
ಇಟಾಲಿಯನ್ ಫ್ಯಾಶನ್ ಹೌಸ್ ಗೂಚಿ ಸಾಂಪ್ರದಾಯಿಕ ಭಾರತೀಯ ಕುರ್ತಾಗೆ ಹೋಲುವ ಉಡುಪನ್ನು ಮಾರಾಟ ಮಾಡುತ್ತಿದೆ. ಇದನ್ನು ನೋಡಿದ ದೇಸಿ ಟ್ವಿಟರ್ ಬಳಕೆದಾರಿಗೆ ಮಾತಾಡೋಕೆ, ಕಮೆಂಟ್ ಮಾಡೋಕೆ ತುಂಬಾ ವಿಷ್ಯ ಇದೆ.
ಹೂವಿನ ಕಸೂತಿಯೊಂದಿಗೆ ಸಾವಯವ ಲಿನಿನ್ ಕಫ್ತಾನ್" ಐಷಾರಾಮಿ ಬ್ರಾಂಡ್‌ನ ವೆಬ್‌ಸೈಟ್‌ನಲ್ಲಿ ಸರಿಸುಮಾರು ₹ 2.5 ಲಕ್ಷಕ್ಕೆ ಮಾರಾಟವಾಗುತ್ತಿದೆ. ಇಟಲಿಯಲ್ಲಿ ತಯಾರಿಸಿದ ಲಿನಿನ್ ಕಫ್ತಾನ್, ಹೂವಿನ ಕಸೂತಿ ಮತ್ತು ಟೈ ಕುತ್ತಿಗೆ ಸ್ಟೈಲ್ ಒಳಗೊಂಡಿದೆ.
ಚಂದದ ಪ್ರಿಂಟೆಡ್ ಬಿಕಿನಿಯಲ್ಲಿ ಜಾಹ್ನವಿ..! ಬೆಲೆ ಮಾತ್ರ ದುಬಾರಿ...
ಗ್ರಾಹಕರು ಅದನ್ನು ಖರೀದಿಸಲು ಮಾಸಿಕ ಕಂತುಗಳಲ್ಲಿ ಹಣ ಪಾವತಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಟ್ವಿಟ್ಟರ್ನಲ್ಲಿನ ಪ್ರತಿಕ್ರಿಯೆಗಳ ಪ್ರಕಾರ, ಭಾರತೀಯರು ಇದನ್ನು ನೋಡಿ ತಮಾಷೆ ಮಾಡಿದ್ದರೆ, ಇನ್ನೂ ಕೆಲವರು ಸಿಟ್ಟಾಗಿದ್ದಾರೆ.
ಗೂಚಿ ಭಾರತೀಯ ಕುರ್ತಾವನ್ನು 2.5 ಲಕ್ಷಕ್ಕೆ ಮಾರುತ್ತಿದ್ದೀರಾ? ನಾನು 500ಕ್ಕೆ ಅದನ್ನೇ ಕೊಡಿಸುತ್ತೇನೆಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ದಂತ ಬಣ್ಣದ ಡ್ರೆಸ್‌ನ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.