'ಹಲ್ಲಿಲ್ಲದ ಮಾಡೆಲ್ ' ಜೆಸ್ಸಿಕಾಳ ಡಬಲ್ ಆ್ಯಕ್ಟಿಂಗ್ ನೋಡಿ ಬೆರಗಾದ ನೆಟ್ಟಿಗರು!

By Suvarna News  |  First Published Jan 7, 2024, 2:03 PM IST

ಈಕೆಗೆ ಹಲ್ಲುಗಳೇ ಇಲ್ಲ. 38 ವರ್ಷಕ್ಕೇ ಥೇಟ್ ಅಜ್ಜಿಯೇ. ಆದರೆ, ಕೃತಕ ಹಲ್ಲುಗಳನ್ನು ಜೋಡಿಸಿಕೊಂಡು ಮೇಕಪ್ ಮಾಡಿಕೊಂಡರೆ ಅವಳೇ ಬೇರೆ ಸ್ಪುರದ್ರೂಪಿ ಸೌಂದರ್ಯವತಿ!


ವೃದ್ಧಾಪ್ಯದಲ್ಲಿ ಹಲ್ಲುಗಳು ಬೀಳುವುದು, ಅಜ್ಜ ಅಜ್ಜಿಯರು ಹಲ್ಲಿಲ್ಲದ ಬೊಚ್ಚು ಬಾಯಿಯನ್ನು ಹೊಂದಿರುವುದು ಸಾಮಾನ್ಯವಾಗಿದೆ. ಆದರೆ ಈಕೆಗಿನ್ನೂ 38 ವರ್ಷ. ಈಗಲೇ ಈಕೆಯ ಎಲ್ಲ ಹಲ್ಲುಗಳೂ ಉದುರಿ ಹೋಗಿವೆ. ಇದಕ್ಕೆ ಕಾರಣ ಆಕೆಗಿರುವ ಅಪರೂಪದ ಕಾಯಿಲೆ. ಆಕೆ ಬೊಚ್ಚು ಬಾಯಿಯಲ್ಲಿ 80ರ ಮುದುಕಿಯಂತೆ ಕಾಣುತ್ತಾಳೆ. ಆದರೂ, ಮೇಕಪ್‌ನಿಂದಲೇ ರೂಪಾಂತರ ಹೊಂದುವ ಕಲೆ ಕರಗತವಾಗಿಸಿಕೊಂಡಿರುವ ಈ ಮಹಿಳೆ ಮಾಡೆಲ್ ಆಗಿದ್ದಾಳೆ. ಟಿಕ್‌ಟಾಕ್‌ನಲ್ಲಿ ಸಾಕಷ್ಟು ಫಾಲೋವರ್ಸ್‌ನ್ನು ತನ್ನ ರೂಪಾಂತರದಿಂದ, ಆತ್ಮವಿಶ್ವಾಸದಿಂದ ಮೆಚ್ಚಿಸುವ ಈಕೆಯ ಕತೆ ಏನು ನೋಡೋಣ. 

ಈಕೆ ಜೆಸ್ಸಿಕಾ. ಅಮೆರಿಕಾದ ಟೆಕ್ಸಾಸ್ ಮಹಿಳೆ. ವಯಸ್ಸು 38. ಆನ್‌ಲೈನ್‌ನಲ್ಲಿ 'ಡೆಂಚರ್ ಕ್ವೀನ್' ಎಂದೇ ಜನಪ್ರಿಯವಾಗಿರುವ ಜೆಸ್ಸಿಕಾ ಕ್ಯಾಲ್ಸಿಯಂ ಮತ್ತು ಬಿ 12 ಕೊರತೆಯಿಂದ ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ಆಕೆ ಈ ಕೊರತೆಗಳನ್ನು ಸರಿದೂಗಿಸಲು ಹಲವಾರು ಜೀವಸತ್ವಗಳನ್ನು ಸೇವಿಸುತ್ತಾರೆ. ಆದರೂ, ಹಲ್ಲುಗಳು ಬಂದಿಲ್ಲ. 

Tap to resize

Latest Videos

undefined

ಅವಳ ಪ್ರಕಾರ, ಆರೋಗ್ಯ ಕಾರಣಗಳಿಗಾಗಿ ಆಕೆ ಡೈರಿ ಉತ್ಪನ್ನಗಳು ಹಾಗೂ ಪೌಲ್ಟ್ರಿ ಉತ್ಪನ್ನಗಳನ್ನು ಸೇವಿಸುವಂತಿಲ್ಲ. ಇದರಿಂದ ವಿಟಮಿನ್ ಡಿ ಹಾಗೂ ವಿಟಮಿನ್ ಬಿ 12 ಕೊರತೆಯಾಗಿದೆ. ಇದರ ಹೊರತಾಗಿ ಹಲ್ಲು ಉದುರುವಿಕೆಗೆ ಕಾರಣವಾದ ಇತರ ಅಂಶಗಳಿವೆ, ಆದರೆ ಸುರಕ್ಷತೆಯ ಕಾರಣದಿಂದ ಅವುಗಳನ್ನು ಚರ್ಚಿಸಲು ತನಗೆ ಸ್ವಾತಂತ್ರ್ಯವಿಲ್ಲ ಎಂದಿದ್ದಾಳೆ. 

ದೊಡ್ಡಗಾದ್ರೂ ಮಗು ತರಾ ಆಡ್ತಾರಾ? ಈ ಸಿಂಡ್ರೋಮ್ ಇರ್ಬೋದು!

