ನಡದ ಚೆಲುವೆ ಶ್ವೇತಾ ಶ್ರೀವಾತ್ಸವ್ ಇದೇ ಥರ ಸೀರೆಉಟ್ಟು ಸೋಷಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಪಾಸ್ಟಲ್ ಬಣ್ಣದ ಶಿಮ್ಮರ್ ಸೀರೆಗೆ ವೆಲ್ವೆಟ್ ಬ್ಲೌಸ್ ತೊಟ್ಟಿದ್ದು ಸಖತ್ ಲುಕ್ ಕೊಟ್ಟಿದೆ.
ಮಾಡ್ರನ್ ಡ್ರೆಸ್ ಹಿಂದಿಕ್ಕಿದ ಪಾರಂಪರಿಕ ಸೀರೆಗಳ ಟ್ರೆಂಡ್!
ಬಾಲಿವುಡ್‌ನಲ್ಲಿ ಕಾಜೊಲ್‌ಗೆ ಅನಿತಾ ಡೋಂಗ್ರೆ ಡಿಸೈನ್ ಮಾಡಿರೋ ಪಾಸ್ಟಲ್ ಸೀರೆ ಸಿಕ್ಕಿದೆ. ತಿಳಿ ಹಸಿರು ಬಣ್ಣದ ಈ ಸೀರೆಗೆ ಚಿನ್ನದ ಬಣ್ಣದ ಅಂಚುಗಳಿವೆ. ಅದ್ಭುತ ಅಂತಲ್ಲದಿದ್ದರೂ ಡೀಸೆಂಟ್ ಲುಕ್‌ನ ಸಾರಿ ಅನ್ನಬಹುದು. ಒಂದು ಫ್ರೆಶ್ ಲುಕ್ ಇದಕ್ಕಿದೆ. ತಿಳಿ ಹಸಿರು ಬಣ್ಣ ಈ ಸೀರೆಯ ಪ್ಲಸ್ ಪಾಯಿಂಟ್. ಅದು ಮನಸ್ಸಿಗೆ ಆಹ್ಲಾದ ಉಂಟು ಮಾಡುವ ಬಣ್ಣ. ಜೊತೆಗೆ ನವೀನ ವಿನ್ಯಾಸದ ಕ್ರೀಂ ಕಲರ್ ಬ್ಲೌಸ್ ಕಾಂಬಿನೇಶನ್ ಚೆನ್ನಾಗಿದೆ. ಈ ಸೀರೆಗೆ ಆಮ್ರಪಾಲಿ ಜ್ಯುವೆಲ್ಲರಿ ಕಾಂಬಿನೇಶನ್ ಇದೆ. ಚಿರ ಯೌವನೆ ಮಾಧುರಿ ದೀಕ್ಷಿತ್ ನಸು ಪಿಂಕ್ ಬಣ್ಣದಲ್ಲಿ ಬಿಳಿ ವರ್ಕ್ ಇರೋ ಪಾಸ್ಟಲ್ ಸೀರೆಗೆ ಜೈ ಅಂದಿದ್ದಾರೆ. ಚಂದ್ರಬಾಲಿ ಆಭರಣಗಳು ಅವರ ಕಿವಿಯನ್ನು ಅಲಂಕರಿಸಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.