
ಇಡೀ ಪ್ರಪಂಚವನ್ನು ಗಡಿ ವಿಂಗಡಿಸಬಹುದು. ಆದರೆ ಫ್ಯಾಷನ್‌ನಿಂದ ಜಗತ್ತೇ ಒಂದಾಗುತ್ತದೆ. ಮದುವೆ ಸೀಸನ್ ಬಂದಾಗ ಪಂಜಾಬಿಯ ಭಂಗ್ರಾದಿಂದ ಗುಜರಾತಿಯ ಗರ್ಬಾದವರೆಗೆ ಎಲ್ಲರೂ ಪರಸ್ಪರ ವಿವಾಹದಲ್ಲಿ ಭಾಗಿಯಾಗುವುದನ್ನು ಆನಂದಿಸುತ್ತೇವೆ.
ನಾವು ವಿಭಿನ್ನ ಸಂಸ್ಕೃತಿಗಳ ಬಾಯಲ್ಲಿ ನೀರೂರಿಸುವ ಭಕ್ಷ್ಯಗಳನ್ನು ತಿನ್ನುತ್ತೇವೆ. ಮದುವೆಯನ್ನು ಆನಂದಿಸುತ್ತೇವೆ, ನಮ್ಮ ಕಣ್ಣುಗಳು ಯಾವಾಗಲೂ ವಧುವಿನ ಮೇಲೆ ಅಂಟಿಕೊಂಡಿರುತ್ತವೆ. ಅಲಂಕಾರ, ಉಡುಗೆ, ಆಭರಣ ಎಲ್ಲವೂ ಆಕರ್ಷಣೆ ಕೇಂದ್ರವಾಗುತ್ತದೆ.
ಕಳೆದ ಹಲವು ವರ್ಷಗಳಲ್ಲಿ ವಿವಾಹದ ಫ್ಯಾಷನ್ ಬದಲಾವಣೆಯಾಗುತ್ತಲೇ ಬಂದಿದೆ. ಈಗ ವಧು ತಮ್ಮ ಕನಸಿನ ಉಡುಗೆ ಆರಿಸಿಕೊಳ್ಳುತ್ತಿದ್ದಾರೆ. ಅವರು ಸಾಮಾನ್ಯ ಲೆಹೆಂಗಾಗಳನ್ನು ಬಿಟ್ಟು ಸ್ಪೆಷಲ್ ಟ್ರೈ ಮಾಡುತ್ತಾರೆ. ಕೆಲವೊಮ್ಮೆ ಪ್ರಿಯಾಂಕಾ ಚೋಪ್ರಾ ಜೊನಾಸ್ ಅವರಂತೆಯೇ ವಧು ಉಡುಪಿನ ಹಿಂಭಾಗ ಉದ್ದವಾಗಿರಲಿ ಎಂದು ಬಯಸುತ್ತಾರೆ.
ಆಕಾಶ ನೀಲಿ ಬಣ್ಣದ ಲೆಹಂಗಾದಲ್ಲಿ ಮೋಹಕವಾಗಿ ಮಿಂಚಿದ ಮಾಧುರಿ
ಇತ್ತೀಚೆಗೆ ಪಾಕ್ ವಧುವನ್ನು ತಮ್ಮ ಮದುವೆ ದಿನ ಕೆಂಪು ಲೆಹೆಂಗಾವನ್ನು ಧರಿಸಿದ್ದರು. ಅದು ಎಲ್ಲರನ್ನೂ ಬೆರಗುಗೊಳಿಸಿತು. 100 ಕೆಜಿ ಲೆಹೆಂಗಾ ಧರಿಸಿದ್ದ ಈ ಪಾಕಿಸ್ತಾನಿ ವಧುಅದು ಹೇಗೆ 100 ಕೆಜಿಯ ಲೆಹಂಗಾ ಧರಿಸಿದರೋ..
ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿರುವ ಚಿತ್ರಗಳಲ್ಲಿ, ವಧುವಿನ ಲೆಹೆಂಗಾ ಸ್ಕರ್ಟ್ ಇಡೀ ವೇದಿಕೆಯನ್ನು ಆವರಿಸಿಕೊಂಡಿರುವುದನ್ನು ಕಾಣಬಹುದು. ವೇದಿಕೆ ಸಾಲದೆ ಮೆಟ್ಟಿಲುಗಳಲ್ಲಿಯೂ ಲೆಹಂಗಾ ಹರಡಿತ್ತು. ಅವಳ ಉಡುಪಿನಲ್ಲಿ ಸುಂದರವಾದ ಕೈ ಕಸೂತಿ ಇತ್ತು.
ಎಲ್ಲವೂ ಪರಿಪೂರ್ಣವೆಂದು ತೋರುತ್ತದೆಯಾದರೂ ಫೋಟೋ ಸೆಷನ್‌ನ ನಂತರ ವಧು ಹೇಗೆ ಎದ್ದು ನಿಂತು ಎಲ್ಲಾ ಅತಿಥಿಗಳಿಗೆ ಶುಭಾಶಯ ಕೋರಿದ್ದಾರೆ ಎಂಬುದೇ ಅಚ್ಚರಿಯ ಸಂಗತಿ. ವಧುವಿನ ಲೆಹೆಂಗಾದ ಚಿತ್ರಗಳು ತಕ್ಷಣ ವೈರಲ್ ಆಗಿವೆ. ಕೆಲವರು ಅವಳ ನೋಟವನ್ನು ಇಷ್ಟಪಟ್ಟರೆ, ಇತರರು ಅದನ್ನು ಸ್ವಲ್ಪ ಹೆಚ್ಚಾಯ್ತು ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.