ಆಕೆ ಕೃತಕ ಹಲ್ಲುಗಳನ್ನು ಹಾಕಿಸಿಕೊಳ್ಳಲು ಹೋದಾಗಲೂ ಆಕೆಯ ದೇಹ ಅವುಗಳನ್ನು ಒಪ್ಪಿಕೊಳ್ಳದೇ ಸಾಕಷ್ಟು ನೋವು ಅನುಭವಿಸಿದ್ದಾಳೆ. ಹೀಗಾಗಿ, ಹಲ್ಲಿರುವಂತೆ ತೋರಿಸಿಕೊಳ್ಳಲು ಅವಳಿಗಿರುವ ಅವಕಾಶ ಮೇಕಪ್ ಮಾತ್ರ.

ಮೊದಲೆಲ್ಲ ಈ ರೂಪಕ್ಕಾಗಿ ಆತ್ಮವಿಶ್ವಾಸ ಕೊರತೆ, ಖಿನ್ನತೆ ಎಲ್ಲವನ್ನೂ ಅನುಭವಿಸಿರುವ ಆಕೆ ನಿಧಾನವಾಗಿ ತನ್ನನ್ನು ಇದ್ದಂತೆಯೇ ಒಪ್ಪಿಕೊಳ್ಳಲು ಮನಸ್ಸು ಮಾಡಿದ್ದಾಳೆ. ನಂತರ ಟಿಕ್‌ಟಾಕ್‌ನಲ್ಲಿ ತನ್ನ ಸಮಸ್ಯೆ ಹೇಳಿಕೊಂಡು ತನ್ನನ್ನು ಇರುವಂತೆಯೇ ತೋರಿಸಿಕೊಂಡಿದ್ದಾಳೆ. ಆಗಿನಿಂದ ಇತರರೂ ತನ್ನನ್ನು ಇರುವ ಹಾಗೇ ಒಪ್ಪಿಕೊಂಡಿದ್ದಾರೆ ಎನ್ನುತ್ತಾಳೆ. ಇದರಲ್ಲಿ ಆಕೆಯ ಹಾಸ್ಯಪ್ರಜ್ಞೆಯ ಪಾತ್ರವೂ ದೊಡ್ಡದಿದೆ. 

ಹಲ್ಲಿಲ್ಲದ ಬಾಯಿಯಿಂದಾಗಿ ಆಕೆ ಹಣ್ಣು ಹಣ್ಣು ಮುದುಕಿಯಂತೆ ಕಾಣುತ್ತಾಳೆ. ಆದರೆ ಈ ಸ್ಥಿತಿಯ ಹೊರತಾಗಿಯೂ ಆಕೆ ಕ್ಯಾಮೆರಾದ ಮುಂದೆ ಹೇಗೆ ರೂಪಾಂತರಗೊಳ್ಳುತ್ತಾಳೆ ಎಂಬುದು ನೆಟಿಜನ್‌ಗಳ ಗಮನವನ್ನು ಸೆಳೆಯುತ್ತಿದೆ. ಹಲ್ಲಿಲ್ಲದ ಮಹಿಳೆಯಿಂದ ಸುಂದರವಾಗಿ ಕಾಣುವ ಯುವತಿಯಾಗಿ ಗುರುತಿಸಲಾಗದಷ್ಟು ಬದಲಾವಣೆ ಅವಳಲ್ಲಿ ಕಾಣುತ್ತದೆ. ಹೌದು, ಜೆಸ್ಸಿಕಾ ತನ್ನ ಮೇಕಪ್ ಕೌಶಲ್ಯದಿಂದ ನೆಟಿಜನ್‌ಗಳನ್ನು ಆಕರ್ಷಿಸಿದ್ದಾಳೆ, ಅದನ್ನು ಅವಳು ತನ್ನನ್ನು ತಾನು ಪರಿವರ್ತಿಸಿಕೊಳ್ಳಲು ಬಳಸುತ್ತಾಳೆ.

ಜೆಸ್ಸಿಕಾಳ ವಿಡಿಯೋಗೆ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ಮನೆಗೂ ರಾಮ ಬರಲಿ; ಜ.22ಕ್ಕೆ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರ ತವಕ

ಪ್ರಯಾಣವನ್ನು ಇಷ್ಟ ಪಡುವ ಜೆಸ್ಸಿಕಾ, 'ಒಂದೇ ಸ್ಥಳದಲ್ಲಿ ಉಳಿಯುವುದು ನನಗೆ ಕಷ್ಟ. ನಾವು ಜನರ ಧನಾತ್ಮಕತೆಯನ್ನು ಸಂಭ್ರಮಿಸಬೇಕು. ಆದರೆ, ನಾವು ಸಾಮಾನ್ಯವಾಗಿ ಜನರ ನಕಾರಾತ್ಮಕತೆಗಳ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ನಾವು ಜೀವನದ ಸೌಂದರ್ಯವನ್ನು ಅನುಭವಿಸಲು ಮತ್ತು ದಾರಿಯುದ್ದಕ್ಕೂ ಒಬ್ಬರನ್ನೊಬ್ಬರು ಮೇಲಕ್ಕೆತ್ತಲು ಸಾಧ್ಯವಾಗುವಾಗ, ಹಲ್ಲುಗಳು ಅಥವಾ ದಂತಗಳಂತಹ ಸೌಂದರ್ಯವರ್ಧಕಗಳ ಮೇಲೆ ಏಕೆ ಗಮನ ಹಾಕಿ, ಉಳಿದವನ್ನು ಮಿಸ್ ಮಾಡಿಕೊಳ್ಳಬೇಕು' ಎಂದು ಪ್ರಶ್ನಿಸುತ್ತಾಳೆ ಆಕೆ.

ಆಕೆಯ ಮಾತು ಎಷ್ಟು ನಿಜವಲ್ಲವೇ?
 

click me!