ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ!

Published : Feb 24, 2020, 08:34 AM ISTUpdated : Feb 24, 2020, 04:49 PM IST
ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ!

ಸಾರಾಂಶ

ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ| ಲಿವಾ ಮಿಸ್‌ ಡೀವಾ ಯೂನಿವರ್ಸ್‌ನಲ್ಲಿ ಕ್ಯಾಸ್ಟಲಿನೋ ಕಿರೀಟ

ಮುಂಬೈ[ಫೆ.24]: ಮಂಗಳೂರು ಮೂಲದ ಅಡ್ಲೀನ್‌ ಕ್ಯಾಸ್ಟಲಿನೋ ಅವರು 2020ರ ಲಿವಾ ಮಿಸ್‌ ಡೀವಾ ಯೂನಿವರ್ಸ್‌ ಸೌಂದರ್ಯ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರದ ವೈಆರ್‌ಎಫ್‌ ಸ್ಟುಡಿಯೋದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ, ಕಳೆದ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್‌ ಅವರು ಕಿರೀಟ ತೊಡಿಸುವ ಮೂಲಕ ಕ್ಯಾಸ್ಟಲಿನೋ ಅವರನ್ನು ವಿಜಯಿ ಎಂದು ಘೋಷಿಸಿದರು. ಪುಣೆಯ ನೇಹಾ ಜೈಸ್ವಾಲ್‌ ಮಿಸ್‌ ಡೀವಾ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರು. ಕ್ಯಾಸ್ಟಲಿನೋಗೆ ಪ್ರಬಲ ಪೈಪೋಟಿ ನೀಡಿದ ಜಬಲ್ಪುರದ ಆವೃತಿ ಚೌಧರಿ ಅವರು ಮಿಸ್‌ ಡೀವಾ ಸುಪ್ರಾನ್ಯಾಶನಲ್‌ ಕಿರೀಟ ಗೆದ್ದುಕೊಂಡರು. ಅವರು ಮಿಸ್‌ ಸುಪ್ರನ್ಯಾಷನಲ್‌ ಪ್ರಶಸ್ತಿಗೆ ಭಾರತದ ಸ್ಪರ್ಧಿಯಾಗಲಿದ್ದಾರೆ.

ದೇಶದ ಪ್ರಮುಖ ಹತ್ತು ನಗರಗಳಲ್ಲಿ ನಡೆದ ಆಡಿಶನ್‌ನಲ್ಲಿ ಆಯ್ಕೆಯಾಗಿ, 2019ರ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಆಯ್ಕೆಯಾದ 20 ಫೈನಲಿಸ್ಟ್‌ಗಳ ಪೈಕಿ ಕ್ಯಾಸ್ಟಲಿನೋ ಒಬ್ಬರಾಗಿದ್ದರು. ಈಗ 20 ಮಂದಿಯನ್ನು ಮಣಿಸಿದ್ದು, ವಿಶ್ವ ಸುಂದರಿ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇದೊಂದು ಅದ್ಭುತವಾದ ಪಯಣವಾಗಿತ್ತು. ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ಈ ವರ್ಷ ನಡೆಯುವ ಪ್ರತಿಷ್ಠಿತ ಮಿಸ್‌ ಯೂನಿವರ್ಸ್‌ ಸ್ಪರ್ಧೆಯನ್ನು ಎದುರು ನೋಡುತ್ತಿದ್ದು, ಕಿರೀಟ ಗಳಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಫೆಬ್ರವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Hair Oil Routine: ಕೂದಲು ಚೆನ್ನಾಗಿ ಬೆಳೆಯಲು ಎಷ್ಟು ದಿನಕ್ಕೊಮ್ಮೆ ಎಣ್ಣೆ ಹಚ್ಚಬೇಕು?.
ಆ 'ಕರಾಳ ಮುಖ'ದ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ; 'ಕಣ್ಣಿಗೆ ಕಂಡಿದ್ದೆಲ್ಲವೂ ಸತ್ಯವಲ್ಲ' ಅಂದಿದ್ಯಾಕೆ?