'ಲಿವಾ ಮಿಸ್ ದಿವಾ 2021' ಆನ್‌ಲೈನ್‌ ಪ್ರಕ್ರಿಯೆ ಆರಂಭ; ಈ ಕ್ವಾಲಿಟೀಸ್‌ ನಿಮಗಿದ್ರೆ ಈಗಲೇ ಅಪ್ಲೈ ಮಾಡಿ!

By Suvarna NewsFirst Published Jun 16, 2021, 5:20 PM IST
Highlights

ಮಿಸ್ ದಿವಾ 2021 ನಿವಾಗಬೇಕೆ? ಲಿವಾ ಪ್ರಾಯೋಜಿಸುತ್ತಿರುವ ಈ ಸ್ಪರ್ಧೆಯಲ್ಲಿ 6 ಕ್ರೈಟೀರಿಯಾ ಇದ್ದರೆ ಸಾಕು.....

ಮಾಡೆಲಿಂಗ್ ಹಾಗೂ ಮಿಸ್ ಯುನಿವರ್ಸ್ ಇಂಡಿಯಾ ಕನಸು ಕಾಣುವ ಯುವತಿಯರಿಗೆ ಇಲ್ಲಿದೆ ಬಂಪರ್ ಅವಕಾಶ. ಲಿವಾ ಪ್ರಾಯೋಜಿಸುತ್ತಿರುವ ಮಿಸ್ ದಿವಾ ಯುನಿವರ್ಸ್ 2021ರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಮಿಸ್ ದಿವಾ ಘೋಷಣೆ ಮಾಡುತ್ತಿರುವ 9ನೇ ಎಡಿಷನ್‌ನಲ್ಲಿ ಒಟ್ಟು 20 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿಶೇಷ ಏನೆಂದರೆ ಮೊದಲ ಬಾರಿಗೆ ಹೈಟ್‌ 5'4"ಕ್ಕೆ ಇಳಿಸಲಾಗಿದೆ. 

ಅರ್ಜಿ ನೊಂದಣಿ ಮಾಡಲು ಬೇಕಾಗಿರುವ ಕ್ವಾಲಿಟೀಸ್:

- ಹೈಟ್ 5'4"
- ವಯಸ್ಸು 18 ರಿಂದ 27 ವರ್ಷ. (27ನೇ ತಾರೀಕಿನಿಂದ 31 ಡಿಸೆಂಬರ್ 2021)
- ಸಿಂಗಲ್ ಆಗಿರಬೇಕು, ಮದುವೆ ಆಗಿರಬಾರದು ಅಥವಾ ಎಂಗೇಜ್‌ ಆಗಿರಬಾರದು.
- ಭಾರತೀಯ ಪಾಸ್ಪೋರ್ಟ್ ಹೊಂದಿರಬೇಕು.
- ಒಸಿಐ ಕಾರ್ಡ್ ಹೊಂದಿರುವವರು ಹಾಗೂ NRIs ಎರಡನೇ ಸ್ಥಾನಕ್ಕೆ ಸ್ಪರ್ಧಿಸಬಹುದು. 
- ಟ್ರಾನ್ಸ್‌ವುಮನ್‌ಗಳಿಗೂ ಭಾಗವಹಿಸಲು ಅವಕಾಶವಿದೆ.

ನೀವು ಈ ಕೂಡಲೆ  www.missdiva.com ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.  ಜುಲೈ 20  ನೊಂದಣಿ ಮಾಡಿಕೊಳ್ಳಲು ಕೊನೆಯ ದಿನ.  MX TakaTak ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಆನ್‌ಲೈನ್‌ ಆಡಿಷನ್ ವಿಡಿಯೋ ಅಪ್ಲೋಡ್ ಮಾಡಬೇಕು. ಆಯ್ಕೆ ಆದವರಿಗೆ ಮುಂಬೈನಲ್ಲಿ ಟ್ರೈನಿಂಗ್ ನೀಡಲಾಗುತ್ತದೆ. ಫಿನಾಲೆ ಅಕ್ಟೋಬರ್ 2021ರಂದು ನಡೆಯಲಿದೆ. ಭಾರತದ ಜನಪ್ರಿಯ ಯುವ ಚಾನೆಲ್‌ ಆಗಿರುವ MTVಯಲ್ಲಿ ಈ ಸ್ಪರ್ಧೆಯನ್ನು ಪ್ರಸಾರ ಮಾಡಲಾಗುತ್ತದೆ.

ಮೆಕ್ಸಿಕನ್ ಸುಂದರಿ ಆಂಡ್ರಿಯಾ ಮುಡಿಗೆ 'ಭುವನ ಸುಂದರಿ' ಕಿರೀಟ! 

ಈ ಕೂಡಲೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ಟಿಟರ್ ಹಾಗೂ MX TakaTakನಲ್ಲಿ  missdivaorg ನ ಫಾಲೋ ಮಾಡಿ. #LIVAMissDiva2021 #MissDivaAuditionsಬಳಸುವ ಮೂಲಕ ಹೆಚ್ಚಿನ ಅಪ್ಡೇಟ್ ಪಡೆಯಿರಿ.

click me!